ಎಪಿಎಲ್ ಕಾರ್ಡುದಾರರಿಗೆ ಪಿಂಚಣಿ: ಯುವಕರಿಗೆ ವೃದ್ಧಾಪ್ಯ ವೇತನ
Team Udayavani, Mar 21, 2017, 1:00 PM IST
ಬೆಂಗಳೂರು: ಸೋಮವಾರ ವಿಧಾನಸಭೆಯಲ್ಲಿ 2016 ಮಾರ್ಚ್‌ಗೆ ಕೊನೆಗೊಂಡ ಲೆಕ್ಕ ಪರಿಶೋಧಕರು ಮತ್ತು ಮಹಾಲೆಕ್ಕ ನಿಯಂತ್ರಕರ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದರು. ಸರ್ಕಾರದ ತಪ್ಪು ನಿರ್ಧಾರ ಗಳಿಂದಾಗಿ ಉಂಟಾಗಿರುವ ನಷ್ಟದ ಬಗ್ಗೆ ವರದಿಯಲ್ಲಿ ಉಲ್ಲೇಖೀಸಲಾಗಿದೆ. ಎಪಿಎಲ್ ಕಾರ್ಡುದಾರರಿಗೂ ಪಿಂಚಣಿ, ಹದಿಹರೆಯದವರಿಗೆ ವೃದ್ಧಾಪ್ಯವೇತನ ನೀಡಿರುವುದೂ ಪತ್ತೆಯಾಗಿದೆ.
ವರದಿಯಲ್ಲಿ ಉಲ್ಲೇಖವಾದ ಅಂಶಗಳಿವು: ರಾಜ್ಯ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯಲ್ಲಿ ಹದಿನೈದು ವರ್ಷಗಳಲ್ಲಿ ದಿರ್ಘಾವಧಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳದಿರುವುದರಿಂದ ಜಲ ಮಂಡಳಿಗೆ ಕೋಟ್ಯಂತರ ರೂಪಾಯಿ ನಷ್ಟವುಂಟಾಗಿದೆ. ರಾಜ್ಯ ಸರ್ಕಾರ ಕೈಗೆತ್ತಿಕೊಂಡ ಯೋಜನೆಗಳನ್ನು ಆರಂಭಿಸುವುದು ಮತ್ತು ಪೂರ್ಣಗೊಳಿಸುವಲ್ಲಿ ತೀವ್ರ ವಿಳಂಬ ಮಾಡಿರುವುದುರಿಂದ 11.05 ಕೋಟಿ ರೂ. ಕೇಂದ್ರ ನೆರವು ನಷ್ಟವಾಗಿದೆ.
ಮೈಸೂರು ನಗರಕ್ಕೆ ದಿನದ 24 ಗಂಟೆ ನೀರು ಸರಬರಾಜು ಮಾಡಲು ಕೈಗೆತ್ತಿಕೊಂಡ 271 ಕೋಟಿ ರೂ. ಯೋಜನೆಗೆ ಸೂಕ್ತ ಸಮೀಕ್ಷೆ ನಡೆಸಿಲ್ಲ. ಹೀಗಾಗಿ 271 ಕೋಟಿ ರೂಪಾಯಿ ಹಣ ಖರ್ಚು ಮಾಡಿದರೂ, ನಿರಂತರ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗಿಲ್ಲ ಎನ್ನುತ್ತಿದೆ ವರದಿ. ವಿಕಲಚೇತನ ಮಕ್ಕಳ ಶಿಕ್ಷಣಕ್ಕಾಗಿ ರಾಜ್ಯ ಸರ್ಕಾರ ಯಾವುದೇ ವಿಶೇಷ ಶಾಲೆಗಳನ್ನು ತೆರೆದಿಲ್ಲ.
ಹೀಗಾಗಿ ಶೇ. 29 ರಷ್ಟು ಅಂಗವಿಕಲ ಮಕ್ಕಳು ಮಾತ್ರ ಶಾಲೆಯಲ್ಲಿ ಓದುವಂತಾಗಿದೆ. ಹೀಗಾಗಿ, ಪ್ರತಿ ಜಿಲ್ಲೆಯಲ್ಲಿಯೂ ಒಂದೊಂದು ವಿಭಾಗದ ಅಂಗವಿಕಲರ ಶಾಲೆ ತೆರೆಯುವಂತೆ ಸರ್ಕಾರಕ್ಕೆ ಸೂಚಿಸಲಾಗಿದೆ. ವಿಕಲಚೇತನ ಮಕ್ಕಳಿಗೆ ವಿಶೇಷ ಶಾಲೆಗಳನ್ನು ನಡೆಸುತ್ತಿರುವ ರಾಜ್ಯದ 133 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಪ್ರತಿ ವರ್ಷವೂ ಮಗುವಿನ ಲೆಕ್ಕಾಚಾರದಲ್ಲಿ ಅನುದಾನ ನೀಡುತ್ತದೆ.
