ಸೈಟ್‌ ಅಳತೆಯ ಜಾಗದಲ್ಲಿ ಕೃಷಿ 30ಸಾವಿರ ಗಳಿಕೆ


Team Udayavani, Mar 22, 2018, 12:23 PM IST

siat-alate.jpg

ಬೆಂಗಳೂರು: ಕೃಷಿ ತೊರೆದು ಯುವಕರು ಹಳ್ಳಿಗಳಿಂದ ನಗರದ ಕಡೆಗೆ ಮುಖಮಾಡುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಹಿಳೆಯೊಬ್ಬರು ಬೆಂಗಳೂರಿನಂತಹ ಮಹಾನಗರದಲ್ಲಿ ಕೇವಲ 30×40 ಅಡಿ ನಿವೇಶನದಲ್ಲಿ ಬೇಸಾಯ ಮಾಡಿ, ಪ್ರತಿ ತಿಂಗಳು 30ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ!

ಹೆಸರಘಟ್ಟದ ನಿವಾಸಿ ಕಮಲಾ ನರಸೀಪುರ 20 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಗಾರ್ಮೆಂಟ್‌ ಉದ್ಯೋಗ ತೊರೆದು, ಈಗ ಅಣಬೆ ಬೇಸಾಯದಲ್ಲಿ ತೊಡಗಿದ್ದಾರೆ. ಇದರ ಪ್ರತಿಫ‌ಲವಾಗಿ ನಿತ್ಯ 10ರಿಂದ 15 ಕೆಜಿ ಅಣಬೆ ಉತ್ಪಾದಿಸಿ, ತಿಂಗಳಿಗೆ 30ಸಾವಿರ ರೂ. ಎಣಿಸುತ್ತಿದ್ದಾರೆ. 

ಸ್ವಾವಲಂಬಿ ಗುರಿ: ಪ್ರಸ್ತುತ ಹೆಸರಘಟ್ಟ ಆಸುಪಾಸು ನಾಲ್ಕಾರು ಗ್ರಾಹಕರಿಗೆ ಅಣಬೆ ಪೂರೈಸುತ್ತಿರುವ ಕಮಲಾ, ಅಣಬೆ ಆಕರ್ಷಕವಾಗಿ ಪ್ಯಾಕ್‌ ಮಾಡಿ, ತಮ್ಮದೇ ಆದ ಬ್ರ್ಯಾಂಡ್‌ ಕೊಟ್ಟು ನಗರದ ದೊಡ್ಡ ಮಾಲ್‌ಗ‌ಳಿಗೆ ಪೂರೈಸಲೂ ಚಿಂತಿಸಿದ್ದಾರೆ. ಅಷ್ಟೇ ಅಲ್ಲ, ಕೊಡಗಿನಲ್ಲಿ ಅಣಬೆ ಖಾದ್ಯಗಳನ್ನು ತಯಾರಿಸುವ ವಿಶೇಷ ಹೋಟೆಲ್‌ವೊಂದನ್ನು ತೆರೆಯುವ ಗುರಿ ಹೊಂದಿದ್ದಾರೆ.

ಈ ಮೂಲಕ ಸ್ವಾವಲಂಬಿ ಜೀವನದ ಗುರಿ ಹೊಂದಿದ್ದಾರೆ. 40 ವರ್ಷದ ಕಮಲಾ ಓದಿದ್ದು ಪಿಯುಸಿ. 20 ವರ್ಷ ಗಾರ್ಮೆಂಟ್‌ ಕಾರ್ಖಾನೆ ಕೆಲಸ ಮಾಡಿ, ಈಗ ಕೃಷಿಯತ್ತ ಮುಖಮಾಡಿದ್ದಾರೆ. ಕಾರ್ಖಾನೆಯಲ್ಲಿ 8-10 ತಾಸು ದುಡಿಯಬೇಕಿತ್ತು. ಇಲ್ಲಿಯೂ ಅಷ್ಟೇ ಹೊತ್ತು ಶ್ರಮ ಹಾಕುತ್ತಿದ್ದೇನೆ ಎನ್ನುತ್ತಾರೆ.

