Crime News: ಮೊಬೈಲ್ ಫ್ಲ್ಯಾಶ್ ಮಾಡಿಕೊಡದಕ್ಕೆ ಹಲ್ಲೆ; ಮಹಿಳೆ ಸೇರಿ ಮೂವರ ಸೆರೆ
Team Udayavani, Oct 4, 2023, 9:38 AM IST
ಬೆಂಗಳೂರು: ಕಳವು ಮಾಡುತ್ತಿದ್ದ ಮೊಬೈಲ್ ಫ್ಲ್ಯಾಶ್ ಮಾಡಿಕೊಡಲು ಹಿಂದೇಟು ಹಾಕಿದ ಯುವಕನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಮಹಿಳೆ ಸೇರಿ ಮೂವರು ಆರೋಪಿಗಳನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಇಮ್ರಾನ್ ಉಲ್ಲಾ ಖಾನ್(27) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೃತ್ಯ ಎಸಗಿದ ಮೊಬೈಲ್ ಕಳ್ಳಿ ಸಾದೀಯಾ, ಉಮರ್, ಫಾರೂಕ್ ಎಂಬುವರನ್ನು ಬಂಧಿಸಲಾಗಿದೆ.
ಘಟನೆಯಲ್ಲಿ ಇಮ್ರಾನ್ ಕುತ್ತಿಗೆ, ಕಾಲಿನ ನರಕ್ಕೆ ಗಂಭೀರ ಪೆಟ್ಟು ಬಿದ್ದಿದ್ದೆ. ಇಮ್ರಾನ್ ಮೊಬೈಲ್ ಫ್ಲ್ಯಾಶ್ ಮಾಡಿ ರೀಸೆಟ್ ಮಾಡುವುದನ್ನು ತಿಳಿದಿದ್ದ. ಹೀಗಿದ್ದಾಗ ಶಾಹಿದ್ ಅಲಿಯಾಸ್ ಕಾಲು ಎಂಬಾತನಿಂದ ಆರೋಪಿ ಸಾದೀಯಾ ಪರಿಚಯವಾಗಿದ್ದಳು. ಒಮ್ಮೆ ಸಾದೀಯಾ, ಇಮ್ರಾನ್ ಬಳಿ ಪಿನ್ ಅನ್ ಲಾಕ್ ಮಾಡಿ ರಿಸೆಟ್ ಮಾಡಿಸಿಕೊಂಡಿದ್ದಳು. ಆ ಬಳಿಕ ಆಗಾಗ್ಗೆ ಮೊಬೈಲ್‌ಗಳನ್ನು ತಂದು ಫ್ಲ್ಯಾಶ್ ಮಾಡಿಸಿಕೊಳ್ಳುತ್ತಿದ್ದಳು. ಆದರೆ, ಇತ್ತೀಚೆಗೆ ಆಕೆ ಹೆಚ್ಚಿನ ಮೊಬೈಲ್‌ಗಳನ್ನು ತಂದು ಫ್ಲ್ಯಾಶ್ ಮಾಡಿಕೊಡುವಂತೆ ಹೇಳುತ್ತಿದ್ದಳು. ಅದರಿಂದ ಅನುಮಾನಗೊಂಡ ಇಮ್ರಾನ್, ಇನ್ಮುಂದೆ ಮೊಬೈಲ್ ಫ್ಲ್ಯಾಶ್ ಮಾಡಿಕೊಡುವುದಿಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಕೋಪಗೊಂಡ ಸಾದೀಯಾ, ಕೆಲ ದಿನಗಳ ಹಿಂದೆ ತನ್ನ ಇಬ್ಬರು ಸಹಚರರನ್ನು ಹೆಗಡೆ ನಗರಕ್ಕೆ ಕಳುಹಿಸಿ ಇಮ್ರಾನ್ ಮೇಲೆ ಹಲ್ಲೆ ನಡೆಸಿದ್ದಾಳೆ. ಪೊಲೀಸರು ಈಗ ಮೂವರನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.