ವಿಧಾನಸಭೆ ಚುನಾವಣಾ ಸಮರಕ್ಕೆ 101 JDS ಅಭ್ಯರ್ಥಿಗಳ ಪಟ್ಟಿ ರೆಡಿ?
Team Udayavani, Jan 19, 2017, 3:50 AM IST
ಬೆಂಗಳೂರು:ರಾಜ್ಯದಲ್ಲಿ ಸ್ವಂತ ಶಕ್ತಿಯಿಂದಲೇ ಅಧಿಕಾರಕ್ಕೆ ಬರಲೇಬೇಕೆಂದು ಹಠ ಹಿಡಿದಿರುವ ಜೆಡಿಎಸ್ 2018ರ ವಿಧಾನಸಭೆ ಚುನಾವಣೆ ಎದುರಿಸಲು ಈಗಿನಿಂದಲೇ ಭರದ ಸಿದ್ಧತೆ ನಡೆಸಿದ್ದು, ವರ್ಷಕ್ಕೂ ಮುನ್ನವೇ 101 ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ಧಪಡಿಸಿಕೊಂಡು ಅಭ್ಯರ್ಥಿಗಳಿಗೆ ತಮ್ಮ ತಮ್ಮ ಕ್ಷೇತ್ರದಲ್ಲಿ ಚುನಾವಣಾ ಸಮರಕ್ಕೆ ಸನ್ನದ್ಧರಾಗಲು ಸೂಚಿಸಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸಿದ್ಧಪಡಿಸಿರುವ ಅಭ್ಯರ್ಥಿಗಳ ಪಟ್ಟಿ “ಉದಯವಾಣಿ’ಗೆ ಲಭ್ಯವಾಗಿದೆ. 224 ವಿಧಾನಸಭೆ ಕ್ಷೇತ್ರಗಳ ಪೈಕಿ ಶೇ.50 ರಷ್ಟು ಸ್ಥಾನಗಳಿಗೆ ಅಭ್ಯರ್ಥಿಯನ್ನು ಘೋಷಿಸಿ ಜನರ ನಾಡಿಮಿಡಿತ ಪರೀಕ್ಷಿಸುವುದು ಜೆಡಿಎಸ್‌ನ ಲೆಕ್ಕಾಚಾರ. ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್‌ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಹಾಲಿ ಶಾಸಕರ ಪೈಕಿ 33 ಶಾಸಕರಿಗೆ ಟಿಕೆಟ್ ಸಿಗುವುದು ಖಚಿತವಾಗಿದ್ದು,ತೆರೆಮರೆಯಲ್ಲಿ ನಡೆಯುತ್ತಿರುವ ಸಂಧಾನ ಮಾತುಕತೆ ಯಶಸ್ವಿಯಾದಲ್ಲಿ ಪಕ್ಷದಿಂದ ಅಮಾನುಗೊಂಡಿರುವ ಎಂಟು ಶಾಸಕರಿಗೂ ಟಿಕೆಟ್ ಸಿಕ್ಕರೂ ಅಚ್ಚರಿಯಿಲ್ಲ.
ಎಚ್.ಡಿ.ದೇವೇಗೌಡರ ನೀಲಿಗಣ್ಣಿನ ಹುಡುಗ ಎಂದೇ ಖ್ಯಾತಿ ಪಡೆದಿದ್ದ ವೈ.ಎಸ್.ವಿ.ದತ್ತಾ ಅವರಿಗೆ ಟಿಕೆಟ್ ನೀಡುವುದು ಸ್ವಲ್ಪ ಅನುಮಾನವಾಗಿದ್ದು ಅಲ್ಲಿ ದತ್ತಾ ಬದಲಿಗೆ ಧರ್ಮೇಗೌಡ ಅಥವಾ ಭೋಜೇಗೌಡ ಅವರಿಗೆ ಟಿಕೆಟ್ ನೀಡುವ ಬಗ್ಗೆ ಚರ್ಚೆಗಳು ನಡೆದಿದ್ದು, ದತ್ತಾ ಅವರನ್ನು ಚಿಂತಕರ ಛಾವಡಿ ವಿಧಾನಪರಿಷತ್‌ಗೆ ಕಳುಹಿಸುವ ಚಿಂತನೆಯಿಂದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಿಶೇಷ ಎಂದರೆ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ನಾನು ಹಾಗೂ ಎಚ್.ಡಿ.ರೇವಣ್ಣ ಹೊರತುಪಡಿಸಿ ಬೇರೆಯವರು ಸ್ಪರ್ಧೆ ಮಾಡುವುದಿಲ್ಲ ಎಂದು ಖುದ್ದು ಎಚ್.ಡಿ.ಕುಮಾರಸ್ವಾಮಿಯವರೇ ಘೋಷಿಸಿದ್ದರೂ ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ಹಾಸನದ ಬೇಲೂರು ಕ್ಷೇತ್ರದಿಂದ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.
