ನೆರೆಯವರ ಉಸಾಬರಿ ನಮಗ್ಯಾಕೆ? ನಮ್ಮೂರಿನವರು ಹೀಗೇಕೆ? 


Team Udayavani, Sep 11, 2017, 11:57 AM IST

city-pg-2-lead.jpg

“ಪಕ್ಕದ ಮನೆಯಲ್ಲಿ ಏನಾಗ್ತಾ ಇದೇ ಅನ್ನೋದೆ ಆ ಊರಲ್ಲಿ ಗೊತ್ತಾಗಲ್ಲ. ನಮ್ಮೂರೇ ನಮಗೆ ಸರಿನಪ್ಪ,’ ಎಂದು ಬೆಂಗಳೂರನ್ನು ದೂರುತ್ತಿದ್ದ ಹಳ್ಳಿಗರ ಮಾತು ಇತ್ತೀಚೆಗೆ ಹೆಚ್ಚು ಹೆಚ್ಚು ಸತ್ಯವಾಗುತ್ತಾ ಹೋಗುತ್ತಿದೆ. ನೆರೆಹೊರೆಯವರ ಕಷ್ಟಗಳಿಗೆ ಸ್ಪಂದಿಸದ ಸ್ಥಿತಿಗೆ ರಾಜಧಾನಿಯ ಜನ ತಲುಪುತ್ತಿದ್ದಾರೆ. ಮನುಷ್ಯನ ನರಳಾಟವನ್ನೇ ಚಿತ್ರೀಕರಿ ಸುವುದು, ಹತ್ಯೆಗಳು ನಡೆದಂಥ ಸನ್ನಿವೇಶದಲ್ಲಿ ಹತ್ತಿರಕ್ಕೂ ಬಾರದೇ ಹೋಗುವುದು ಇದೆಲ್ಲವೂ ಒಂದಿಲ್ಲೊಂದು ಪ್ರಕರಣದಲ್ಲಿ ಕಾಣಿಸುತ್ತಲೇ ಇದೆ. ನಮ್ಮವರು ಹೀಗೆ ಯಾಕೆ? ಸಂದರ್ಭ ಸಹಿತ ವಿವರಣೆ ಇಲ್ಲಿದೆ. 

ಢಮಾರ್‌… ದೊಡ್ಡ ಸದ್ದು…, ಪಕ್ಕದ ಮನೆಯವರಿಗೆ ಪಟಾಕಿ ಇರಬಹುದು ಎಂದು ಅನಿಸಿತು. “ಅಪ್ಪಾ, ಗೌರಕ್ಕ ಬಿಧ್ದೋಗಿದ್ದಾರೆ’ ಅಂದಳು ಮಗಳು. ಅಪ್ಪ, ಬಾಟಲಿ ನೀರು ಕೈಗೆತ್ತಿಕೊಂಡಾಗ “ನಿನಗ್ಯಾಕೆ ಬೇಕು ಈ ಉಸಾಬರಿ ‘ಅಂದಿತು ಮನಸ್ಸು. ಇರಲಿ, ಅಂತ ನೀರು ತಗೊಂಡು ಹತ್ತಿರಕ್ಕೆ ಹೋದರೆ… ಗೌರಿ ಶವವಾಗಿ ಹೋಗಿದ್ದರು. ರಕ್ತದ ಮಡು. ನೀರು ಕುಡಿಸುವ ಉಮೇದು ಇಳಿದು ಹೋಗಿ ಭಯವಾಯ್ತು. ಓಡಿ ಮತ್ತೆ ಮನೆ ಸೇರಿದರು ಅಪ್ಪ, ಮಗಳು. ಪೊಲೀಸು ಬಂದರು. ಮಹಜರು ಮಾಡಿದರು. ಸಾಕ್ಷಿಯಾರು ಅಂತ ನೋಡುವ ಹೊತ್ತಿಗೆ ಪಕ್ಕದ ಮನೆಯೇ ಖಾಲಿ. 

ಎಂಥ ಭಯ !
ಬಸವನಗುಡಿಯಲ್ಲಿ – ಪಾರ್ಕಿಂಗ್‌ಗಾಗಿ ಇಬ್ಬರು ಮನೆ ಮಾಲೀಕರಿಗೆ ಗಲಾಟೆ. ಅಕ್ಕಪಕ್ಕದ ಮನೆಯವರು ನಮಗ್ಯಾಕೆ ಬೇಕಪ್ಪ ಅಂತ ಒಳಗೊಳಗೆ ಕಿಟಕಿಯಿಂದ ನೋಡುತ್ತಿದ್ದರು. ಗಲಾಟೆ ಹೊಡೆದಾಟಕ್ಕೆ ತಿರುಗಿ ಇಬ್ಬರಲ್ಲಿ ಒಬ್ಬರು ರಕ್ತ ಸಿಕ್ತವಾಗಿ ಕೆಳಗೆ ಬಿದ್ದರು. ಅರ್ಧ ಗಂಟೆ ಇಡೀ ಬೀದಿ ನಿಶ್ಯಬ್ದ. ಪೊಲೀಸರು ಬಂದರು. ಅವರಿಗೆ ಹೇಳಿದ್ದು ಯಾರು? ಬೀದಿಯ ಕೊನೆ ಮನೆಯ ಮಹಡಿಯಿಂದ ಇಣುಕುತ್ತಿದ್ದ ಹೆಂಗಸು ಮೆಲ್ಲಗೆ ಪೊಲೀಸರಿಗೆ ಫೋನು ಮಾಡಿದ್ದಳು. ಅದರ ಬದಲು ಆಕೆಯೇ ಬಂದು ಜಗಳ ಬಿಡಿಸಿದ್ದರೆ? 

