ಬಿಹಾರ ಸಿಎಂ ವಿರುದ್ಧ ಫ್ಲೆಕ್ಸ್ ಹಾಕಿದ್ದ ಮೂವರ ಸೆರೆ
Team Udayavani, Jul 23, 2023, 2:37 PM IST
ಬೆಂಗಳೂರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ಅವಹೇಳನಕಾರಿ ಫ್ಲೆಕ್ಸ್ಗಳನ್ನು ಹಾಕಿದ್ದ ಆರೋಪದ ಮೇಲೆ ಮೂವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರಂ ನಿವಾಸಿ ಶ್ರೀರಾಮ್ (48), ಕೆ.ಮೋಹನ್(42), ಮತ್ತು ನಂದಕುಮಾರ್(30) ಬಂಧಿತರು. ಇತ್ತೀಚೆಗೆ ನಗರದ ತಾಜ್ವೆಸ್ಟೆಂಡ್ ಹೋಟೆಲ್ನಲ್ಲಿ “ಇಂಡಿಯಾ’ ವಿಪಕ್ಷ ಸಭೆಯನ್ನು ಕಾಂಗ್ರೆಸ್ ಕರೆದಿತ್ತು. ಈ ಸಭೆಗೆ ಭಾಗವಹಿಸಲು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿ ವಿವಿಧ ಪಕ್ಷಗಳ ಮುಖಂಡರು ಆಗಮಿಸಿದ್ದರು. ಈ ವೇಳೆ ಟ್ರೀ ಲೈಟ್ ಜಂಕ್ಷನ್ನಲ್ಲಿ ಹರೇಕೃಷ್ಣ ರಸ್ತೆಯಲ್ಲಿನ ಕರ್ನಾಟಕ ಫಿಲಂ ಚೇಂಬರ್ ಮುಂಭಾಗದ ರಸ್ತೆಯಲ್ಲಿ ನಂತರ ಚಾಲುಕ್ಯ ಸರ್ಕಲ್ನ ಹೈಪಾಯಿಂಟ್ ಕಟ್ಟಡದ ಮುಂಭಾಗ ಹಾಗೂ ಇತರೆಡೆ ಅಳವಡಿಸಿದ್ದ ಫ್ಲೆಕ್ಸ್ಗಳಲ್ಲಿ ಬಿಹಾರ ಸಿಎಂ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ “ಅಸ್ಥಿರ ಪ್ರಧಾನಿ ಅಭ್ಯರ್ಥಿ’ ಎಂದು ಪ್ರಚೋದನಾಕಾರಿ ಫ್ಲೆಕ್ಸ್ಗಳನ್ನು ಹಾಕಲಾಗಿತ್ತು. ರಾತ್ರೋರಾತ್ರಿ ಇದೇ ರೀತಿ ಸುಮಾರು 30ಕ್ಕೂ ಹೆಚ್ಚು ಫ್ಲೆಕ್ಸ್ಗಳನ್ನು ಅಳವಡಿಸಿದ್ದರು. ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಉದ್ದೇಶ ಆರೋಪಿಗಳದಾಗಿತ್ತು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಆರೋಪಿ ಶ್ರೀರಾಮ್ ಪ್ರಚೋದನಾಕಾರಿ ಫ್ಲೆಕ್ಸ್ ಹಾಕಲು ಹಣ ಸಂಗ್ರಹಿಸಿದ್ದ. ನಂದಕುಮಾರ್ನ ಪ್ರಿಂಟಿಂಗ್ ಪ್ರಸ್ನಲ್ಲಿ ಫ್ಲೆಕ್ಸ್ಗಳನ್ನು ಮುದ್ರಿಸಲಾಗಿತ್ತು. ಮೋಹನ್ಗೆ ಸೇರಿದ ಮಿನಿ ಟೆಂಪೋದಲ್ಲಿ ಫ್ಲೆಕ್ಸ್ಗಳನ್ನು ಸಾಗಿಸಲಾಗಿತ್ತು. ಆರೋಪಿಗಳು ರಾಜಕೀಯ ಮುಖಂಡರೊಬ್ಬರ ಕುಮ್ಮಕ್ಕುನಿಂದ ಮಾಡಿರುವ ಸಾಧ್ಯತೆಯಿದೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ!
Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
MUST WATCH
ಹೊಸ ಸೇರ್ಪಡೆ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್ಎನ್ಎಲ್ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.