![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Sep 27, 2023, 12:23 PM IST
ಬೆಂಗಳೂರು: ಬಂದ್ ಇದ್ದರೂ ಹೋಟೆಲ್ ಮುಚ್ಚಲಿಲ್ಲ ಎಂಬ ಕಾರಣಕ್ಕೆ ಜಯನಗರದಲ್ಲಿ ರುವ ಉಡುಪಿ ಹಬ್ ಹೋಟೆಲ್‌ಗೆ ನುಗ್ಗಿದ ಕಿಡಿಗೇಡಿಗಳು ಪೀಠೊಪಕರಣ ಧ್ವಂಸ ಮಾಡಿದ್ದಾರೆ. ಆರೋಪಿಗಳ ಕೃತ್ಯ ಹೋಟೆಲ್ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದೀಗ ಎಲ್ಲೆಡೆ ವೈರಲ್ ಆಗಿದೆ.
ಶಿವು ಹಾಗೂ ವಿಶ್ವ ಎಂಬುವವರು ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಜಯನಗರದಲ್ಲಿರುವ ಉಡುಪಿ ಹಬ್ ಹೋಟೆಲ್ ಮಂಗಳವಾರ ಬೆಳಗ್ಗೆ ತೆರೆಯಲಾಗಿತ್ತು. ಗ್ರಾಹಕರು ಉಪಾಹಾರ ಸೇವಿಸುತ್ತಿದ್ದರು. ಆ ವೇಳೆ ಬೈಕ್‌ನಲ್ಲಿ ಬಂದ ಆರೋಪಿಗಳು ಏಕಾಏಕಿ ಹೋಟೆಲ್‌ಗೆ ನುಗ್ಗಿ ಕನ್ನಡ ಸಂಘಟನೆಗಳ ಶಾಲು ಧರಿಸಿ ಬಂದ ಇಬ್ಬರು ಆರೋಪಿಗಳು ಹೋಟೆಲ್ ಏಕೆ ಮುಚ್ಚಿಲಿಲ್ಲವೆಂದು ಮಾಲೀಕರ ಬಳಿ ಪ್ರಶ್ನಿಸಿದ್ದಾರೆ. ಬಳಿಕ ಹೋಟೆಲ್ ಒಳಗೆ ನುಗ್ಗಿ ಚೇರ್‌ಗಳನ್ನು ಎಸೆದು ದಾಂಧಲೆ ನಡೆಸಿದ್ದಾರೆ.
ಹೋಟೆಲ್ ಪೀಠೊಪಕರಣ, ಗಾಜು ಸೇರಿದಂತೆ ಹಲವು ವಸ್ತುಗಳಿಗೆ ಹಾನಿಯಾಗಿದೆ. ಹೋಟೆಲ್‌ನಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳು ಎಸಗಿರುವ ಕೃತ್ಯ ಸೆರೆಯಾಗಿದೆ. ಈ ಕುರಿತು ಹೋಟೆಲ್ ಮಾಲೀಕರು ದೂರು ನೀಡಿದ್ದಾರೆ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇದೀಗ ಶಿವು, ವಿಶ್ವ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ವೈಯುಕ್ತಿಕ ಕಾರಣದಿಂದ ಬಂದ್ ಹೆಸರಿನಲ್ಲಿ ದಾಂಧಲೆ ನಡೆಸಿರುವ ಆರೋಪ ಕೇಳಿ ಬಂದಿದೆ.
ದಾಂಧಲೆಗೂ ನನಗೂ ಸಂಬಂಧವಿಲ್ಲ: ಶಾಸಕ: ಬಂದ್ ಹಿನ್ನೆಲೆಯಲ್ಲಿ ಜಯನಗರದ ಉಡುಪಿ ಹಬ್ ಹೊಟೆಲ್ ದಾಂಧಲೆ ಪ್ರಕರಣಕ್ಕೂ ನನಗೂ ಸಂಬಂಧ ವಿಲ್ಲ ಎಂದು ಸಿ.ಕೆ.ರಾಮಮೂರ್ತಿ ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಸುಮ್ಮನೆ ಅಪಪ್ರಚಾರ ಮಾಡಬೇಡಿ. ಹೋಟೆಲ್ ದಾಂಧಲೆ ನಡೆಸಿದವರು ಬಿಜೆಪಿ ಕಾರ್ಯ ಕರ್ತರಲ್ಲ. ಹೋಟೆಲ್ ಬ್ಯುಸಿನೆಸ್ ಮಾಡುತ್ತಿರುವ ಹುಡುಗರನ್ನು ಕರೆದು ಮಾತಾಡಿದ್ದೇನೆ. ಅವರಿಗೆ ಮುಂಬರುವ ದಿನದಲ್ಲಿ ನಷ್ಟವಾಗಿದ್ದಕ್ಕೆ ಸಹಾಯ ಮಾಡುತ್ತೇನೆ. ರ್ಯಾಲಿ ಮಾಡುತ್ತೇನೆ ಎಂಬ ಉದ್ದೇಶಕ್ಕೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದಕ್ಕಾಗಿ ಒಂದಿಷ್ಟು ಬಿಜೆಪಿ ಕಾರ್ಯಕರ್ತರು ಸ್ಟೇಷನ್ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಇದಾದ ಬಳಿಕ ಬಳಿಕ ಪೊಲೀ ಸರು ನನ್ನ ಬಳಿ ಕ್ಷಮೆ ಕೇಳಿ¨ªಾರೆ ಎಂದು ತಿಳಿಸಿದರು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.