ಅಯ್ನಾ, ನಮಗ್ಯಾಕೆ ಬೇಕಪ್ಪ ಬೇರೆಯವರ ವಿಷ್ಯ? 
ಇದು ಪಟ್ಟಣದ ನಾಗರಿಕ ಸಮಾಜದ ಉತ್ತರ. ಯಾರಿಗೆ ಏನೇ ಆದರೂ ಅದಕ್ಕೂ ನಮಗೂ ಸಂಬಂಧ ಇಲ್ಲ ಅನ್ನೋದು ಬಹುತೇಕ ಪಟ್ಟಣದ ಕಪ್ಪೆಗಳ ಸಂವಿಧಾನ. ಇವರು ಯಾರೂ ಯಾರ ಕಷ್ಟಕ್ಕೆ ಆಗಲೊಲ್ಲರು. ಪಟ್ಟಣಗಳೇಕೆ ಒಂಟಿಯಾಗುತ್ತಿವೆ? ಬದುಕೇಕೆ ದ್ವೀಪವಾಗುತ್ತಿದೆ? ಇಡೀ ಜಗತ್ತು ಬೆಂಗಳೂರಲ್ಲಿ ಇದ್ದರೂ, ಇಲ್ಲಿರುವವರೂ ಬೇರೆ ಜಗತ್ತಲ್ಲಿ ಇರದೋ ಏಕೆ? ಇದೇ ಘಟನೆಗಳು ಒಂದು ಹಳ್ಳಿಯಲ್ಲಿ ನಡೆದಿದ್ದರೆ.. ಸಾವಿನ ಮನೆಯ ಜವಾಬ್ದಾರಿ ಒಬ್ಬರು, ಸಂಬಂಧಿಕರ ಜವಾಬ್ದಾರಿ ಇನ್ನೊಂದು ಮನೆಯವರು ತೆಗೆದುಕೊಂಡು ಊಟ, ತಿಂಡಿ, ಇರೋದಕ್ಕೆ ಜಾಗ ಎಲ್ಲವೂ ನಡೆದು ಹೋಗಿಬಿಡೋದು. ಇಂಥ ಮಾನವೀಯತೆ ಪಟ್ಟಣಗಳಲ್ಲಿ ಏಕೆ ಇಲ್ಲ?

 ಸಮಯ ಇಲ್ಲ. ಒತ್ತಡದ ಬದುಕು. ಒಬ್ಬೊಬ್ಬರ ಉದ್ಯೋಗದ ಸಮಯ ಒಂದೊಂದು ರೀತಿ. ಬೆಳಗ್ಗೆ ಹೋದವರು ನಾಳೆ ಬೆಳಗ್ಗೆ ಬರುತ್ತಾರೆ, ಸಂಜೆ ಹೋದವರು ಬೆಳಗ್ಗೆ ತನಕ ದುಡಿಯೋರು ಇದ್ದಾರೆ. ಇದರ ಜೊತೆಗೆ ಮನೆ, ಮಕ್ಕಳು, ಸ್ಕೂಲಿಗೆ ಕಳಿಸೋದು, ಆಫೀಸು, ಅಲ್ಲಿ ಟಾರ್ಗೆಟ್‌ ಕೆಲಸ ಎಲ್ಲ ಮುಗಿಸಿ- ಟ್ರಾಫಿಕ್‌ನಲ್ಲಿ ಈಜಿಕೊಂಡು ಮನೆಗೆ ಬರುವ ಹೊತ್ತಿಗೆ ಬದುಕು ಅಕಟಕಟಾ ಹೈರಾಣ. ಇಂಥ ಒತ್ತಡದಲ್ಲಿ ಬದುಕುತ್ತಲೇ ಅಯ್ಯೋ, ನಮಗ್ಯಾಕೇ ಬೇಕು. ನಮ್ಮದು ನಾವು ನೋಡಿಕೊಂಡರೆ ಸಾಕು ಅನ್ನೋ ಮಟ್ಟಕ್ಕೆ ಬಂದು ಬಿಟ್ಟಿರುತ್ತಾರೆ. ಸಿಟಿ  ಜನರಿಗೆ ಮನರಂಜನೆ ಅಂದರೆ ಟಿವಿ, ಮೊಬೈಲ್‌.

