ಅಪರಾಧಗಳಿಗೆ ಪ್ರೇರಕ ಆನ್‌ಲೈನ್ ಗೇಮ್ಸ್
ಆನ್‌ಲೈನ್ ಗೇಮ್ಸ್ ನಿಷೇಧಕ್ಕೆ ಸಿದ್ಧವಾಗಿದೆ ಕರಡು
Team Udayavani, Nov 23, 2020, 12:26 PM IST
ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಆನ್‌ಲೈನ್‌ಜೂಜುಗಾರಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅನೇಕ ಅಪರಾಧ ಪ್ರಕರಣಗಳಿಗೂ ಪ್ರೇರಕವಾಗುತ್ತಿವೆ. ಜತೆಗೆಖನ್ನತೆ, ಆತ್ಮಹತ್ಯೆಗಳಂತಹ ಘಟನೆಗಳಿಗೂಕಾರಣವಾಗುತ್ತಿವೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ ಇತ್ತೀಚೆಗೆ ಆನ್‌ಲೈನ್ ಗೇಮ್‌ಗಳನ್ನು ನಿಷೇಧಿಸಲು ಹೊಸ ಕಾನೂನು ರೂಪಿಸುವುದಾಗಿ ಹೇಳಿಕೆ ನೀಡಿದ್ದಾರೆ. ಆನ್‌ಲೈನ್ ಗೇಮ್-ಬೆಟ್ಟಿಂಗ್‌ಗಳು ಹೇಗೆ ಸಾಮಾಜಿಕ ದುಷ್ಪರಿಣಾಮಗಳನ್ನು ಬೀರುತ್ತವೆ ಮತ್ತು ಸರ್ಕಾರ ಆ ನಿಟ್ಟಿನಲ್ಲಿ ಯಾವ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂಬಬಗ್ಗೆಈ ಬಾರಿಯ ಸುದ್ದಿಸುತ್ತಾಟ.
ಬೆಂಗಳೂರು: ದಶಕದ ಹಿಂದೆ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಬೆಳಗಾವಿ, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖನಗರಗಳು ಹಾಗೂ ಪಟ್ಟಣಗಳಲ್ಲಿ ಲಾಟರಿ, ಅಂದರ್- ಬಾಹರ್, ಸ್ಕಿಲ್ ಗೇಮ್ಸ್, ವಿಡಿಯೋಪಾರ್ಲರ್‌ಗಳ ರೂಪದಲ್ಲಿನಡೆಯುತ್ತಿದ್ದು “ಜೂಜು’ ಸಾವಿರಾರು ಕೋಟಿ ರೂ.ಗಳ ವಹಿವಾಟು, ಲಕ್ಷಾಂತರ ಜನರ ಜೇಬುಗಳು ಬರಿದಾಗುತ್ತಿದ್ದವು. ಪೊಲೀಸರ ದಾಳಿಗಳು ಹಾಗೂ ಕಾನೂನಿನ ಭೀತಿ ಆಫ್ಲೈನ್ ಜೂಜಿಗೆ ಕಡಿವಾಣ ಹಾಕುವಲ್ಲಿ ರಾಜ್ಯದಲ್ಲಿಯೂ ಬಹುತೇಕ ಯಶಸ್ವಿಯಾದವು. ಆದರೆ, ಜೂಜುಕೋರರ ಹವ್ಯಾಸ ಬದಲಾಗಲಿಲ್ಲ ಹೀಗಾಗಿ ನಿಧಾನವಾಗಿ ಆನ್‌ಲೈನ್ ಜೂಜಿನತ್ತ ಹೊರಳಿದ್ದಾರೆ. ಹೀಗಾಗಿಯೇ ಆನ್‌ಲೈನ್ ಜೂಜು ಪೊಲೀಸರ ಅಂಕೆಗೂ ಮೀರಿ ಬೆಳೆದು ನಿಂತಿದೆ. ಕಾನೂನಿನ ಲೋಪಗಳನ್ನೇ ಬಂಡವಾಳ ಮಾಡಿಕೊಂಡು ಜೂಜುಕೋರರು ಕೈಯಲ್ಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿಯೇ ತಮ್ಮ ಸುಲಭ ಗಳಿಕೆಯ ಆನ್‌ಲೈನ್ ಜೂಜಿನ ಹುಚ್ಚಿನಲ್ಲಿ ಮುಳುಗಿದ್ದಾರೆ.
