ಆಯುಷ್ ವೈದ್ಯರಿಂದ ಅಲೋಪತಿ ಚಿಕಿತ್ಸೆ ಗ್ಯಾರಂಟಿ
Team Udayavani, Jan 14, 2017, 3:45 AM IST
ಬೆಂಗಳೂರು: ಸರ್ಕಾರಿ ಆಸ್ಪತ್ರೆಗಳ ಆಯುಷ್ ವೈದ್ಯರು ತುರ್ತು ಸಂದರ್ಭಗಳಲ್ಲಿ ಅಲೋಪತಿ ಔಷಧ ಸೂಚಿಸುವುದಕ್ಕೆ ಅವಕಾಶ ನೀಡುವ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿರುವ ಆರೋಗ್ಯ ಸಚಿವ ಕೆ.ಆರ್. ರಮೇಶ್‌ಕುಮಾರ್, ಗ್ರಾಮೀಣ ಭಾಗದ ಜನರ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಂಡ ತೀರ್ಮಾನವನ್ನು ವಿರೋಧಿಸುವ ಅಥವಾ ಬೇಡ ಎಂದು ಹೇಳಲು ಭಾರತೀಯ ವೈದ್ಯಕೀಯ ಪರಿಷತ್ತು (ಐಎಂಎ) ಯಾರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಅಥವಾ ನನ್ನ ಮೇಲೆ ಏನೇ ಆರೋಪ ಬರಲಿ. ಗ್ರಾಮೀಣ ಭಾಗದ ಬಡಜನರ ಪಕ್ಷಪಾತಿಯಾಗಿ, ಸ್ವಾರ್ಥಿಯಾಗಿ ಕೆಲಸ ಮಾಡುತ್ತೇನೆ. ಹಾಗಾಗಿ ಗ್ರಾಮೀಣ ಜನರಿಗೆ ವೈದ್ಯಕೀಯ ಸೇವೆ ಒದಗಿಸಲು ಸರ್ಕಾರಿ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರನ್ನು ಬಳಸಿಕೊಳ್ಳುವ ನಿರ್ಧಾರದಿಂದ ಯಾವ ಕಾರಣಕ್ಕೂ ಹಿಂದೇಟು ಹಾಕುವುದಿಲ್ಲ ಎಂದರು.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರ ಆಸ್ಪತ್ರೆಗಳನ್ನು ತೆರೆಯುತ್ತದೆ. ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಸರ್ಕಾರ ನೂರಾರು ಕೋಟಿ ರೂ. ಖರ್ಚು ಮಾಡುತ್ತದೆ. ಒಬ್ಬ ಎಂಬಿಬಿಎಸ್ ವೈದ್ಯನನ್ನು ತಯಾರು ಮಾಡಲು ರಾಜ್ಯ ಸರ್ಕಾರ ಲಕ್ಷಾಂತರ ರೂ. ವೆಚ್ಚ ಮಾಡುತ್ತದೆ. ಅಲ್ಲದೆ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ರಸ್ತೆ, ನೀರು, ವಿದ್ಯುತ್ ಸೇರಿದಂತೆ ಮೂಲಸೌಕರ್ಯಗಳನ್ನು ಸರ್ಕಾರವೇ ನೀಡುತ್ತದೆ. ಗ್ರಾಮೀಣ ಸೇವೆ ಕಡ್ಡಾಯಗೊಳಿಸಿ ಕಾಯ್ದೆ ತಂದರೆ ಇದೇ ವೈದ್ಯರು ಕೋರ್ಟ್‌ನಿಂದ ತಡೆಯಾಜ್ಞೆ ತರುತ್ತಾರೆ. ಅಷ್ಟಕ್ಕೂ ಆಯುಷ್ ವೈದ್ಯರು ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಆಪರೇಷನ್ ಮಾಡಲ್ಲ, ಸಣ್ಣಪುಟ್ಟ ಕಾಯಿಲೆಗಳಿಗೆ ಔಷಧಿ ಕೊಡುತ್ತಾರೆ. ಎಂಬಿಬಿಎಸ್ ವೈದ್ಯರನ್ನು ನಾವೇನು ಅಂಡಮಾನ್-ನಿಕೋಬಾರ್‌ಗೆ ಕಳಿಸ್ತೀವಾ? ಒಂದಿಷ್ಟು ವರ್ಷ ಹಳ್ಳಿಗಳಲ್ಲಿ ಸೇವೆ ಮಾಡಿ ಎಂದರೆ ಅದಕ್ಕೂ ವಿರೋಧಿಸುವುದು ಯಾವ ನ್ಯಾಯ? ಭಾರತೀಯ ವೈದ್ಯಕೀಯ ಪರಿಷತ್ತಿಗೆ ಸಾಮಾಜಿಕ ಋಣಗಾರಿಕೆ ಇಲ್ವಾ? ಎಂದು ರಮೇಶ್‌ಕುಮಾರ್ ಪ್ರಶ್ನಿಸಿದರು.
