ಗುಲಾಬಿ ಹೂಗಳಲ್ಲಿ ಅರಳಲಿದೆ ಸೇನೆ ಶೌರ್ಯ!
Team Udayavani, Jul 10, 2018, 11:40 AM IST
ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಈ ಬಾರಿ ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಸಿಯಾಚಿನ್ ಪ್ರದೇಶದಲ್ಲಿ ಭಾರತೀಯ ಸೇನೆ ನಡೆಸಿದ ಯುದ್ಧದ ಸನ್ನಿವೇಶ ಅನಾವರಣಗೊಳ್ಳಲಿದೆ. 205ನೇ ಫಲಪುಷ್ಪ ಪ್ರದರ್ಶನದಲ್ಲಿ ವಾಯು ಸೇನೆ, ಭೂಸೇನೆ ಹಾಗೂ ನೌಕ ಪಡೆಯ ಶೌರ್ಯ ಗುಲಾಬಿಗಳಲ್ಲಿ ಅರಳಲಿದೆ. ಭಾರತೀಯ ರಕ್ಷಣಾ ಇಲಾಖೆಯ ಸಾಧನೆ ಹಾಗೂ ಸಾಮಾರ್ಥ್ಯ ಅನಾವರಣಗೊಳ್ಳಲಿದೆ.
ಸಿಯಾಚಿನ್ ಪ್ರದೇಶದಲ್ಲಿ ನಡೆದ ಯುದ್ಧದಲ್ಲಿ ಭಾರತೀಯ ಸೇನೆ ಭಾಗವಹಿಸಿದ ಬಗೆಯನ್ನು ಹೂವಿನಲ್ಲಿ ಅರಳಿಸುವುದು ಲಾಲ್‌ಬಾಗ್‌ನ ಫಲಪುಷ್ಪ ಪ್ರದರ್ಶನದ ಮುಖ್ಯ ಪರಿಕಲ್ಪನೆಯಾಗಿದೆ. ಸಿಯಾಚಿನ್ ಬೆಟ್ಟದ ಮಾದರಿ ನಿರ್ಮಿಸಿ, ಒಂದೆಡೆ ಸರೋವರದಲ್ಲಿ ನೌಕಪಡೆಯ ಯುದೊಪಕರಣ, ಇನ್ನೊಂದೆಡೆ ವಾಯುಸೇನೆಯಲ್ಲಿರುವ ಹೆಲಿಕಾಪ್ಟರ್, ಯುದ್ಧ ವಿಮಾನಗಳು ಹಾಗೂ ಮತ್ತೂಂದೆಡೆ ಭೂ ಸೇನೆಯ ಸೈನಿಕರ ಬಂದೂಕು ಪುಷ್ಪಗಳಲ್ಲಿ ಅರಳಿ ನಿಲ್ಲಲ್ಲಿವೆ.
ಇದಷ್ಟೇ ಅಲ್ಲದೆ ಬಂಕರ್‌ಗಳು, ಸಬ್‌ಮರೀನ್ ಪ್ರತಿಕೃತಿಗಳು ಹಾಗೂ ಸೇನೆ ಬಳಸುವ ಅಸಲಿ ಯಂತ್ರೋಪಕರಣಗಳು, ಶಸ್ತ್ರಾಸ್ತ್ರಗಳು, ಯುದ್ಧಸ್ಮಾರಕಗಳನ್ನು ಪ್ರದರ್ಶಿಸಲು ತೋಟಗಾರಿಕೆ ಇಲಾಖೆ ಉದ್ದೇಶಿಸಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ಭಾರತದ ಸಂಪೂರ್ಣ ಭದ್ರತೆ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಶದಲ್ಲಿತ್ತು.
