ಆರ್ಚ್‌ಬಿಷಪ್ ಗುರುದೀಕ್ಷೆ ಸಂಭ್ರಮ ಸಂಪನ್ನ
Team Udayavani, Dec 7, 2017, 6:30 AM IST
ಬೆಂಗಳೂರು : ಬೆಂಗಳೂರಿನ ಮಹಾಧರ್ಮಾಧ್ಯಕ್ಷ ಡಾ.ಬರ್ನಾರ್ಡ್ ಮೊರಾಸ್ ಅವರು ಬುಧವಾರ ನಗರದ ಕೋಲ್ಸ್ ಪಾರ್ಕ್ ಬಳಿ ಇರುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯದಲ್ಲಿ ಗುರುದೀಕ್ಷೆಯ ಸುವರ್ಣ ಸಂಭ್ರಮ ಆಚರಿಸಿಕೊಂಡರು.
ಕ್ರೈಸ್ತ ಧರ್ಮದ ಧಾರ್ಮಿಕ ವಿಧಿ-ವಿಧಾನ ಹಾಗೂ ಸರ್ವಧರ್ಮದ ಗಣ್ಯರ ಸಮ್ಮುಖದಲ್ಲಿ ನಡೆದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ನಿಡು ಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಗೃಹ ಸಚಿವ ರಾಮಲಿಂಗಾರೆಡ್ಡಿ, ಶಾಸಕರಾದ ಜೆ.ಆರ್.ಲೋಬೋ, ಎನ್.ಎ.ಹ್ಯಾರಿಸ್, ವಿಧಾನಪರಿಷತ್ ಮುಖ್ಯ ಸಚೇತಕ ಐವಾನ್ ಡಿಸೋಜಾ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಸಂಜೆ 5 ಗಂಟೆ ಸುಮಾರಿಗೆ ಡಾ.ಬರ್ನಾರ್ಡ್ ಮೊರಾಸ್ ಅವರನ್ನು ಸಾಂಪ್ರದಾಯಿಕವಾಗಿ ಮಕ್ಕಳ ಬ್ಯಾಂಡ್‌ನೊಂದಿಗೆ ಪ್ರಧಾನಾಲಯಕ್ಕೆ ಬರಮಾಡಿಕೊಳ್ಳಲಾಯಿತು. ಆನಂತರ ಮಹಾಧರ್ಮಗುರುಗಳು, ಧರ್ಮಾಧ್ಯಕ್ಷರು, ಧರ್ಮಗುರು ಅವರನ್ನು ಪ್ರಧಾನಾಲಯದ ಮುಂಭಾಗದಲ್ಲಿ ನಿರ್ಮಿಸಿದ್ದ ವೇದಿಕೆ ಕರೆದುಕೊಂಡು ಹೋದರು.
ಬೆಂಗಳೂರು ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಹಾಗೂ ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಧರ್ಮಾಧ್ಯಕ್ಷರ ಮಂಡಳಿಯ ಅಧ್ಯಕ್ಷರಾದ ಡಾ.ಬರ್ನಾರ್ಡ್ ಮೊರಾಸ್ ಅವರು ತಮ್ಮ ಗುರು ದೀಕ್ಷೆಯ ಸುವರ್ಣ ಮಹೋತ್ಸವವನ್ನು ಕರ್ನಾಟಕದ ಹಾಗೂ ಇತರೇ ಧರ್ಮಾಕ್ಷರುಗಳು, ಗುರುಗಳು, ಧಾರ್ಮಿಕ ಸಹೋದರ-ಸಹೋದರಿಯರು, ಭಕ್ತ ಜನತೆಯ ಸಮ್ಮಿಖದಲ್ಲಿ ಬಲಿಪೂಜೆ ಅರ್ಪಿಸುವ ಮೂಲಕ ಸಂಪನ್ನಗೊಳಿಸಿದರು.