ಹಿಂದಿನಂತೆ ದೇವಸ್ಥಾನದ ಸುತ್ತಾಟ, ಪಾರ್ಕು, ಸಮಾರಂಭ ಇವ್ಯಾವೂ ಈಗಿಲ್ಲ. ಒತ್ತಡ ನಿವಾರಣೆಗೆ ಮದ್ದು ಸೋಶಿಯಲ್‌ ಮೀಡಿಯಾ. ಇದನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಅನ್ನೋದು ತಿಳಿಯದೇ ಸಿಟಿ ಎಂಬ ಸಂತೆಯ ಮಧ್ಯೆಯೂ ಒಬ್ಬಂಟಿ. ಒಂದು ಸಲ ಮೊಬೈಲ್‌ ಗೇಮ್‌, ಫೇಸ್‌ಬುಕ್‌, ವಾಟ್ಸ್‌ಪ್‌ಗೆ ಅಡಿಕ್ಟ್ ಆದರೆ ಮುಗೀತು. ಪಕ್ಕದಲ್ಲಿ ಯಾರು ಬಿದ್ದರೂ, ಸತ್ತರೂ ತಿಳಿಯಲೊಲ್ಲದು. ಮನುಷ್ಯನಲ್ಲಿ ಒಂಟಿತನವನ್ನು ಹೇರುವುದರಲ್ಲಿ ಸೋಶಿಯಲ್‌ ಮೀಡಿಯಾದ್ದೇ ಪ್ರಮುಖ ಪಾತ್ರ’ ಎನ್ನುತ್ತಾರೆ ಮನಃಶಾಸ್ತ್ರಜ್ಞರು. 

ಆದರೆ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ವೈವಿಧ್ಯತೆ ಕಡಿಮೆ. ಸಮಯ ಹೆಚ್ಚಿರುತ್ತದೆ. ಊರು ಸಣ್ಣದು. ಸಮಯ ಸಿಕ್ಕಾಗ ಹರಟೆ ಹೊಡೆಯೋದು, ಒಟ್ಟಿಗೆ ಊಟ ಮಾಡೋದು. ಕಷ್ಟ ಸುಖಗಳನ್ನು ಕೇಳ್ಳೋದು ಹೀಗೆ ಎಲ್ಲೇ ಪಿಸುಗುಟ್ಟಿದರೂ ಊರ ತುಂಬ ವಿಷಯ ಹರಡುವಷ್ಟು ಮನಸ್ಸುಗಳು ಒಂದಾಗಿರುತ್ತವೆ. ಕಷ್ಟವನ್ನೂ, ಸುಖವನ್ನೂ ಹಂಚಿಕೊಳ್ಳುವ ಗುಣಗಳು ಬೆಳೆಯುತ್ತವೆ. ಆದರೆ ಪಟ್ಟಣದ ಮನೋಸ್ಥಿತಿಗೆ ಇವಕ್ಕೆಲ್ಲ ಸಮಯವೆಲ್ಲಿ? ಅದಕ್ಕೆ ಸಮೂಹ ಸ್ವಾರ್ಥವಿಲ್ಲ. ಬರೀ ನಿಸ್ವಾರ್ಥ ಎನ್ನುತ್ತಾರೆ. 

ಹಿಂಜರಿಕೆಗೆ ಇನ್ನೊಂದು ಕಾರಣ ವ್ಯವಸ್ಥೆಯ ಭಯ 
ಯಾರಿಗೆ ಏನು ಸಹಾಯ ಮಾಡಿದರೆ ನಮಗೇನು ಅಪಾಯ ಕಾದಿದೆಯೋ ಅನ್ನೋ ಭಯವಿದೆ. ಗೌರಿ ಘಟನೆಯಲ್ಲೂ ಆಗಿದ್ದು ಇದೇ. ಪೊಲೀಸ್ಟೇಷನ್‌ ಮೆಟ್ಟಿಲು ಹತ್ತಬೇಕಲ್ಲ, ವಿಚಾರಣೆಗೆ ಗುರಿಯಾಗಬೇಕಲ್ಲ ಅನ್ನೋ ಭಯ. ನಮ್ಮ ಪೊಲೀಸ್‌ ವ್ಯವಸ್ಥೆ ಕೂಡ ಹಾಗೇ ಇದೆ. ಜನಸ್ನೇಹಿ ಜಪ ಅಧಿಕಾರಿಗಳ ಹಂತದಲ್ಲಿಯೇ ಹೊರತು, ಕೆಳಮಟ್ಟದಲ್ಲಿ ಅವಾಚ್ಯ ಶಬ್ದಗಳ ನಿಂದನೆ, ದೂರು ಕೊಡಲು ಹೋದಾಗ ನಡೆದುಕೊಳ್ಳುವ ರೀತಿ ಬದಲಾಗಿಲ್ಲ. ಇದು ಜನರಲ್ಲಿ ಇನ್ನಷ್ಟು ಭೀತಿ ಮೂಡಿಸಿದೆ. 