2013 ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ 40 ಕ್ಷೇತ್ರಗಳ ಜತೆಗೆ 323 ಮತಗಳ ಅಂತರದಿಂದ ಹದಿನೈದು ಸಾವಿರ ಅಂತರದವರೆಗೆ ಸೋಲು ಆನುಭವಿಸಿದ 48 ಕ್ಷೇತ್ರಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿದ 12 ಕ್ಷೇತ್ರಗಳನ್ನೊಳಗೊಂಡಂತೆ 101 ಕ್ಷೇತ್ರಗಳನ್ನು ಮೊದಲ ಹಂತದಲ್ಲಿ ಗುರುತಿಸಲಾಗಿದೆ.
ಉಳಿದ 123 ಕ್ಷೇತ್ರಗಳ ಪೈಕಿ ಹಳೇ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಯುವಕರಿಗೆ ಶೇ.50 ರಷ್ಟು ಮೀಸಲಿಟ್ಟು ಹೊಸ ಪ್ರಯೋಗ ಮಾಡಲು ಎಚ್.ಡಿ.ಕುಮಾರಸ್ವಾಮಿ ಮುಂದಾಗಿದ್ದಾರೆ. 2018ರ ಚುನಾವಣೆಯಲ್ಲಿ ಸೋತರೂ ಮುಂದೆ ಪಕ್ಷ ಸಂಘಟಿಸಿ ಆ ಕ್ಷೇತ್ರದಲ್ಲಿ ಹಿಡಿತ ಸಾಧಿಸಬೇಕು. ಎರಡನೇ ಅವಕಾಶದಲ್ಲಿ ಗೆಲ್ಲುವ ಗುರಿ ಹೊಂದಿರಬೇಕು ಎಂಬುದು ಈ ನಿರ್ಧಾರದ ಹಿಂದಿನ ಲೆಕ್ಕಾಚಾರ.
ಕಾಂಗ್ರೆಸ್ಸಿಗರಿಗೂ ಗಾಳ
ಈ ಮಧ್ಯೆ, ಕಾಂಗ್ರೆಸ್‌ನಲ್ಲಿ ಅಸಮಾಧಾನಗೊಂಡಿರುವ ಸಿ.ಎಂ.ಇಬ್ರಾಹಿಂ, ಅಂಬರೀಷ್, ಸತೀಶ್ ಜಾರಕಿಹೊಳಿ, ಕಮರುಲ್ ಇಸ್ಲಾಂ ಅವರಿಗೂ ಜೆಡಿಎಸ್ ಗಾಳ ಹಾಕಿದೆ. ಚುನಾವಣೆ ಸಮೀಪ ಇದ್ದಾಗ ಈ ಪ್ರಕ್ರಿಯೆಗೆ ಹೆಚ್ಚು ಚಾಲನೆ ದೊರೆಯುವ ಸಾಧ್ಯತೆಯಿದೆ. ಅಂಬರೀಷ್ ಜೆಡಿಎಸ್‌ಗೆ ಬಂದರೆ ಶ್ರೀರಂಗಪಟ್ಟಣದಿಂದ ಸ್ಪರ್ಧೆಗೆ ಅವಕಾಶ ಕೊಡುವ ಬಗ್ಗೆ ಮಾತುಕತೆ ನಡೆದಿದೆ. ಸತೀಸ್‌ಜಾರಕಿಹೊಳಿ ಅವರು ಪಕ್ಷಕ್ಕೆ ಬಂದರೆ ಇಡೀ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಕೊಡುವುದು ಅದೇ ರೀತಿ ಕಮರುಲ್ ಇಸ್ಲಾಂ ಬಂದರೆ ಕಲಬುರಗಿ, ಬೀದರ್, ಯಾದಗೀರ್ ಜಿಲ್ಲೆಗಳ ಉಸ್ತುವಾರಿ ಕೊಡುವ ಬಗ್ಗೆಯೂ ತೆರೆಮರೆಯ ಮಾತುಕತೆ ನಡೆದಿದೆ. ಸಿ.ಎಂ.ಇಬ್ರಾಹಿಂ ಅವರಿಗೆ ಮುಸ್ಲಿಂ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಟಿಕೆಟ್ ಹಂಚುವ ಹೊಣೆಗಾರಿಕೆ ಕೊಡುವ ಭರವಸೆಯೂ ನೀಡಲಾಗಿದೆ.
