Bengaluru: ಬೆಕ್ಕಿನ ಮೇಲೆ ಹಲ್ಲೆ: ರೂಮ್‌ಮೇಟ್ ವಿರುದ್ದ ಕೇಸ್
Team Udayavani, Dec 2, 2024, 12:46 PM IST
ಬೆಂಗಳೂರು: ಬೆಕ್ಕಿನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ರೂಮ್‌ಮೇಟ್ ವಿರುದ್ಧ ಯುವಕನೊಬ್ಬ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.
ಮೈಕೋ ಲೇಔಟ್‌ನ ಬಿಟಿಎಂ 2ನೇ ಹಂತದ ನಿವಾಸಿ ಮೊಹಮ್ಮದ್ ಅಫ್ತಾಬ್ ಎಂಬಾತ ನೀಡಿದ ದೂರಿನನ್ವಯ ಆತನ ರೂಮ್‌ಮೇಟ್ ಮನೀಶ್ ರತ್ನಾಕರ್ ಎಂಬಾತನ ವಿರುದ್ಧ ಕೇಸ್ ದಾಖಲಾಗಿದೆ.
ದೂರುದಾರ ಮೊಹಮ್ಮದ್ ಅಫ್ತಾಬ್ ಹಾಗೂ ಆರೋಪಿ ಮನೀಶ್ ರತ್ನಾಕರ್ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ಒಂದೇ ಮನೆಯಲ್ಲಿ ವಾಸವಿದ್ದರು.
ನ.26ರಂದು ಮನೀಶ್ ರತ್ನಾಕರ್ ಮನೆಯಲ್ಲಿದ್ದಾಗ ಬೆಕ್ಕು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ಅದರಿಂದ ಕೋಪಗೊಂಡ ಮನೀಶ್, ಬೆಕ್ಕಿಗೆ ಕಾಲಿನಿಂದ ಒದ್ದು ಗಾಯಗೊಳಿಸಿದ್ದಾನೆ. ಬಳಿಕ ಮೊಹಮ್ಮದ್ ಅಫ್ತಾಬ್‌ಗ ಕರೆ ಮಾಡಿ, “ನಿನ್ನ ಬೆಕ್ಕು ಮನೆಯಲ್ಲಿ ಗಲೀಜು ಮಾಡಿದೆ, ಅದನ್ನು ಹೊರಗೆಸೆದು ಬಾ’ ಎಂದಿದ್ದಾನೆ. ಮೊಹಮ್ಮದ್ ಅಫ್ತಾಬ್ ಮನೆಗೆ ಬಂದು ನೋಡಿದಾಗ ಮನೆಯ ಟೆರೇಸ್ ಮೇಲಿನ ಬಕೆಟ್‌ನಲ್ಲಿ ಬೆಕ್ಕು ಬಿದ್ದಿರುವುದು ಗಮನಕ್ಕೆ ಬಂದಿದೆ. ತಕ್ಷಣ ಅದನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. “ಮದ್ಯಪಾನ ಮಾಡಿದ ಬಳಿಕ ಬೆಕ್ಕಿನ ಮರಿ ಕಂಡರೆ ಮನೀಶ್ ಆಗುತ್ತಿರಲಿಲ್ಲ. ನನ್ನ ಬೆಕ್ಕು ಸಹ ಆತನ ಸುತ್ತ ಸುಳಿಯುತ್ತಿರಲಿಲ್ಲ. ನಾನು ಬರುವವರೆಗೂ ರೂಮ್ ನಲ್ಲಿ ಅಡಗಿರುತ್ತಿತ್ತು. ಚಳಿ ಇದ್ದುದರಿಂದ ಹೊರಗೆ ಹೋಗಲಾರದೆ ಬೆಕ್ಕು ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದೆ. ಅಷ್ಟಕ್ಕೆ ನನ್ನ ಬೆಕ್ಕಿನ ಮೇಲೆ ಮೃಗೀಯವಾಗಿ ಹಲ್ಲೆ ಮಾಡಿದ್ದಾನೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಮೊಹಮ್ಮದ್ ಅಫ್ತಾಬ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Head Constable: ಅಪಘಾತದಲಿ ಗಾಯಗೊಂಡಿದ್ಲ ಪೊಲೀಸ್ ಸಾವು
Munirathna: ಮುನಿರತ್ನ ವಿರುದ್ಧದ ಮತ್ತೂಂದು ಕೇಸ್ ಎಸ್‌ಐಟಿಗೆ ವರ್ಗಾವಣೆ?
Gurappa Naidu: ಲೈಂಗಿಕ ದೌರ್ಜನ್ಯ; ಕಾಂಗ್ರೆಸ್ ಮುಖಂಡ ಗುರಪ್ಪಗೆ ನೋಟಿಸ್
Wedding Shoot: ಮದುವೆ ಆಲ್ಬಂ ವಹಿವಾಟು 5 ಸಾವಿರ ಕೋಟಿ!
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
U19 Asia Cup; ವಿಲಕ್ಷಣ ಕಾರಣದಿಂದ ಅಭಿಮಾನಿಗಳ ಗಮನ ಸೆಳೆದ ನೇಪಾಳ ಬೌಲರ್: ವಿಡಿಯೋ ವೈರಲ್
ಮರ್ಯಾದಾ ಹ*ತ್ಯೆ: ಅಣ್ಣನಿಂದಲೇ ಮಹಿಳಾ ಪೊಲೀಸ್ ಕಾನ್ಸ್ ಟೇಬಲ್ ಬರ್ಬರ ಹ*ತ್ಯೆ!
SSLC, ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
Producer: ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಕುಸಿದು ಬಿದ್ದು ಖ್ಯಾತ ನಿರ್ಮಾಪಕ ಮೃ*ತ್ಯು
ವಿಜಯೇಂದ್ರ ಸಣ್ಣ ಹುಡುಗ, ರಾಜ್ಯಾಧ್ಯಕ್ಷ ಸ್ಥಾನ ತ್ಯಜಿಸುವುದು ಒಳಿತು: ರಮೇಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.