Arrested: ಸಿಗರೇಟ್‌ ಹೊಗೆ ಬಿಟ್ಟ ಯುವಕನ ಮೇಲೆ ಮಾರಣಾಂತಿಕ ಹಲ್ಲೆ: ಮೂವರ ಬಂಧನ


Team Udayavani, Jul 31, 2024, 10:46 AM IST

2

ಬೆಂಗಳೂರು: ಮದ್ಯದ ಅಮಲಿನಲ್ಲಿ ಸಿಗರೆಟ್‌ ಸೇದುತ್ತಿದ್ದ ಯುವಕನ ಜತೆ ಗಲಾಟೆ ಮಾಡಿ, ಮಾರಕಾಸ್ತ್ರದಿಂದ ಹಲ್ಲೆ ನಡೆಸಿರುವ ಘಟನೆ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಜೆ.ಜೆ.ನಗರ ನಿವಾಸಿಗಳಾದ ಸೈಯದ್‌ ಅಮನ್‌ (23), ರೆಹಮತ್‌ ಪಾಷಾ (23) ಮತ್ತು ಸೈಯದ್‌ ಕಬೀರ್‌ (22) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿ ಗಳು ಜುಲೈ 26ರಂದು ಠಾಣೆ ವ್ಯಾಪ್ತಿಯ ಬಾರ್‌ ಬಳಿ ಮದ್ಯದ ಅಮಲಿನಲ್ಲಿ ಸಾರ್ವ ಜನಿಕವಾಗಿ ಯುವಕನ ಮೇಲೆ ಮಾರ ಕಾಸ್ತ್ರದಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳು ಠಾಣೆ ವ್ಯಾಪ್ತಿಯ ಎಸ್‌ ಎಲ್‌ಎನ್‌ ಬಾರ್‌ಗೆ ಕಳೆದ ಶುಕ್ರವಾರ ಹೋಗಿದ್ದು, ತಡರಾತ್ರಿ ಮದ್ಯ ಸೇವಿಸಿ ಹೊರಬಂದಿದ್ದಾರೆ. ಅದೇ ವೇಳೆ ಪಕ್ಕದ ಬೀಡ ಅಂಗಡಿ ಬಳಿ ಸಿಗರೆಟ್‌ ಸೇದುತ್ತಿದ್ದ ಯುವಕ ನೊಬ್ಬ ತಿಳಿಯದೇ ಆರೋಪಿಗಳಿಗೆ ಹೊಗೆ ಬಿಟ್ಟಿದ್ದಾನೆ. ಇದೇ ವಿಚಾರವಾಗಿ ಆರೋಪಿಗಳು ಹಾಗೂ ಯುವಕನ ನಡುವೆ ಮಾರಾಮಾರಿ ನಡೆದಿದೆ.

ಆಗ ಯುವಕ ಆರೋಪಿಗಳು ಹಲ್ಲೆ ನಡೆಸುವುದನ್ನು ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದಾನೆ. ಆರೋಪಿಗಳ ಪೈಕಿ ಒಬ್ಬ ಆ ಮೊಬೈಲ್‌ ಕಸಿದುಕೊಂಡಿದ್ದಾನೆ. ಆಗ ಯುವಕ ಕಳ್ಳ ಕಳ್ಳ ಎಂದು ಕೂಗಿಕೊಂಡಿದ್ದಾನೆ. ಯುವಕನ ಚೀರಾಟ ಕೇಳಿದ ಸ್ಥಳೀಯರು ಆರೋಪಿಗಳನ್ನು ಹಿಡಿದುಕೊಂಡು ಥಳಿಸಲು ಮುಂದಾಗಿದ್ದಾರೆ. ಈ ವೇಳೆ ಮೊಬೈಲ್‌ ಕಸಿದುಕೊಂಡ ಆರೋಪಿ ಪರಾರಿಯಾಗಿದ್ದ. ಆದರೆ, ವಶದಲ್ಲಿದ್ದ ಇಬ್ಬರು ಆರೋಪಿಗಳಿಗೆ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಅದನ್ನು ಕಂಡು ಪರಾರಿಯಾಗಿದ್ದ ಆರೋಪಿ, ಮಾರಕಾಸ್ತ್ರ ತಂದು ಸಾರ್ವಜನಿಕವಾಗಿ ಯುವಕನ ಮೇಲೆ ಮನಸೋ ಇಚ್ಛೆ ಹೊಡೆದಿದ್ದಾನೆ. ಆಗ ಯುವಕನಿಗೆ ಸಣ್ಣ ಪ್ರಮಾಣದಲ್ಲಿ ಗಾಯವಾಗಿದೆ. ಈ ದೃಶ್ಯಗಳು ಬಾರ್‌ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇದು ವೈರಲ್‌ ಆಗಿತ್ತು. ಈ ಸಂಬಂಧ ದೂರು ಪಡೆದುಕೊಂಡು ಪ್ರಕರಣ ದಾಖಲಿಸಿದ ಕೆ.ಪಿ.ಅಗ್ರಹಾರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ಟಾಪ್ ನ್ಯೂಸ್

