Transportation service: ಆ್ಯಪ್‌ ಆಧಾರಿತ ಸಾರಿಗೆ ಸೇವೆಯಲ್ಲಿ ಎಡವಟ್ಟು


Team Udayavani, Sep 14, 2023, 12:56 PM IST

tdy-8

ಬೆಂಗಳೂರು: ಮೊಬೈಲ್‌ ಮೂಲಕ ಆ್ಯಪ್‌ನಲ್ಲಿ ಬುಕಿಂಗ್‌ ಮಾಡಿದಾಗ ತೋರಿಸುವ ವಾಹನದ ನೋಂದಣಿ ಸಂಖ್ಯೆ ಒಂದು; ಗ್ರಾಹಕರನ್ನು ಪಿಕ್‌ ಅಪ್‌ ಮಾಡಿಕೊಳ್ಳಲು ಬರುವ ವಾಹನದ ನೋಂದಣಿ ಸಂಖ್ಯೆ ಮತ್ತೂಂದು! – ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿರುವ ಆ್ಯಪ್‌ ಆಧಾರಿತ ಸಾರಿಗೆ ಸೇವೆಗಳಲ್ಲಿ ಈ ಯಡವಟ್ಟುಗಳು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿವೆ.

ಇದು ನಿತ್ಯ ಲಕ್ಷಾಂತರ ಜನ ಬಳಕೆ ಮಾಡುವ ಆ್ಯಪ್‌ ಆಧಾರಿತ ಸಾರಿಗೆಗಳಲ್ಲಿನ ಸುರಕ್ಷತೆಯನ್ನು ಪ್ರಶ್ನಿಸುವಂತೆ ಮಾಡಿದೆ. ನಗರದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಹೋಗಲು ಆ್ಯಪ್‌ ಮೂಲಕ ಆಟೋ ಅಥವಾ ಕ್ಯಾಬ್‌ಗಳನ್ನು ಗ್ರಾಹಕರು ಬುಕಿಂಗ್‌ ಮಾಡುತ್ತಿದ್ದಂತೆ ಎಂದಿನಂತೆ ವಾಹನದ ನೋಂದಣಿ ಸಂಖ್ಯೆ ಮತ್ತು ಚಾಲಕನ ಹೆಸರು ಬರುತ್ತದೆ. ಪಿಕ್‌ಅಪ್‌ ಪಾಯಿಂಟ್‌ಗೆ ಸಕಾಲದಲ್ಲಿ ವಾಹನವೂ ಬಂದು ನಿಲ್ಲುತ್ತದೆ. ಆದರೆ, ಅದು ನೀವು ಬುಕಿಂಗ್‌ ಮಾಡಿದ ವಾಹನ ಆಗಿರುವುದಿಲ್ಲ.

ಬದಲಿಗೆ ಮತ್ತೂಂದು ನೋಂದಣಿ ಸಂಖ್ಯೆಯ ಅದೇ ಮಾದರಿ (ಉದಾ: ಆಟೋ ಅಥವಾ ಕ್ಯಾಬ್‌) ವಾಹನ ಆಗಿರುತ್ತದೆ. ಚಾಲಕ ಕೂಡ ಬೇರೆಯೇ ಆಗಿರುತ್ತಾನೆ. ಕೆಲವು ಸಲ ಗ್ರಾಹಕರು ತಮಗಾಗಿಯೇ ಬುಕಿಂಗ್‌ ಮಾಡುತ್ತಾರೆ. ಇನ್ನು ಕೆಲವು ಸಲ ತಮ್ಮವರಿಗಾಗಿ ಬುಕಿಂಗ್‌ ಮಾಡಿರುತ್ತಾರೆ. ವಾಹನದ ಟ್ರ್ಯಾಕಿಂಗ್‌ ಆಗುತ್ತಿರುತ್ತದೆ. ಆದರೆ, ಅದು ವಾಸ್ತವವಾಗಿ ಬುಕಿಂಗ್‌ ಮಾಡಿದ ವಾಹನ ಆಗಿರುವುದಿಲ್ಲ. ಬೇರೆಯದ್ದೇ ಆಗಿರುತ್ತದೆ. ಇದು ನಿತ್ಯ ಅನೇಕ ಬಾರಿ ನಡೆಯುತ್ತಿದ್ದರೂ, ಗ್ರಾಹಕರು ಇದರತ್ತ ಗಮನಹರಿಸಿರುವುದಿಲ್ಲ. ಒಂದು ವೇಳೆ ಈ ಬಗ್ಗೆ ಕೇಳಿದರೂ, “ಅದೂ ನಮ್ಮದೇ ವಾಹನ. ಆದರೆ, ಬೇರೆ ಕಡೆಗೆ ಹೋಗಿದೆ ಅಷ್ಟೇ. ಅರ್ಜೆಂಟ್‌ ಇದ್ದುದರಿಂದ ಈ ವಾಹನ ತಂದಿದ್ದೇನೆ ಅಷ್ಟೇ’ ಎಂದು ಚಾಲಕರು ಸಮಜಾಯಿಷಿ ನೀಡುತ್ತಾರೆ ಎಂದು ಗ್ರಾಹಕರು ದೂರುತ್ತಾರೆ.