ಆನ್‌ಲೈನ್ ಜೂಜೇ ಹೆಚ್ಚು ಪ್ರಚಲಿತ: ದೇಶದಲ್ಲಿ ರಮ್ಮಿ, ಪೋಕರ್, ಕ್ರಿಕೆಟ್, ಡಾರ್ಟ್‌ಗೇಮ್ ಸೇರಿದಂತೆ ಹಲವು ಕ್ರೀಡೆಗಳು, ಸ್ಕಿಲ್ ಗೇಮ್‌ಗಳಿಗೆ ಸಂಬಂಧಿಸಿದಂತೆ ಜೂಜಾಡಲು ಎರಡು ಸಾವಿರಕ್ಕೂ ಅಧಿಕ ವೆಬ್ ಸೈಟ್‌ಗಳು ಹಾಗೂ ಮೊಬೈಲ್ ಆ್ಯಪ್‌ಗ್ಳು ಲಭ್ಯವಿವೆ. ಜೂಜಾಡುವ ಹುಚ್ಚಿರುವವರು ತಮ್ಮ ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ, ಇಲ್ಲವೇ ವೆಬ್‌ಸೈಟ್‌ಗಳಲ್ಲಿ ಲಾಗಿನ್ ಆಗಿ ನಿರ್ದಿಷ್ಟಕ್ರೀಡೆಗೆ ಸಂಬಂಧಿಸಿದಂತೆ ಬೆಟ್ಟಿಂಗ್(ಜೂಜು) ಈ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ಇಲ್ಲ. ಜತೆಗೆ, ಪೊಲೀಸರ ಭಯವೂ ಅಷ್ಟಕಷ್ಟೆ. ಹೀಗಾಗಿಯೇ ಆನ್‌ಲೈನ್ ಜೂಜೇ ಹೆಚ್ಚು ಪ್ರಚಲಿತವಾಗಿಬಿಟ್ಟಿದೆ.
ಯುವಜನತೆ ಹೆಚ್ಚು ಬಲಿ: ಇನ್ನು ಆನ್‌ಲೈನ್ ಜೂಜಿಗೆ ಸಂಬಂಧಿಸಿದಂತೆ ಖ್ಯಾತನಟರು, ಕ್ರೀಡಾಪಟುಗಳು ನೀಡುವ ಜಾಹೀರಾತುಗಳು ಕೂಡ ಯುವಜನತೆಯನ್ನು ಪ್ರಭಾವಗೊಳಿಸಿವೆ. ಇದರ ಜತೆಗೆ ಸಾಮಾನ್ಯ ಜನರಿಂದ “ನಾನು ಇಂತಹ ಗೇಮ್‌ನಲ್ಲಿ ಇಷ್ಟು ಲಕ್ಷ ರೂ ಗೆದ್ದೆ’ ಎನ್ನುವ ಗೇಮ್ ಆಡಲು ಪ್ರಚೋದಿಸುವಂತಹ ಜಾಹೀರಾತುಗಳನ್ನು ನೋಡಿಯೇ ಸುಲಭ ಗಳಿಕೆಯ ಆಸೆಯಿಂದಆನ್‌ಲೈನ್ ಗೇಮ್‌ಗಳಿಗೆ ಯುವಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾನೂನು ಏನು ಹೇಳುತ್ತೆ?: ಕರ್ನಾಟಕ ಪೊಲೀಸ್ ಕಾಯಿದೆ 1963ರ ಅನ್ವಯ ಕುದುರೆ ರೇಸ್ ಹೊರತುಪಡಿಸಿ ಉಳಿದಂತೆ ಎಲ್ಲ ಮಾದರಿಯ ಜೂಜು ಕಾನೂನು ಬಾಹಿರವಾಗಿದೆ. ಶಿಕ್ಷೆಯೂ ಅನ್ವಯವಾಗಲಿದೆ. ಆದರೆ,ಕಾನೂನಿನ ಕೆಲವು ನಿಯಮಗಳು ಅತ್ಯಂತ ಸರಳವಾಗಿವೆ. ಹೀಗಾಗಿಯೇ, ಪ್ರತಿಯೊಂದು ಬಾರಿಯೂ ಬೆಟ್ಟಿಂಗ್ ಹಾಗೂ ಜೂಜಿನ ಸಂಬಂಧದ ಕೇಸ್‌ಗಳಲ್ಲಿ ಬಂಧಿತರಾಗಿ ಜೈಲು ಸೇರಿದ ಬಳಿಕ ಜಾಮೀನು ಪಡೆದು ಹೊರಬರುತ್ತಾರೆ. ಪುನಃ ತಮ್ಮ ದಂಧೆಗಳನ್ನು ಆರಂಭಿಸುತ್ತಾರೆ. ಆನ್‌ಲೈನ್ ಜೂಜನ್ನು ತೆಲಂಗಾಣದಲ್ಲಿ ಈಗಾಗಲೇ ನಿಷೇಧಿಸಲಾಗಿದೆ. ನೆರೆರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಕೇರಳದಲ್ಲಿಯೂ ಆನ್‌ಲೈನ್ ಜೂಜು ನಿರ್ಬಂಧದ ಬಗ್ಗೆ ಗಂಭೀರ ಚಿಂತನೆ ನಡೆದಿದೆ. ಕರ್ನಾಟಕದಲ್ಲಿಯೂಈಬಗ್ಗೆ ಚಿಂತನೆ ನಡೆದಿರುವುದು ಒಳ್ಳೆಯ ಬೆಳವಣಿಗೆ ಎಂದು ಅಧಿಕಾರಿ ಹೇಳುತ್ತಾರೆ.
ಕ್ರಿಕೆಟ್ ಬೆಟ್ಟಿಂಗ್ ಹಾವಳಿ : ರಾಜ್ಯದಲ್ಲಿ ದಿನೇ ದಿನೆ ಕ್ರಿಕೆಟ್ ಬೆಟ್ಟಿಂಗ್ ಹಾವಳಿ ಹೆಚ್ಚಾಗುತ್ತಿದೆ. ಟಿ-20 ಸೇರಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯ ಬಗ್ಗೆ ನಿರ್ದಿಷ್ಟ ಆ್ಯಪ್ ಬಳಸಿ ಬೆಟ್ಟಿಂಗ್ ಆಡುವವರು ಅಧಿಕವಾಗಿದ್ದಾರೆ. ನೇರವಾಗಿ ಕ್ರಿಕೆಟ್ ಪಂದ್ಯಾವಳಿಯನ್ನುವೀಕ್ಷಿಸುತ್ತಲೇ ನಿರ್ದಿಷ್ಟ ಆ್ಯಪ್ ಮೂಲಕ ಬೆಟ್ಟಿಂಗ್ ದಂಧೆ ಜೋರಾಗಿಯೇ ಇದೆ.ಈ ಬಗ್ಗೆಯೂ ತಜ್ಞರಸಮಿತಿ ಚಿಂತನೆ ನಡೆಸಿದ್ದು, ಕೆಲವೊಂದು ಅಧಿಕೃತ್ಯ ಆ್ಯಪ್ ಹೊರತು ಪಡಿಸಿ ಇತರೆ ಎಲ್ಲಮಾದರಿಯಆ್ಯಪ್‌ಹಾಗೂ ಗೇಮ್ಸ್‌ಗಳನ್ನು ನಿರ್ಬಂಧಿಸಲಿದೆ ಎಂದು ಹೇಳಲಾಗಿದೆ.
