Bangalore: ಹಣಕಾಸಿನ ವಿಚಾರಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ
Team Udayavani, Jan 29, 2024, 12:37 PM IST
ಬೆಂಗಳೂರು: ಹಣಕಾಸಿನ ವಿಚಾರಕ್ಕೆ ದೊಡ್ಡಪ್ಪನ ಮಗನೇ ಸಹೋದರನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಸಂಬಂಧ ಲಗ್ಗೆರೆ ನಿವಾಸಿ ಮಾರುತಿ ಎಂಬವರು ಅವರ ದೊಡ್ಡಪ್ಪನ ಮಗ ಕೆಂಚಪ್ಪ, ಈತನ ಸ್ನೇಹಿತರಾದ ತೇಜ, ನವೀನ್, ಕೆಂಪರಾಜು, ಮಯೂರು ಎಂಬವರು ವಿರುದ್ಧ ನೀಡಿದ ದೂರಿನ ಮೇರೆಗೆ ನಂದಿನಿಲೇಔಟ್ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಕ್ಯಾಬ್ ಚಾಲಕರಾಗಿರುವ ಮಾರುತಿ, 2023ರಲ್ಲಿ ತನ್ನ ದೊಡ್ಡಪ್ಪನ ಪುತ್ರ ಕೆಂಚಪ್ಪನಿಗೆ 25 ಸಾವಿರ ರೂ. ಸಾಲ ನೀಡಿದ್ದರು. ಆದರೆ, ಇದುವರೆಗೂ ಆತ ಹಣ ವಾಪಸ್ ನೀಡಿರಲಿಲ್ಲ. ಕೆಲ ದಿನಗಳಿಂದ ಹಣ ವಾಪಸ್ ನೀಡುವಂತೆ ಒತ್ತಾಯಿಸಿದ್ದಾರೆ. ಆಗ ಆರೋಪಿಗಳ ಪೈಕಿ ಕೆಂಚಪ್ಪ ಹಣ ಕೊಡುವುದಿಲ್ಲ ಏನಾದರೂ ಮಾಡಿಕೊ ಎಂದು ಬೆದರಿಕೆ ಹಾಕಿದ್ದಾನೆ. ಜ.25ರಂದು ರಾತ್ರಿ 11.45ಕ್ಕೆ ಮಾರುತಿ, ಲಗ್ಗೆರೆಯ ವಾಯುನಂದನ ಬಾರ್ ಬಳಿ ಹೋಗುವಾಗ ಕಾರಿನಲ್ಲಿ ಬಂದು ಅಡ್ಡಗಟ್ಟಿದ ಆರೋಪಿಗಳ ತಂಡ, ಮಾರುತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದೆ.
ತೀವ್ರ ರಕ್ತಸ್ರಾವದಿಂದ ಗಾಯಗೊಂಡಿದ್ದ ಮಾರುತಿ ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Deepfake: ಇನ್ಫಿ ಮೂರ್ತಿ, ಅಂಬಾನಿ ಡೀಪ್‌ಫೇಕ್ ವಿಡಿಯೋ ಬಳಸಿ 82.7 ಲಕ್ಷ ರೂ. ವಂಚನೆ
Bengaluru: ಕಳೆದ ದೀಪಾವಳಿಗಿಂತ ಶೇ.34 ತಗ್ಗಿದ ವಾಯುಮಾಲಿನ್ಯ
Crime: ಶೀಲ ಶಂಕಿಸಿ ಪತ್ನಿ ಕತ್ತು ಸೀಳಿಆತ್ಮಹತ್ಯೆಗೆ ಯತ್ನಿಸಿದ ಪತಿ
Bengaluru; ಶೋಕಿಗಾಗಿ ಸರಗಳ್ಳತನ: 70 ಲಾರಿಗಳ ಮಾಲಿಕ ಸೆರೆ!!
Bengaluru; ಪ್ರತಿಷ್ಠಿತ ಆಸ್ಪತ್ರೆಯ ಮಹಿಳಾ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೋ!
MUST WATCH
ಹೊಸ ಸೇರ್ಪಡೆ
Udupi; ಬಜೆ ಡ್ಯಾಂ ಬಳಿ ಶಿಲಾಯುಗದ ನಿಲಿಸುಗಲ್ಲು ಪತ್ತೆ
US Result: ಡೊನಾಲ್ಡ್ Trumpಗೆ ಮತ್ತೊಮ್ಮೆ ಅಧ್ಯಕ್ಷ ಪಟ್ಟ; ಪ್ರಧಾನಿ ಮೋದಿ ಅಭಿನಂದನೆ
ಬಸ್- ಸ್ಕೂಟರ್ ಢಿಕ್ಕಿ ಪ್ರಕರಣ: ಚಿಕಿತ್ಸೆ ಪಡೆಯುತ್ತಿದ್ದ ಮತ್ತೋರ್ವ ಸವಾರ ಕೂಡ ಮೃತ್ಯು
Hubli: ಮುಖ್ಯಮಂತ್ರಿ ನೀತಿ ಗೆಟ್ಟು ಲೋಕಾಯುಕ್ತ ತನಿಖೆಗೆ ಹೋಗುತ್ತಿರುವುದು ನಾಚಿಗೇಡಿನ ಸಂಗತಿ
Hubballi: ಮುಖ್ಯಮಂತ್ರಿ ಸಿದ್ದರಾಮಯ್ಯ ಪೇ ಡಬಲ್ ಸಿಎಂ ಆಗಿದ್ದಾರೆ… :ಬೊಮ್ಮಾಯಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.