![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Feb 12, 2019, 12:40 AM IST
ಬೆಂಗಳೂರು: ‘ನಾವು ತನಿಖೆಗೆ ಸಿದ್ದರಿದ್ದೇವೆ. ತನಿಖೆ ಕಾರಣಕ್ಕೆ ಓಡಿ ಹೋಗುತ್ತಿಲ್ಲ. ಆದರೆ ಸರ್ಕಾರವೇ ಅಪರಾಧಿ ಸ್ಥಾನದಲ್ಲಿ ನಿಂತಿದ್ದು, ಮುಖ್ಯಮಂತ್ರಿಗಳೇ ಮೊದಲ ಅಪರಾಧಿಯಾಗಿರುವಾಗ ಅವರ ಕೈಕೆಳಗಿನ ಸಂಸ್ಥೆಗಳು ತನಿಖೆ ನಡೆಸುವುದು ಸೂಕ್ತವಲ್ಲ ಎಂಬುದು ನಮ್ಮ ಹಾಗೂ ಜನರ ಅಪೇಕ್ಷೆ ಎಂದು ಭಾವಿಸಿದ್ದೇನೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಧಾನಸಭೆಯಲ್ಲಿ ಸೋಮವಾರ ಇಡೀ ದಿನ ಸುದೀರ್ಘ ಚರ್ಚೆ ವೇಳೆ ಮೌನವಾಗಿದ್ದ ಅವರು ಕಲಾಪ ಮುಗಿದ ಬಳಿಕ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಸೋಮವಾರ ಸದನದೊಳಗೆ ಸಭಾಧ್ಯಕ್ಷರೊಂದಿಗೆ ಬಹಳ ಗೌರವದಿಂದ ನಡೆದುಕೊಂಡಿದ್ದೇವೆ. ಎಲ್ಲ ಘಟನೆಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ಪ್ರೇರಣೆ ನೀಡಿದ್ದಾರೆ. ರಾತ್ರಿ 12.30ಕ್ಕೆ ಅವರೇ ಕಳುಹಿಸಿಕೊಟ್ಟು, ಗೊಂದಲ ಸೃಷ್ಟಿಸಿ ಅಲ್ಲಿಂದಲೇ ರೆಕಾರ್ಡ್ ಮಾಡಿದ್ದಾರೆ. ಬಳಿಕ ಬಜೆಟ್ ಮಂಡನೆಗೂ ಮುನ್ನ ಮಾಧ್ಯಮ ಗೋಷ್ಠಿಯಲ್ಲಿ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ. ನೀಡಲು ಯಾರೋ ಹೊರಟಿದ್ದರು ಎಂದು ಹೇಳುವ ಮೂಲಕ ಕುಮಾರಸ್ವಾಮಿಯವರು ಸಭಾಧ್ಯಕ್ಷರನ್ನು ಅಪಮಾನ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು.
ಹೀಗಾಗಿ ಮುಖ್ಯಮಂತ್ರಿಗಳ ಕೈಕೆಳಗೆ ಯಾವುದೇ ತನಿಖೆಯಾಗುವುದನ್ನು ನಾಡಿನ ಆರೂವರೆ ಕೋಟಿ ಜನ ಒಪ್ಪುವುದಿಲ್ಲ. ನಾವು ತನಿಖೆಗೆ ಸಿದ್ಧರಿದ್ದೇವೆ. ಆದರೆ ಸದನ ಸಮಿತಿ ರಚಿಸಲಿ, ಇಲ್ಲವೇ ನ್ಯಾಯಾಂಗ ತನಿಖೆ ಮಾಡಿಸಲಿ ಎಂದು ಒತ್ತಾಯಿಸಿದ್ದೇವೆ. ಮಂಗಳವಾರವೂ ಪಕ್ಷ ಇದೇ ನಿಲುವು ತೆಗೆದುಕೊಳ್ಳಲಿದೆ ಎಂದು ತಿರುಗೇಟು ನೀಡಿದರು. ಮಂಗಳವಾರವೂ ಸಭಾಧ್ಯಕ್ಷರಿಗೆ ನಮ್ಮ ನಿಲುವನ್ನು ಸ್ಪಷ್ಟಪಡಿಸಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಿ. ತರಾತುರಿಯಲ್ಲಿ ಈ ರೀತಿಯ ತನಿಖೆ ಮಾಡಬಾರದು ಎಂಬುದು ನಮ್ಮ ಅಪೇಕ್ಷೆ ಎಂಬುದನ್ನು ಮನವರಿಕೆ ಮಾಡಿಕೊಡಲು ಪ್ರಯತ್ನಿ
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.