ಆ್ಯಪ್‌ ಆಟೋ ಸೇವೆ ಅಧಿಕೃತಕ್ಕೆ ಸಿದ್ಧತೆ


Team Udayavani, Oct 17, 2022, 11:08 AM IST

ಆ್ಯಪ್‌ ಆಟೋ ಸೇವೆ ಅಧಿಕೃತಕ್ಕೆ ಸಿದ್ಧತೆ

ಬೆಂಗಳೂರು: ನಿರೀಕ್ಷೆಯಂತೆ ಸಾರಿಗೆ ಇಲಾಖೆಯು ಆ್ಯಪ್‌ ಆಧಾರಿತ ಆಟೋಗಳ ಸೇವೆಗಳನ್ನು ಅಧಿಕೃತಗೊಳಿಸಲು ಸಿದ್ಧತೆ ನಡೆಸಿದ್ದು, ಇದಕ್ಕಾಗಿ ಕೇಂದ್ರದ “ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿ’ಗಳಲ್ಲಿನ ಅಂಶಗಳನ್ನು ತನ್ನ ಈಗಿರುವ ನಿಯಮದಲ್ಲಿ ಸೇರ್ಪಡೆಗೊಳಿಸಲು ಮುಂದಾಗಿದೆ.

ಮೋಟಾರು ವಾಹನ ಅಗ್ರಿಗೇಟರ್‌ ಮಾರ್ಗಸೂಚಿ-2020ರಲ್ಲಿ ದರ ನಿಯಂತ್ರಣ ಮತ್ತು ರೈಡ್‌ಗಳ ರದ್ದತಿ ಬಗ್ಗೆ ಉಲ್ಲೇಖೀಸುವ 13 ಮತ್ತು 14ನೇ ಅಂಶಗಳನ್ನು “ರಾಜ್ಯ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮ- 2016’ರಲ್ಲಿ ಸೇರಿಸುವ ಮೂಲಕ ಆ್ಯಪ್‌ ಆಧಾರಿತ ಸೇವೆಗಳಿಗೆ ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಇನ್ನೆರಡು ದಿನಗಳಲ್ಲಿ ಅಧಿಕೃತ ಮುದ್ರೆ ಬೀಳಲಿದ್ದು, ಬೆನ್ನಲ್ಲೇ ಆದೇಶ ಕೂಡ ಹೊರಡಿಸಲು ಸಿದ್ಧತೆ ನಡೆದಿದೆ. ಸಾಮನ್ಯವಾಗಿ ಯಾವೊಂದು ನಿಯಮಗಳ ಮಾರ್ಪಾಡು ಅಥವಾ ತಿದ್ದುಪಡಿ ಮಾಡಿದಾಗ ಸಚಿವ ಸಂಪುಟ ಮತ್ತು ಅಧಿವೇಶನದಲ್ಲಿ ಮತ್ತೆ ಅಂಗೀಕಾರಗೊಳ್ಳಬೇಕಾಗುತ್ತದೆ. ಆದರೆ, ತುರ್ತು ಅಗತ್ಯತೆ ಮೇರೆಗೆ ಕಾರ್ಯಾದೇಶ ಮಾಡಿ, ನಂತರದಲ್ಲಿ ಘಟನೋತ್ತರ ಅನುಮೋದನೆ ಪಡೆಯಲು ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯು ಆಟೋ ಸೇವೆಗಳ ಮುಂದುವರಿಕೆಗೆ ಪೂರಕವಾದ ಅಂಶಗಳನ್ನು ಸಂಯೋಜಿಸಲು ಮುಂದಾಗಿದೆ. ಬೆನ್ನಲ್ಲೇ ದರ ಕೂಡ ನಿಗದಿಪಡಿಸಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ನಗರದಲ್ಲಿ ಸುಮಾರು 1.40 ಲಕ್ಷ ಆಟೋಗಳು ಕಾರ್ಯಾಚರಣೆ ಮಾಡುತ್ತಿದ್ದು, ಈ ಪೈಕಿ ಕನಿಷ್ಠ ಶೇ. 30-40ರಷ್ಟು ಆಟೋಗಳು ಅಗ್ರಿಗೇಟರ್‌ ಅದರಲ್ಲೂ ಮುಖ್ಯವಾಗಿ ಓಲಾ ಮತ್ತು ಉಬರ್‌ ಗಳ ಜತೆ ಲಿಂಕ್‌ ಮಾಡಿಕೊಂಡಿವೆ. ಅದರಡಿ ನಿತ್ಯ ಕನಿಷ್ಠ 10ರಿಂದ ಗರಿಷ್ಠ 20 ರೈಡ್‌ಗಳನ್ನು ಪೂರೈಸುತ್ತಿವೆ. ಒಂದು ವೇಳೆ ಸೇವೆ ಸ್ಥಗಿತಗೊಳಿಸಿದರೆ, ಅವರೆಲ್ಲರಿಗೂ ಸಮಸ್ಯೆ ಆಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಪೂರಕ ಅಂಶಗಳ ಸಂಯೋಜನೆ ಮಾಡಲಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮಾರ್ಗಸೂಚಿಯಲ್ಲೇನಿದೆ?: ಮಾರ್ಗಸೂಚಿಯ 13ರಲ್ಲಿನ 5ನೇ ಅಂಶವು ರಾಜ್ಯ ಸರ್ಕಾರವು ಆ್ಯಪ್‌ ಆಧಾರಿತ ಸೇವೆಗಳ ಕನಿಷ್ಠ ದರ 25-30 ರೂ. ನಿಗದಿಪಡಿಸಬಹುದಾಗಿದೆ. ಇದೇ ಮಾದರಿಯ ದರವನ್ನು ಇತರೆ ವಾಹನಗಳಿಗೂ ಅಗ್ರಿಗೇಟರ್‌ಗಳು ಅನುಸರಿಸಬಹುದು ಎಂದು ಹೇಳುತ್ತದೆ. ಅಷ್ಟೇ ಅಲ್ಲ, ಅಗ್ರಿಗೇಟರ್‌ ಕಂಪನಿಯು ಕನಿಷ್ಠ ದರಕ್ಕಿಂತ ಶೇ. 50ರಷ್ಟು ಕಡಿಮೆ ದರ ಅಥವಾ ಸೇವಾ ಶುಲ್ಕ (ಸರ್ಜ್‌ ಚಾರ್ಜ್‌)ದ ರೂಪದಲ್ಲಿ ಗರಿಷ್ಠ ಒಂದೂವರೆಪಟ್ಟು ಹೆಚ್ಚಿಸಲಿಕ್ಕೂ ಇದರಲ್ಲಿ ಅವಕಾಶ ಇದೆ. ಆದರೆ, ಈ ಅಂಶವನ್ನೂ ಸೇರಿಸಲಾಗುತ್ತಿದೆಯೇ ಎಂಬುದು ತಿಳಿದುಬಂದಿಲ್ಲ.

