ಅಭ್ಯರ್ಥಿಗಳು ಇಷ್ಟವಾಗದಿದ್ದರೆ ನೋಟಾ ಚಲಾಯಿಸಿ
Team Udayavani, Apr 12, 2018, 6:45 AM IST
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ “ನೋಟಾ’ ಆಯ್ಕೆ ಮಾಡಿಕೊಳ್ಳ ಬಯಸುವವರಿಗೆ ಯಾವುದೇ ಗೊಂದಲಗಳು ಇರಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗ “ನೋಟಾ’ಗೂ ಪ್ರತ್ಯೇಕ ಚಿಹ್ನೆ ಕೊಟ್ಟಿದೆ. ಪೋಸ್ಟಲ್ ಬ್ಯಾಲೆಟ್ ಮತ್ತು ಇವಿಎಂನ ಬ್ಯಾಲೆಟ್ ಯೂನಿಟ್‌ನಲ್ಲಿ ಕೊನೆಯ ಅಭ್ಯರ್ಥಿಯ ನಂತರ ನೋಟಾ ಚಿಹ್ನೆ ಇರುತ್ತದೆ.
ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಬ್ಬ ಪ್ರಜೆಗೆ ಇರುವ ಪ್ರಬಲ ಅಸ್ತ್ರ. ಪ್ರತಿಯೊಬ್ಬರು ಈ ಅಸ್ತ್ರವನ್ನು ಅತ್ಯಂತ ಜಾಗೃತ ಮತ್ತು ಜವಾಬ್ದಾರಿಯಿಂದ ಬಳಸಬೇಕು. ಮತದಾನ ಪ್ರತಿಯೋವ9ನ ಹಕ್ಕು ಮತ್ತು ಹೊಣೆಗಾರಿಕೆಯಾಗಿದೆ, ಆದರೆ ಈ ಹಕ್ಕು ನಿರಾಕರಿಸುವ ಅವಕಾಶವನ್ನೂ ಚುನಾವಣಾ ಆಯೋಗ ಪ್ರತಿಯೊಬ್ಬ ನಾಗರಿಕನಿಗೆ ಕೊಟ್ಟಿದೆ, ಆದರೆ, ಪ್ರತಿಯೊಬ್ಬರು ಮತ ಚಲಾಯಿಸಬೇಕು. ಪ್ರತಿಯೊಂದು ಮತ ತನ್ನ ಮೌಲ್ಯಗಳಿಸಿಕೊಳ್ಳಬೇಕು ಅನ್ನುವುದು ಉದಯವಾಣಿ ಕಾಳಜಿ. ಓಟು ಹಾಕೋದು ಬೇಡ ಅನ್ನುವವರಿಗೆ ನೋಟಾ’ ಅವಕಾಶ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಾರಿಯ ವಿಧಾನಸಬೆ ಚುನಾವಣೆಯಲ್ಲಿ ನೋಟಾ’ ಆಯ್ಕೆ ಮಾಡಿಕೊಳ್ಳಬಯಸುವವರಿಗೆ ಯಾವುದೇ ಗೊಂದಲಗಳು ಇರಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗ ನೋಟಾ’ಗೂ ಪ್ರತ್ಯೇಕ ಚಿನ್ಹೆ ಕೊಟ್ಟಿದೆ. ಪೋಸ್ಟಲ್ ಬ್ಯಾಲೆಟ್ ಮತ್ತು ಇವಿಎಂನ ಬ್ಯಾಲೆಟ್ ಯೂನಿಟ್ ನಲ್ಲಿ ಕೊನೆಯ ಅಭ್ಯರ್ಥಿಯ ನಂತರ ನೋಟಾ ಚಿನ್ಹೆ ಇರುತ್ತದೆ.
ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ನೋಟಾ ಚಿನ್ಹೆ ಬಳಕೆಯಾಗುತ್ತಿದೆ. ಅದರಂತೆ ಪೋಸ್ಟಲ್ ಪೇಪರ್ ಬ್ಯಾಲೆಟ್‌ಗಳ ಜೊತೆಗೆ ಇವಿಎಂನ ಬ್ಯಾಲೆಟ್ ಯೂನಿಟ್ ಮತ್ತು ವಿವಿಪ್ಯಾಟ್ ಗಳಲ್ಲಿ ನೋಟಾ ಬಟನ್ ಜೊತೆಗೆ ಚಿನ್ಹೆಯು ಇರಲಿದೆ. ಈ ನೋಟಾ ಚಿನ್ಹೆ ನ್ಯಾಷನಲ್ ಇನ್ಸಿಟಿಟ್ಯೂಟ್ ಆಪ್ ಡಿಸೈನ್ ಸಿದ್ದಪಡಿಸಿದೆ. ಮತದಾನದ ಮುಂಚೆ ಮತ್ತು ಮತದಾನದ ದಿನ ನೋಟಾ ಚಿನ್ಹೆಯ ಬಗ್ಗೆ ಮತದಾರರಲ್ಲಿ ತಿಳುವಳಿಕೆ ಮೂಡಿಸುವ ಕೆಲಸ ಚುನಾವಣಾ ಆಯೋಗ ಮಾಡಲಿದೆ.
ನೋಟಾ ಗೆ ಅವಕಾಶ ಕೊಡಬೇಕು ಎಂದು ಪೀಪಲ್ಸ್ ಯೂನಿಯನ್ ಪಾರ್ ಸಿವಿಲ್ ಲಿಬಟಿ9ಸ್ 2004ರಲ್ಲಿ ಸುಪ್ರೀಂ ಕೋಟ್9ಗೆ ಅಜಿ9 ಸಲ್ಲಿಸಿತ್ತು. ನೋಟಾ ಗೆ ಅವಕಾಶ ನೀಡಿ 2013ರಲ್ಲಿ ಸುಪ್ರೀಂಕೋಟ್9 ತೀಪು9 ನೀಡಿತ್ತು. ಆಗಿನಿಂದ ನೋಟಾಗೆ ಅವಕಾಶ ನೀಡಲಾಗಿತ್ತು. ಆಗ ಕೇವಲ ನೋಟಾ ಬಟನ್ ಇರುತ್ತಿತ್ತು. 2015ರಲ್ಲಿ ಚುನಾವಣಾ ಆಯೋಗ ನೋಟಾ ಅಯ್ಕೆಗೂ ಚಿನ್ಹೆ ರೂಪಿಸಿತು, 2015ರ ಬಳಿಕ ವಿಧಾನಸಬೆ ಚುನಾವಣೆ ನಡೆಯುತ್ತಿರುವುದರಿಂದ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ನೋಟಾ ಚಿನ್ಹೆ ಬಳಕೆಯಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.