ಅರಸಯ್ಯ ಕೊಲೆ ಆರೋಪಿಗಳ ಬಂಧನ
Team Udayavani, Aug 16, 2018, 12:58 PM IST
ಬೆಂಗಳೂರು: ಇತ್ತೀಚೆಗಷ್ಟೇ ಮಂಡ್ಯದ ಶ್ರೀರಂಗಪಟ್ಟಣದ ಬಳಿ ರೌಡಿಶೀಟರ್ ಅರಸಯ್ಯನನ್ನು ಹತ್ಯೆಗೈದ ಮತ್ತೂಬ್ಬ ರೌಡಿಶೀಟರ್ ಪಳನಿಯ ಮೂವರು ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕೆ.ಪಿ.ಅಗ್ರಹಾರದ ಸತೀಶ್ ಅಲಿಯಾಸ್ ಮಚ್ಚಿ (33), ಶೇಖರ್ ಅಲಿಯಾಸ್ ಕುಳ್ಳ (27) ಮತ್ತು ಉದಯ್‌ಕುಮಾರ್ ಅಲಿಯಾಸ್ ಉದಿ(34) ಬಂಧಿತರು.
ಆರೋಪಿಗಳ ವಿರುದ್ಧ ನಾಗಮಂಗಲ ಠಾಣೆ, ಕೆ.ಪಿ.ಅಗ್ರಹಾರ, ವೈಯಾಲಿಕಾವಲ್ ಠಾಣೆಗಳಲ್ಲಿ ಕೊಲೆ, ಕೊಲೆ ಯತ್ನ, ದರೋಡೆ ಪ್ರಕರಣಗಳು ದಾಖಲಾಗಿವೆ. ಪ್ರಕರಣದ ಪ್ರಮುಖ ಆರೋಪಿ, ರೌಡಿಶೀಟರ್ ಪಳನಿ ತನ್ನ ಸಹಚರಾರದ ಮೋನಿ, ಚಂದ್ರು ಸೇರಿ 8 ಮಂದಿ ಜತೆ ಶ್ರೀರಂಗಪಟ್ಟಣದ ಸಾತನೂರು ಪೊಲೀಸರಿಗೆ ಶರಣಾಗಿದ್ದಾನೆ.
2013ರಲ್ಲಿ ರೌಡಿಶೀಟರ್ ಪಳನಿ ಸಹೋದರ ರಂಗನಾಥ್‌ನನ್ನು ಅರಸಯ್ಯ ಮತ್ತು ಸಹಚರರು ಹತ್ಯೆಗೈದಿದ್ದರು. ಬಳಿಕ 2016ರಲ್ಲಿ ಪಳನಿಯ ಸಹಚರ ಜಲ್ಲಿ ವೆಂಕಟೇಶ್‌ನನ್ನು ಬನಶಂಕರಿ ವೃತ್ತದಲ್ಲಿ ಸೈಕಲ್ ರವಿ ಜತೆ ಸೇರಿಕೊಂಡು ಅರಸಯ್ಯ ಹತ್ಯೆಗೈದಿದ್ದ.
ಈ ವೈಷಮ್ಯದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಅರಸಯ್ಯನ ಹತ್ಯೆಗೆ ಆರೋಪಿಗಳು ಸಂಚು ರೂಪಿಸಿದ್ದರು. ಈ ಹಿನ್ನೆಲೆಯಲ್ಲಿ ಆ.11ರಂದು ಶ್ರೀರಂಗಪಟ್ಟಣ ಸಾತನೂರಿನ ಮಾರಿಯಮ್ಮ ದೇವಾಲಯದಿಂದ ವಾಪಸ್ ಬರುವಾಗ ನಡುರಸ್ತೆಯಲ್ಲೇ ದಾರುಣವಾಗಿ ಕೊಲೆಗೈದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಒಂದು ವರ್ಷದಿಂದ ಸಂಚು: ಪ್ರಭಾವಿ ರಾಜಕಾರಣಿಗಳ ಜತೆ ಗುರುತಿಸಿಕೊಂಡಿದ್ದ ರೌಡಿ ಅರಸಯ್ಯ ಪ್ರಾಣ ಭಯದಿಂದ ಐದಾರು ಮಂದಿ ಅಂಗರಕ್ಷಕರ ಜತೆ ಓಡಾಡುತ್ತಿದ್ದ. ಆದರೆ, ಪ್ರತಿ ಅಮವಾಸ್ಯೆಯಂದು ಶ್ರೀರಂಗಪಟ್ಟಣದ ಸಾತನೂರಿನ ಮಹಾಕಾಳಿ ದೇವಾಲಯಕ್ಕೆ ಹೋಗುವಾಗ ಒಬ್ಬನೇ ಹೋಗುತ್ತಿದ್ದ. ಜತೆಗೆ ಇದೇ ದೇವಾಲಯದ ಟ್ರಸ್ಟ್‌ನ ಅಧ್ಯಕ್ಷನಾಗಿದ್ದರಿಂದ ತನ್ನ ಬೆಂಬಲಿಗರನ್ನು ಕರೆದೊಯ್ಯುತ್ತಿರಲಿಲ್ಲ. ಈ ಮಾಹಿತಿ ತಿಳಿದುಕೊಂಡಿದ್ದ ಆರೋಪಿಗಳು ಕಳೆದೊಂದು ವರ್ಷದಿಂದ ಸಂಚು ರೂಪಿಸಿದ್ದು, ನಾಲ್ಕೈದು ಬಾರಿ ವಿಫಲ ಯತ್ನ ನಡೆಸಿದ್ದರು.
