ಸಸ್ಯಕಾಶಿಯಲ್ಲಿ ಅರಳಿನಿಂತ ಸೇನಾಶೌರ್ಯ


Team Udayavani, Aug 5, 2018, 3:20 PM IST

sasyakashi.jpg

ಬೆಂಗಳೂರು: ಲಾಲ್‌ಬಾಗ್‌ನ ಸಸ್ಯಕಾಶಿಯಲ್ಲಿ ನವ್ಯಲೋಕವೊಂದು ಮೇಳೈಸಿದೆ. ಗಾಜಿನ ಮನೆ ಆವರಣದಲ್ಲಿ ಬಣ್ಣ ಬಣ್ಣದ ಹೂವುಗಳಿಂದ ಭಾರತೀಯ ಸೇನೆ ಅನಾವರಣಗೊಂಡಿದೆ. ಸಿಯಾಚಿನ್‌, ಅಮರ್‌ ಜವಾನ್‌ ಜ್ಯೋತಿ, ಸೇನೆ ಶೌರ್ಯ, ಮಹಾನ್‌ ದಂಡ ನಾಯಕರ ಸಾಧನೆಯನ್ನು ಒಂದೇ ವೇದಿಕೆಯಲ್ಲಿ ಕಟ್ಟಿಕೊಡಲಾಗಿದೆ.

ತೋಟಗಾರಿಕೆ ಇಲಾಖೆ, ಸ್ವಾತಂತ್ರೊéàತ್ಸವದ ಹಿನ್ನೆಲೆಯಲ್ಲಿ “ಫ‌ಲಪುಷ್ಪ ಪ್ರದರ್ಶನ’-2018 ಏರ್ಪಡಿಸಿದ್ದು, ಯುದ್ಧ ಕ್ಷಿಪಣಿಗಳು, ಸೇನಾ ಸಾಧಕರಿಗೆ ನೀಡುವ ಶೌರ್ಯ ಪ್ರಶಸ್ತಿ ವಿವಿಧ ವಿಚಾರಗಳು ಚಿತ್ತಾಕರ್ಷಕ ಡೆಂಡೋಬ್ರಿಯಂ, ಮೊಖಾರ ಆರ್ಕಿಡ್‌, ಆಂಥೋರಿಯಂ, ಗುಲಾಬಿ, ಲಿಲ್ಲಿ, ಲಿಲಿಯಂ ಪುಷ್ಪಗಳು ತಿಳಿಸಿಕೊಡುತ್ತಿವೆ.

ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ 1947 ಕಾಶ್ಮೀರ ಕಾರ್ಯಾಚರಣೆಯಿಂದ 1999ರ ಕಾರ್ಗಿಲ್‌ ಯುದ್ಧದ ವರೆಗೆ ಪ್ರಮುಖ ಯುದ್ಧಗಳ ಭಾರತೀಯ ಸೈನ್ಯದ ಸಾಮರ್ಥ್ಯದ ಪರಿಚಯವಾಗಲಿದೆ. ಸೇನೆ ನೀಡುವ ವಿವಿಧ ಶೌರ್ಯ ಪ್ರಶಸ್ತಿ ಬಗ್ಗೆ ಸಂಪೂರ್ಣ ಮಾಹಿತಿ, ಫ‌ಲಕಗಳಲ್ಲಿ ವಿವರವೂ ಸಿಗಲಿದೆ. ಇಂತಹ ಅಪರೂಪದ ಫ‌ಲಪುಷ್ಪ ಪ್ರದರ್ಶನಕ್ಕೆ ಶನಿವಾರ ಮುಖ್ಯಮಂತ್ರಿ ಹೆಚ್‌.ಡಿ.ಕುಮಾರ ಸ್ವಾಮಿ ಚಾಲನೆ ನೀಡಿದರು. 