ಉದಾರಣೆಗೆ ಈ ಘಟನೆ ನೋಡಿ- ಅಪ್ಪನಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಸ್ಥಳದಲ್ಲಿ ಅಸುನೀಗಿದ್ದಾರೆ. ಮಗ ಬರುವ ಮೊದಲೇ ಪೊಲೀಸಿನವರು ಶವವನ್ನು ವಶಕ್ಕೆ ಪಡೆದಿದ್ದಾರೆ. ಸಂಜೆ ಆಯಿತು. ಬೆಳಗ್ಗೆ ಬಂತು. ಮಗ ಪೊಲೀಸ್ಟೇಷನ್‌ಗೆ ಅಲೆದಾಡುತ್ತಿದ್ದಾನೆ. ಎಸ್ಸೆ„ ಸಾಹೇಬರು ಬಂದಿಲ್ಲ, ಪಾರ್ಟಿ ಸಿಕ್ಕಿಲ್ಲ, ಎಫೈಆರ್‌ ಹಾಕಬೇಕು ಹೀಗೆ ನೂರಾರು ಕಾರಣಗಳು. ಪಾಪಾ, ಮಗ ಇತ್ತ ಅಪ್ಪನ ಕಾರ್ಯಗಳಿಗೆ ಏರ್ಪಾಟು ಮಾಡಬೇಕೋ, ಪೊಲೀಸ್‌ಸ್ಟೇಷನ್‌ಗೆ ಓಡಾಡಬೇಕೋ? ಕೊನೆಗೆ ತಂದೆ ಮರಣವಾಗಿ 30 ಗಂಟೆ ನಂತರ ಅವರ ಅಪರ ಕಾರ್ಯಗಳನ್ನು ಮಾಡುವಂತಾಯಿತು.

ಇದು ಅವರ ಬದುಕಿಗೆ ಮತ್ತು ಇಡೀ ಏರಿಯಾಕ್ಕೆ ದೊಡ್ಡ ಪಾಠ. ಹೀಗಿದ್ದರೆ ಯಾರು ತಾನೇ ಬೇರೊಬ್ಬರಿಗೆ ಸಹಾಯ ಮಾಡಲು ಬರುತ್ತಾರೆ? ಇಡೀ ನಮ್ಮ ವ್ಯವಸ್ಥೆಯೇ ವ್ಯಕ್ತಿಯನ್ನು ಸ್ವಾರ್ಥಿಯನ್ನಾಗಿಸುತ್ತಿದೆ. ಮನೆಯಲ್ಲಿ ಮೂರು ಜನ ಇದ್ದರೆ ಮೂವರೂ ಕೂಡ ಮೂರು ದ್ವೀಪಗಳಾಗಿ ಬದುಕುತ್ತಿರುತ್ತಾರೆ. ಅಪ್ಪ ಮಕ್ಕಳ ಕೊಲೆ, ಗಂಡ ಹೆಂಡತಿಯ ಹೊಡೆದಾಟ ಹೀಗೆ ನಡೆಯುತ್ತಿರುವುದರ ಮೂಲ ಈ ಸ್ವಾರ್ಥ. ಹೀಗಿದ್ದಾಗ ಬದುಕು ಕುಂಡ ಕೃಷಿಯಾಗಿಬಿಡುತ್ತದೆ ಎನ್ನುತ್ತಾರೆ ಹೆಸರೇಳಲಿಚ್ಚಿಸದ ಪೊಲೀಸ್‌ ಅಧಿಕಾರಿ. 

ನಮ್ಮವರ ಸಂವೇದನೆಗೆ ಸಾಕ್ಷಿಯಾದವು ಇವು…
ಮೃತದೇಹವಿಡಲು ಅವಕಾಶ ಕೊಡಲಿಲ್ಲ ಫ‌ಸ್ಟ್‌ ಫ್ಲೋರ್‌ನವರು 
ನಗರದಲ್ಲಿ ಕಳೆದ ಬೊಮ್ಮನಹಳ್ಳಿಯ ಅನುಗ್ರಹ ಬಡಾವಣೆಯಲ್ಲಿ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದರು. ಮಳೆಗಾಲವಾದ್ದರಿಂದ ಮಳೆಯ ನೀರು ಮನೆ ನುಗ್ಗಿದ್ದರಿಂದ ಅವರ ಸಂಬಂಧಿಗಳು ಬರುವವರೆಗೆ ಮೃತದೇಹವನ್ನು ಅಪಾರ್ಟ್‌ಮೆಂಟ್‌ನ ಒಂದನೇ ಮಹಡಿಯಲ್ಲಿ ಇರಿಸುವುದಾಗಿ ಮನವಿ ಮಾಡಿದರೂ, ಮೊದಲ ಮಹಡಿಯವರು ಅವಕಾಶ ನೀಡಲಿಲ್ಲ. ಪರಿಣಾಮ ಭಾರಿ ಮಳೆಯ ನಡುವೆಯೇ ಅವರ ದೇಹವನ್ನು ನಗರದಲ್ಲೇ ಇದ್ದ ಅವರ ಮಗಳ ಮನೆಗೆ ತೆಗೆದುಕೊಂಡು ಹೋಗಬೇಕಾಯಿತು. 

