ಜನ್ಮಾಂತರದ ಕಥೆ ಕಟ್ಟಿ ವಂಚಿಸಿದ ಜ್ಯೋತಿಷಿ ಸೆರೆ!
Team Udayavani, Aug 22, 2019, 3:05 AM IST
ಬೆಂಗಳೂರು: “ಕಳೆದ ಮೂರು ಜನ್ಮದಲ್ಲೂ ನೀನು ನನ್ನ ಪತ್ನಿಯಾಗಿದ್ದೆ’ ಎಂದು ಲೆಕ್ಕಪರಿಶೋಧಕ ಯುವತಿಯನ್ನು ನಂಬಿಸಿ ಆಕೆಯಿಂದಲೇ 30 ಲಕ್ಷ ರೂ. ಪಡೆದ ಜ್ಯೋತಿಷಿಗೆ ಮಹಿಳಾ ಸಂಘಟನೆಗಳ ಸದಸ್ಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೊಪ್ಪಿಸಿರುವ ಘಟನೆ ಹನುಮಂತನಗರದಲ್ಲಿ ನಡೆದಿದೆ.
ಶ್ರೀನಿವಾಸನಗರದ ಕೃಷ್ಣಚಾರ್ಯ ಥಳಿತಕ್ಕೆ ಒಳಗಾದ ಜ್ಯೋತಿಷಿ. ಆರೋಪಿ, ನಗರದಲ್ಲಿ ವಾಸವಾಗಿರುವ 26 ವರ್ಷದ ಲೆಕ್ಕಪರಿಶೋಧಕಿಯನ್ನು ವಂಚಿಸಲು ಮುಂದಾಗಿದ್ದ. ಅಷ್ಟರಲ್ಲಿ ಪೋಷಕರಿಂದ ಈ ವಿಚಾರ ತಿಳಿದ ಮಹಿಳಾ ಸಂಘಟನೆ ಸದಸ್ಯರು ಆರೋಪಿಯನ್ನು ಆತನ ಮನೆ ಬಳಿಯೇ ಹಿಡಿದು ಧಳಿಸಿ ಪೊಲೀಸರಿಗೊಪ್ಪಿಸಿದ್ದಾರೆ.
ಶ್ರೀನಿವಾಸನಗರದ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ಆರೋಪಿ, ಹಲವು ವರ್ಷಗಳಿಂದ ಜ್ಯೋತಿಷ್ಯ, ವಾಸ್ತು ದೋಷ ಸರಿ ಮಾಡುವುದಾಗಿ ಹೇಳಿಕೊಂಡು ಓಡಾಡುತ್ತಿದ್ದ. ಎರಡು ವರ್ಷಗಳ ಹಿಂದೆ ವಿಜಯನಗರದಲ್ಲಿರುವ ಯುವತಿಯ ಮನೆಗೆ ವಾಸ್ತು ದೋಷ ನೋಡಲು ಹೋಗಿದ್ದ. ಈ ವೇಳೆ ಮನೆಯಲ್ಲಿ ಯಾವುದೇ ಶುಭಕಾರ್ಯಗಳು ಆಗುವುದಿಲ್ಲ.
ಅದಕ್ಕಾಗಿ ಹೋಮಗಳನ್ನು ಮಾಡಬೇಕೆಂದು, ಎರಡು ವರ್ಷಗಳಿಂದ ಹತ್ತಾರು ಹೋಮಗಳನ್ನು ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಗೆ ಈಗಾಗಲೇ ಮದುವೆಯಾಗಿ ಒಂದು ಮಗು ಇದ್ದರೂ, ಯುವತಿಗೆ “ನನಗೂ ನಿನಗೂ ಮೂರು ಜನ್ಮಗಳ ಸಂಬಂಧವಿದೆ. ಜನ್ಮ ಜನ್ಮಾನಂತರದ ಅನುಬಂಧವಿದೆ. ಕಳೆದ ಜನ್ಮಗಳಲ್ಲಿ ನೀನು ನನ್ನ ಪತ್ನಿಯಾಗಿದ್ದೆ.
