Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ
Team Udayavani, Jan 13, 2025, 10:58 AM IST
ಬೆಂಗಳೂರು: ಮಂಗಳೂರಿನ ಉಳ್ಳಾಲ ದಿಂದ 10 ದಿನಗಳ ಕಾಲ ಕಾಲ್ನಡಿಗೆಯಲ್ಲೇ ಬೆಂಗಳೂರಿಗೆ ಬಂದು ರಸ್ತೆ ಬದಿ ಕಲ್ಲಿನಲ್ಲಿ ಮಲಗುವ ವಿಚಾರಕ್ಕೆ ಹೋಟೆಲ್ ಸಪ್ಲೆಯರ್ ತಲೆಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪಿಯನ್ನು ಬ್ಯಾಡರ ಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾಚೋಹಳ್ಳಿ ಕಾಲೋನಿ ಮಹದೇವಯ್ಯ (45) ಕೊಲೆಯಾದವರು. ಛತ್ತೀಸ್‌ಗಡದ ವಿಶ್ವ ನಾಥ್ (40) ಬಂಧಿತ ಆರೋಪಿ. ಕೊಲೆಯಾದ ಮಹದೇವಯ್ಯ ಹಾಗೂ ವಿಶ್ವನಾಥ್‌ಗೆ ಪರಸ್ಪರ ಪರಿಚಯವೇ ಇಲ್ಲ ಎಂದು ತಿಳಿದು ಬಂದಿದೆ.
ಮಹದೇವಯ್ಯ ಮುದ್ದಿನಪಾಳ್ಯದ ಹೋಟೆಲ್‌ವೊಂದರಲ್ಲಿ ಸಪ್ಲಯರ್ ಆಗಿ ಕೆಲಸ ಮಾಡುತ್ತಿದ್ದರು. ಭಾನುವಾರ ಮಧ್ಯಾಹ್ನ ಮದ್ಯಪಾನ ಮಾಡಿ ಮುದ್ದಯ್ಯನಪಾಳ್ಯದಲ್ಲಿದ್ದ ರಸ್ತೆ ಬದಿಯ ಫುಟ್‌ಪಾತ್ ಕಲ್ಲಿನ ಮೇಲೆ ಮಲಗಿದ್ದರು. ಅಲ್ಲಿಗೆ ಬಂದಿದ್ದ ವಿಶ್ವನಾಥ್ ಹಿಂದಿ ಭಾಷೆಯಲ್ಲಿ ಮಹದೇವಯ್ಯನ ಬಳಿ “ಇಲ್ಲಿ ನಾನು ಮಲಗುತ್ತೇನೆ ನೀನು ಏಳು’ ಎಂದು ಹೇಳಿದ್ದ. ಇದನ್ನು ನಿರ್ಲಕ್ಷಿಸಿದ ಮಹದೇ ವ ಯ್ಯ ಮೇಲೆಳುವುದಿಲ್ಲ ಎಂದು ಹೇಳಿ ಅಲ್ಲೇ ಮಲಗಿದ್ದರು. ಇದರಿಂದ ಆಕ್ರೋಶಗೊಂಡ ವಿಶ್ವನಾಥ್ ಅಲ್ಲೇ ಸಮೀಪದಲ್ಲಿದ್ದ ಕಟ್ಟಿಗೆಯಿಂದ ಮಹದೇವಯ್ಯ ತಲೆಗೆ ಹಲ್ಲೆ ನಡೆಸಿದ್ದ. ತೀವ್ರ ಗಾಯಗೊಂಡ ಮಹದೇವಯ್ಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಛತ್ತೀಸ್‌ಗಡ ಮೂಲದ ವಿಶ್ವನಾಥ್ ಮಂಗ ಳೂರಿನ ಉಳ್ಳಾಲದಲ್ಲಿರುವ ಮೀನುಗಾರಿಕೆ ಬಂದರಿನಲ್ಲಿ ಮೀನಿನ ಲೋಡ್ ಹಾಗೂ ಅನ್‌ಲೋಡ್ ಮಾಡುವ ಕೆಲಸ ಮಾಡುತ್ತಿದ್ದ. ಮಾನಸಿಕ ವಾಗಿ ಕೊಂಚ ಸಮಸ್ಯೆ ಹೊಂದಿದ್ದ ಆರೋಪಿ ವಿಶ್ವನಾಥ್ ಮಂಗಳೂರಿನಿಂದ 10 ದಿನಗಳಿಂದ ನಡೆದುಕೊಂಡು ಬೆಂಗಳೂರಿಗೆ ಬಂದಿದ್ದ ಎಂದು ತಿಳಿದು ಬಂದಿದೆ.
ಆತನ ಹಿನ್ನೆಲೆ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Trinadha Rao Nakkina: ನಟಿಯ ʼಸೈಜ್ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ
Bantwal: ಜಕ್ರಿಬೆಟ್ಟು ಬ್ಯಾರೇಜ್‌ಗೆ ಶೀಘ್ರ ಗೇಟ್!
Champions Trophy: ಅಚ್ಚರಿಯ ಆಯ್ಕೆಯೊಂದಿಗೆ ಆಸ್ಟ್ರೇಲಿಯಾ ತಂಡ ಪ್ರಕಟ
Editorial: ಪಂಚಾಯತ್ ತೆರಿಗೆ ಸಂಗ್ರಹಕ್ಕೆ ಕಾನೂನು ರೂಪುಗೊಳ್ಳಲಿ
Ramanagar; ಎಲ್&ಟಿ ಮುಖ್ಯಸ್ಥ ಸುಬ್ರಮಣಿಯನ್ ಹೇಳಿಕೆ ವಿರುದ್ದ ವಾಟಾಳ್ ನಾಗರಾಜ್ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.