ಮಾರ್ಚ್‌ಗೆ ಹುದ್ದೆ ಭರ್ತಿ:
ಸಾಮಾನ್ಯ ಸೇವಾ ವೈದ್ಯರು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿನ ಅರೆ ವೈದ್ಯಕೀಯ ಹಾಗೂ ವೈದ್ಯಕೇತರ ಹುದ್ದೆಗಳನ್ನು ಮಾರ್ಚ್ ವೇಳೆಗೆ ಭರ್ತಿ ಮಾಡಿಕೊಳ್ಳಲಾಗುವುದು. ಈಗಾಗಲೇ 2 ಸಾವಿರ ವೈದ್ಯರ ಹುದ್ದೆಗಳ ಭರ್ತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಅವರೆಲ್ಲರೂ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುತ್ತಿದ್ದಾರೆ. 4 ಸಾವಿರ ಅರೆವೈದ್ಯಕೀಯ ಹಾಗೂ ವೈದ್ಯಕೇತರ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ಕೊಟ್ಟಿದೆ. ಒಟ್ಟಾರೆ ಮಾರ್ಚ್ ವೇಳೆಗೆ ಯಾವ ಹುದ್ದೆಗಳೂ ಖಾಲಿ ಇರುವುದಿಲ್ಲ ಎಂದು ಸಚಿವ ರಮೇಶ್‌ಕುಮಾರ್ ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ballari: ಸ್ವಾಮೀಜಿಗಳ ಮೇಲಿನ ಕ್ರಮ, ಕರಿಯಾ ಎಂದವರ ಮೇಲೆ ಏಕಿಲ್ಲ; ಅಶೋಕ್
Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್ ಮಾತು
Belagavi: ಬಿಜೆಪಿಯಲ್ಲಿ ಭಿನ್ನಮತವಿಲ್ಲ, ವಿಜಯೇಂದ್ರ ನಮ್ಮ ಅಧ್ಯಕ್ಷರು: ಪ್ರತಾಪ್ ಸಿಂಹ
Bellary; ಕರ್ನಾಟಕ- ಆಂಧ್ರ ಗಡಿಯಲ್ಲಿ ಭೀಕರ ಅಪಘಾತ: ವೈದ್ಯರು ಸೇರಿ ಮೂವರು ಸಾವು
BYV ಬಣಕ್ಕೆ ಸೆಡ್ಡು: ದಾವಣಗೆರೆಯಲ್ಲಿ ಯತ್ನಾಳ್ ತಂಡದಿಂದಲೂ ಬೃಹತ್ ಸಮಾವೇಶ ಯೋಜನೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Ballari: ಸ್ವಾಮೀಜಿಗಳ ಮೇಲಿನ ಕ್ರಮ, ಕರಿಯಾ ಎಂದವರ ಮೇಲೆ ಏಕಿಲ್ಲ; ಅಶೋಕ್
ಕರ್ನಾಟಕ ಸರ್ಕಾರದ ಜೊತೆ 11,000 ಕೋಟಿ ಬಂಡವಾಳ ಹೂಡಿಕೆಗೆ ಹೀರೊ ಫ್ಯೂಚರ್ ಎನರ್ಜಿಸ್ ಒಪ್ಪಂದ
Kalaburagi: ಸಹಕಾರಿ ಸಾಲದ ಮೇಲಿನ ಬಡ್ಡಿ ಹಣ ಡಿಸಿಸಿ ಬ್ಯಾಂಕ್ ಗೆ ಬಿಡುಗಡೆ
Wedding Story: ಕಂಕಣ ಕಾಲ-4: ಲಗ್ನಪತ್ರಿಕೆ ಹೋಯ್ತು, ವಾಟ್ಸಾಪ್‌ನಲ್ಲೇ ಕರೆ ಬಂತು!
Manipal: ಉದಯವಾಣಿಯ ಸಹಾಯಕ ಸುದ್ದಿ ಸಂಪಾದಕರಾಗಿದ್ದ ದಾಮೋದರ ಕಕ್ರಣ್ಣಾಯ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.