“ಈ ಹಿಂದೆ ನನಗೂ ಎರಡು ಬಾರಿ ಇದು ಅನುಭವಕ್ಕೆ ಬಂದಿದೆ. ಮಂಗಳವಾರ ರಾಜಾಜಿ ನಗರದಿಂದ ಮೆಜೆಸ್ಟಿಕ್‌ಗೆ ಬುಕಿಂಗ್‌ ಮಾಡಿದ್ದೆ. ಆಗಲೂ ಇದು ಪುನರಾವರ್ತನೆಯಾಯಿತು. ಕೇಳಿದಾಗ, ಅದೂ ನಮ್ಮದೇ ಆಟೋ’ ಎಂದು ಸಮಜಾಯಿಷಿ ನೀಡಿದರು’ ಎಂದು ವಿನುತಾ ಹೇಳಿದರು.

ಡ್ಯಾಶ್‌ ಬೋರ್ಡ್‌ನಲ್ಲಿ ಯಾವ ವಾಹನ ಸಂಖ್ಯೆ ನೋಂದಣಿ ಆಗಿರುತ್ತದೆಯೋ ಅದೇ ವಾಹನ ಪಿಕ್‌ಅಪ್‌ ಮಾಡಲು ಬರಬೇಕಾಗುತ್ತದೆ. ಹಾಗೆ ಆಗದಿದ್ದರೆ, ಅಂತಹ ವಾಹನಗಳನ್ನು ಗ್ರಾಹಕರು ನಿರಾಕರಿಸಬೇಕು. ಒಂದು ವೇಳೆ ಅಜ್ಞಾತ ಸ್ಥಳಕ್ಕೆ ತೆಗೆದುಕೊಂಡು ಹೋದಾಗ ಇದರ ಗಂಭೀರತೆ ಗೊತ್ತಾಗುತ್ತದೆ. ಆದರೆ, ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಈ “ಅದಲು-ಬದಲು ಆಟ’ ಸರಿ ಅಲ್ಲ ಎಂದು ರಾಜ್ಯ ಟ್ರಾವೆಲ್‌ ಮಾಲಿಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಹೇಳುತ್ತಾರೆ. “ಕೆಲವೊಮ್ಮೆ ಆಟೋ ರಿಪೇರಿ ಇದ್ದಾಗ ಹೀಗೆ ಚಾಲಕರು ಬೇರೆ ವಾಹನ ತರುತ್ತಾರೆ. ಈ ರೀತಿ ಆಗಬಾರದು ಎಂಬ ಕಾರಣಕ್ಕಾಗಿಯೇ “ನಮ್ಮ ಯಾತ್ರಿ’ಯಲ್ಲಿ ಚಾಲಕರು ತಮ್ಮ ಚಾಲ್ತಿ ವಾಹನದ ಆರ್‌ಸಿ ಅನ್ನು ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಆಟೋರಿಕ್ಷಾ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ “ನಮ್ಮ ಯಾತ್ರಿ’ ಆ್ಯಪ್‌ಗೆ ಸಂಬಂಧಿಸಿದ ಸಲಹಾ ಸಮಿತಿಯಲ್ಲಿದ್ದ ರುದ್ರಮೂರ್ತಿ ಸ್ಪಷ್ಟಪಡಿಸಿದರು.

