Bangalore: ವಾಣಿ ವಿಲಾಸ ಆಸ್ಪತ್ರೆಯಲಿ ಹಸುಗೂಸಿಗೆ ಕಚ್ಚಿದ ಜಿರಳೆಗಳು; ಪೋಷಕರ ಆಕ್ರೋಶ
Team Udayavani, Dec 3, 2023, 9:49 AM IST
ಬೆಂಗಳೂರು: ನಗರದ ಸರ್ಕಾರಿ ವಾಣಿ ವಿಲಾಸ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಎರಡು ದಿನದ ನವಜಾತ ಶಿಶುವಿನ ದೇಹವನ್ನು ಜಿರಳೆಗಳು ಕಚ್ಚಿ ಗಾಯಗೊಳಿಸಿರುವ ಕುರಿತು ಪೋಷಕರು ಆರೋಪಿಸಿದ್ದಾರೆ.
ನಾಗರಬಾವಿಯ ಆಶಾರಾಣಿ ಅವರು ವಾಣಿ ವಿಲಾಸ ಆಸ್ಪತ್ರೆಗೆ ಹೆರಿಗೆಗೆ ದಾಖಲಾಗಿದ್ದರು. ಅವರು ಗುರುವಾರ ಗಂಡು ಮಗುವಿಗೆ ಜನ್ಮ ನೀಡಿದ್ದು, ನವಜಾತ ಶಿಶು ಹಾಗೂ ಬಾಣಂತಿಯನ್ನು ವಾರ್ಡ್ ಶಿಫ್ಟ್ ಮಾಡಲಾಗಿತ್ತು. ಈ ವೇಳೆ ವಾರ್ಡ್‌ನಲ್ಲಿ ಮಗುವನ್ನು ಮಲಗಿಸಿದಾಗ ಜಿರಳೆಗಳು ನವಜಾತ ಶಿಶು ದೇಹ ಪೂರ್ತಿ ಜಿರಳೆಗಳು ಕಚ್ಚಿವೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಬಾಣಂತಿಯರ ಹಾಗೂ ಹೆರಿಗೆ ವಾರ್ಡ್ ಸ್ವಚ್ಛತೆ ಕೊರತೆ ಇದೆ. ಬಾಣಂತಿಯರು ಮಲಗುವ ಹಾಸಿಗೆ ಸ್ವತ್ಛತೆಯಿಲ್ಲದೇ ವಾರ್ಡ್ ತುಂಬೆಲ್ಲ ಜಿರಳೆಗಳ ಕಾಟವಿದೆ ಎಂದು ಪೋಷಕರು ಆರೋಪಿಸಿದರು.
ಜಿರಳೆ ಕಡಿತದಿಂದ ಗಾಯ ಆಗಿಲ್ಲ: ವಾಣಿವಿಲಾಸ ಆಸ್ಪತ್ರೆಯ ಅಧೀಕ್ಷಕಿ ಡಾ.ಸಿ.ಸವಿತಾ ಮಾತನಾಡಿ, ನವಜಾತ ಶಿಶುವಿಗೆ ಜಿರಳೆ ಕಚ್ಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಕ್ಕಳ ತಜ್ಞರ ಹಾಗೂ ಚರ್ಮ ತಜ್ಞರನ್ನು ಕರೆಸಿ ತಪಾಸಣೆ ಮಾಡಿದ್ದು, ಮಾಹಿತಿಯನ್ನು ಸಹ ಪಡೆಯಲಾಗಿದೆ. ಇದು ಜಿರಳೆ ಕಡಿತದಿಂದ ಆಗಿರುವ ಗಾಯಗಳು ಅಲ್ಲ. ರ್ಯಾಶ್ಸ್ ನಿಂದಾಗಿದೆ. ಆಸ್ಪತ್ರೆಯ ವ್ಯವಸ್ಥೆಯಿಂದ ಯಾವುದೇ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.