ಭೀಮಾನ ಅಮವಾಸ್ಯೆಯಂದು ಕೊಲೆ: ಪ್ರತಿ ಅಮವಾಸ್ಯೆಗೆ ಯಾವುದೇ ಭದ್ರತೆ ಇಲ್ಲದೆ ಒಬ್ಬನೇ ಹೋಗುವ ಅರಸಯ್ಯ ಈ ಬಾರಿಯ ಭೀಮನ ಅಮವಾಸ್ಯೆಯ ವಿಶೇಷ ಪೂಜೆಗೂ ಏಕಾಂಗಿಯಾಗಿ ಹೋಗುತ್ತಿದ್ದ. ಈ ಮಾಹಿತಿ ತಿಳಿದ ಪಳನಿ ಮತ್ತು ತಂಡ ಬೆಂಗಳೂರಿನಿಂದಲೇ ಹಿಂಬಾಲಿಸಿದೆ.
ಬಳಿಕ ಅರಸಯ್ಯ ಪೂಜೆ ಮುಗಿಸುವವರೆಗೂ ಕಾದು ಒಬ್ಬನೇ ಕಾರಿನಲ್ಲಿ ಹಿಂದಿರುಗುವಾಗ ಶ್ರೀರಂಗಪಟ್ಟಣ ತಾಲೂಕಿನ ಮೈಸೂರು ಬೆಂಗಳೂರು ಹೆದ್ದಾರಿಯ ಟಿ.ಎಂ.ಹೊಸೂರು ಗೇಟ್ ಬಳಿ ಅಡ್ಡಗಟ್ಟಿದ್ದಾರೆ. ಬಳಿಕ ಪಳನಿ ಸೇರಿ ಸುಮಾರು 15 ಮಂದಿ ಮಾರಕಾಸ್ತ್ರಗಳಿಂದ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ತಮ್ಮ ವಿರುದ್ಧ ಬೆಂಗಳೂರಿನ ಸಿಸಿಬಿ ಹಾಗೂ ಮಂಡ್ಯ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಪಡೆದು ಬುಧವಾರ ಬೆಳಗ್ಗೆಯೇ ಪಳನಿ ತನ್ನ 8 ಮಂದಿ ಸಹಚರರ ಜತೆ ಸೇರಿ ಸಾತನೂರು ಠಾಣೆಯಲ್ಲಿ ಶರಣಾಗಿದ್ದು, ಸತೀಶ್, ಶೇಖರ್ ಮತ್ತು ಉದಯ್ ಕೆ.ಪಿ.ಅಗ್ರಹಾರ ಠಾಣಾ ವ್ಯಾಪ್ತಿಯ ಬಿನ್ನಿಸ್ಟೋನ್ ಗಾರ್ಡ್‌ನ್ ಬಳಿ ತಲೆಮರೆಸಿಕೊಂಡು ದರೋಡೆಗೆ ಸಂಚು ರೂಪಿಸಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Namma Metro; ಡಿಸೆಂಬರ್ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ
Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್”
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Data Theft: ಕಂಪನಿಯ ಡೇಟಾ ಕದ್ದು 12.5 ಕೋಟಿ ವಂಚನೆ ಮಾಡಿದ ಬ್ಯಾಂಕ್ ಮ್ಯಾನೇಜರ್!
Out of Syllabus Review; ಪ್ರೇಮಿಗಳಿಗೆ ಹೊಸ ಸಿಲೆಬಸ್
INDvAUS; ಇತಿಹಾಸದಲ್ಲೇ ಮೊದಲ ಬಾರಿಗೆ…: 200 ವಿಕೆಟ್ ನೊಂದಿಗೆ ಹೊಸ ದಾಖಲೆ ಬರೆದ ಬುಮ್ರಾ
Aranthodu: ಉಡುಪಿಗೆ ಭತ್ತದ ಲೋಡ್ ಸಾಗಿಸುತ್ತಿದ್ದ ವೇಳೆ ಲಾರಿಗೆ ಆಕಸ್ಮಿಕ ಬೆಂಕಿ
Anandapura: ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ; ಇಬ್ಬರು ಸ್ಥಳದಲ್ಲೇ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.