ಕೃತಜ್ಞತಾ ಭಾವದ ಬಲಿಪೂಜೆ ಅರ್ಪಣೆ
ಬಲಿಪೂಜೆ ಅರ್ಪಣೆಗೂ ಪೂರ್ವದಲ್ಲಿ ಮಾತನಾಡಿದ ಡಾ.ಬರ್ನಾರ್ಡ್ ಮೊರಸ್, 50 ವರ್ಷದ ಗುರುದೀಕ್ಷೆಯ ಸಂದರ್ಭದಲ್ಲಿ ದೇವರಿಗೆ ಕೃತಜ್ಞತಾ ಪೂರ್ವಕವಾಗಿ ಧನ್ಯವಾದ ಸಲ್ಲಿಸಲು ಹಾಗೂ ದೇವರ ದಯೆ ಮತ್ತು ಕರುಣೆಗೋಸ್ಕರ ವಂದನೆ ಸಲ್ಲಿಸಲು ನಾನು ಈ ಬಲಿಪೂಜೆಯನ್ನು ನಿಮ್ಮೊಂದಿಗೆ ಅರ್ಪಿಸುತ್ತಿದ್ದೇನೆ ಎಂದರು.
50 ವರ್ಷದ ಗುರುದೀಕ್ಷೆಯ ಜೀವನದಲ್ಲಿ ದೇವರ ಪ್ರೀತಿಯನ್ನು ಅನುಭವಿಸಿದ್ದೇನೆ. ಅವರ ಕರುಣೆಯಿಂದ ನಾನು ಕೆಲಸವನ್ನು ಮುಂದುವರಿಸಿಕೊಂಡು ಬಂದಿದ್ದೇನೆ. ಬಲಿಪೂಜೆ ಅರ್ಪಿಸುವಾಗ ದೇವರಿಗೆ ಧನ್ಯವಾದ ಅರ್ಪಿಸುತ್ತಿದ್ದೇನೆ. ನನ್ನ ಜೀವನದಲ್ಲಿ ಕಷ್ಟ, ಸಂಕಷ್ಟ, ಹಾಗೂ ನನ್ನಿಂದಾದ ತಪ್ಪು ಇರಬಹುದು, ದೇವರ ಕ್ಷಮೆಯನ್ನು ಹಾಗೂ ಕರುಣೆಯನ್ನು ಯಾಚಿಸುತ್ತೇನೆ. ಬಲಿಪೂಜೆ ಅರ್ಪಿಸುವಾಗ ನಾವು ನಮ್ಮ ಪಾಪಗಳನ್ನ ನೆನೆದುಕೊಂಡು ದೇವರಿಗೆ ಕ್ಷೇಮ ಬೇಡಿಕೊಳ್ಳೊಣ, ಎಲ್ಲರ ಕ್ಷೇಮಕ್ಕಾಗಿ ಪ್ರತ್ಯೇಕವಾಗಿ ಪ್ರಾರ್ಥಿಸಿ ಬಲಿಪೂಜೆ ಅರ್ಪಿಸೋಣ ಎಂದು ಬಲಿಪೂಜೆ ನಡೆಸಿದರು.
ಬಲಿಪೂಜೆಯ ನಂತರ ಡಾ.ಬರ್ನಾರ್ಡ್ ಮೊರಾಸ್ ಸೇರಿದಂತೆ ಮಹಾಧರ್ಮಗುರುಗಳು, ಧರ್ಮಗುರುಗಳು ಭಕ್ತರ ಬಳಿಗೆ ಬಂದು ಪ್ರಸಾದ ವಿತರಿಸಿದರು. ಬೆಂಗಳೂರು ಮಹಾಧರ್ಮಕ್ಷೇತ್ರದಿಂದ ಸಿದ್ಧಪಡಿಸಿದ್ದ ಕೇಕ್ ಕತ್ತರಿಸಿ, ಅವರಿಂದ ಸನ್ಮಾನ ಸ್ವೀಕರಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದ ನಂತರ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ಪ್ರಾರ್ಥನೆ:
ಕನ್ನಡ, ಇಂಗ್ಲಿಷ್ ಹಾಗೂ ತಮಿಳು ಭಾಷೆಯಲ್ಲಿ ವಿವಿಧ ಪ್ರಾರ್ಥನೆಯನ್ನು ಸಾಮೂಹಿಕವಾಗಿ ನೆರವೇರಿಸಿದರು. ಸುವರ್ಣ ಮಹೋತ್ಸವ ಕಾರ್ಯಕ್ರಮ ಹಾಗೂ ಮಹಾಧರ್ಮಾಧ್ಯಕ್ಷರಿಗೆ ಅರ್ಪಿಸಲು ವಿಶೇಷ ಪ್ರಾರ್ಥನೆಯೊಂದನ್ನು ಸಿದ್ಧಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅದರ ಪ್ರತಿಯನ್ನು ಎಲ್ಲರಿಗೂ ವಿತರಿಸಿ ಸಾಮೂಹಿಕವಾಗಿ ಹಾಡಿದರು.
