ಚರ್ಚೆಗೆಡೆಯಾದ “ಕಾಂಗ್ರೆಸ್ ಕಸ’
Team Udayavani, Jun 8, 2017, 11:07 AM IST
ವಿಧಾನ ಪರಿಷತ್ತು: ಕ್ರೀಡಾಂಗಣ ವೊಂದರಲ್ಲಿ ಕಾಂಗ್ರೆಸ್ ಕಸ ಬೆಳೆದು ನಿರ್ವಹಣೆಯಿಲ್ಲದೆ ಸೊರಗಿದೆ ಎಂಬ ವಿಚಾರ ಮೇಲ್ಮನೆಯಲ್ಲಿ ಬುಧವಾರ ಸ್ವಾರಸ್ಯಕರ ಚರ್ಚೆಗೆ ನಾಂದಿ ಹಾಡಿತು.
ಬಿಜೆಪಿಯ ಎಸ್.ವಿ. ಸಂಕನೂರ ಅವರು ಹಾವೇರಿ ಜಿಲ್ಲೆಯ ಹಿರೇಕೆರೂರ ಪಟ್ಟಣದ ಕ್ರೀಡಾಂಗಣದಲ್ಲಿ ಜಾಲಿಗಿಡ, ಕಾಂಗ್ರೆಸ್ ಕಸ ಹಾಗೂ ವಿವಿಧ ಗಿಡಗಂಟಿ ಬೆಳೆದು ಕಿಡಿಗೇಡಿಗಳ ಜೂಜಾಟ, ಅನೈತಿಕ ಚಟುವಟಿಕೆ ತಾಣವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.ಆಗ ಜೆಡಿಎಸ್‌ನ ಬಸವರಾಜ ಹೊರಟ್ಟಿ, “ನೋಡ್ರೀ ಅದೇನೋ ಕಾಂಗ್ರೆಸ್ ಕಸ ಎನ್ನುತ್ತಿದ್ದಾರೆ’ ಎಂದು ಕಾಂಗ್ರೆಸ್ ಸದಸ್ಯರನ್ನು ಪ್ರಚೋದಿಸಿದರು.
ತಕ್ಷಣವೇ ಎದ್ದುನಿಂತ ಕಾಂಗ್ರೆಸ್‌ನ ನಾರಾಯಣಸ್ವಾಮಿ, “ಕಾಂಗ್ರೆಸ್ ಕಸ ಎನ್ನುವುದು ಸರಿಯಲ್ಲ. ಕಾಂಗ್ರೆಸ್ ಗಿಡ ಎಂದು ಹೇಳಿ’ ಎಂದು ತಾಕೀತು ಮಾಡಿದರು. ಇದಕ್ಕೆ ದನಿಗೂಡಿಸಿದ ಕಾಂಗ್ರೆಸ್‌ನ ಎಚ್.ಎಂ.ರೇವಣ್ಣ, “ಕಾಂಗ್ರೆಸ್ ಕಸವಲ್ಲ, ಕಾಂಗ್ರೆಸ್ ಗಿಡ ಎಂಬುದಾಗಿ ಬಳಕೆಯಲ್ಲಿರುವ ಪದ ಪ್ರಯೋಗಿಸಿ’ ಎಂದರು.
ಅದಕ್ಕೆ ಬಸವರಾಜ ಹೊರಟ್ಟಿ, “ನಮ್ಮ ಕಡೆ ಕಾಂಗ್ರೆಸ್ ಕಸ ಎಂದೇ ಕರೆಯುತ್ತಾರೆ’ ಎಂದು ನಗಲಾರಂಭಿಸಿದರು. ಕಾಲೆಳೆದ ಪುಟ್ಟಸ್ವಾಮಿ: ಬಳಿಕ ಕಾಂಗ್ರೆ ಸ್‌ನ ವಿ.ಎಸ್.ಉಗ್ರಪ್ಪ, “ಕಾಂಗ್ರೆಸ್ ಪಕ್ಷ ಹೇಗೋ ಹಾಗೆ ಕಾಂಗ್ರೆಸ್ ಗಿಡ. ಯಾರೂ ಅದನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಕಸ ಏನಿದ್ದರೂ ಬಿಜೆಪಿ ಪಕ್ಷದ ಕಚೇರಿಯಲ್ಲಿ’ ಎಂದರು.
ಆಗ ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ,”ಆ ಕಾರಣಕ್ಕೆ ಜನರೇ ಕಾಂಗ್ರೆಸ್ ಗಿಡ ಕಿತ್ತು ಬೆಂಕಿ ಹಾಕುತ್ತಿದ್ದಾರೆ’ ಎಂದು ಕಾಲೆಳೆದರು. ಇದಕ್ಕೆ ಸಚಿವ ಪ್ರಮೋದ್ ಮಧ್ವರಾಜ್, ಬೆಂಕಿ ಹಾಕುವವರು ಬಿಜೆಪಿಯವರು ಎಂದು ಕಿಚಾಯಿಸಿದರು. ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಸದಸ್ಯರನ್ನು ಸಮಾಧಾನ ಪಡಿಸಿದ್ದರಿಂದ ಮತ್ತೆ ಪ್ರಶ್ನೋತ್ತರ ಚರ್ಚೆಗೆ ಸದನ ಮರಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್
Illegal Property Case: ಸಚಿವ ಜಮೀರ್ ಅಹ್ಮದ್‌ಖಾನ್‌ಗೆ ಲೋಕಾಯುಕ್ತದಿಂದ ನೋಟಿಸ್
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.