ಆ ಯುವತಿ ಕಾಣುತ್ತಿಲ್ಲವೇಕೆ ಅನ್ನೋ ಕಾಳಜಿ ಇರಲಿಲ್ಲ
ಮೇ 22ರಂದು ವಿವೇಕನಗರ ಠಾಣಾ ಸರಹದ್ದಿನ ಈಜಿಪುರದ ಮನೆಯೊಂದರಲ್ಲಿ ಹೊನ್ನಮ್ಮ ಎಂಬಾಕೆಯನ್ನು ಪ್ರಿಯಕರನೇ ಕೊಂದು ಹೋಗಿದ್ದ. ಆದರೆ, ನೆರೆಮನೆಯವರು ಹೊನ್ನಮ್ಮ ಏನಾದಳು, ಎಲ್ಲಿ ಹೋದಳು, ಮನೆ ಬಾಗಿಲು ಏಕೆ ತೆರದಿಲ್ಲ ಎಂಬುದರ ಗೋಜಿಗೇ ಹೋಗಿರಲ್ಲಿಲ್ಲ. ಕಡೆಗೇ ಮೃತ ದೇಹ ಕೊಳೆತು ವಾಸನೆ ಬಂದು, ಪೊಲೀಸರಿಗೆ ಸುದ್ದಿ ಗೊತ್ತಾಗಿ ಸ್ಥಳಕ್ಕೆ ಬರುವ ವರೆಗೆ ಯಾರಿಗೂ ತಿಳಿದಿರಲಿಲ್ಲ. ದಿನನಿತ್ಯ ಅಕ್ಕ-ಪಕ್ಕದವರೊಂದಿಗೆ ಮಾತನಾಡುತ್ತಿದ್ದ ಹೊನ್ನಮ್ಮ ಏಕಾಏಕಿ ಕಾಣಿಯಾದಾಗಿರುವುದರ ಬಗ್ಗೆ ಜನರಲ್ಲಿ ಸಣ್ಣ ಕಾಳಜಿಯೂ ಇರಲಿಲ್ಲ. 

ಹೆಣ್ಣಿನ ಕರಾಳ ಬದುಕು ಕಂಡು ಸುಮ್ಮನಿದ್ದರು ಆಲ್ಲಿನ ಜನ 
ಇತ್ತೀಚೆಗೆ ಗೃಹ ಬಂಧನದಿಂದ ಮುಕ್ತಳಾದ ಹೆಣ್ಣು ಮಗಳೊಬ್ಬಳ ಕರಾಳ ಬದುಕು ಮೂಲಕ ಬಯಲಾಗಿತ್ತು. ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ಕುಟುಂಬವೊಂದು ಬುದ್ದಿಮಾಂಧ್ಯ ಮಗಳನ್ನು ಹೊರಗೆ ಬಿಡದೇ ಹತ್ತಾರು ವರ್ಷಗಳ ಕಾಲ ಮನೆಯಲ್ಲೇ ಕೂಡಿ ಹಾಕಿತ್ತು. ಆಕೆಗೆ ಕನಿಷ್ಠ ಉಪಚಾರವನ್ನೂ ಕುಟುಂಬ ಮಾಡುತ್ತಿರಲಿಲ್ಲ. ಈ ವಿಚಾರ ತಿಳಿದ ಮಾಧ್ಯಮಗಳು ಪೊಲೀಸರ ನೆರವಿನೊಂದಿಗೆ ಆಕೆಯನ್ನು ಹೊರತರುವಲ್ಲಿ ಯಶಸ್ವಿಯಾಗಿದ್ದವು. ಸೋಜಿಗದ ಸಂಗತಿ ಎಂದರೆ ಈ ವಿಚಾರ ನೆರೆ ಮನೆಯವರಿಗೂ ಗೊತ್ತಿತ್ತು. ಆದರೆ, ಪಕ್ಕದ ಮನೆಯವರ ವಿಚಾರ ನಮಗೇಕೆ ಎಂಬ ಭಾವನೆ ಅವರಲ್ಲಿ ತಾಂಡವವಾಡುತ್ತತ್ತು. 

ಕಮಲಮ್ಮ ಸೊಸೆಯಿಂದಲೇ ಕೊಲೆಯಾದಳಂತೆ!
ಕೆಂಗೇರಿ ಬಳಿ 70ರ ಇಳಿವಯಸ್ಸಿನ ಕಮಲಮ್ಮ ಎಂಬುವವರನ್ನು ಆಕೆಯ ಸೊಸೆಯೇ ಕೊಲೆಗೈದು ಕಪಾಟಿನಲ್ಲಿ ಅವಿತಿಟ್ಟು ಪರಾರಿಯಾಗಿದ್ದರು. ಸುಮಾರು  ಎರಡುವರೆ ತಿಂಗಳಾದರು ಕಮಲಮ್ಮ ಕಾಣಿಸದ ಬಗ್ಗೆ ಸ್ಥಳೀಯರಲ್ಲಿ ಪ್ರಶ್ನೆಗಳೇ ಮೂಡಿರಲಿಲ್ಲ. ಏಕಾಏಕಿ ಮನೆಯ ಮಂದಿ ಕಾಣಿಯಾಗಿದ್ದರ ಬಗ್ಗೆ ತಲೆಯನ್ನೂ ಕೆಡೆಸಿಕೊಂಡಿರಲಿಲ್ಲ. ಕೊನೆಗೆ ಮನೆಯ ಮಾಲೀಕ ಬೀಗ ಒಡೆದು ನೋಡಿದಾಗ ಕಮಲಮ್ಮ ಕೊಲೆಯಾಗಿದ್ದಾಳೆ ಎಂದು ಗೊತ್ತಾಗಿತ್ತು. ಜನರು ಆಗ ಕಮಲಮ್ಮಳನ್ನು ನೆನಪಿಸಿಕೊಂಡಿದ್ದರು. 

