ಸೂಜಿಗಲ್ಲಿನಂತೆ ಸೆಳೆದ ಆರ್ಟಿಸ್ತಾನ್
Team Udayavani, Sep 22, 2018, 1:15 PM IST
ಬೆಂಗಳೂರು: ಟೆಟ್ರಾ ಪ್ಯಾಕ್‌ಗಳು ಕೈಚೀಲಗಳಾಗಿ ಬದಲಾಗಿವೆ, ಅಕ್ಕಿ ಮೂಟೆಗಳು ಪರ್ಸ್‌ಗಳಾಗಿ ರೂಪತಾಳಿವೆ. ಬೆಳ್ಳಿಯೂ ನಾಚುವಂತಹ ಗೆಜ್ಜೆಗಳು ಹಾಗೂ ಬಂಗಾರದ ಒಡವೆಗಳನ್ನೂ ಮರೆಸುವಂತಹ ಆಭರಣಗಳು ಇಲ್ಲಿ ಕಣ್ಮನ ಸೆಳೆಯುತ್ತಿವೆ.
ಇಷ್ಟೊಂದು ಚಂದದ ಆಭರಣಗಳು ಎಲ್ಲಿ ಸಿಗುತ್ತವೆ? ಎಲ್ಲಿದೆ ಟೆಟ್ರಾ ಪ್ಯಾಕ್ ಹ್ಯಾಂಡ್ ಬ್ಯಾಗ್ ಹಾಗೂ ಪರ್ಸ್‌ಗಳು ಸಿಗುವ ಸ್ಥಳ ಎಂದು ಯೋಚಿಸುತ್ತಿದ್ದಿರಾ? ಹಾಗಿದ್ದರೆ ಇಲ್ಲಿದೆ ನೋಡಿ ಮಾಹಿತಿ; ಕರ್ನಾಟಕ ಕಾಯರ್ ಸಹಕಾರ ಒಕೂಟ್ಕ, ಚಿತ್ತಾರ ಸಹಯೋಗದಲ್ಲಿ ಕರ್ನಾಟಕ ಚಿತ್ರಕಲಾ ಪರಿಷತ್‌ನಲ್ಲಿ ಶುಕ್ರವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಆರ್ಟಿಸ್ತಾನ್ ಮೇಕರ್ಸ್ ಮಾರ್ಕೆಟ್ ಮೇಳದಲ್ಲಿ ನಿಮಗಿವು ದೊರೆಯಲಿವೆ.
ಕೇವಲ ಆಭರಣಗಳು, ಹ್ಯಾಂಡ್ ಬ್ಯಾಗ್‌ಗಳಷ್ಟೇ ಅಲ್ಲ, ಅವುಗಳಿಗೆ ಹೊಂದುವ ಅಲಂಕಾರಿಕಾ ಸಾಮಾಗ್ರಿಗಳು, ಉಡುಪುಗಳೂ ಮೇಳದಲ್ಲಿ ಲಭ್ಯವಿವೆ. ಮಣಿಪುರ, ಅಸ್ಸಾಂ, ದಿಲ್ಲಿ, ಕಾಶ್ಮೀರ, ಜೈಪುರ, ಗುಜಾರಾತ್, ರಾಜಸ್ತಾನ, ಕೊಲ್ಕತ್ತಾ, ಲಕ್ನೋ, ಮಹಾರಾಷ್ಟ್ರ, ಚೆನ್ನೈ, ಆಂಧ್ರ ಪ್ರದೇಶ ಮತ್ತು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಒಂದೇ ಸೂರಿನಲ್ಲಿ ಅನಾವರಣಗೊಂಡಿವೆ.