ಹಾಗೊಂದು ವೇಳೆ “ಹೌದು’ ಆದಲ್ಲಿ ಗ್ರಾಹಕರ ಮೇಲೆ ವಿಧಿಸುವ ಹೊರೆಗೆ “ಅಧಿಕೃತ’ ಮುದ್ರೆ ಬಿದ್ದಂತಾಗುತ್ತದೆ. ಇನ್ನು ಗ್ರಾಹಕರಿದ್ದ ನಿಗದಿತ ಸ್ಥಳವು 3 ಕಿ.ಮೀ. ಒಳಗಿದ್ದರೆ, ಅದು ಡೆಡ್‌ ಮೈಲೇಜ್‌ ಎಂದಾಗುತ್ತದೆ. ಅದಕ್ಕೆ ಯಾವುದೇ ಶುಲ್ಕ ವಿಧಿಸುವಂತಿಲ್ಲ. ಅದೇ ರೀತಿ, ಕೊನೆಕ್ಷಣದಲ್ಲಿ ಗ್ರಾಹಕರಾಗಲಿ ಅಥವಾ ಚಾಲಕರಾಗಲಿ ಬುಕಿಂಗ್‌ ರದ್ದುಗೊಳಿಸಿದರೆ, ಒಟ್ಟಾರೆ ಆ ರೈಡ್‌ ದರದ ಶೇ. 10ರಷ್ಟು ದಂಡ (100 ರೂ. ಮೀರದಂತೆ) ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