ಬಳಿಕ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆಯ ಈ ಪ್ರಯತ್ನ ಶ್ಲಾಘನೀಯ. ಸಿಯಾಚಿನ್‌ ಪ್ರದೇಶ ಸೇರಿದಂತೆ ರಕ್ಷಣಾ ಪಡೆಯ ನೈಜಚಿತ್ರಣ ಸಸ್ಯಕಾಶಿಯಲ್ಲಿ ಕಟ್ಟಿಕೊಡಲಾಗಿದೆ. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಸ್ಯಕಾಶಿಯಲ್ಲಿ ಅರಳಿ ನಿಂತಿರುವ ಅಪರೂಪವನ್ನು ಕಣ್ತುಂಬಿಕೊಳ್ಳಬೇಕು ಎಂದರು.

ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ, ಮೇಯರ್‌ ಸಂಪತ್‌ ರಾಜ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರಣ, ತೋಟಗಾರಿಕೆ ಇಲಾಖೆಯ ನಿರ್ದೇಶಕ ವೈ.ಎಸ್‌.ಪಾಟೀಲ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

1ಲಕ್ಷ 20 ಸಾವಿರ ಹೂ ಬಳಕೆ: ಸೇನಾ ಮಾದರಿ ನಿರ್ಮಾಣ ಮಾಡುವುದಕ್ಕೆ ಸುಮಾರು 1ಲಕ್ಷದ 20 ಸಾವಿರಕ್ಕೂ ಅಧಿಕ ಹೂವುಗಳನ್ನು ಬಳಕೆ ಮಾಡಲಾಗಿದೆ. 15 ಮಂದಿ ನುರಿತ ಹೂ-ಜೋಡಣೆಕಾರರು ಹೂಗಳ ಜೋಡಣಾ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಒಂದು ಬಾರಿಗೆ 40 ಸಾವಿರ ಹೂಗಳಂತೆ ಒಟ್ಟು 3ಬಾರಿ ಹೂಗಳನ್ನು ಬದಲಾವಣೆ ಮಾಡಲಾಗುತ್ತಿದ್ದು, ಸ್ನೇಹಾ ಪ್ರೋರಿಸ್ಟ್‌ನ ಟಿ.ಎಸ್‌. ಜಗದೀಶ್‌ ಅವರು ಪುಷ್ಪ ಜೋಡಣೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

20 ರೂಪಾಯಿಗೆ “ಕಾದಂಬರಿ’: ಸ್ವಾತಂತ್ರೊತ್ಸವದ ಹಿನ್ನೆಲೆಯಲ್ಲಿ ಬಿ.ಎಸ್‌.ಗೌಡ ಬುಕ್‌ ಸ್ಟಾಲ್‌ ಅ.ನ.ಕೃ, ತ.ರಾ.ಸು, ಎಂ.ಕೆ.ಇಂದಿರಾ, ಬೀಚಿ ಸೇರಿದಂತೆ ಖ್ಯಾತ ಕಾದಂಬರಿಕಾರರ ಪುಸ್ತಕಗಳನ್ನು 20 ರೂ.ಗಳಿಗೆ ನೀಡುತ್ತಿದೆ. 

ವಿದೇಶಿಯರ ಕಲರವ: “ಫ‌ಲಪುಷ್ಪ ಪ್ರದರ್ಶನ’ ಆರಂಭದ ದಿನವೆ ಜಪಾನ್‌ನ ಆ್ಯಂಡಿ, ಹೆಲೆನಾ, ಮಲಾನಿ ನೇತೃತ್ವದ ಸ್ನೇಹಿತರ ತಂಡ ಆಗಮಿಸಿತ್ತು. ಈ ವೇಳೆ ಪ್ರತ್ರಿಕಿಯಿಸಿದ ಆ್ಯಂಡಿ, ಭಾರತೀಯ ಸೇನೆಯ ಯಶೋಗಾಥೆಯನ್ನು ಹೂವಿನಲ್ಲಿ ಕಟ್ಟಿಕೊಟ್ಟಿರುವ ತೋಟಗಾರಿಕಾ ಇಲಾಖೆಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಭಾರತ ನನಗೆ ಅಚ್ಚುಮೆಚ್ಚಿನ ತಾಣವಾಗಿದೆ ಎಂದರು.

