ಶಾಲೆ ಶೌಚಾಲಯ ಬಳಸಿದ್ದಕ್ಕೆ ವಿದ್ಯಾರ್ಥಿಗೆ ಥಳಿತ
Team Udayavani, Feb 15, 2017, 12:19 PM IST
ಬೆಂಗಳೂರು: ಶಾಲೆಯ ಶೌಚಾಲಯ ಉಪಯೋಗಿಸಿದ್ದಕ್ಕೆ ಶಿಕ್ಷಕಿಯೊಬ್ಬರು ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯ ಪೋಷಕರು ಭಾರತೀನಗರ ಠಾಣೆಗೆ ದೂರು ನೀಡಿದ್ದಾರೆ. ಫ್ರೆಜರ್ ಟೌನ್ನಲ್ಲಿರುವ ಕೋಲ್ಸ್ ಪಾರ್ಕ್ ಸಮೀಪದ ಸೇಂಟ್ ಅಲೋಷಿಯಸ್ ಶಾಲೆಯ ದೈಹಿಕ ಶಿಕ್ಷಕರ ವಿರುದ್ಧ 8 ವರ್ಷದ ಬಾಲಕನ ತಾಯಿ ದೂರು ದಾಖಲಿಸಿದ್ದಾರೆ.
ಶಾಲೆಯ ಆವರಣ ಕೆಡುತ್ತದೆ ಎಂದು ಹೇಳಿ ವಿದ್ಯಾರ್ಥಿಗಳು ಶಾಲೆಯ ಶೌಚಾಲಯ ಬಳಸುವುದನ್ನು ತಡೆಯಲಾಗಿದೆ. ನನ್ನ ಮಗ ಶೌಚಾಲಯಕ್ಕೆ ಹೋಗಿದ್ದಕ್ಕೆ ಆತನಿಗೆ ದೈಹಿಕ ಶಿಕ್ಷಕರು ತೀವ್ರವಾಗಿ ಹೊಡೆದಿದ್ದಾರೆ. ಇದರಿಂದ ಮಗನಿಗೆ ತೀವ್ರ ತಲೆನೋವು ಬಂದಿದ್ದು, ವೈದ್ಯರು ಸಿಟಿ ಸ್ಕಾನ್ ಮಾಡಿಸಲು ಹೇಳಿದ್ದಾರೆ ಎಂದು ವಿದ್ಯಾರ್ಥಿ ತಾಯಿ ದೂರಿನಲ್ಲಿ ಹೇಳಿದ್ದಾರೆ.
ಶಾಲೆಯ ಪ್ರಾಂಶುಪಾಲರನ್ನು ಭೇಟಿ ಮಾಡಿ ಈ ಬಗ್ಗೆ ವಿಚಾರಿಸಿದಾಗ ಸರಿಯಾಗಿ ಸ್ಪಂದಿಸಲಿಲ್ಲ. ಶಿಕ್ಷಕರನ್ನು ಪ್ರಶ್ನಿಸಿದರೆ ವರ್ಗಾವಣೆ ಪತ್ರ ಕೊಡುವುದಾಗಿ ಬೆದರಿಸುತ್ತಾರೆ. ಬೇರೆ ವಿದ್ಯಾರ್ಥಿಗಳಿಗೂ ಇದೇ ರೀತಿ ಆಗಿದ್ದು, ಅವರ ಪೋಷಕರು ದೂರು ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಮಹಿಳೆ ದೂರಿನ ಅರ್ಜಿ ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.