ಹೊಸ ಕಾನೂನಿಗೆ ಕರಡು ರಚನೆ : ಹಣ ಹೂಡಿಕೆ ಮಾಡುವ ಮೂಲಕ ಅಮಾಯಕರಿಂದ ಹಣ ವಸೂಲಿ ಮಾಡುವ ಆನ್ ಲೈನ್ ಗೇಮ್ಸ್‌ಗಳ ನಿಷೇಧಕ್ಕೆ ಮುಂದಾಗಿರುವ ರಾಜ್ಯಸರ್ಕಾರ ಈ ಸಂಬಂಧ “ಕರಡು’ ಸಿದ್ಧಪಡಿಸಿದೆ. ನುರಿತ ತಜ್ಞರ ಸಮಿತಿ ಸಲಹೆ ಮತ್ತು ಸೂಚನೆ ಮೇರೆಗೆ ಕರಡು ಸಿದ್ಧಪಡಿಸಲಾಗಿದ್ದು, ಸಚಿವ ಸಂಪುಟ ಒಪ್ಪಿಗೆ ಪಡೆದು ಸದ್ಯದಲ್ಲೇ ಆನ್‌ಲೈನ್ ಗೇಮ್ಸ್‌ಗಳ ಬಗ್ಗೆ ಹೊಸಕಾನೂನು ಜಾರಿಯಾಗಲಿದೆ. ಈ ಮೂಲಕ ಆನ್‌ಲೈನ್ ಗೇಮ್ಸ್‌ಗಳ ಹಣ ವಸೂಲಿ ಕಾರ್ಯಕ್ಕೆ ಬ್ರೇಕ್ ಹಾಕಲಾಗುವುದು. ಈಗಾಗಲೇ ದೇಶದ ಹತ್ತಕ್ಕೂ ಅಧಿಕ ರಾಜ್ಯಗಳು ಆನ್‌ಲೈನ್ ಗೇಮ್ಸ್‌ಗಳನ್ನು ನಿಷೇಧಿಸಿದ್ದು, ಆ ಕಾಯ್ದೆಗಳನ್ನು ಆಧಾರವಾಗಿಟ್ಟು ಕೊಂಡು ರಾಜ್ಯದಲ್ಲಿಯೂ ನಿಷೇಧಿಸಲು ತೀರ್ಮಾನಿಸಲಾಗಿದೆ. ಸಾಮಾನ್ಯವಾಗಿ ಆನ್‌ಲೈನ್ ಗೇಮ್‌ಗಳಲ್ಲಿ ಎರಡು ಮಾದರಿ ಇರುತ್ತದೆ. ಕೌಶಲ್ಯತೆ ಮತ್ತು ಬೆಟ್ಟಿಂಗ್ ಹಾಗೂ ಪ್ರಚೋದನೆನೀಡುವ ಗೇಮ್ಸ್‌ಗಳು ಮುಖ್ಯವಾದವು. ಈ ಪೈಕಿ ಬೆಟ್ಟಿಂಗ್ ಅಥವಾ ಗ್ಯಾಂಬ್ಲಿಂಗ್ ಗೇಮ್ಸ್‌ಗಳು ಮತ್ತು ಮಕ್ಕಳಿಗೆ ಮಾನಸಿಕ ಒತ್ತಡ ಹೇರುವಂತಹ ಗೇಮ್ಸ್‌ಗಳಿದ್ದರೂ ಅವುಗಳನ್ನು ನಿಷೇಧಿಸುವ ಬಗ್ಗೆ ಮೊದಲ ಹಂತದಲ್ಲಿ ತೀರ್ಮಾನಿಸಲಾಗಿದೆ.