ಸಂಧಾನ ಫಲ ಕೊಟ್ರೆ
ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ಆದೇಶ ಉಲ್ಲಂ ಸಿ ಕಾಂಗ್ರೆಸ್‌ಗೆ ಮತ ನೀಡಿದ ಎಂಟು ಶಾಸಕರನ್ನು ಆಮಾನತುಗೊಳಿಸಲಾಗಿದೆಯಾದರೂ ಪಕ್ಷದಿಂದ ಅಮಾನತುಗೊಂಡಿರುವ ಎಂಟು ಶಾಸಕರ ಪೈಕಿ ಮಹಾಲಕ್ಷ್ಮಿ ಲೇ ಔಟ್‌ನ ಗೋಪಾಲಯ್ಯ ಒಂದು ರೀತಿಯಲ್ಲಿ ಪಕ್ಷಕ್ಕೆ ಮರಳಿ ಬಂದಂತಾಗಿದ್ದು ಅವರಿಗೆ ಟಿಕೆಟ್ ಖಚಿತ. ಉಳಿದಂತೆ ಏಳು ಶಾಸಕರ ಪುನರ್‌ಸೇರ್ಪಡೆ ವಿಚಾರದಲ್ಲಿ ಒಕ್ಕಲಿಗ ಸಮುದಾಯದ ಹಿರಿಯ ಮುಖಂಡರು ಹಾಗೂ ಸ್ವಾಮೀಜಿಯೊಬ್ಬರ ಮಧ್ಯಸ್ಥಿಕೆಯಲ್ಲಿ ದೊಡ್ಡ ಮಟ್ಟದಲ್ಲಿ ಸಂಧಾನ ಮಾತುಕತೆ ನಡೆಯುತ್ತಿದ್ದು ಅದು ಫಲ ನೀಡಿದರೆ ಅಷ್ಟೂ ಜನಕ್ಕೆ ಮತ್ತೆ ಟಿಕೆಟ್ ಸಿಗಲಿದೆ.
ಒಂದೊಮ್ಮೆ ಸಂಧಾನ ಸಾಧ್ಯವಾಗದಿದ್ದರೆ ಪರ್ಯಾಯ ಅಭ್ಯರ್ಥಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ. ಮಾಗಡಿಯಲ್ಲಿ ಕಾಂಗ್ರೆಸ್‌ನ ಜಿಲ್ಲಾ ಪಂಚಾಯತ್ ಸದಸ್ಯ ಎ.ಮಂಜು ಅಥವಾ ಜೇಡರಹಳ್ಳಿ ಕೃಷ್ಣಪ್ಪ ಹೆಸರು ಕೇಳಿಬರುತ್ತಿದ್ದು ಅವರು ಪಕ್ಷಕ್ಕೆ ಬಂದರೆ ಟಿಕೆಟ್ ಕೊಡುವ ಸಾಧ್ಯತೆಯಿದೆ. ನಾಗಮಂಗಲದಲ್ಲಿ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಅಥವಾ ಕಾಂಗ್ರೆಸ್‌ನಲ್ಲಿರುವ ಶಿವರಾಮೇಗೌಡರನ್ನು ಕರೆತಂದು ಟಿಕೆಟ್ ಕೊಡುವ ಪ್ರಯತ್ನಗಳು ನಡೆದಿವೆ.ಅದೇ ರೀತಿ ಶ್ರೀರಂಗಪಟ್ಟಣ, ಗಂಗಾವತಿ ಸೇರಿ ಇತರೆ ಕ್ಷೇತ್ರಗಳಲ್ಲೂ ಪರ್ಯಾಯ ಅಭ್ಯರ್ಥಿಗಳ ಹುಡುಕಾಟ ನಡೆದಿದೆ.