ಸಂತ ಫ್ರಾನ್ಸಿಸ್ ಕ್ಸೇವಿಯರ್ ಪ್ರಧಾನಾಲಯದ ವ್ಯಾಪ್ತಿಯಲ್ಲಿ ಕೆಥೋಲಿಕ್ ಸಮುದಾಯ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆಯನ್ನು ಡಾ.ಬರ್ನಾರ್ಡ್ ಮೊರಾಸ್ ನೆರವೇರಿಸಿದರು.
ಗಣ್ಯರಿಂದ ಅಭಿನಂದನೆ:
ನಿಡುಮಾಮಿಡಿ ವೀರಭದ್ರಚನ್ನಮಲ್ಲ ಸ್ವಾಮೀಜಿ, ಗೃಹಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಗಣ್ಯರು ಡಾ.ಬರ್ನಾರ್ಡ್ ಮೊರಾಸ್ ಅವರಿಗೆ ಅಭಿನಂದನೆ ಸಲ್ಲಿಸಿದರು.
ಭೋಪಾಲ್, ಚಿಕ್ಕಮಗಳೂರು, ಮೈಸೂರು, ಕಲಬುರಗಿ, ಬೆಳಗಾವಿ, ಬಳ್ಳಾರಿ, ಕಾರವಾರ, ಶಿವಮೊಗ್ಗ, ಮಂಡ್ಯ ಹಾಗೂ ತಮಿಳುನಾಡಿನ ವಿವಿಧ ಚರ್ಚ್‌ನ ಧರ್ಮಾಧ್ಯಕ್ಷರು, ಧರ್ಮಗುರುಗಳು, ಸಂಘಟನಾ ಸಮಿತಿಯ ಶ್ರೇಷ್ಠಗುರುಗಳಾದ ಮೊನ್‌ಸಿಜೊnàರ್ ಎಸ್.ಜಯನಾಥನ್, ಮೊನ್‌ಸಿಜೊnàರ್ ಸಿ.ಫ್ರಾನ್ಸಿಸ್, ಧಾರ್ಮಿಕ ಸಮುದಾಯದ ಮಹಾಧರ್ಮಾಕ್ಷೇತ್ರದ ಪ್ರತಿನಿಧಿ ಸ್ವಾಮಿ ಕ್ಸೇವಿಯರ್ ಮನಾವತ್ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
DK Shivakumar: ಮಹದಾಯಿ, ಮೇಕೆದಾಟು ಯೋಜನೆ ಅನುಮತಿಗೆ ದಿಲ್ಲಿಯಲ್ಲಿ ಡಿಕೆಶಿ ಲಾಬಿ
Basavaraj Horatti: ಸಂವಿಧಾನ ಸ್ವಾತಂತ್ರ್ಯ ಭಾರತದ ಮೈಲಿಗಲ್ಲು: ಹೊರಟ್ಟಿ
ಲಾಕಪ್‌ಡೆತ್: ಹೆಡ್ ಕಾನ್‌ಸ್ಟೆಬಲ್ ಸೇರಿ ನಾಲ್ವರು ಪೊಲೀಸರಿಗೆ 7 ವರ್ಷ ಜೈಲು
Belagavi: ಯುವಕನ ಮೇಲೆ ಗುಂಡಿನ ದಾಳಿ… ಸ್ಥಳದಲ್ಲಿ ಬಿಗುವಿನ ವಾತಾವರಣ
Satish Jarkiholi: ಪಕ್ಷ ಸಂಘಟನಾ ಶಕ್ತಿ ಇದ್ದವರ ಬಳಸಿಕೊಳ್ಳಿ: ಸತೀಶ್ ಜಾರಕಿಹೊಳಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.