ಶವಸಂಸ್ಕಾರಕ್ಕೆ ಹೊರವಲಯದಲ್ಲಿ ವ್ಯವಸ್ಥೆ
Team Udayavani, Apr 22, 2021, 12:38 PM IST
ಟಿ.ದಾಸರಹಳ್ಳಿ: ಕೋವಿಡ್‌ನಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದಲ್ಲಾಗುತ್ತಿರುವ ವಿಳಂಬತಪ್ಪಿ ಸಲು ಶವಗಳ ದಹನಕ್ಕೆ ನಗರದ ಹೊರವಲಯ ದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆಎಂದು ಕಂದಾಯ ಸಚಿವ ಆರ್.ಅಶೋಕ್‌ಹೇಳಿದರು.
ಯಶವಂತಪುರ ಹಾಗೂ ಯಲಹಂಕವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತಾವರೆಕೆರೆಹಾಗೂ ಗಿಡ್ಡೇನ ಹಳ್ಳಿ ಗ್ರಾಮಗಳಲ್ಲಿ ಸೋಂಕಿತರ ದಹನಕ್ಕೆ ಗುರು ತಿಸಿರುವ ಸ್ಥಳಗಳ ಪರಿಶೀಲನೆ ನಡೆಸಿ ಮಾತನಾಡಿದರು.ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ನಗರದ ಚಿತಾಗಾರಗಳಲ್ಲಿ ಒತ್ತಡಕಂಡು ಬರು ತ್ತಿದ್ದು ತಪ್ಪಿಸುವ ನಿಟ್ಟಿನಲ್ಲಿ ನಗರದಹೊರವಲ ಯದ ನಾಲ್ಕಾರು ಕಡೆ ಸರ್ಕಾರಿಜಾಗಗಳನ್ನು ಗುರುತಿಸಲಾಗಿದ್ದು ಶವಗಳ ದಹನಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆಎಂದರು.
ಸರ್ಕಾರದ ವತಿಯಿಂದ ಶವ ಸಾಗಣೆಗೆ ಆಂಬ್ಯು ಲೆನ್ಸ್ ವ್ಯವಸ್ಥೆ, ದಹಿಸಲು ಅಗತ್ಯವಿರುವ ಸೌದೆ ಇತರೆ ಸೌಕರ್ಯಗಳನ್ನು ಉಚಿತವಾಗಿ ಒದಗಿಸ ಲಾಗುವುದು ಎಂದು ತಿಳಿಸಿದರು.ಬೆಂಗಳೂರಿನಂತೆ ಮೈಸೂರು, ಮಂಗಳೂರು ಹಾಗೂ ರಾಜ್ಯದ ಇತರೆ ಪಾಲಿಕೆಗಳವ್ಯಾಪ್ತಿ ಯಲ್ಲಿ ಆಯುಕ್ತರು ಶವಸಂಸ್ಕಾರಕ್ಕೆಸೂಕ್ತ ವ್ಯವಸ್ಥೆ ಕಲ್ಪಿ ಸಲು ಆದೇಶಿಸಲಾಗಿದೆ.
ಜತೆಗೆ ಗ್ರಾಮಗಳಿಂದ ಒಂದು ಕಿ.ಮೀ. ದೂರದಲ್ಲಿ ರುವ ಸರ್ಕಾರಿ ಭೂಮಿ ಯನ್ನುಕೋವಿಡ್‌ನಿಂದ ಮೃತಪಟ್ಟವರ ಸಂಸ್ಕಾರಕ್ಕೆಬಳಸಿಕೊಳ್ಳಲು ಎಲ್ಲಾ ಜಿಲ್ಲಾಧಿಕಾರಿಗಳಿಗೆಸೂಚನೆ ನೀಡಲಾಗಿದೆ ಎಂದರು.ಸರ್ಕಾರಿ ಜಾಗಗಳಲ್ಲಿ ಕೋವಿಡ್ ನಿಂದಮೃತ ಪಟ್ಟವರನ್ನು ದಹನ ಮಾಡಲು ಸ್ಥಳೀಯರು ದಯ ಮಾಡಿ ಸಹಕಾರ ಕೊಡಬೇಕು.