1947 ಆಗಸ್ಟ್‌ನಲ್ಲಿ ರಕ್ಷಣಾ ಇಲಾಖೆ ಸಚಿವ ಸಂಪುಟದ ಸಚಿವರ ಅಡಿಯಲ್ಲಿ ಸೇರ್ಪಡೆಗೊಂಡಿತ್ತು. ಸೇನೆಯ ನಿರ್ವಹಣೆ ಮಾಡುತ್ತಿದ್ದ ಕಮಾಂಡರ್ ಇನ್ ಚೀಫ್ ಪದವಿ 1955ರಲ್ಲಿ ರದ್ದು ಮಾಡಲಾಯಿತು. ನಂತರ ಮೂರು ಸೇನಾ ಮುಖ್ಯಸ್ಥರನ್ನು ನೇಮಿಸಲಾಯಿತು. ಈ ಅಂಶ ಹಾಗೂ ಇಲ್ಲಿಯವೆರಗಿನ ಸಾಧನೆಗಳು ಕುಸುಮಗಳಲ್ಲಿ ಸಿಂಗರಗೊಳ್ಳಲಿವೆ.
ಫಲಪುಷ್ಪ ಪ್ರದರ್ಶನದಲ್ಲಿ ಯುದೊಪಕರಣ ಪ್ರತಿಕೃತಿ ಹಾಗೂ ಹೂವಿನಲ್ಲಿ ಭಾರತೀಯ ಸೇನೆಯ ಬಗೆಯನ್ನು ಹೇಗೆ ಚಿತ್ರಿಸಬೇಕೆಂದು, ಯಾವೆಲ್ಲಾ ಯುದೊœàಪಕರಣಳನ್ನು ಪ್ರದರ್ಶಿಸಬೇಕು, ಭಾರತೀಯ ಸೇನೆ ಸಾಹಸ-ಸಾಧನೆ ಇವುಗಳ ಮಾಹಿತಿ ಪಡೆದುಕೊಳ್ಳಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಚ್‌ಎಎಲ್ ಹಾಗೂ ಬೆಂಗಳೂರಿನಲ್ಲಿರುವ ಭಾರತೀಯ ಸೇನೆಯ ಕಚೇರಿಯನ್ನು ಸಂಪರ್ಕಿಸಿದ್ದಾರೆ.
ಕೆಂಪುತೋಟದಲ್ಲಿ ಚಂದನವನ: ಕನ್ನಡ ಚಿತ್ರರಂಗಕ್ಕೆ 85 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಕನ್ನಡ ಚಿತ್ರರಂಗ ಸಾಧನೆ ಸಹ ಅನಾವರಣಗೊಳ್ಳಲಿದೆ. ಹಳೆಯ ಕಾಲದಲ್ಲಿ ಬಳಸುತ್ತಿದ್ದ ರೀಲು, ಮೇಗಾ ಕ್ಯಾಮೆರಾ ಹಾಗೂ ಕ್ಲಾಪ್‌ಬೋರ್ಡ್‌ಗಳನ್ನು ಹೂವುಗಳಲ್ಲಿ ಮೂಡಿಸಲು ತೋಟಗಾರಿಕೆ ಇಲಾಖೆ ಮುಂದಾಗಿದೆ.
ಕನ್ನಡ ಚಿತ್ರರಂಗಕ್ಕೆ ಸಂದಿರುವ ಪ್ರಶಸ್ತಿಗಳು, ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಹಾಗೂ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರರಂಗಕ್ಕೆ ಬಂದಿರುವ ಪ್ರಶಸ್ತಿಗಳ ಸಂಪೂರ್ಣ ಮಾಹಿತಿಯನ್ನು ಪ್ರದರ್ಶಿಸಲಾಗುವುದು.
ಕುಸುಮಗಳಲ್ಲಿ ನಿರ್ಮಾಣವಾಗುವ ಭಾರತೀಯ ಸೇನೆ ಹಾಗೂ ಕನ್ನಡ ಚಿತ್ರೋದ್ಯಮದ ಫಲಪುಷ್ಪ ಪ್ರದರ್ಶನಕ್ಕೆ ಆ.4ರಂದು ಚಾಲನೆ ನೀಡಲಾಗುವುದು. ಈ ಪ್ರದರ್ಶನ ಆ.15ರವರೆಗೆ ನಡೆಯಲಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.