ನಿಪ್ಪಾನ್ ಪೈಂಟ್‌ನಿಂದ “ಆಟಂ 2-ಇನ್-1′ ಬಿಡುಗಡೆ
Team Udayavani, Jun 5, 2019, 3:03 AM IST
ಬೆಂಗಳೂರು: ಏಷಿಯಾ ಖಂಡದ ಮುಂಚೂಣಿ ಪೈಂಟ್ ಉತ್ಪಾದಕ ಸಂಸ್ಥೆಯಾಗಿರುವ ನಿಪ್ಪಾನ್ ಪೈಂಟ್ (ಇಂಡಿಯಾ) ಪ್ರೈ. ಲಿ., ಮಂಗಳವಾರ ಹುಬ್ಬಳ್ಳಿಯಲ್ಲಿ ಬಹು ನಿರೀಕ್ಷಿತ ಮಲ್ಟಿಪರ್ಪಸ್ ಎಮಲ್ಷನ್ ಪೈಂಟ್ “ಆಟಂ 2-ಇನ್-1′ ಉತ್ಪ³ನ್ನವನ್ನು ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಈ ಸಂದರ್ಭದಲ್ಲಿ ಸಂಸ್ಥೆಯ ಮಾರುಕಟ್ಟೆ ನಿರ್ದೇಶಕ (ಡೆಕೋರೇಟಿವ್ ವಿಭಾಗ) ಮಾರ್ಕ್ ಟೈಟಸ್ ಅವರು ಮಾತನಾಡಿ, ಆಟಂ ಅಕ್ರಿಲಿಕ್ ಮಾರ್ಪಡಿಸಿದ ಎಮಲ್ಷನ್ ಆಧಾರಿತ ಕ್ರಾಂತಿಕಾರಕ ಬಣ್ಣವಾಗಿದೆ. ವಿವಿಧೋದ್ದೇಶಗಳ ಈ ಎಮಲ್ಷನ್ ಪೈಂಟ್ ಅಲಂಕಾರಿಕ ಬಣ್ಣಗಳ ಶ್ರೇಣಿಗಳಲ್ಲಿ ಪರಿಸರ ಸ್ನೇಹಿಯಾಗಿಸುವತ್ತ ಮುಂದುವರಿಯಲಿದೆ.
ಅಂತಾರಾಷ್ಟ್ರೀಯ ಗುಣಮಟ್ಟದ ಆ್ಯಂಟಿ ಫಾರ್ಮಾಲ್ಡಿಹೈಡ್, ಆ್ಯಂಟಿ ಬ್ಯಾಕ್ಟೀರಿಯ, ಉನ್ನತವಾದ ತೊಳೆಯುವಿಕೆ ಮತ್ತು ಸಬ್ ಪ್ರತಿರೋಧ ಹೈಟೆಕ್ ಗುಣಲಕ್ಷಣಗಳು ಇದಕ್ಕಿದೆ. ಆಟಂ 2-ಇನ್-1 ವಿವಿಧೋದ್ದೇಶ ಬಣ್ಣವು ಉನ್ನತ ಗುಣಮಟ್ಟದೊಂದಿಗೆ ಜಪಾನ್ ತಂತ್ರಜ್ಞಾನಕ್ಕೆ ಪುರಾವೆಯಾಗಿದೆ.
ಇದರ ಅನನ್ಯವಾದ 2-ಇನ್-1 ವಿಶಿಷ್ಟತೆಯು ಮನೆಗಳ ಆಂತರಿಕ ಮತ್ತು ಬಾಹ್ಯ ಮೇಲ್ಮೈಗಳೆರಡಕ್ಕೂ ಬಳಸಿಕೊಳ್ಳಲು ಸೂಕ್ತವಾಗಿದೆ. ಪೈಂಟ್ ಉದ್ಯಮದಲ್ಲಿ ಮೊದಲ ಬಾರಿಗೆ ಮೂರು ವರ್ಷಗಳ ಖಾತರಿ ಕರಾರುಗಳೊಂದಿಗೆ ಬಿಡುಗಡೆಯಾಗಿದೆ ಎಂದರು.
ನಿಪ್ಪಾನ್ ಪೈಂಟ್ಸ್‌ನ ಡೆಕೋರೇಟಿವ್ ವಿಭಾಗದ ಅಧ್ಯಕ್ಷ ಎಸ್. ಮಹೇಶ್ ಆನಂದ್ ಮಾತನಾಡಿ, ನಿಪ್ಪಾನ್ ಪೈಂಟ್ಸ್ ಪ್ರಮುಖ ವ್ಯಾಪಾರ ತಂತ್ರದೊಂದಿಗೆ ಉದ್ಯಮದ ಭರವಸೆ ನೀಡುವ ಮೂಲಕ ಮಾರುಕಟ್ಟೆಯನ್ನು ವಿಸ್ತರಿಸಲಿದೆ.
ತಮಿಳುನಾಡಿನ ಮಾರುಕಟ್ಟೆಯಲ್ಲಿ ಈ ಪೈಂಟ್‌ಗಿರುವ ಬೇಡಿಕೆ ಅರಿತ ಕರ್ನಾಟಕದ ಬಣ್ಣ ಮಾರಾಟಗಾರರು, ಈ ನೂತನ ಉತ್ಪನ್ನಕ್ಕೆ ಸಾಕಷ್ಟು ಬೇಡಿಕೆ ಒದಗಿದ್ದಾರೆ. ಆಟಂ 2-ಇನ್-1 ಪೈಂಟ್ ರಾಜ್ಯಾದ್ಯಂತ ಆಯ್ದ ವಿತರಕ ಪಾಲುದಾರರಲ್ಲಿ ಜೂ.3ರಿಂದ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.