ಸೇನೆಯ ಬಗ್ಗೆ ಇಷ್ಟು, ತಿಳುವಳಿಕೆ ಇರಲಿಲ್ಲ. ಆದರೆ ಇಲ್ಲಿಗೆ ಬಂದು ಫ‌ಲಪುಷ್ಪ ವೀಕ್ಷಿಸಿದೆ ಸೇನೆಯ ಬಗ್ಗೆ ಮತ್ತಷ್ಟು ಗೌರವ ಭಾವನೆ ಮೂಡಿತು.
-ವೈಭವ್‌, ವಿದ್ಯಾರ್ಥಿ ನಂದಿನಿ ಲೇಔಟ್‌.

ದೇಶದ ಹಲವು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಹಲವು ರೀತಿಯ ಅನುಭವ ಕಂಡಿದ್ದೇನೆ. ಲಾಲ್‌ಬಾಗ್‌ನಲ್ಲಿ ಸೇನೆಯ ಬಗ್ಗೆ ಫ‌ಲಪುಷ್ಪ ಪ್ರದರ್ಶನ ಹಮ್ಮಿಕೊಂಡಿರುವುದು ನನಗೆ ಅತೀವ ಖುಷಿ ಕೊಟ್ಟಿದೆ.
-ಬಸ್ಸಿಲಾಲ್‌, ಸೇನಾಯೋಧ ಅಗರ್ತಲ.

ಟಾಪ್ ನ್ಯೂಸ್

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

BELLARE-MALE

Rain: ಪುತ್ತೂರು, ಸುಳ್ಯ, ಬೆಳ್ಳಾರೆ: ಕೆಲವಡೆ ಹಾನಿ ಉಕ್ಕಿ ಹರಿದ ಗೌರಿ ಹೊಳೆ; ಸಂಚಾರ ಬಂದ್‌

DANDIA-DANCE

Udupi Ucchila Dasara: ಸಾರ್ವಜನಿಕ ದಾಂಡಿಯಾ, ಗರ್ಭಾ ನೃತ್ಯ ಸಂಭ್ರಮ

siddanna-2

Guarantee ಯೋಜನೆಗಳಿಂದ ಕರ್ನಾಟಕ ನಂ. 1: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Railway-min-Ashiwini

Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್‍ಯಾಪಿಡ್‌ ರೈಲು: ರೈಲ್ವೆ ಸಚಿವ

8

Bengaluru: ಅಪಾರ್ಟ್‌ಮೆಂಟ್‌ನಿಂದ ಜಾರಿ ಬಿದ್ದು ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಸಾವು!

7

Road Mishap: ಲಾರಿ ಚಕ್ರ ಹರಿದು ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೇ ದುರ್ಮರಣ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

‌Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

Arrested: ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಪ್ರಕರಣ; ಮತ್ತೂಬ್ಬ ಅಧಿಕಾರಿ ಬಂಧನ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

-pumpwell

Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ; ಕೆಲವೆಡೆ ಹಾನಿ

gold

Guruvayur Devaswam ಒಡೆತನದಲ್ಲಿ 1,085 ಕೆ.ಜಿ. ಚಿನ್ನ!

nitish-kumar

Budget ಆರ್ಥಿಕ ಸಹಾಯ: ಕೇಂದ್ರವನ್ನು ಶ್ಲಾಘಿಸಿದ ಬಿಹಾರ ಸಿಎಂ

Kharge 2

Kharge ಟೀಕೆ; ಹಳಸಿದ ಭಾಷಣದಿಂದ ವೈಫ‌ಲ್ಯ ಮರೆಮಾಚಲು ಸಾಧ್ಯವಿಲ್ಲ

attack

Public place ಮೂತ್ರ ವಿಸರ್ಜಿಸಬೇಡ ಎಂದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.