ಈ ಜನ್ಮದಲ್ಲಿ ಕಾರಣಾಂತರಗಳಿಂದ ದೂರ ಆಗಿದ್ದೇವೆ. ನೀನು ನನ್ನನ್ನು ಮದುವೆಯಾದರೆ ಮೋಕ್ಷ ದೊರೆಯುತ್ತದೆ. ಹೀಗಾಗಿ ನಿನಗೆ ಇನ್ನೂ ವಿವಾಹ ನಿಶ್ಚಯವಾಗುತ್ತಿಲ್ಲ’ ಎಂದು ನಂಬಿಸಿದ್ದಾನೆ. ಅಲ್ಲದೆ, ತನ್ನ ಮನೆಗೂ ಕರೆದುಕೊಂಡು ಹೋಗಿ ಪೂಜೆಗಳನ್ನು ನೆರವೇರಿಸಿದ್ದಾನೆ ಎಂದು ಮಹಿಳಾ ಸಂಘಟನೆಯವರು ಆರೋಪಿಸಿದ್ದಾರೆ.
30 ಲಕ್ಷ ರೂ. ಕೊಟ್ಟಿದ್ದರು: “ಕಳೆದ ಜನ್ಮದಲ್ಲಿ ನೀನೊಬ್ಬಳು ದೊಡ್ಡ ಭರತನಾಟ್ಯ ಕಲಾವಿದೆಯಾಗಿದ್ದೆ. ಆಗ ನಿನ್ನ ಸಾವಿಗೆ ನಾನೇ ಕಾರಣನಾಗಿದ್ದೆ. ನೀನು ನನ್ನ ಸ್ವತ್ತು’ ಎಂದಿದ್ದ ಆರೋಪಿ, ನಿಂಬೆಹಣ್ಣು, ಹೆಣ್ಣಿನಗೊಂಬೆ, ಕರ್ಪೂರ ಇಟ್ಟುಕೊಂಡು ಕಚೇರಿಗೆ ಹೋಗುವಂತೆ ಯುವತಿಗೆ ಸೂಚಿಸಿದ್ದ ಎಂದು ಹೇಳಲಾಗಿದೆ. ಈ ನಡುವೆ ನಾನಾ ಕಾರಣಗಳನ್ನು ನೀಡಿ ಯುವತಿಯಿಂದ ಇದುವರೆಗೆ 30 ಲಕ್ಷ ರೂ.ಗಳನ್ನು ಆರೋಪಿ ಪಡೆದಿದ್ದಾನೆ. ಆಕೆ ಹೆಸರಿನಲ್ಲಿ ಕೆಲ ಬ್ಯಾಂಕ್‌ನಲ್ಲಿ ಸಾಲ ಕೊಡ ಪಡೆದುಕೊಂಡಿದ್ದ ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.
ಪುತ್ರಿಯ ವರ್ತನೆ ಕಂಡು ವಿಚಾರಿಸಿದಾಗ ಆಕೆ ಜ್ಯೋತಿಷಿ ಬಗ್ಗೆ ಹೇಳಿದ್ದರು. ನಂತರ ಮಹಿಳಾ ಸಂಘಟನೆಗಳ ನೆರವು ಕೋರಿದ್ದು, ಸಂಘಟನೆ ಸದಸ್ಯರು ಆರೋಪಿ ಬಳಿ ಹೋಗಿ ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದ. ಇದರಿಂದ ಆಕ್ರೋಶಗೊಂಡ ಸದಸ್ಯರು, ಆತನ ಥಳಿಸಿ ಪೊಲೀಸರಿಗೊಪ್ಪಿಸಿದ್ದಾರೆ. ಈ ಕೃತ್ಯಕ್ಕೆ ಆರೋಪಿಯ ಪತ್ನಿ ಕೂಡ ಸಹಕಾರ ನೀಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Birthday Party: ಬರ್ತ್‌ಡೇ ಪಾರ್ಟಿ ಮುಗಿಸಿ ಬರುತ್ತಿದ್ದ ಮೂವರನ್ನು ಗುಂಡಿಕ್ಕಿ ಹ*ತ್ಯೆ…
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.