ಹಾಲಿಗಳಿಗೆಲ್ಲಾ ಟಿಕೆಟ್ , ದತ್ತಾಗೆ ಡೌಟ್
*ಬಸವಕಲ್ಯಾಣ- ಮಲ್ಲಿಕಾರ್ಜುನ ಖೂಬಾ
*ರಾಯಚೂರು-ಡಾ.ಶಿವರಾಜ್ ಪಾಟೀಲ್
*ಲಿಂಗಸಗೂರು-ಮಾನಪ್ಪ ವಜ್ಜಲ್
*ಹರಿಹರ- ಎಚ್.ಎಸ್.ಶಿವಶಂಕರ್
*ಶಿವಮೊಗ್ಗ ಗ್ರಾಮಾಂತರ- ಶಾರಧಾ ಪೂರ್ಯ ನಾಯಕ್
*ಭದ್ರಾವತಿ-ಅಪ್ಪಾಜಿ
*ಸೊರಬ-ಮಧು ಬಂಗಾರಪ್ಪ
*ಮೂಡಿಗೆರೆ- ಬಿ.ಬಿ.ನಿಂಗಯ್ಯ
*ಕಡೂರು-ವೈಎಸ್‌ವಿ ದತ್ತ, ಧರ್ಮೇಗೌಡ/ಭೋಜೇಗೌಡ
*ಚಿಕ್ಕನಾಯಕನಹಳ್ಳಿ
*ತುರುವೇಕೆರೆ- ಎಂ.ಟಿ.ಕೃಷ್ಣಪ್ಪ
*ಕುಣಿಗಲ್-ಡಿ.ನಾಗರಾಜಯ್ಯ
*ಕೊರಟಗೆರೆ-ಸುಧಾಕರ್ ಲಾಲ್
*ಗುಬ್ಬಿ-ವಾಸು
*ಪಾವಗಡ-ತಿಮ್ಮರಾಯಪ್ಪ
*ಶಿಡ್ಲಘಟ್ಟ-ರಾಜಣ್ಣ
*ಚಿಂತಾಮಣಿ-ಜಿ.ಕೆ.ಕೃಷ್ಣಾರೆಡ್ಡಿ
*ಮಾಲೂರು-ಮಂಜುನಾಥಗೌಡ
*ಮಹಾಲಕ್ಷ್ಮಿ ಲೇ ಔಟ್- ಗೋಪಾಲಯ್ಯ
*ದೇವನಹಳ್ಳಿ-ಪಿಳ್ಳಮುನಿಶಾಮಪ್ಪ
*ನೆಲಮಂಗಲ-ಡಾ.ಶ್ರೀನಿವಾಸಮೂರ್ತಿ
*ರಾಮನಗರ-ಎಚ್.ಡಿ.ಕುಮಾರಸ್ವಾಮಿ
*ಮದ್ದೂರು-ಡಿ.ಸಿ.ತಮ್ಮಣ್ಣ
*ಕೃಷ್ಣರಾಜಪೇಟೆ-ನಾರಾಯಣಗೌಡ
*ಶ್ರವಣಬೆಳಗೊಳ-ಸಿ.ಎನ್.ಬಾಲಕೃಷ್ಣ
*ಅರಸೀಕೆರೆ-ಶಿವಲಿಂಗೇಗೌಡ
*ಹಾಸನ-ಪ್ರಕಾಶ್
*ಹೊಳೇನರಸೀಪುರ-ಎಚ್.ಡಿ.ರೇವಣ್ಣ
*ಸಕಲೇಶಪುರ-ಎಚ್.ಕೆ.ಕುಮಾರಸ್ವಾಮಿ
*ಕೃಷ್ಣರಾಜನಗರ-ಸಾ.ರಾ.ಮಹೇಶ್
*ಹೆಗ್ಗಡದೇವನಗೋಟೆ- ಚಿಕ್ಕಮಾದು
*ಚಾಮುಂಡೇಶ್ವರಿ-ಜಿ.ಟಿ.ದೇವೇಗೌಡ
*ನವಲಗುಂದ- ಕೋನರೆಡ್ಡಿ
ಸಂಭವನೀಯ ಅಭ್ಯರ್ಥಿಗಳು
*ಕಾಗವಾಡ-ಶ್ರೀಮಂತ ಪಾಟೀಲ್
*ದೇವರಹಿಪ್ಪರಗಿ-ಎ.ಎಸ್.ಪಾಟೀಲ್ ನಡಹಳ್ಳಿ
*ಬೀದರ್ ದಕ್ಷಿಣ-ಬಂಡೆಪ್ಪ ಕಾಶಂಪುರ್
*ಶಿವಮೊಗ್ಗ-ಶ್ರೀಕಾಂತ್
*ಶ್ರೀಂಗೇರಿ-ಎಚ್.ಜಿ. ವೆಂಕಟೇಶ್
*ತಿಪಟೂರು-ಲೋಕೇಶ್ವರ್
*ತುಮಕೂರು-ಗೋವಿಂದರಾಜ್
*ತುಮಕೂರು ಗ್ರಾಮಾಂತರ-ಗೌರಿಶಂಕರ
*ಸಿರಾ-ಸತ್ಯನಾರಾಯಣ
