ಐಐಎಸ್ಸಿಯಲ್ಲಿ “ಜೋತಿಷ್ಯ ಶಾಸ್ತ್ರ’ ಕಾರ್ಯಾಗಾರ ರದ್ದು
Team Udayavani, Oct 30, 2017, 11:41 AM IST
ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನವೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ ಜೋತಿಷ್ಯ ಶಾಸ್ತ್ರ ಕಾರ್ಯಾಗಾರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಾಗಾರವನ್ನು ರದ್ದುಪಡಿಸಲಾಗಿದೆ. ಜೋತಿಷ್ಯ ಎಂಬುದು ಕೇವಲ ನಂಬಿಕೆಯಾಗಿದ್ದು, ಅದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ಆಧಾರಗಳಿಲ್ಲ.
ಹೀಗಿರುವಾಗ ಐಐಎಸ್ಸಿಯಲ್ಲಿ ಕಾರ್ಯಾಗಾರ ಹಮ್ಮಿಕೊಂಡಿರುವುದಕ್ಕೆ ವಿಚಾರವಾದಿಗಳು, ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಕೆಲ ಸಿಬ್ಬಂದಿ ಐಐಎಸ್ಸಿ ನಿರ್ದೇಶಕ ಅನುರಾಗ್ ಕಶ್ಯಪ್ ಅವರಿಗೆ ಪತ್ರ ಬರೆದಿದ್ದರು. ಆ ಹಿನ್ನೆಲೆಯಲ್ಲಿ ಕಾರ್ಯಾಗಾರ ರದ್ದುಪಡಿಸಲಾಗಿದೆ ಎಂದು ಹಳೆಯ ವಿದ್ಯಾರ್ಥಿಗಳ ಸಂಘ ಶನಿವಾರ ತಿಳಿಸಿದೆ.
ದೇಶದಲ್ಲಿ ವೈಜ್ಞಾನಿಕ ಆಲೋಚನೆ ಎಂಬುದು ಆಪಾಯದ ಸ್ಥಿತಿಯಲ್ಲಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಜ್ಞಾನಿಗಳಿಂದಲೇ ತುಂಬಿರುವ ಐಐಎಸ್ಸಿಯಲ್ಲಿ ಜೋತಿಷ್ಯ ಕಾರ್ಯಾಗಾರ ಹಮ್ಮಿಕೊಳ್ಳುವುದು ಸಮಂಜಸವಲ್ಲ. ಈ ಹಿಂದೆ ನಮ್ಮದೇ ಸಂಘದ ಕೆಲ ಸದಸ್ಯರು ಕಾರ್ಯಾಗಾರ ಆಯೋಜಿಸುವ ಕುರಿತು ಪ್ರಸ್ತಾಪಿಸಿದ್ದರಾದರೂ, ಅದಕ್ಕೆ ಸಂಘದ ಒಪ್ಪಿಗೆ ಸಿಕ್ಕಿರಲಿಲ್ಲ.
ಆದರೂ ಕಾರ್ಯಾಗಾರ ಆಯೋಜನೆಗೆ ಸಂಘ ಮುಂದಾಗುವ ಮೂಲಕ ಪ್ರಮಾದ ಎಸಗಿದೆ ಎಂದು ಸಂಘದ ಉಪಾಧ್ಯಕ್ಷ ದೂರಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯನಿರ್ವಾಹಕ ಮಂಡಳಿ ಈ ಕಾರ್ಯಾಗಾರವನ್ನು “ಆಸ್ಟ್ರಾಲಜಿ ಆ್ಯಸ್ ಎ ಸೈಂಟಿಫಿಕ್ ಟೂಲ್ ಫಾರ್ ಇಂಡುವಿಷ್ಯುಯಲ್ ಪ್ರೊಗ್ರೆಸ್’ ಎಂಬ ಘೋಷ ವಾಕ್ಯದಡಿಯಲ್ಲಿ ಆಯೋಜಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.