ಆದರೆ, ವಿಕಲಚೇತನ ಇಲಾಖೆ ನಿರ್ದೇಶಕರು ಶಿಕ್ಷಣ ಸಂಸ್ಥೆಗಳಲ್ಲಿನ ಮೂಲ ಸೌಕರ್ಯದ ಬಗ್ಗೆ ಸೂಕ್ತ ತಪಾಸಣೆ ಮಾಡದೇ, ಪ್ರತಿ ವರ್ಷವೂ ಹಣ ಬಿಡುಗಡೆ ಮಾಡಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಶಾಲೆಗಳಲ್ಲಿ ಆಡಿಯೋ ವಿಜುವಲ್ ಗ್ರಂಥಾಲಯ, ಕುರ್ಚಿಗಳು, ಅಧ್ಯಯನ ಟೇಬಲ್‌ಗಳು ಇಲ್ಲದಿರುವುದು ತನಿಖೆವೇಳೆ ತಿಳಿದು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.
ಬಾಲ ಮಂದಿರದ ಮಕ್ಕಳಿಗೆ ನೀಡುತ್ತಿರುವ ಸಮವಸ್ತ್ರ ಹಾಗೂ ಹಾಸಿಗೆಗಳನ್ನು ಅಂಗವಿಕಲ ಮಕ್ಕಳಿಗೂ ನೀಡಬೇಕೆಂದು ಸರ್ಕಾರದ ಆದೇಶವಿದೆ. ಅದರೂ, ಸರ್ಕಾರ ಬಜೆಟ್‌ನಲ್ಲಿ ಈ ಯೋಜನೆಗೆ ಹಣ ಮೀಸಲಿಡದಿರುವುದರಿಂದ ಅಂಗವಿಕಲ ಮಕ್ಕಳಿಗೆ ಸಮವಸ್ತ್ರ ಮತ್ತು ಹಾಸಿಗೆ ನೀಡದಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಇಲಾಖೆಗಳಲ್ಲಿ ಅಂಗವಿಕಲರಿಗೆ ಗ್ರೂಪ್ ಸಿ ಮತ್ತು ಡಿ ದರ್ಜೆಯ ಹುದ್ದೆಗಳನ್ನು ಮೀಸಲಿಡಲಾಗಿದ್ದರೂ, 2002 ರಿಂದ 68 ಇಲಾಖೆಗಳು ನಿಯಮ ಪಾಲಿಸದಿರುವುದೂ ಕಂಡು ಬಂದಿದೆ.
ಅಂಗವಿಕಲತೆಯ ಪ್ರಮಾಣ ಪತ್ರ ನೀಡುವಲ್ಲಿ ಲೋಪದೋಷವಾಗಿರುವುದುನ್ನು ಸಿಎಜಿ ಪತ್ತೆ ಹಚ್ಚಿದ್ದು, ಅನರ್ಹರೂ ಕೂಡ ಅಂಗ ವೈಕಲ್ಯತೆಯ ಹೆಸರಿನಲ್ಲಿ ಪಿಂಚಣಿ ಪಡೆಯು
ತ್ತಿರುವ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸಂಧ್ಯಾ ಸುರಕ್ಷಾ, ಮತ್ತು ವೃದ್ಧಾಪ್ಯ ವೇತನ ಮಾನದಂಡಗಳನ್ನು ನಿಗದಿಗೊಳಿಸುವಾಗಲೂ ಅಧಿಕಾರಿಗಳು ಎಡವಿರುವುದು ಬೆಳಕಿಗೆ
ಬಂದಿದೆ, 14100 ಪ್ರಕರಣಗಳಲ್ಲಿ 11,375 ಪ್ರಕರಣಗಳಲ್ಲಿ ಆದಾಯ ನಿಗದಿ ಮಾಡುವಲ್ಲಿ ಅಧಿಕಾರಿಗಳು ಸರಿಯಾದ ಮಾನದಂಡ ಅನುಸರಿಸಿಲ್ಲ.
ಕೆಲವು ಪ್ರಕರಣಗಳಲ್ಲಿ ಅರ್ಜಿದಾರರು ಘೋಷಣೆ ಮಾಡಿಕೊಂಡ ಆದಾಯಕ್ಕಿಂತಲೂ ಅಧಿಕಾರಿಗಳು ಕಡಿಮೆ ಆದಾಯ ನಿರ್ಧರಿಸಿರುವುದು ಕಂಡು ಬಂದಿದೆ. ಅಲ್ಲದೇ ಎಪಿಎಲ್ ಕಾರ್ಡ್ ಹೊಂದಿರುವ 423 ವ್ಯಕ್ತಿಗಳಿಗೆ ಪಿಂಚಣಿ ಮಂಜೂರು ಮಾಡಿರುವುದನ್ನು ವರದಿಯಲ್ಲಿ ಪತ್ತೆ ಹಚ್ಚಲಾಗಿದೆ.
