ನಿದ್ರಿಸುತ್ತಿದ್ದ ಮಗು ಕಾಣಿಸದ್ದಕ್ಕೆ ಊರೆಲ್ಲ ಸುತ್ತಿದ್ದ ದಂಪತಿ!
Team Udayavani, May 13, 2023, 10:48 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಮನೆಯಲ್ಲಿ ಆರಾಮವಾಗಿ ನಿದ್ದೆಗೆ ಜಾರಿದ್ದ ಆರು ವರ್ಷದ ಮಗಳು ಕಾಣೆಯಾಗಿದ್ದಾಳೆ ಎಂದು ಪೋಷಕರು ಊರೆಲ್ಲ ಸುತ್ತಿದ್ದಲ್ಲದೇ ಪೊಲೀಸ್ ಠಾಣೆಗೂ ದೂರು ನೀಡಿ, ಭಾರೀ ಆತಂಕ ಸೃಷ್ಟಿಸಿದ್ದ ಘಟನೆ ನಡೆದಿದೆ.
ಮೀನಾ ದಂಪತಿ ಗುರುವಾರ ರಾತ್ರಿ 7.30ಕ್ಕೆ ಕೆ.ಆರ್.ಪುರ ಪೊಲೀಸ್ ಠಾಣೆಗೆ ಬಂದು “ತಮ್ಮ 6 ವರ್ಷದ ಮಗಳನ್ನು ಅಪಹರಿಸಲಾಗಿದೆ. ಮನೆ ಮುಂದೆ ಆಟವಾಡುತ್ತಿದ್ದವಳು ಏಕಾಏಕಿ ಕಾಣೆಯಾಗಿದ್ದಾಳೆ’ ಎಂದು ದೂರು ನೀಡಿದ್ದರು. ಇತ್ತ ಪೊಲೀಸರು ಕೂಡ ಅಪಹರಣ ಪ್ರಕರಣ ದಾಖಲಿಸಿಕೊಂಡು ಮಗುವಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಸಬ್ ಇನ್‌ಸ್ಪೆಕ್ಟರ್ ರಮ್ಯಾ ಹಾಗೂ ಠಾಣೆಯ ಸಿಬ್ಬಂದಿ ಎಲ್ಲೆಡೆ ಮಗುವಿಗಾಗಿ ಶೋಧ ನಡೆಸಿದ್ದರೂ ಸಣ್ಣ ಸುಳಿವು ಕೂಡ ಸಿಕ್ಕಿರಲಿಲ್ಲ.
ಕೊನೆಗೆ ಕೆ.ಆರ್.ಪುರದ ಜನತಾ ಕಾಲೋನಿಯಲ್ಲಿರುವ ಮಗುವಿನ ಮನೆಯಲ್ಲಿ ಹುಡುಕಲು ಆರಂಭಿಸಿದಾಗ ಬಟ್ಟೆ ಕೆಳಗೆ ಮಗು ನಿದ್ದೆಗೆ ಜಾರಿರುವುದು ಪತ್ತೆಯಾಗಿತ್ತು. ಕೂಡಲೇ ಪಾಲಕರನ್ನು ಕರೆಸಿ ವಿಚಾರಿಸಿದಾಗ ನಡೆದ ಸಂಗತಿ ತಿಳಿದು ಪೊಲೀಸರೇ ಒಂದು ತಬ್ಬಿಬ್ಟಾಗಿದ್ದಾರೆ.
ಬಟ್ಟೆ ಕೆಳಗೆ ನಿದ್ದೆಗೆ ಜಾರಿದ್ದ ಮಗು: ಮನೆಯಲ್ಲಿ ಆಟವಾಡುತ್ತಿದ್ದ ಮಗು ಬೆಡ್ ಮೇಲೆ ನಿದ್ದೆಗೆ ಜಾರಿದ್ದಳು. ಆಕೆಯ ತಾಯಿ ಮೀನಾ ಒಣಗಿದ್ದ ಬಟ್ಟೆಗಳನ್ನು ಮಗುವಿನ ಮೇಲೆ ತಂದು ಹಾಕಿ ದ್ದರು. ಆದರೆ, ಬೆಡ್‌ನಲ್ಲಿ ಮಗಳು ಮಲಗಿದ್ದನ್ನು ಮೀನಾ ನೋಡಿರಲಿಲ್ಲ. ಮಗುವೂ ಎಚ್ಚರಗೊಡಿ ರಲಿಲ್ಲ. ಕೆಲ ಹೊತ್ತಿನ ಬಳಿಕ ಮಗಳು ಮನೆಯಲ್ಲಿ ಕಾಣಿಸಲಿಲ್ಲ. ಎಷ್ಟೇ ಕೂಗಿದರೂ ಮಗಳು ಕಾಣಿಸದಿದ್ದ ಹಿನ್ನೆಲೆಯಲ್ಲಿ ಆತಂಕಗೊಂಡ ಪಾಲಕರು ನೇರವಾಗಿ ಕೆ.ಆರ್.ಪುರ ಠಾಣೆಗೆ ಬಂದು ದೂರು ಕೊಟ್ಟಿದ್ದರು. ಪೊಲೀಸರೂ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಲು ಸಿದ್ಧತೆ ನಡೆಸುತ್ತಿದ್ದಾಗ ಮಗು ಪತ್ತೆಯಾಗಿದೆ. ಮಗಳನ್ನು ಕಂಡ ಪಾಲಕರು ನಿರಾಳರಾಗಿ ಪೊಲೀಸರಿಗೆ ಧನ್ಯವಾದ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.