ಒಣಗಿಸಿದರೂ ಅನುಕೂಲ: ಅಣಬೆ ಕೆಜಿಗೆ 140ರಿಂದ 150 ರೂ.ಗೆ ಮಾರಾಟ ಆಗುತ್ತದೆ. ಇದರಲ್ಲಿ ಅರ್ಧದಷ್ಟು ಬೀಜ, ಹುಲ್ಲು ಸೇರಿದಂತೆ ಮತ್ತಿತರ ಖರ್ಚು ಆಗುತ್ತದೆ. ಒಂದು ವೇಳೆ ಅಣಬೆ ಮಾರಾಟವಾಗದೆ ಉಳಿದರೆ, ಅದನ್ನು ಒಣಗಿಸಿ, ರಸಂ ಮತ್ತು ಚಟ್ನಿಪುಡಿ ಮಾಡುವ ಸಂಬಂಧ ತರಬೇತಿ ಪಡೆದಿದ್ದು, ಅದನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದೇನೆ ಎಂದರು.

ನಿವೇಶನದಲ್ಲಿ ಶೆಡ್‌ ಮತ್ತಿತರ ಸೌಲಭ್ಯಕ್ಕಾಗಿ 7ರಿಂದ 8 ಲಕ್ಷ ರೂ. ಹೂಡಿಕೆ ಮಾಡಲಾಗಿದೆ. ನನ್ನ ಈ ಕೆಲಸಕ್ಕೆ ಮಕ್ಕಳು ಮತ್ತು ಪತಿ ಕೂಡ ಕೈಜೋಡಿಸುತ್ತಾರೆ. ಅಂದಹಾಗೆ ಪತಿ ಗಾರ್ಮೆಂಟ್‌ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಸಹಕಾರ ದೊರೆತರೆ ಅನುಕೂಲ ಎಂದು ಹೇಳಿದರು.

ರಾಷ್ಟ್ರೀಯ ಮೇಳದಲ್ಲಿ ಗೌರವ: ಗಾರ್ಮೆಂಟ್‌ ಕಾರ್ಖಾನೆಗಳಲ್ಲಿನ ದೌರ್ಜನ್ಯದಿಂದ ಸಿಡಿದೆದ್ದ ಮಹಿಳೆಯರು ನಗರದಲ್ಲಿ ಬೀದಿಗಿಳಿದು ವರ್ಷಗಳ ಹಿಂದೆ ಪ್ರತಿಭಟನೆ ಮಾಡಿದ್ದರು. ಹೀಗೆ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರಿಗೆ ಕಮಲಾ ಮಾದರಿ ಆಗಿದ್ದಾರೆ. ನಗರದಲ್ಲಿ ಇತರೆ ಕೆಲ ಮಹಿಳೆಯರಿಗೆ ಅಣಬೆ ಬೇಸಾಯದ ಬಗ್ಗೆ ತಿಳಿಸಿಕೊಟ್ಟಿದ್ದೇನೆ. ಇದರಿಂದ ಹಲವರು ಆಸಕ್ತಿ ತೋರಿಸಿದ್ದಾರೆ ಎಂದೂ ಅವರು ತಿಳಿಸಿದರು.

ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್‌ಅರ್‌)ಯು ಹಮ್ಮಿಕೊಂಡ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಕಮಲಾ ಅವರ ಈ ಸ್ವಾವಲಂಬಿ ಬದುಕನ್ನು ಗುರುತಿಸಿ ಗೌರವಿಸಲಾಯಿತು. ಅಣಬೆ ಬೇಸಾಯ ಕುರಿತು ಮಾಹಿತಿಗೆ ಕಮಲಾ (ಮೊ: 78296 33450) ಅವರನ್ನು ಸಂಪರ್ಕಿಸಬಹುದು.