“ನಮ್ಮ ಯಾತ್ರಿ’ ಸೇವೆ ಆರಂಭ: ಈ ಎಲ್ಲ ಬೆಳವಣಿಗೆಗಳ ನಡುವೆ ಆಟೋ ಸೇವೆಗಳು ಎಂದಿನಂತೆ ಮುಂದುವರಿದಿವೆ. ಅಷ್ಟೇ ಅಲ್ಲ, ಮೊದಲಿದ್ದ ದರದಲ್ಲೇ ಸೇವೆ ಒದಗಿಸಲಾಗುತ್ತಿದೆ. ಚಾಲಕರಿಗೆ ದೊರೆಯುವ ಆದಾಯದಲ್ಲೂ ಯಾವುದೇ ವ್ಯತ್ಯಾಸ ಆಗಿಲ್ಲ ಎಂದು ಆಟೋ ಚಾಲಕರು ತಿಳಿಸಿದ್ದಾರೆ.

ಮತ್ತೂಂದೆಡೆ ಇದಕ್ಕೆ ಪರ್ಯಾಯವಾಗಿ “ನಮ್ಮ ಯಾತ್ರಿ’ ಆಟೋ ಸೇವೆ ನಗರದಲ್ಲಿ ಆರಂಭಗೊಂಡಿದೆ. ನಮ್ಮ ಯಾತ್ರಿ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಮೊಬೈಲ್‌ ನಂಬರ್‌ ಸೇರ್ಪಡೆಗೊಳಿಸಿದರೆ ಸಾಕು. ಇಲ್ಲಿ ಕನಿಷ್ಠ ದರ ನಿಗದಿಪಡಿಸಿದ್ದು, ಒಂದು ಮಾರ್ಗದ ರೈಡ್‌ ಬುಕಿಂಗ್‌ ಮಾಡಿದರೆ, ಹಲವು ಆಟೋ ಆಯ್ಕೆಗಳು ವಿವಿಧ ದರದ ಮಾದರಿಯಲ್ಲಿ ಮೊಬೈಲ್‌ ಸ್ಕ್ರೀನ್‌ನಲ್ಲಿ ಬರುತ್ತವೆ. ಆಯ್ಕೆ ಗ್ರಾಹಕರಿಗೆ ಬಿಟ್ಟಿದ್ದು ಎಂದು ಆಟೋರಿಕ್ಷಾ ಡ್ರೈವರ್ ಯೂನಿಯನ್‌ ಪ್ರಧಾನ ಕಾರ್ಯದರ್ಶಿ ರುದ್ರಮೂರ್ತಿ ತಿಳಿಸುತ್ತಾರೆ.

ಇಂದು ಸಭೆ: ದರ ನಿಗದಿ ಜತೆಗೆ ಕೇಂದ್ರದ ಮಾರ್ಗಸೂಚಿಗಳಲ್ಲಿನ ಅಂಶಗಳನ್ನು ರಾಜ್ಯದ ಬೇಡಿಕೆ ಆಧಾರಿತ ಸಾರಿಗೆ ತಂತ್ರಜ್ಞಾನ ನಿಯಮದಲ್ಲಿ ಸಂಯೋಜಿಸುವ ಸಂಬಂಧ ಸಾರಿಗೆ ಇಲಾಖೆ ಸೋಮವಾರ ಸಭೆ ನಡೆಸಲಿದೆ. ಇಲಾಖೆ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳ ಈ ಸಭೆಯಲ್ಲಿ ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.

 

-ವಿಜಯಕುಮಾರ ಚಂದರಗಿ

ಟಾಪ್ ನ್ಯೂಸ್

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ

Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Bengaluru: ಸುರಂಗ ರಸ್ತೆ ಕಾಮಗಾರಿಗೆ ಭಾರತ-ಚೀನಾ ಸಂಬಂಧ ಅಡ್ಡಿ! 

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Fraud: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಹೆಸರಲ್ಲಿ ಇಬ್ಬರಿಗೆ 93 ಲಕ್ಷ ರೂ. ವಂಚನೆ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

Digital arrest: ವೃದ್ಧೆಗೆ ಡಿಜಿಟಲ್‌ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್‌ ವಂಚಕ

5

Drunk & Drive Case: ಅತಿ ವೇಗದ ಚಾಲನೆ: 522 ಕೇಸ್‌, 1.29 ಲಕ್ಷ ದಂಡ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.