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

Namma-clinic

Karnataka; ಬಸ್‌ ನಿಲ್ದಾಣಗಳಲ್ಲಿ ನಮ್ಮ ಕ್ಲಿನಿಕ್‌ ಸಮುಚಿತ ನಿರ್ಧಾರ

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

PUNJALAKATTE

Punjalkatte: ಆರ್‌ಎಎಫ್ ಪೊಲೀಸರಿದ್ದ ಲಾರಿ ಪಲ್ಟಿ , ಇಬ್ಬರಿಗೆ ಗಾಯ

-archana-kamath

Liver transplant: ಲಿವರ್‌ ದಾನದ ಬಳಿಕ ಉಪನ್ಯಾಸಕಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dinesh-Meeting

Bengaluru: ನಿಫಾಗೆ ಬಲಿಯಾದ ವಿದ್ಯಾರ್ಥಿಯ ಸಂಪರ್ಕದಲ್ಲಿದ್ದ 25 ಮಂದಿ ಪತ್ತೆ

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

Suspension: ಸುಳ್ಳು ಮಾಹಿತಿ ಮೇರೆಗೆ ಇಬ್ಬರು ಯುವಕರ ಬಂಧನ; ನಾಲ್ವರು ಪೊಲೀಸರು ಅಮಾನತು

7

Bengaluru: ನಗರದಲ್ಲಿ ಏಕಕಾಲಕ್ಕೆ  200 ಗಣೇಶ ಮೂರ್ತಿಗಳ ಮೆರವಣಿಗೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

Parappana Agrahara Prison: ಪರಪ್ಪನ ಅಗ್ರಹಾರ ಜೈಲಲ್ಲಿ ಮತ್ತೆ ಮೊಬೈಲ್‌ಗ‌ಳು ಪತ್ತೆ

5

Bengaluru: ಚಿನ್ನಾಭರಣ ಮಳಿಗೆಯಲ್ಲಿ ತಡರಾತ್ರಿ ದುಷ್ಕರ್ಮಿಗಳಿಂದ ಕಳವಿಗೆ ಯತ್ನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

police crime

Kolkata; ಟ್ರೈನಿ ವೈದ್ಯೆ ಕೇಸು:1 ಕಿ.ಮೀ. ಬರಲು ಪೊಲೀಸರಿಗೆ 1ತಾಸು!

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Priyank Kharge: ಇಂದು ಕಲಬುರಗಿಯಲ್ಲಿ ಸಿಎಂ ಸಿದ್ದು ನೇತೃತ್ವದಲ್ಲಿ ಸಂಪುಟ ಸಭೆ

Census

Census ಈ ಬಾರಿ ಜಾತಿ ಕಾಲಂ ಸೇರ್ಪಡೆಗೆ ಕೇಂದ್ರ ಸರಕಾರ‌ ಚಿಂತನೆ?

1-eewqe

‘Wrestling Champions Super League’: ಅನುಮತಿ ನೀಡಲು ನಕಾರ

1-gread

Manipur ಸಚಿವ ಖಶಿಮ್‌ ಮನೆ ಮೇಲೆ ಗ್ರೆನೇಡ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.