ಸೆಲಬ್ರೆಟಿ ಮಗನಾದ್ರು ಅಷ್ಟೇ!
ಆ.14ರಂದು ಆರ್‌.ಟಿ.ನಗರದ ಮಠದಹಳ್ಳಿಯ ಮೈದಾನ ರಸ್ತೆಯಲ್ಲಿ ಕ್ಷುಲ್ಲಕ್ಕ ವಿಚಾರಕ್ಕೆ ನಟ ಜಗ್ಗೇಶ್‌ ಹಿರಿಯ ಪುತ್ರ ಗುರುರಾಜ್‌ ತೊಡೆಗೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದಿದ್ದ,. ತೀವ್ರ ರಸ್ತಸ್ರಾವದಿಂದ ನರಳುತ್ತಿದ್ದ ಗುರುರಾಜ್‌, ಸ್ಥಳೀಯರು, ವಾಹನ ಸವಾರರನ್ನು ನೆರವಿಗೆಗಾಗಿ ಅಂಗಲಾಚಿದ್ದಾರೆ. ಆದರೆ, ಸಹಾಯಕ್ಕೆ ಬಾರದೆ “ಜಗ್ಗೇಶ್‌ ಮಗ ಅಂತೆ’ ಎನ್ನುತ್ತಾ ವಿಡಿಯೋ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಜಗ್ಗೇಶ್‌ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ನನ್ನ ಮಗ ಮಾತ್ರವಲ್ಲ ಬೇರೆ ಯಾರೇ ಈ ರೀತಿಯ ಕೃತ್ಯಕ್ಕೆ ಒಳಗಾದರೆ ನೆರವಿಗೆ ಬನ್ನಿ ಎಂದು ಮನವಿ ಮಾಡಿಕೊಂಡರು. ಅಷ್ಟೇ ಅಲ್ಲದೇ, ಕೊಲೆ, ಸುಲಿಗೆ, ಸರ ಕಳವು, ದರೋಡೆ, ಆತ್ಮಹತ್ಯೆಯಂತಹ ಘಟನೆಗಳು ನಡೆದರೂ ಸ್ಥಳೀಯರು ನೆರವಿಗೆ ಬರಲ್ಲ. ಕಾರಣವಿಷ್ಟೇ ಪೊಲೀಸರ ಭಯ.

ಘಟನೆಗೆ ಸಾಕ್ಷಿಯಾಗೋದೇ ತಪ್ಪು
ಸಾಮಾನ್ಯವಾಗಿ ಪೊಲೀಸರು ಹಾಗೂ ಪೊಲೀಸ್‌ ವ್ಯವಸ್ಥೆ ಕಂಡರೆ ಸಾರ್ವಜನಿಕರಿಗೆ ಭಯ. ಯಾವುದೇ ಅಪರಾಧ ನಡೆದಾಗ ಪೊಲೀಸರು ಮೊದಲು ನೋಡುವುದು ಪ್ರತ್ಯಕ್ಷದರ್ಶಿಗಳು ಯಾರೆಂದು. ಒಂದು ವೇಳೆ ಆ ವ್ಯಕ್ತಿ ಪತ್ತೆಯಾದರೆ, ಆತನಿಗೆ ನೂರಾರು ಪ್ರಶ್ನೆಗಳು. ನೀವು ಯಾರು. ಯಾಕೆ ಸಹಾಯ ಮಾಡಿದ್ರಿ, ಎಷ್ಟು ವರ್ಷಗಳಿಂದ ಪರಿಚಯ. ಸ್ಥಳದಲ್ಲಿ ಬೇರೆ ಯಾರಾದ್ರು ಇದ್ದರೆ. ಘಟನೆಗೂ ಮುನ್ನ ನಂತರ ಯಾರಾದರೂ ಅನುಮಾನವಾಗಿ ಓಡಾಡುತ್ತಿದ್ದರೆ.

