ವಿದೇಶಿಗರಿಗೆ ಮನೆ ಬಾಡಿಗೆ ಮಾಲೀಕರಿಬ್ಬರ ಬಂಧನ
Team Udayavani, Aug 29, 2018, 12:32 PM IST
ಕೆ.ಆರ್.ಪುರ: ನೈಜೀರಿಯಾ ಹಾಗೂ ಆಪ್ರಿಕನ್ ಮೂಲದ ವಿದೇಶಿ ಪ್ರಜೆಗಳಿಂದ ಸೂಕ್ತ ದಾಖಲೆಗಳನ್ನು ಪಡೆಯದೆ ಬಾಡಿಗೆ ಮನೆ ನೀಡಿದ ಮನೆ ಮಾಲೀಕರನ್ನು ಕೆಆರ್ ಪುರ ಪೊಲೀಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಮೀರ್(38), ನೀಲಮ್ಮ(35) ಬಂಧಿತ ಮನೆ ಮಾಲೀಕರು.
ವೀಸಾ ಪಾಸ್ಪೋರ್ಟ್ ಅವಧಿ ಮುಗಿದಿರುವ, ನ್ಯಾಯಾಂಗ ಬಂಧನದಲ್ಲಿರುವ ವಿದೇಶಿ ಅರೋಪಿಗಳಿಂದ ಸೂಕ್ತ ದಾಖಲೆಗಳನ್ನು ಪಡೆಯದೆ ಅನಧಿಕೃತವಾಗಿ ವಾಸ ಮಾಡಲು ಅವಕಾಶ ನೀಡುವುದೂ ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡದಿರುವ ಬಾಡಿಗೆ ಮನೆಗಳ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಪೊಲೀಸರು ಮಂಗಳವಾರ ವಿದೇಶಿಯಗರಿಂದ ಸೂಕ್ತ ದಾಖಲೆಗಳಿಲ್ಲದ ಇಬ್ಬರು ಮನೆ ಮಾಲೀಕರನ್ನು ಬಂದಿಸಲಾಗಿದೆ.
ಟಿಸಿಪಾಳ್ಯ ಬೃಂದಾವನ ಬಡಾವಣೆ ಅಮೀರ್ ಮತ್ತು ಪ್ರಿಯಾಂಕನಗರ ನೀಲಮ್ಮ ಬಂಧಿತ ಮನೆ ಮಾಲೀಕರು. ಕಾರ್ಯಾಚರಣೆ ಮುಂದುವರಿದಿದೆ. ವಿದೇಶಿ ಪ್ರಜೆಗಳಿಗೆ ಮನೆ ನೀಡುವಾಗ ಅಧಿಕೃತ ಪಾಸಪೋರ್ಟ್,ವೀಸಾ, ರೆಸಿಡೆನ್ಸಿಯಲ್ ಪ್ರಮಾಣಪತ್ರ, ದಾಖಲಾತಿಗಳನ್ನು ಪಡೆದು ಸ್ಥಳೀಯ ಪೊಲೀಸ್ ಠಾಣೆಗೆ ಹಾಗೂ ವಿದೇಶಿ ನೊಂದಣಾಧಿಕಾರಿಗಳಿಗೆ ಸಲ್ಲಿಸಿದ ನಂತರ ಲಿಖೀತ ಅನುಮತಿ ಪಡೆದು ಮನೆ ಬಾಡಿಗೆ ನೀಡಬೇಕು ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mike Tyson: ವಿದಾಯದ ಸುಳಿವು ನೀಡಿದ ಬಾಕ್ಸಿಂಗ್ ದಿಗ್ಗಜ ಮೈಕ್ ಟೈಸನ್
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Team India: ವಿರಾಟ್ ಕೊಹ್ಲಿ ದಾಖಲೆ ಮುರಿದ ತಿಲಕ್ ವರ್ಮಾ
Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್ಗೆ ಗಂಭೀರ ಗಾಯ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.