ಚಿತ್ತಾಕರ್ಷಕ ಚಿತ್ರಕಲೆಗಳು: ಇನ್ನೂ ಕರ್ನಾಟಕ ಕಾಯರ್ ಬೋರ್ಡ್‌ನ ಉತ್ಪನ್ನಗಳು ಸೂಜಿಗಲ್ಲಿನಂತೆ ಆಕರ್ಷಿಸುತ್ತಿವೆ. ಕಾಯರ್ ಮ್ಯಾಟ್‌ಗಳು, ಕಾಪೆìಟ್‌ಗಳು, ಕೈಮಗ್ಗದ ವಸ್ತುಗಳು, ಕರಕುಶಲ ಸಾಮಗ್ರಿಗಳು ಮೇಳಕ್ಕೆ ರಂಗು ತಂದಿದ್ದವು. ಮತ್ತೂಂದೆಡೆ ತಂಜಾವೂರು ಚಿತ್ರಕಲೆ, ಮಧುಬಾನಿ, ಒರಿಸ್ಸಾ, ಕೇರಳದ ಚಿತ್ರಕಲೆಗಳು ಸಹ ನೋಡುಗರ ಗಮನ ಸೆಳೆಯುತ್ತಿತ್ತು.
ದಸರಾ ಸಂಸ್ಕೃತಿ ಉತ್ಸವದಲ್ಲಿ ಗೃಹಾಲಂಕಾರಕ್ಕೆ ಬೇಕಾಗುವ ಎಲ್ಲ ರೀತಿಯ ಅಂದನೆಯ ವಸ್ತುಗಳು, ಕರಕುಶಲ ವಸ್ತುಗಳು, ವೈವಿಧ್ಯಮಯ ಕಲಾತ್ಮಕ ವಸ್ತುಗಳು ಹೆಂಗೆಳೆಯರ ಚಿತ್ತ ಸೆಳೆಯುತ್ತಿತ್ತು. ಬೊಂಬೆಯಾಟ, ಚೆನ್ನಮಣೆಯಾಟದ ಸಾಮಾಗ್ರಿಗಳು ಸೇರಿದಂತೆ ವಿವಿಧ ಆಟಿಕೆಗಳು ಮಕ್ಕಳ ಮನ ಸೂರೆಗೊಳ್ಳುತ್ತಿತ್ತು. ಪರಿಸರ ಸ್ನೇಹಿ ಹಾಗೂ ಮರುಬಳಕೆಗೆ ಯೋಗ್ಯವಾದ ಆಟಿಕೆಗಳನ್ನು ಖರೀದಿಸಲು ಜನ ಹೆಚ್ಚು ಉತ್ಸುಕರಾಗಿದ್ದರು.
ಕಸದಿಂದ ರಸವಾಗಿ ಬದಲಾದ ವಸ್ತುಗಳ ಮೆರಗು: ಜ್ಯೂಸ್ ಕುಡಿದು ಬಿಸಾಡಿದ ಟೆಟ್ರಾ ಪ್ಯಾಕ್‌ಗಳಿಂದ ಅನುಲೈಫ್ ಸಂಸ್ಥೆ ತಯಾರಿಸಿದ ಹ್ಯಾಂಡ್ ಬ್ಯಾಗ್‌ಗಳು ಹಾಗೂ ಅಕ್ಕಿಚೀಲಗಳಿಂದ ತಯಾರಿಸಿದ ಲ್ಯಾಪ್‌ಟಾಪ್ ಬ್ಯಾಗ್‌ಗಳು ಮತ್ತು ಅಲಂಕಾರಿಕಾ ಪರ್ಸ್‌ಗಳು ಹೆಣ್ಣು ಮಕ್ಕಳನ್ನು ಆಕರ್ಷಿಸುತ್ತಿತ್ತು.
