ಜನರ ದೂರು ದುಮ್ಮಾನ ಪರಿಹರಿಸಲೆಂದೇ ಬಂದಿದೆ ಜನಹಿತ ಆ್ಯಪ್
Team Udayavani, Feb 28, 2017, 12:45 PM IST
ಬೆಂಗಳೂರು: ನಗರಾಡಳಿತಗಳಿಗೆ ಸಂಬಂಸಿದ ದೂರುಗಳನ್ನು ದಾಖಲಿಸಲು ಮತ್ತು ಕುಂದುಕೊರತೆಗಳ ತಿಳಿಸಲು ಅತ್ಯಾಧುನಿಕ ತಂತ್ರಜ್ಞಾನದ “ಜನಹಿತ’ ಮೊಬೈಲ್ ಆ್ಯಪ್‌ಅನ್ನು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಗೆ ತರಲಾಗಿದೆ.
ಕರ್ನಾಟಕ ಸಿಟಿ ಮ್ಯಾನೇಜರ್ಸ್ ಅಸೋಸಿಯೇಷನ್, ಪೌರಾಡಳಿತ ನಿರ್ದೇಶನಾಲಯ ಮತ್ತು ಮುನ್ಸಿಪಲ್ ಡಾಟಾ ಸಂಸ್ಥೆ ಸಹಯೋಗದೊಂದಿಗೆ ಸೋಮವಾರ ವಿಕಾಸಸೌಧದಲ್ಲಿ ನಡೆದ “ಮುನ್ಸಿಪಲ್ ಡಾಟಾ ಸೊಸೈಟಿಯ ನಾಗರಿಕ ಕೇಂದ್ರಿತ ಸೇವೆ’ಗಳ ಉದಾ#ಟನೆ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭದದಲ್ಲಿ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಮತ್ತು ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಆ್ಯಪ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, “ಈ ಆ್ಯಪ್ ಮೂಲಕ ನಾಗರಿಕರ ದೂರು ಸ್ವೀಕಾರ ಸೇರಿದಂತೆ ಅವರ ಕುಂದುಕೊರತೆಗಳನ್ನು ಆನ್‌ಲೈನ್ ಮೂಲಕ ವಿಲೇವಾರಿ ಮಾಡಬಹುದು. ಈ ರೀತಿಯ ತಂತ್ರಜ್ಞಾನ ಬಳಕೆ ದೇಶದಲ್ಲೇ ಮೊದಲು. ಜನಹಿತ ಮೊಬೈಲ… ಆ್ಯಪ್ ಮೂಲಕ ಕಟ್ಟಡ ನಿರ್ಮಾಣ ಪರವಾನಗಿ, ಉದ್ದಿಮೆಗಳಿಗೆ ನೀಡುವ ಪರವಾನಗಿ, ವ್ಯಾಪಾರಕ್ಕೆ ಸಂಬಂಧಿ ಸಿದ ಪರವಾನಗಿ, ಇ- ಆಸ್ತಿ, ಹಾಗೂ ಜನನ ಮತ್ತು ಮರಣ ದಾಖಲೆಗಳ ನೊಂದಣಿ ಮಾಡಬಹುದು ,”ಎಂದರು.
ಸಚಿವ ರೋಷನ್ ಬೇಗ್ ಮಾತನಾಡಿ, “ನಗರೀಕರಣ ಹೆಚ್ಚಾದಂತೆ ನಗರಕ್ಕೆ ವಲಸೆ ಬರುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿದೆ. ಪ್ರಸ್ತುತ ನಗರ ವಾಸಿಗಳ ಸಂಖ್ಯೆ ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 38ರಷ್ಟಿದ್ದು, ಮುಂದಿನ ದಿನಗಳಲ್ಲಿ ಅದು ಶೇ. 50ಕ್ಕೆ ಹೆಚ್ಚಲಿದೆ. ನಗರ ಮತ್ತು ಪಟ್ಟಣ ಪ್ರದೇಶಗಳ ಜನಸಂಖ್ಯೆ ಹೆಚ್ಚಳ ಗಮನದಲ್ಲಿಟ್ಟುಕೊಂಡು ರಸ್ತೆ, ಕುಡಿಯುವ ನೀರು, ಒಳಚರಂಡಿ ಮತ್ತಿತರ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು,” ಎಂದರು.
“ಸರ್ಕಾರ ಜಾರಿಗೆ ತಂದಿರುವ ಆನ್‌ಲೈನ್ ಸೇವೆ ಮೂಲಕ ದೂರು ದಾಖಲಿಸುವುದರ ಜತೆಗೆ ದೂರವಾಣಿ ಕರೆಗಳ ಮೂಲಕವೂ ಜನರು ತಮ್ಮ ಅಹವಾಲು ನೋಂದಾಯಿಸಿಕೊಳ್ಳಬಹುದು. ಇಂತಹ ದೂರು, ಅಹವಾಲು ಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು,” ಎಂದು ಹೇಳಿದರು. ಇದೇ ವೇಳೆ ಅತ್ಯುತ್ತಮ ಪದ್ಧತಿ ರೂಪಿಸಿ, ಉತ್ತಮ ಆಡಳಿತ ನಡೆಸುತ್ತಿರುವ ಸ್ಥಳೀಯ ಸಂಸ್ಥೆಗಳಿಗೆ ಪ್ರಶಸ್ತಿ ನೀಡಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.