ಹೀಗೆ ನೂರಾರು ಸರಣಿ ಪ್ರಶ್ನೆಗಳಿಗೆ ಉತ್ತರಿಸಬೇಕು. ಆಯ್ತು ಉತ್ತರಿಸುವಾ, ಆ ನಂತರದ ಓಡಾಟ ಎಲ್ಲಿಲ್ಲದ ಹಿಂಸೆ.  ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಲು ಹೋದರೆ, ವಿಚಾರಣೆ ಮುಂದೂಡಿಕೆ. ಜತೆಗೆ ಪೊಲೀಸರಿಂದ ಅಲ್ಲಿ ಬನ್ನಿ, ಇಲ್ಲಿ ಬನ್ನಿ ಒಬ್ಬ ಸಿಕ್ಕಿದ್ದಾನೆ. ಗುರುತಿಸಿ ಎಂದೆಲ್ಲ ಹತ್ತಾರು ಬಾರಿ ಠಾಣೆಗೆ ಕರೆಸಿಕೊಳ್ಳುತ್ತಾರೆ. ಅದರಲ್ಲೂ ಹೈಪ್ರೋಫೈಲ್‌ ಪ್ರಕರಣದಲ್ಲಿ ಪ್ರತ್ಯಕ್ಷದರ್ಶಿಗಳಾದರೆ, ಸಾಕ್ಷ್ಯ ಹೇಳುವವನಾ ಪಾಡು ಹೇಳತೀರದು. ಈ ರೀತಿಯ ಪ್ರಕ್ರಿಯೆಗಳಿಂದ ಸಮಯ, ಕೆಲಸ ಎರಡು ವ್ಯರ್ಥ. ಅಲ್ಲದೇ ಬೇರೆಯವರ ವೈಯಕ್ತಿಕ ವಿಚಾರಕ್ಕೆ ನಾವೇಕೆ ಹೋಗಬೇಕೆಂಬ ಮನಸ್ಥಿತಿ ಇಲ್ಲಿನವರಲ್ಲಿದೆ. 

ವಿಚಾರಣೆಗೆ ಹೋದರೆ ಬೆದರಿಕೆ, ಕೊಲೆ
ಪ್ರಕರಣಗಳಲ್ಲಿ ಸಾಕ್ಷ್ಯ ಹೇಳುವ ವ್ಯಕ್ತಿಗೆ ಪೊಲೀಸರಿಂದ ಸೂಕ್ತ ಭದ್ರತೆ ಸಿಗುವುದಿಲ್ಲ. ಅದೆಷ್ಟೋ ಪ್ರಕರಣಗಳ ಸಾಕ್ಷ್ಯಗಳನ್ನು ಕೋರ್ಟ್‌ ಆವರಣದಲ್ಲೇ ಹತ್ಯೆ ಮಾಡಲಾಗಿದೆ. ಕೃತ್ಯವೆಸಗಿದ ವ್ಯಕ್ತಿಯ  ಬೆಂಬಲಿಗರು ನ್ಯಾಯಾಂಗ ವ್ಯವಸ್ಥೆಗೂ ಹೆದರದೆ ಕೋರ್ಟ್‌ ಆವರಣದಲ್ಲೇ ಸಾಕ್ಷ್ಯ ಹೇಳುವ ವ್ಯಕ್ತಿಯನ್ನು ಕೊಂದಿದ್ದಾರೆ. ಅವರ ಮನೆಯ ಸದಸ್ಯರ ಮೇಲೂ ದೌರ್ಜನ್ಯವೆಸಗಿದ್ದಾರೆ. ಇಂತಹ ಉದಾಹರಣೆಗಳು ಬಹಳಷ್ಟಿವೆ.

 ಟಿವಿನೋ, ಮನೇನೋ..
ಆಫೀಸಿಂದ ಬಹಳ ಸುಸ್ತಾಗಿ ಬಂದಿರುತ್ತೀರಿ. ನೀವು ಟಿವಿ ನೋಡೋದು, ಸಂಬಂಧಿಕರ ಸಮಾರಂಭಕ್ಕೆ ಹೋಗೋದು ಈ ಎರಡರಲ್ಲಿ ಯಾವುದು ಆಯ್ಕೆ ಮಾಡಿಕೊಳ್ಳುತ್ತೀರ ಅಂದರೆ… ಮೊದನೆಯದು. ಸಮಾರಂಭಕ್ಕೆ ಹೋಗಬೇಕಾದರೆ ಕಾರು ಡ್ರೈವ್‌ ಮಾಡಬೇಕು, ಅಲ್ಲಿ ಪಾರ್ಕ್‌ ಮಾಡಬೇಕು, ಊಟ ಮಾಡಬೇಕು, ಮತ್ತೆ ವಾಪಸ್ಸು ಬರಬೇಕು. ಸಿಟಿ ಜನ ಹೀಗೆ ಸುಸ್ತಾಗಿರುತ್ತಾರೆ. ಆದರೆ ಟಿ.ವಿ ಆಪ್ಷನ್‌ ಇಲ್ಲದೇ ಇದ್ದಿದ್ದರೆ. ಸಮಾರಂಭಕ್ಕೆ ಹೋಗುತ್ತಿದ್ದರು, ಹರಟೆ ಹೊಡೆಯುತ್ತಿದ್ದರು, ಊಟ ಮಾಡಿ ಮನೆಗೆ ಬರುತ್ತಿದ್ದರು. ಒಂದಷ್ಟು ಒತ್ತಡ ನಿವಾರಣೆ ಆಗೋದು. ಮೈಂಡ್‌ ಡೈವರ್ಟ್‌ಗೆ ಅವಕಾಶ ಇತ್ತು. ಈಗ ಅವೆಲ್ಲ ಇಲ್ಲವೇ ಇಲ್ಲ ಎನ್ನುತ್ತಾರೆ ತಜ್ಞರು.