“ಒಂದೇ ದಿನ ಎರಡು ಬಾರಿ ಹೀಗೇ ಆಗಿದೆ’: “ನನಗೆ ಇದು ಒಂದೇ ದಿನದಲ್ಲಿ ಎರಡು ಬಾರಿ ಅನುಭವಕ್ಕೆ ಬಂದಿದೆ. ಒಲಾ ಹಾಗೂ ನಮ್ಮ ಯಾತ್ರಿ ಎರಡೂ ಆ್ಯಪ್‌ಗ್ಳಿಂದ ಬೆಳಗ್ಗೆ ಮತ್ತು ಸಂಜೆ ಬುಕಿಂಗ್‌ ಮಾಡಲಾಗಿತ್ತು. ಎರಡೂ ಸಲ ಮೊಬೈಲ್‌ನಲ್ಲಿ ತೋರಿಸಿದ ವಾಹನ ಸಂಖ್ಯೆ ಮತ್ತು ಪಿಕ್‌ಅಪ್‌ ಮಾಡಿಕೊಳ್ಳಲು ಬಂದಿದ್ದ ವಾಹನ ಸಂಖ್ಯೆ ಬೇರೆಯಾಗಿತ್ತು. ಚಾಲಕ ಕೂಡ ಬೇರೆ ಆಗಿದ್ದ. ನಮ್ಮ ಯಾತ್ರಿ ಆ್ಯಪ್‌ ಸಹಾಯವಾಣಿಗೆ ಕರೆ ಮಾಡಿ ಈ ಬಗ್ಗೆ ಕೇಳಿದಾಗ, “ಬೇರೆ ಆಟೋ ಬರಲಿ ಬಿಡಿ. ಅವನೂ ದುಡಿದುಕೊಳ್ಳಲಿ. ಏನು ತಪ್ಪು?’ ಎಂದು ಕೇಳುತ್ತಾರೆ’ ಎಂದು ಬನ್ನೇರುಘಟ್ಟ ಪ್ರಯಾಣಿಕ ಸಚಿನ್‌ ತಿಳಿಸಿದರು.

2016ರ ಕರ್ನಾಟಕ ರಾಜ್ಯ ಬೇಡಿಕೆ ಇರುವ ಆಧಾರಿತ ಸಾರಿಗೆ ತಂತ್ರಜ್ಞಾನ ಅಗ್ರಿಗೇಟರ್‌ ನಿಯಮಗಳಲ್ಲಿ ಇದು ಸೇರಿದೆಯೋ ಇಲ್ಲವೋ ಪರಿಶೀಲಿಸಬೇಕಾಗುತ್ತದೆ. ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ, ಕ್ರಮ ಕೈಗೊಳ್ಳಲಾಗುವುದು. ಇದೆಲ್ಲಕ್ಕಿಂತ ಮುಖ್ಯವಾಗಿ ಡ್ಯಾಶ್‌ಬೋರ್ಡ್‌ನಲ್ಲಿ ತೋರಿಸಿದ ನೋಂದಣಿ ಸಂಖ್ಯೆಯ ವಾಹನವೇ ಪಿಕ್‌ಅಪ್‌ ಮಾಡಿಕೊಳ್ಳಲು ಬರಬೇಕು. ಅದೇ ಸರಿಯಾದ ಕ್ರಮ. -ಸಿ. ಮಲ್ಲಿಕಾರ್ಜುನ, ಹೆಚ್ಚುವರಿ ಸಾರಿಗೆ ಆಯುಕ್ತ (ಪ್ರವರ್ತನ), ಸಾರಿಗೆ ಇಲಾಖೆ

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

prahlad jo shi

Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು‌ ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ

ಈಶ್ವರಪ್ಪ

Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು

Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು

Ayurvedic Doctor: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದ ಆಯುರ್ವೇದಿಕ್‌ ವೈದ್ಯ…

Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್‌ ವೈದ್ಯ

3

Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್‌ ಕಸ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ

Kiccha Sudeep supports Sanju Weds Geetha 2 movie

Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್‌‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ಅಂತ್ಯಕ್ರಿಯೆಗೆ ತಯಾರಿ ನಡೆಸಿದ್ದರು

Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.