3 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ
Team Udayavani, Feb 12, 2017, 2:34 PM IST
ಬೆಂಗಳೂರು: ಮೂರುವರೆ ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದ ಮೇರೆಗೆ ಡೇ ಕೇರ್ ಕೇಂದ್ರದ ಮಾಲೀಕರೊಬ್ಬರ ಪುತ್ರನನನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯ್(25) ಬಂಧಿತ ಆರೋಪಿ. ಈತನ ತಾಯಿ ಶೋಭಾ ಎಂಬುವರು ಆರ್‌ಪಿಸಿ ಲೇಔಟ್‌ನ ಹಂಪಿನಗರದಲ್ಲಿ “ತವನ್’ ಹೆಸರಿನ ಪ್ಲೇ ಹೋಮ್ ನಡೆಸುತ್ತಿದ್ದಾರೆ. ಈ ಫ್ಲೇ ಹೋಮ್‌ನಲ್ಲಿ ಸುಮಾರು 20 ಮಕ್ಕಳಿದ್ದಾರೆ. ಫ್ಲೇ ಹೋಮ್‌ಗೆ ದಾಖಲಾಗಿದ್ದ ಮೂರುವರೆ ವರ್ಷದ ಮಗುವನ್ನು ಕೊಠಡಿಯೊಳಗೆ ಕರೆದುಕೊಂಡು ಹೋಗಿದ್ದ ಆರೋಪಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎನ್ನಲಾಗಿದೆ.
ಕಿರುಕುಳಕ್ಕೆ ಒಳಗಾಗಿದ್ದ ಮಗುವನ್ನು ಅವರ ತಾತ ಶುಕ್ರವಾರ ಮಧ್ಯಾಹ್ನ ಮನೆಗೆ ಕರೆದುಕೊಂಡು ಹೋಗಿದ್ದರು.ಈ ವೇಳೆ ಮಗು ಮಂಕಾಗಿತ್ತು. ಇದನ್ನು ಗಮನಿಸಿದ್ದ ಆತನ ಪೋಷಕರು ಮಗುವನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಗು ನಡೆದ ಘಟನೆಯನ್ನು ಪೋಷಕರ ಬಳಿ ಹೇಳಿದೆ. ಕೂಡಲೇ ಪೋಷಕರು ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಗುವಿನ ಹೇಳಿಕೆ ದಾಖಲಿಸಿಕೊಂಡು ಆರೋಪಿ ಯನ್ನು ಬಂಧಿಸಿದ್ದಾರೆ. ಎಂಜಿನಿಯರಿಂಗ್ ಮುಗಿಸಿರುವ ಸಂಜಯ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ. ಕೆಲಸಕ್ಕೆ ಹೋಗುವ ಮುನ್ನ ಫ್ಲೇ ಹೋಮ್‌ಗೆ ಬಂದಿದ್ದ ಈತ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.