****
ಕಳೆದ ವರ್ಷದ ಫೆಬ್ರವರಿ 13ರಂದು ಹೊಸೂರು ಜಂಕ್ಷನ್‌ನಲ್ಲಿ ರಸ್ತೆ ಅಪಘಾತವಾಗಿ ಗಾಯಾಳು ನಡುರಸ್ತೆಯಲ್ಲಿ ನರುಳುತ್ತಾ ಬಿದಿದ್ದರೂ ನೋಡುತ್ತಿದ್ದ ಸಾರ್ವಜನಿಕರು ವಿಡಿಯೋ ತೆಗೆಯುತ್ತಿದ್ದರೆ ಹೊರತು ನೆರವಿಗೆ ಬರಲಿಲ್ಲ. ಪರಿಣಾಮ ನೂರಾರು ಮಂದಿಯ ಎದುರಲ್ಲೇ ಕರ್ನೂಲ್‌ನ ಟೆಕ್ಕಿ ರಾಜುಕೀರ್ತಿ ಎಂಬಾತ ಸ್ಥಳದಲ್ಲೇ ಸಾವಿಗೀಡಾಗಿದ್ದ. ಇದಾದ ಕೆವಲ ಮೂರು ದಿನಕ್ಕೆ ಮತ್ತೂಂದು ದಾರುಣ ದುರುಂತ ಸಂಭವಿಸಿತು. ಬೆಂಗಳೂರಿನ ನೆಲಮಂಗಲ ಬಳಿ ಬೆಂಗಳೂರು-ತುಮಕೂರಿನ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತದಲ್ಲಿ ಟೆಕ್ಕಿ ಹರೀಶ್‌ ನಂಜಪ್ಪ ಎಂಬಾತ ಲಾರಿಗೆ ಡಿಕ್ಕಿಯೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ದುರಂತವೆಂದರೆ, ಈ ಅಪಘಾತದಲ್ಲಿ ಹರೀಶ್‌ ದೇಹ ಎರಡು ತುಂಡಾಗಿ ಬಿದಿತ್ತು. ಆತ ನೀರು ಕೇಳುತ್ತಿದ್ದ, ನೆರವಾಗಿರೆಂದು ಅಂಗಲಾಚುತ್ತಿದ್ದ. ಬದಲಿಗೆ ಕ್ಷಣಾರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಆ ಮನಕಲಕುವ ದೃಶ್ಯ ವೈರಲ್‌ ಆಯಿತು. ಆದರೆ, ಕೊನೆಗೆ ಸ್ಥಳಕ್ಕೆ ಬಂದ ಪೊಲೀಸರಿಗೆ “ನಾನು ಬದುಕುವುದಿಲ್ಲ. ನನ್ನ ಕಣ್ಣು ಮತ್ತು ಅಂಗಾಂಗಳನ್ನು ದಾನ ಮಾಡಿ ಮನವಿ ಮಾಡಿಕೊಂಡಿದ್ದ. ಇದಕ್ಕೆ ಮರುಗಿದ ರಾಜ್ಯ ಸರ್ಕಾರ ಕೂಡಲೇ ಮುಖ್ಯಮಂತ್ರಿ ಹರೀಶ್‌ ಸಾಂತ್ವನ ಯೋಜನೆ ಜಾರಿಗೆ ತಂದಿತು.

* ಕಟ್ಟೆ ಗುರುರಾಜ್‌/ ಮೋಹನ್‌ ಭದ್ರಾವತಿ

ಟಾಪ್ ನ್ಯೂಸ್

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

Channaptna Result: ಕೊನೆ ಕ್ಷಣದಲ್ಲಿ ಪಕ್ಷ ಬದಲಿಸಿದರೂ ಗೆದ್ದ ಸೈನಿಕ: ನೆರವಾದ ಡಿಕೆ ತಂತ್ರ

11-kambala

Kambala ಋತುವಿನ ಪ್ರಥಮ ಕಂಬಳ; ಕೊಡಂಗೆ ವೀರ-ವಿಕ್ರಮ ಜೋಡುಕರೆ ಬಯಲು ಕಂಬಳಕ್ಕೆ ಚಾಲನೆ

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!

Wayanad Results 2024:ವಯನಾಡ್‌ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

9-bng

Bengaluru: ಹನಿಟ್ರ್ಯಾಪ್‌: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ

6-bng

Bengaluru: ಬಸ್‌ಗಳಲ್ಲಿ ಮೊಬೈಲ್‌ ಕಳ್ಳತನ: ಇಬ್ಬರು ಆರೋಪಿಗಳ ಸೆರೆ‌, 60 ಫೋನ್‌ ಜಪ್ತಿ

5-bng

Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ

4-bng

Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

15-

Chikkamagaluru: ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾದ ಗುಡಿಸಲು

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

14-uv-fusion

Mother: ಅಮ್ಮನ ಜೀವನವೇ ಆದರ್ಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.