ಕಲಾವಿದರು ಜನರ ಜೀವನದ ಭಾಗ
Team Udayavani, May 2, 2018, 3:03 PM IST
ಬೆಂಗಳೂರು: ಸಿನಿಮಾ ಕಲಾವಿದರು ಹಾಗೂ ಸಾಹಿತಿಗಳು ಜನರ ಜೀವನದ ಭಾಗವಾಗಿದ್ದು, ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿ ನೆಲೆಸುವಂತವರು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ತಿಳಿಸಿದರು.
ರೇಸ್ ಕೋರ್ಸ್ ರಸ್ತೆಯ ಭಾರತೀಯ ವಿದ್ಯಾ ಭವನದಲ್ಲಿ ಮಂಗಳವಾರ ನಡೆದ ಪದ್ಮಭೂಷಣ ಡಾ.ಬಿ.ಸರೋಜ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಸಮಾಜವನ್ನು ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಮುನ್ನಡೆಸುವಲ್ಲಿ ಸಿನಿಮಾ ಬಹುಮುಖ್ಯ ಪಾತ್ರವಹಿಸುತ್ತವೆ. ಕೇವಲ ಮೂರು ಗಂಟೆಗಳಲ್ಲಿ ನೋವು-ನಲಿವಿನಂತಹ ಅನೇಕ ಭಾವನೆಗಳನ್ನು ನೀಡಿ ಜೀವನದ ಕಲ್ಪನೆಯನ್ನು ಕಟ್ಟಿಕೊಡುತ್ತಿವೆ ಎಂದರು.
ನನ್ನ ತಂದೆಯವರಿಗೆ ಸಿನಿಮಾ ಬಗ್ಗೆ ತುಂಬಾ ಆಸಕ್ತಿ ಇತ್ತು. ನನ್ನ ಮಕ್ಕಳು ಸಿನಿಮಾದಲ್ಲಿ ನಟನೆ ಮಾಡಬೇಕು ಎಂಬ ಆಸೆ ಹೊಂದಿದ್ದರು. ಹಾಗಾಗಿಯೇ ಶಂಕರ್ ಸಿಂಗ್ ನಿರ್ದೇಶನದ ಮಂಜುನಾಥ ಮಹಿಮೆ ಚಿತ್ರದಲ್ಲಿ ಚಿಕ್ಕದಾಗಿ ನಾನು ಕಾಣಿಸಿಕೊಂಡಿದ್ದೆ ಎಂದು ಹೇಳಿದರು.
ರಾಜೇಂದ್ರ ಸಿಂಗ್ ಬಾಬು ಅವರು ಉತ್ತಮ ನಿರ್ದೇಶಕರಾಗಿದ್ದು, ತಮ್ಮ ಚಿತ್ರಗಳ ಮೂಲಕ ಹೊಸ ಪರಂಪರೆಯನ್ನು ಬರೆದಿದ್ದಾರೆ. ಕಲಾತ್ಮಕ ಹಾಗೂ ಸ್ಪರ್ಧಾತ್ಮಕ ಯುಗಗಳೆರಡರಲ್ಲೂ ಯಶಸ್ವಿ ಚಿತ್ರಗಳ ಮಾಡುತ್ತಿರುವ ಇಂತಹ ವ್ಯಕ್ತಿಯನ್ನು ಸನ್ಮಾನಿಸುವುದು ಸಂತಸದ ವಿಚಾರ ಎಂದು ಹೇಳಿದರು.
ನಟ ಅಂಬರೀಷ್ ಮಾತನಾಡಿ, ರಾಜೇಂದ್ರ ಸಿಂಗ್ ಅವರಿಗೆ ರಕ್ತದಲ್ಲಿಯೇ ನಿರ್ದೇಶನದ ಕಲೆ ಬಂದಿದೆ. ಅವರ ತಂದೆ ಶಂಕರ್ ಸಿಂಗ್ ಅವರು ಅಂದಿನ ಕಾಲಕ್ಕೆ ಅನೇಕ ದೊಡ್ಡ ಮಟ್ಟದ ಸಿನಿಮಾ ಮಾಡಿ ಕನ್ನಡ ಚಿತ್ರರಂಗವನ್ನು ಕಟ್ಟಿದ್ದಾರೆ. ಇನ್ನು ರಾಜೇಂದ್ರ ಸಿಂಗ್ ಅವರು ರಿಷಿ ಕಪೂರ್, ದೀಲಿಪ್ ಕುಮಾರ್‌ನಂತಹ ದೊಡ್ಡ ಕಲಾವಿದರಿಗೆ ನಿರ್ದೇಶನ ಮಾಡಿದ್ದಾರೆ ಎಂದರು.
ಮೊದಲು ಖಳ ನಾಯಕನಾಗಿ ಚಿತ್ರರಂಗಕ್ಕೆ ಬಂದು, ನಂತರ ನಾಯಕನಾದೆ. ಆನಂತರ ಜನಸೇವೆ ಮಾಡೋಣ ಎಂದು ರಾಜಕೀಯಕ್ಕೆ ಬಂದು ಜನನಾಯಕನಾದೆ. ಈಗ ವಯಸ್ಸಾಗಿದ್ದು, ರಾಜಕೀಯದಿಂದ ದೂರವಾಗಿದ್ದೇನೆ. ಇದರ ಹೊರತಾಗಿಯೂ ಜನಸೇವೆಯಲ್ಲಿ ಮುಂದುವರಿಯುತ್ತೇನೆ. ಜತೆಗೆ ಜೀವಂತ ಇರುವವರೆಗೂ ಸಿನಿಮಾಗಳಲ್ಲಿ ನಟಿಸುತ್ತೇನೆ ಎಂದು ತಿಳಿಸಿದರು.
ಹಿರಿಯ ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅವರಿಗೆ ಪ್ರಸಕ್ತ ಸಾಲಿನ ಡಾ.ಬಿ.ಸರೋಜ ದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ನಟಿ ಡಾ.ಬಿ.ಸರೋಜದೇವಿ, ಭಾರತೀಯ ವಿದ್ಯಾ ಭವನ ಅಧ್ಯಕ್ಷ ಎನ್.ರಾಮಾನುಜ, ಸಂಗೀತ ನಿರ್ದೇಶಕ ಹಂಸಲೇಖ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸೇರಿದಂತೆ ಚಿತ್ರರಂಗದ ಸದಸ್ಯರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.