ಸ್ತ್ರೀಯರು ಸುರಕ್ಷಿತವಾಗಿದ್ದರೆ ಅದೇ ಸ್ಮಾರ್ಟ್ ಸಿಟಿ!
Team Udayavani, Apr 18, 2017, 12:02 PM IST
ಬೆಂಗಳೂರು: ಮೂಲಭೂತ ಸೌಕರ್ಯ ಅಭಿವೃದ್ಧಿ ಮತ್ತು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡದರೆ ಯಾವುದೇ ನಗರವನ್ನು ಸ್ಮಾರ್ಟ್ ಸಿಟಿಯನ್ನಾಗಿ ಮಾಡಬಹುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್‌ಚಂದ್ರ ಕುಂಟಿಯಾ ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಹನ್ಸ್ ಸೇಡೆಲ್ ಫೌಂಡೇಶನ್ ಸಹಯೋಗದೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ಸುರಕ್ಷಿತ ನಗರವೇ ಸ್ಮಾರ್ಟ್ ಸಿಟಿ’ ಎಂಬ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಇಲಾಖೆಗಳ ಸಹಕಾರ ದೊರೆತರೆ ಬೆಂಗಳೂರು ನಗರವನ್ನು ಸ್ಮಾರ್ಟ್ ಮತ್ತು ಸೇಫ್ ಸಿಟಿ ಮಾಡಬಹುದು ಎಂದರು.
ರಾಜ್ಯ ಸರ್ಕಾರ ಮಹಿಳಾ ಸುರಕ್ಷತೆಗಾಗಿ “ಸುರಕ್ಷಾ’ ಎಂಬ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಮಹಿಳೆಯರು ಈ ಆ್ಯಫ್ನ ಬಟನ್ ಒತ್ತಿದ ಹತ್ತು ನಿಮಿಷದಲ್ಲಿ ಪಿಂಕ್ ಹೊಯ್ಸಳ ಬಂದು ಮಹಿಳೆಯರನ್ನು ರಕ್ಷಿಸುತ್ತದೆ ಎಂದು ತಿಳಿಸಿದರು.
ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾದ ಮೀರಾ ಸಕ್ಸೇನಾ ಮಾತನಾಡಿ, ಅಯೋಗವು ಸಾರ್ವಜನಿಕರ ಮಹಿಳೆಯರ ರಕ್ಷಣೆಗೆ ಹೋರಾಡುತ್ತಿದೆ. ಆಹಾರ ಸುರಕ್ಷತೆ, ವಸತಿ, ಶಿಕ್ಷಣದಿಂದ ಮನುಷ್ಯನ ಜೀವನ ಮಟ್ಟ ಸುಧಾರಿಸುತ್ತದೆ. ಆದರೆ, ಸಮಾಜದಲ್ಲಿ ವರದಕ್ಷಿಣೆ, ಜೀತ ಪದ್ಧತಿ, ಅತ್ಯಾಚಾರ, ಮಾನವ ಕಳ್ಳ ಸಾಗಾಣೆಗಳು ಈಗಲೂ ಅಸ್ತಿತ್ವದಲ್ಲಿವೆ ಎಂದರು ಹೇಳಿದರು. ಸರ್ಕಾರ ಮಹಿಳೆ, ಮಕ್ಕಳು, ಅಂಗವಿಕಲರು, ಹಿರಿಯ ನಾಗರಿಕರು ಹಾಗೂ ಮಂಗಳ ಮುಖೀಯರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಹೇಳಿದರು.
ಸುರಕ್ಷತೆಗೆ ಆದ್ಯತೆ: ಬೆಂಗಳೂರು ನಗರ ಹೆಚ್ಚುವರಿ ಪೊಲಿಸ್ ಆಯುಕ್ತ ಎಸ್. ರವಿ ವಿಷಯ ಮಂಡಿಸಿ, ಬೆಂಗಳೂರು ಸುರಕ್ಷಿತ ನಗರವನ್ನಾಗಿ ಮಾಡಲು ಪೊಲಿಸ್ ಇಲಾಖೆ ಎಲ್ಲ ರೀತಿಯ ಪ್ರಯತ್ನ ನಡೆಸುತ್ತಿದೆ. ನಗರದಲ್ಲಿ ಅಕ್ರಮ ಮಸಾಜ್ ಸೆಂಟರ್‌ಗಳು ಹಾಗೂ ಡ್ರಗ್ ಮಾಫಿಯಾ ತಡೆ ಗಟ್ಟುವುದೇ ದೊಡ್ಡ ಸವಾಲಾಗಿದೆ. ನಗರದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗೆ ಪೊಲಿಸ್ ಇಲಾಖೆ ಬೀಟ್ ವ್ಯವಸ್ಥೆಯನ್ನು ಬದಲಾಯಿಸಿದೆ.
259 ಹೊಯ್ಸಳ ವಾಹನಗಳ ಜತೆಗೆ ಮಹಿಳೆಯರ ರಕ್ಷಣೆಗಾಗಿ ವಿಶೇಷವಾಗಿ 51 ಪಿಂಕ್ ಹೊಯ್ಸಳ ವಾಹನಗಳು ಕಾರ್ಯ ನಿರ್ವಹಿಸುತ್ತಿವೆ. ಪೊಲಿಸ್ ಇಲಾಖೆ ತಂತ್ರಜ್ಞಾನವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ಸುರಕ್ಷಾ ಆಪ್ ಕೂಡ ಬಿಡುಗಡೆ ಮಾಡಿದೆ. ಆದರೆ, ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರದ ನಂತರ ಆರಂಭವಾದ ಹಿಮ್ಮತ್ ಆ್ಯಪ್ ಹೇಳಿಕೊಳ್ಳುವಷ್ಟು ಯಶಸ್ವಿಯಾಗಿಲ್ಲ. ಹಿಮ್ಮತ್ ಆ್ಯಪ್‌ಅನ್ನು 80 ಸಾವಿರ ಜನರು ಡೌನ್‌ಲೋಡ್ ಮಾಡಿಕೊಂಡಿದ್ದು, ಕೇವಲ 75 ಪ್ರಕರಣಗಳು ದಾಖಲಾಗಿವೆ.
ಅದರಲ್ಲಿ ಕೆಲವರು ಕೇವಲ ಪರೀಕ್ಷೆಗಾಗಿ ಬಳಸಿದ್ದು, ಕೇವಲ ಐವರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದರು. ಅಪರಾಧ ಮತ್ತು ವಂಚನೆಯ ಪ್ರಕರಣಗಳು ಕಡಿಮೆ ಇದ್ದಷ್ಟು ನಗರ ಸುಕರಿÒತ ಮತ್ತು ಸ್ಮಾರ್ಟ್ ಆಗಿರುತ್ತದೆ. ಅದಕ್ಕೆ ಸರ್ಕಾರದ ಇತರ ಇಲಾಖೆಗಳು ಮತ್ತು ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು. ವಿಚಾರ ಸಂಕಿರಣದಲ್ಲಿ ಕಾರ್ಮಿಕ ಇಲಾಖೆ ಆಯುಕ್ತರು, ಹೈಕೋರ್ಟ್ ವಕೀಲರು ವಿಷಯ ಮಂಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.