*ಮಧುಗಿರಿ-ವೀರಭದ್ರಯ್ಯ
*ಗೌರಿಬಿದನೂರು-ಜೈಪಾಲ್‌ರೆಡ್ಡಿ
*ಬಾಗೇಪಲ್ಲಿ-ಹರೀಂದ್ರನಾಥ್ ರೆಡ್ಡಿ
*ಚಿಕ್ಕಬಳ್ಳಾಪುರ-ಬಚ್ಚೇಗೌಡ
*ಶ್ರೀನಿವಾಸಪುರ-ವೆಂಕಟಶಿವಾರೆಡ್ಡಿ
*ಮುಳಬಾಗಿಲು-….ಮುನಿಆಂಜನಪ್ಪ
*ಕೆಜಿಎಫ್- ಭಕ್ತವತ್ಸಲಂ
*ಕೋಲಾರ-ಶ್ರೀನಿವಾಸಗೌಡ/ ರಾಮರಾಜು/ಮುಬಾರಕ್
*ಯಲಹಂಕ-ಜಿ.ಹನುಮಂತೇಗೌಡ
*ಯಶವಂತಪುರ-ಟಿ.ಎನ್.ಜವರಾಯಿಗೌಡ
*ಹೆಬ್ಟಾಳ-ಹನುಮಂತೇಗೌಡ
*ಸರ್ವಜ್ಞನಗರ-ಸೈಯದ್ ಮೊಹಿದ್ದೀನ್ ಅಲ್ತಾಫ್/ಎಚ್.ಎಂ.ರಮೇಶ್‌ಗೌಡ
*ಶಾಂತಿನಗರ-ವಾಸುದೇವಮೂರ್ತಿ
*ಬಸವನಗುಡಿ-ಬಾಗೇಗೌಡ
*ಬಿಟಿಎಂ ಲೇ ಔಟ್-ದೇವದಾಸ್
*ದೊಡ್ಡಬಳ್ಳಾಪುರ-ಮುನೇಗೌಡ
*ಕನಕಪುರ-ವ್ವಿನಾಥ್
*ಚೆನ್ನಪಟ್ಟಣ-ಅಶ್ವಥ್/ಲಿಂಗೇಶ್‌ಕುಮಾರ್/ಜಯಮುತ್ತು
*ಮಳವಳ್ಳಿ-ಡಾ.ಅನ್ನಾದಾನಿ
*ಮಂಡ್ಯ-ಎಂ.ಶ್ರೀನಿವಾಸ್
*ಅರಕಲಗೂಡು-ಎ.ಟಿ.ರಾಮಸ್ವಾಮಿ
*ಬೇಲೂರು-ಪ್ರಜ್ವಲ್
*ಪಿರಿಯಾಪಟ್ಟಣ-ಮಹದೇವ್
*ನರಸಿಂಹರಾಜ-ಸಂದೇಶಸ್ವಾಮಿ
*ಟಿ.ನರಸೀಪುರ-ಸುಂದರೇಶನ್
*ನಿಪ್ಪಾಣಿ-ಲಖನಗೌಡ ಯಲ್ಲಾಗೌಡ ಪಾಟೀಲ್
*ಚಿಕ್ಕೋಡಿ-ಡಾ.ಅಪ್ಪಣ್ಣ ಮಗದಮ್
*ಆಥಣಿ-ಭೂತಾಳೆ
*ಕುಡಚಿ-ಶಾಂತರಸಣ್ಣಕ್ಕಿ
*ರಾಯಭಾಗ್-ಬಾಬು ಶಂಕರ್ ಬೆಳವಾಡಿ
*ಅರಭಾವಿ-ಹಿಟ್ಟಂಗಿ
*ಬೆಳಗಾವಿ ಉತ್ತರ-ಧರ್ಮರಾಜ್
*ಬೆಳಗಾವಿದಕ್ಷಿಣ-ಬಸವರಾಜ್ ಜವೇಲಿ
*ಬೆಗಾವಿ ಗ್ರಾಮೀಣ-ಅಶೋಕ್ ಗಾಂವ್‌ಕರ್
*ಬೈಲಹೊಂಗಲ-ಶಂಕರ ಮದಲಗಿ
*ರಾಮದುರ್ಗ-ಎಫ್.ಐ.ಪಾಟೀಲ್
*ಕನಕಗಿರಿ-ಪ್ರಕಾಶ್ ರಾಥೋಡ್
*ಯಲಬುರ್ಗ-ಜಿ.ಟಿ.ಪಂಪಾಪತಿ
*ಕೊಪ್ಪಳ-ಪ್ರದೀಪ್‌ಗೌಡ
*ಗದಗ-ಕುಂದಕೊಟ್ಟಿಮs…
*ಕುಂದಗೋಳ್-ಮಲ್ಲಿಕಾರ್ಜುನ ಅಕ್ಕಿ
*ಹುಬ್ಬಳ್ಳಿ-ಧಾರವಾಡ ಪೂರ್ವ-ಹಲ್ಕೋಡ್ ಹನುಮಂತಪ್ಪ
*ಹುಬ್ಬಳ್ಳಿ-ಧಾರವಾಡ ಸೆಂಟ್ರಲ್-ತಬರೇಜ್