ಏಕೆಂದರೆ, ಇತ್ತೀಚಿನ ದಿನಗಳಲ್ಲಿ ಈ ಗೇಮ್ಸ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಅವುಗಳಿಂದಲೇ ಮುಗ್ಧ ಜನರು, ಮುಖ್ಯವಾಗಿ ಯುವಕರು ಮೋಸ ಹೋಗುತ್ತಿದ್ದಾರೆ.ಕೆಲವರು ಒತ್ತಡಕ್ಕೊಳಗಾಗಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಹೀಗಾಗಿ ಯುವಕರ ಆತ್ಮಹತ್ಯೆ ತಡೆಯಲು ಹಾಗೂ ಅಮಾಯಕ ಜನರನ್ನು ದುಶ್ಚಟಗಳಿಂದ ರಕ್ಷಿಸಲು ಆನ್‌ಲೈನ್ ಗೇಮ್ಸ್‌ಗಳನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಬೇರೆ ರಾಜ್ಯದ ಸರ್ವರ್ ಬಳಸಿ ಆಡಿದರೂ ಶಿಕ್ಷೆ : ದೇಶದ ಕೆಲ ರಾಜ್ಯಗಳಲ್ಲಿ ಈಗಲೂ ಸಾಕಷ್ಟು ಗ್ಯಾಮ್ಲಿಂಗ್ ಗೇಮ್ಸ್‌ಗಳು ಅವ್ಯಾಹತವಾಗಿ ಕಾರ್ಯನಿರ್ವಹಿಸುತ್ತಿವೆ. ಅಂತಹ ಗೇಮ್ಸ್‌ಗಳಿಗೆ ನಿತ್ಯ ಹತ್ತಾರು ಯುವಕರು ಬಲಿಯಾಗುತ್ತಿದ್ದಾರೆ. ಹೀಗಾಗಿ ಒಂದು ವೇಳೆ ಬೇರೆ ರಾಜ್ಯದಲ್ಲಿ ಕಾನೂನುಬದ್ಧ ಗೊಂಡಿರುವ ನಿಗದಿತ ಗೇಮ್ ಅನ್ನು ಅಲ್ಲಿನ ಸರ್ವರ್ ಬಳಸಿ ಕರ್ನಾಟಕದಲ್ಲಿ ಆಟವಾಡಿದರೂ ಕಾನೂನು ಬಾಹಿರ. ಕಂಪ್ಯೂಟರ್, ಲ್ಯಾಪ್‌ಟಾಪ್, ಗೇಮ್ಸ್ ಹೌಸ್ ಸೇರಿ ಬೇರೆ ಯಾವುದೇ
ಸಾಧನಗಳ ಮೂಲಕ ನಿಷೇಧಿತ ಗೇಮ್ಸ್ ಬಳಸಲು ಸಾಧ್ಯವಿಲ್ಲ. ಒಂದು ವೇಳೆ ಆಡಿದರೂ ಅದನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂತ್ರಜ್ಞಾನ ಬಳಕೆ ಬಗ್ಗೆಯೂ ಹೊಸ ಕಾನೂನಿನಲ್ಲಿ ಉಲ್ಲೇಖೀಸಲಾಗಿದೆ. ಈ ಮೂಲಕ ಯಾವುದೇ ಸಂದರ್ಭದಲ್ಲಿ ಗ್ಯಾಮ್ಲಿಂಗ್ ಗೇಮ್ಸ್‌ಗಳ ಬಳಕೆಯನ್ನು ಸಂಪೂರ್ಣವಾಗಿ ಎಲ್ಲ ರೀತಿಯಲ್ಲೂ, ಮಾರ್ಗದಲ್ಲೂ ನಿಷೇಧಿಸಲಾಗುವುದು.