2 ವರ್ಷದ ಹಿಂದೆ ಕೆಲಸಕ್ಕೆ ಗುಡ್‌ಬೈ: “ಗಾರ್ಮೆಂಟ್‌ ಫ್ಯಾಕ್ಟರಿಯಲ್ಲಿ 20 ವರ್ಷ ಕೆಲಸ ಮಾಡಿದ ನನಗೆ ಜೈಲಿನಲ್ಲಿ ಇದ್ದಂತೆ ಭಾಸವಾಗುತ್ತಿತ್ತು. ಎರಡು ವರ್ಷಗಳ ಹಿಂದೆ ಈ ಕೆಲಸಕ್ಕೆ ಗುಡ್‌ಬೈ ಹೇಳಿದೆ. ಅಲ್ಲಿ ಕೇವಲ 8-10 ಸಾವಿರ ರೂ.ಗೆ ಬೆಳಗ್ಗೆಯಿಂದ ಸಂಜೆವರೆಗೂ ದುಡಿಯಬೇಕು.

ಕೆಲಸದಲ್ಲಿದ್ದಾಗ ಮೂತ್ರವಿಸರ್ಜನೆಗೆ ಹೋಗುವುದೂ ಕಷ್ಟ. ಅಂತಹ ಒತ್ತಡ ಬದುಕು ಬೇಡವಾಯಿತು. ನಂತರ ಹೆಸರಘಟ್ಟದಲ್ಲೇ ಸ್ವಂತ ನಿವೇಶನ ಇತ್ತು. ಖಾಲಿ ಜಾಗದಲ್ಲೇ ಅಣಬೆ ಬೇಸಾಯ ಶುರು ಮಾಡಿದೆ. ಪರಿಣಾಮ ಮಾಸಿಕ 30ಸಾವಿರ ರೂ. ಆದಾಯ ಬರುತ್ತಿದೆ’ ಎಂದು ಹರ್ಷ ವ್ಯಕ್ತಪಡಿಸಿದರು.

* ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವುSiddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Siddapura ಮಡಾಮಕ್ಕಿ: ಬಾವಿಗೆ ಬಿದ್ದು ವ್ಯಕ್ತಿ ಸಾವು

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Mangaluru ಮಾದಕವಸ್ತು ಸೇವನೆ; ಇಬ್ಬರು ವಶಕ್ಕೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆMalpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

Malpe: ಕಣ್ಮರೆಯಾಗಿದ್ದ ಮೀನುಗಾರನ ಮೃತದೇಹ ಪತ್ತೆ

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!

ಮೂರು ದಿನವಾದರೂ ದಾಖಲಾಗದ ಎಫ್‌ಐಆರ್‌ ಮುಡಾ ದೂರಿನಲ್ಲಿ “ಕಡತ ತಿದ್ದುಪಡಿ’ ಅಂಶವೇ ಇಲ್ಲ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-bng

Cold Weather: ಬೀದರ್‌, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?

13-bng

Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!

9-kishor

BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್‌ ರಾಯಭಾರಿ

8-ather

EV ದ್ವಿಚಕ್ರ ವಾಹನ ಮಾರಾಟ: ಏಥರ್‌ ಸಂಸ್ಥೆ ಪಾಲು ಶೇ.25

7-aishwarya

Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್‌ ಸೂಚನೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Siddaramaiah

MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

Udupi: ಗೀತಾರ್ಥ ಚಿಂತನೆ 152: ತಣ್ತೀ ನಿಶ್ಚಯದಿಂದ ದೃಢತೆ

BCCI

Vijay Hazare Trophy ಕ್ವಾರ್ಟರ್‌ ಫೈನಲ್‌ : ಕರ್ನಾಟಕಕ್ಕೆ ಬರೋಡ ಸವಾಲು

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

Kundapura: ಅಡುಗೆ ಅನಿಲ ಜಾಗೃತಿ: ಮಹಿಳೆಯ ಸಂಶಯಾಸ್ಪದ ವರ್ತನೆ

1-saaai

Malaysia Open Badminton: ಸಾತ್ವಿಕ್‌-ಚಿರಾಗ್‌ ಜೋಡಿ ಸೆಮಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.