ವರದಿಯಲ್ಲಿರುವ ಅಕ್ರಮಗಳ ಪಟ್ಟಿ
* ಸರ್ಕಾರದ ನಿರ್ದೇಶನ ಉಲ್ಲಂ ಸಿ ನಾಲ್ಕು ವಿವಿಗಳು ಪರೀಕ್ಷಾ ಕರ್ತವ್ಯಗಳಿಗೆ 28.01 ಕೋಟಿ ರೂಪಾಯಿಯನ್ನು ಅಕ್ರಮವಾಗಿವೆಚ್ಚ ಮಾಡಿವೆ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನೀಡಿದ ಮನೆಗಳನ್ನು ನಿಯಮ ಬಾಹಿರವಾಗಿ ಮಾರಾಟ ಮಾಡಿರುವ 453 ಜನರ 2.17 ಕೋಟಿ ಸಾಲವನ್ನು ಅಕ್ರಮವಾಗಿ ಮನ್ನಾ ಮಾಡಲಾಗಿದೆ.
* ಕಾರ್ಮಿಕ ಇಲಾಖೆಯಿಂದ ಕೈಗಾರಿಕ ತರಬೇತಿ ಸಂಸ್ಥೆಗಳಿಗೆ ನೀಡುವ ಬೊಧನಾ ಶುಲ್ಕದ ಮೇಲ್ವಿಚಾರಣೆ ಮಾಡದಿರುವುದರಿಂದ 19.16 ಕೋಟಿ ರೂಪಾಯಿ ಅಧಿಕ ವೆಚ್ಚವಾಗಿರುವುದು ಕಂಡು ಬಂದಿದೆ. ಇಲಾಖೆಗಳ ಬೇಡಿಕೆ ತಿಳಿದುಕೊಳ್ಳದೇ ಮುದ್ರಣ ಮತ್ತು ಲೇಖನ ಸಾಮಗ್ರಿ ಖರೀದಿಯಿಂದ 82.34 ಲಕ್ಷ ರೂ. ನಷ್ಟವಾಗಿದೆ. ಸಮಾಜ ಕಲ್ಯಾಣ ಇಲಾಖೆಯ ವಸತಿ ಶಾಲೆಗಳ ಗುತ್ತಿಗೆದಾರರು ಮತ್ತು ಯೋಜನಾ ನಿರ್ವಾಹಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಳಂಬವಾಗಿದ್ದರಿಂದ 1.07 ಕೋಟಿ ನಷ್ಟ ಉಂಟಾಗಿದೆ.
* ಬಿಡಿಎಯಿಂದ ಅನಧಿಕೃತವಾಗಿ ಕಟ್ಟಡ ಮಂಜೂರಾತಿ ನೀಡಿರುವುದರಿಂದ ಖಾಸಗಿ ರಿಯಲ್ ಎಸ್ಟೇಟ್ ಸಂಸ್ಥೆ ರೇಸ್‌ಕೋರ್ಸ್‌ಗೆ ಪಡೆದ ಜಮೀನನ್ನು ವಿಲ್ಲಾಗಳಾಗಿ ಮಾಡಿ ಮಾರಟ ಮಾಡಲು ಅನುಕೂಲ ಕಲ್ಪಿಸಿದೆ.
* ವಿವೇಚನೆ ಇಲ್ಲದೇ ಗೃಹ ಮಂಡಳಿಗೆ ಶಿಕಾರಿಪುರ ಒಳಚರಂಡಿ ವ್ಯವಸ್ಥೆ ಕಾಮಗಾರಿ ನೀಡಿದ್ದರಿಂದ ಏಳು ವರ್ಷ ಕಳೆದರೂ ಯೋಜನೆ ಜಾರಿಯಾಗದೇ 16 ಕೋಟಿ ನಷ್ಟವುಂಟಾಗುವಂತೆ ಮಾಡಲಾಗಿದೆ.
* ಕಡಿಮೆ ದರದಲ್ಲಿ ಕೈಗಾರಿಕಾ ಭೂಮಿ ಹಂಚಿಕೆ ಮಾಡಿದ್ದರಿಂದ 13.80 ಕೋಟಿ ನಷ್ಟ
* ಈ ಪಡಿತರ ಯಂತ್ರಗಳ ಬಳಕೆಯಿಂದ 11.52 ಕೋಟಿ ರೂಪಾಯಿ ನಷ್ಟ.
* ಸಣ್ಣ ನೀರಾವರಿ ಇಲಾಖೆಯಲ್ಲಿ ಎಸ್‌ಸಿಪಿ ಟಿಎಸ್‌ಪಿ ಯೋಜನೆಯಡಿ ನಿಯಮ ಬಾಹಿರವಾಗಿ ಬೋರ್‌ವೆಲ್ ಕೊರೆದು ಸೋಲಾರ್ ವಿದ್ಯುತ್ ಅಳವಡಿಸಿರುವುದು ಅನಗತ್ಯ ವೆಚ ಎಂದು ತಿಳಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.