ಯಾವುದೇ ರೀತಿಯ ವಿರೋಧ ಮಾಡಬೇಡಿಎಂದು ಮನವಿ ಮಾಡಿದರು.ಬೆಂಗಳೂರು ನಗರದಲ್ಲಿ ಸುಮಾರು 12ಕಡೆ ದಹನ ಕಾರ್ಯ ಈಗಾಗಲೇ ನಡೆಯುತ್ತಿದೆ. ನಾಗರಿ ಕರಿಗೆ ಯಾವುದೇ ರೀತಿಯತೊಂದರೆ ಇಲ್ಲ. ಅಂತ್ಯಸಂಸ್ಕಾರಕ್ಕೆ ವಿಳಂಬವಾಗು ತ್ತಿ ರುವುದ ರಿಂದ ಹೊರವಲಯಕ್ಕೆ ಹೆಚ್ಚುವರಿಶವಗಳನ್ನು ಸಾಗಿಸ ಲಾಗುತ್ತಿದೆ ಇದು ತಾತ್ಕಾಲಿಕವ್ಯವಸ್ಥೆ 2 ತಿಂಗಳು ಮಾತ್ರ ಇರುತ್ತದೆ. ಶವಗಳನ್ನು ಸುಟ್ಟ ಮೇಲೆ ಫಂಗಸ್ ಇರಲ್ಲ ವೈರಸ್‌ಏನು ಇರಲ್ಲ.
ಎಲ್ಲಾ ರೀತಿಯ ಮುನ್ನೆಚ್ಚರಿಕಾಕ್ರಮಗಳನ್ನು ಕೈಗೊಳ್ಳ ಲಾಗುವುದು ಎಂದರು.ನಗರದ ಶವಾಗಾರಗಳಲ್ಲಿ ಸಾಲಿನಲ್ಲಿಕಾಯಲು ಆಗದ ಕುಟುಂಬಗಳಿಗೆ ಮಾತ್ರಇಲ್ಲಿ ಅವಕಾಶ ಕಲ್ಪಿಸ ಲಾಗುವುದು. ಸರ್ಕಾರಿಗೋಮಾಳಗಳನ್ನ ತಾತ್ಕಾಲಿಕವಾಗಿ ಸ್ಮಶಾನಮಾಡಲಾಗಿದೆ. ಅಷ್ಟೇ ಸರ್ಕಾರಿ ಮಾರ್ಗಸೂಚಿಅನ್ವಯ ಮಾತ್ರ ದಹನ ಕ್ರಿಯೆ ನಡೆಯಲಿದೆಎಂದರು. ಸಂಸದ ತೇಜಸ್ವಿ ಸೂರ್ಯ, ಬಿಡಿಎಅಧ್ಯಕ್ಷ ಎಸ್. ಆರ್.ವಿಶ್ವನಾಥ್, ಬೆಂಗಳೂರುನಗರ ಜಿಲ್ಲಾಧಿಕಾರಿ ಮಂಜುನಾಥ್ ಇತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MUDA Scam: ಕೇಸ್ ವಾಪಸ್‌ಗೆ ಹಣದ ಆಮಿಷ? ಸ್ನೇಹಮಯಿ ಕೃಷ್ಣ ಲೋಕಾಯುಕ್ತಕ್ಕೆ ದೂರು
Priyank Kharge: ಎಲ್ಲವನ್ನೂ ನ್ಯಾಯಾಂಗವೇ ಮಾಡೋದಾದ್ರೆ ಶಾಸಕಾಂಗ ಏಕೆ?
Krishna Byre Gowda: 16.5 ಸಾವಿರ ಗ್ರಾಮಗಳು ಈಗ ಪೋಡಿ ಮುಕ್ತ
Karnataka: ಶಕ್ತಿ ಯೋಜನೆ ಬಳಿಕ ನಿತ್ಯ ಪ್ರಯಾಣಿಕರ ಸಂಖ್ಯೆ 23 ಲಕ್ಷ ಏರಿಕೆ
ಮಾಜಿ ಸೈನಿಕರಿಗೆ ಭೂಮಿ ಬದಲು ಬಡಾವಣೆ: ಸಚಿವ ಕೃಷ್ಣ ಬೈರೇಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.