ಬೇರೆ ಅಪರಾಧಗಳಿಗೂಪ್ರೇರಕ! : ಆನ್‌ಲೈನ್ ಜೂಜು ಕೇವಲ ಆಡುವವನು ಬಾಜಿ ಕಟ್ಟಿದ ಹಣ ಮಾತ್ರ ಬರಿದು ಮಾಡುವುದಿಲ್ಲ. ಆತನ, ಬ್ಯಾಂಕ್‌ನ ಖಾತೆಯಲ್ಲಿರುವ ಹಣವನ್ನೆಲ್ಲಾ ಬರಿದುಮಾಡುವ ಅವಕಾಶಗಳೂ ಇರುತ್ತವೆ. ಆನ್‌ಲೈನ್ ಗೇಮ್‌ಗಳನ್ನು ಆಡುವವರ ಪೈಕಿ ಬಹುತೇಕರು “ಬಿಟ್ ಕಾಯಿನ್’ ವ್ಯವಹಾರ ನಡೆಸುತ್ತಾರೆ. ಇದನ್ನು ಗಮನಿಸಿಯೇ ಸೈಬರ್ ವಂಚಕರು ಅವರಖಾತೆಗಳಿಗೆಕನ್ನ ಹಾಕುವ ಸಂಭವವೂ ಇರುತ್ತದೆ. ಉಳಿದಂತೆ, ಜೂಜಿನಹುಚ್ಚಿಗೆ ಬಿದ್ದವರು ಹಣ ಹೊಂದಿಸಲು ಕಳ್ಳತನ, ಸುಲಿಗೆ ಸೇರಿ ಹಲವು ದುಷ್ಕೃತ್ಯಗಳನ್ನು ಮಾಡಿದ ಆರೋಪಿಗಳನ್ನು ಸೇವಾ ಅವಧಿಯ ಕಾರ್ಯಾಚರಣೆಯಲ್ಲಿಕಂಡು ಬಂದಿದೆ ಎನ್ನುತ್ತಾರೆ ಅಧಿಕಾರಿ.
ಮನರಂಜನೆ ಗೇಮ್ಸ್‌ಗಳ ನಿಷೇಧವಿಲ್ಲ : ಮತ್ತೂಂದೆಡೆ ರಾಜ್ಯ ಸರ್ಕಾರ ಮನರಂಜನೆಯ ಗೇಮ್ಸ್‌ಗಳನ್ನು ಯಾವುದೇ ಕಾರಣಕ್ಕೂ ನಿಷೇಧಿಸುವುದಿಲ್ಲ. ಗೇಮ್ಸ್‌ಗಳಲ್ಲಿ ಮಕ್ಕಳ ಕೌಶಲ್ಯತೆ ಹಾಗೂ ಮನರಂಜನೆಯ ಗೇಮ್ಸ್‌ಗಳು ಇವೆ. ಅವುಗಳಿಗೆ ನಿರ್ಬಂಧ ಇರುವುದಿಲ್ಲ ಎಂದು ಮೂಲಗಳು ಖಚಿತಪಡಿಸಿವೆ.
ಆನ್‌ಲೈನ್ ಬೆಟ್ಟಿಂಗ್ ಆಧಾರಿತಜೂಜು ಅವ್ಯಾಹತವಾಗಿಬೆಳೆದು ನಿಂತಿದೆ. ಪೊಲೀಸ್ ಇಲಾಖೆ ಬೆಟ್ಟಿಂಗ್ ಮೇಲೆಯೇ ವಿಶೇಷ ನಿಗಾ ಇಟ್ಟು ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದೆ. ನಿರಂತರ ಕಾರ್ಯಾಚರಣೆ ನಡೆಸುತ್ತಿದೆ. ಯುವಕರುಈ ಆನ್‌ಲೈನ್ ಗೇಮ್‌ಗಳ ಸಹವಾಸಕ್ಕೆಬೀಳಬಾರದು. – ಸಂದೀಪ್ ಪಾಟೀಲ್, ಜಂಟಿ ಆಯುಕ್ತ, ಸಿಸಿಬಿ
– ಮೋಹನ್ ಭದ್ರಾವತಿ, ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.