ಸಿಲ್ಕ್ ಸೀರೆಗಳು, ಕಲಾಂಕಾರಿ ಸೀರೆಗಳು, ಕೊಲ್ಕತ್ತಾ ಸೀರೆಗಳು, ಹುಬ್ಬಳ್ಳಿ ಸೀರೆಗಳು, ಹ್ಯಾಂಡ್ ಲೂಮ್ ಸೀರೆಗಳು, ಡಿಸೈನರ್ ಕುರ್ತಾಗಳು, ಲುಕ್‌ನಾವಿ ಕುರ್ತಾಗಳು, ಕಲಾಂಕಾರಿ ಕುರ್ತಾಗಳು, ಕಾಶ್ಮೀರಿ ಕುರ್ತಾಗಳು, ಗುಜರಾತಿ ಕುರ್ತಾಗಳು, ಬಾಂಧಾನಿ ಕುರ್ತಾಗಳು
ಹಾಗೂ ಖಾದಿ ಕುರ್ತಾಗಳು ಮತ್ತು ಬಗೆ ಬಗೆಯ ದುಪ್ಪಟಗಳು ತರುಣಿಯರ ಮನ ಸೆಳೆದಿದ್ದವು. ಇದಷ್ಟೇ ಅಲ್ಲದೆ ಇದಕ್ಕೆ ಹೊಂದುವ ಸಿಲ್ವರ್ ಜರ್ಮನ್ ಆಭರಣಗಳು, ಮರದ ಆಭರಣಗಳು, ಟ್ರೆಂಡಿ ಆಭರಣಗಳು, ಕರಕುಶಲ ಆಭರಣಗಳು ಮೆಳಕ್ಕೆ ಮತ್ತಷ್ಟು ಮೆರಗು ನೀಡಿದ್ದವು.
ಸ್ಥಳೀಯ ಕಲಾವಿದರಿಗೆ ಮಾರುಕಟ್ಟೆ ಒದಗಿಸುವ ಇಂತಹ ಮೇಳಗಳು ಹೆಚ್ಚಾಗಿ ನಡೆಯಬೇಕು. ಸರ್ಕಾರ ಇಲ್ಲಿನ ಕಲಾವಿದರಿಗೆ ಕಡಿಮೆ ಬೆಲೆಯಲ್ಲಿ ಕಚ್ಚಾ ಸಾಮಗ್ರಿ, ಉತ್ಪನ್ನಗಳಿಗೆ ಅಗತ್ಯ ಮಾರುಕಟ್ಟೆ ಒದಗಿಸಬೇಕು. ಇದರಿಂದ ಕರ್ನಾಟಕದ ಕಲೆಗೆ ಅಂತಾರಾಷ್ಟ್ರೀಯ ಮನ್ನಣೆ ದೊರೆಯಲಿದೆ.
-ಮಾನ್ವಿತಾ ಕಾಮತ್, ನಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಲ್ಲಮಪ್ರಭು ಸ್ವಾಮಿ ದೇಗುಲಕ್ಕೆ ಪುರಾತನ ಸ್ಮಾರಕ ಪಟ್ಟ: ತಜ್ಞರ ಸಮಿತಿ ರಚನೆಗೆ ಆದೇಶ
Bengaluru: ನ.17ಕ್ಕೆ ನವದುರ್ಗಾ ಲೇಖನ ಯಜ್ಞ, ವಾಗೀಶ್ವರೀ ಪೂಜೆ; ಪೂರ್ವಭಾವಿ ಸಭೆ
Bengaluru: ನಗರದ ಐಬಿಸ್ ಹೋಟೆಲ್‌ಗೆ ಬಾಂಬ್ ಬೆದರಿಕೆ; ಗ್ರಾಹಕರ ಆತಂಕ
Bengaluru: ಕುಡಿದು ಸ್ಕೂಲ್ ಬಸ್ ಓಡಿಸಿದ ಚಾಲಕರ ಲೈಸೆನ್ಸ್ ಅಮಾನತು
Bengaluru: ಬಸ್ ಚೇಸ್ ಮಾಡಿ ಡ್ರೈವರ್‌ಗೆ ಥಳಿಸಿದ್ದ ಆರೋಪಿ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.