*ಕಾರವಾರ-ಡಾ.ಸಂಜುನಾಯಕ್
*ಸಿರಸಿ-ಶಶಿಭೂಷಣ ಹೆಗಡೆ
*ಶಿಗ್ಗಾಂವ್-ಡಾ.ಸುಮಂಗಲ ಕಡಪ
*ಹಾವೇರಿ-ಮೇಲಗಲಪರಮೇಶ್ವರ ತಿಪ್ಪಣ್ಣ
*ಹಿರೇಕೆರೂರ್-ಡಿ.ಎಂ.ಸಾಲಿ
*ರಾಜಾಜಿನಗರ-ಆನಂದ್
*ಪದ್ಮನಾಭನಗರ-ಗೋಪಾಲ್
*ಬೆಂಗಳೂರು ದಕ್ಷಿಣ-ಗೊಟ್ಟಿಗೆರೆ ಮಂಜು
*ಗಾಂಧಿನಗರ-ಡಿ.ಜಿ.ಚಕ್ರವರ್ತಿ ಅಲಿಯಾಸ್ ಸಕ್ರೆ
*ಜಯನಗರ-ಮುದ್ದುಕೃಷ್ಣ
*ಆನೇಕಲ್-ಕೇಶವ
*ರಾಜರಾಜೇಶ್ವರಿನಗರ-ಪ್ರಕಾಶ್
*ದಾಸರಹಳ್ಳಿ-ಬೆಮೆಲ್ ಕಾಂತರಾಜ್/ಅಂದಾನಪ್ಪ/ರಂಗನಾಥ್
ಕಾಂಗ್ರೆಸ್‌ನಿಂದ ಬಂದ್ರೆ
*ನಾಗಮಂಗಲ-ಶಿವರಾಮೇಗೌಡ
*ಶ್ರೀರಂಗಪಟ್ಟಣ-ಆಂಬರೀಷ್
*ಮಾಗಡಿ-ಎ.ಮಂಜು, ಜೇಡರಹಳ್ಳಿ ಕೃಷ್ಣಪ್ಪ
– ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS ರಾಮನಗರದಿಂದಲೂ ಔಟ್: ‘ಮೈತ್ರಿ’ಗೂ ಲಾಭ ತಂದು ಕೊಡದ ದಳ
Vikram Gowda Case: ವಿಕ್ರಂ ಗೌಡ ಎನ್‌ಕೌಂಟರ್; ತನಿಖೆ ಚುರುಕು
Karnataka Congress; ‘ಭ್ರಷ್ಟ’ಆರೋಪ ಮಧ್ಯೆ ವಿಪಕ್ಷಗಳಿಗೆ ಮರ್ಮಾಘಾತ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
BJP ಸಂಘಟನೆ, ತಂತ್ರಗಾರಿಕೆಯಲ್ಲಿ ವಿಫಲ: ವಿಜಯೇಂದ್ರ ಮೇಲೂ ಪರಿಣಾಮ?
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Perth test: ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿ ಅನುಮಾನ: ಏನಿದು ವಿವಾದ?
Chikkamagaluru: ಸರ್ಕಾರಿ ಬಸ್-ಲಾರಿ ಮುಖಾಮುಖಿ ಡಿಕ್ಕಿ; ಹಲವರಿಗೆ ಗಾಯ
Perth Test: ಜೈಸ್ವಾಲ್ ಶತಕದಾಟ; ರಾಹುಲ್ ಜತೆ ದಾಖಲೆಯ ಜೊತೆಯಾಟ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.