ಜಾಮೀನು ಅರ್ಜಿ: 9ಕ್ಕೆ ತೀರ್ಪು
Team Udayavani, Jul 7, 2018, 7:00 AM IST
ಬೆಂಗಳೂರು: ಪತ್ರಕರ್ತೆ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಮದ್ದೂರಿನ ಕೆ.ಟಿ.ನವೀನ್ ಕುಮಾರ್
ಅಲಿಯಾಸ್ ಹೊಟ್ಟೆ ಮಂಜನ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ತೀರ್ಪನ್ನು ಜುಲೈ 9ಕ್ಕೆ ಕಾಯ್ದಿರಿಸಿದೆ.
ಅರ್ಜಿ ವಿಚಾರಣೆ ಪೂರ್ಣಗೊಳಿಸಿದ 70ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ರಾಮಲಿಂಗೇ
ಗೌಡ ಅವರು ಜು.9ಕ್ಕೆ ತೀರ್ಪು ಪ್ರಕಟಿ ಸುವುದಾಗಿ ತಿಳಿಸಿದರು.
ಪ್ರಕರಣದಲ್ಲಿ ನೇಮಕಗೊಂಡಿರುವ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀಶೈಲ ವಡವಡಗಿ ಅವರು
ಗೈರಾಗಿದ್ದರಿಂದ ಎಸ್‌ಐಟಿ ತನಿಖಾಧಿಕಾರಿ ಅನುಚೇತ್ ಅವರೇ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ವಾದ ಮಂಡಿಸಿ ಜಾಮೀನು ನೀಡದಂತೆ ಮನವಿ ಮಾಡಿದರು.
ಗೌರಿ ಹತ್ಯೆ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ನವೀನ್ ಕುಮಾರ್ ಪ್ರಮುಖ ಆರೋಪಿಯಾಗಿದ್ದಾನೆ.
ಪ್ರಕರಣದ ಸಂಚಿನಲ್ಲಿ ಈತ ಭಾಗಿಯಾಗಿರುವ ಬಗ್ಗೆ ಸಂಪೂರ್ಣ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಈ
ಸಂದರ್ಭದಲ್ಲಿ ಜಾಮೀನು ನೀಡಿದರೆ ಮುಂದಿನ ತನಿಖೆಗೆ ತೊಡಕಾಗಲಿದೆ. ಆರೋಪಿ ಹೊರಬಂದರೆ ಸಾಕ್ಷ್ಯ ನಾಶದ
ಜತೆಗೆ ತನಿಖೆಯ ದಿಕ್ಕು ತಪ್ಪಿಸುವ ಸಾಧ್ಯತೆಗಳಿವೆ. ಇನ್ನು ಆರೋಪಿ ನಾರ್ಕೋ ಪರೀಕ್ಷೆಗೆ ಒಪ್ಪಿ, ನಂತರ ನಿರಾಕರಿಸುವ ಮೂಲಕ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ವಾದ ಮಂಡಿಸಿದರು.
ಇದೇ ವೇಳೆ ಆರೋಪಿ ಮಂಪರು ಪರೀಕ್ಷೆ ಕುರಿತು ಅರ್ಜಿದಾರ ಪರ ವಕೀಲರಿಗೆ ತನಿಖಾ ತಂಡದಿಂದ ನೋಟಿಸ್ ಹಾಗೂ ಮಾಹಿತಿ ನೀಡಲಾಗಿತ್ತೇ ಎಂದು ಕೋರ್ಟ್ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ತನಿಖಾಧಿಕಾರಿ ಅನುಚೇತ್ ನೋಟಿಸ್ ನೀಡಲಾಗಿತ್ತು ಎಂದರು. ನಂತರ ಅರ್ಜಿದಾರರು ಮಂಪರು ಪರೀಕ್ಷೆಗೆ ಸಮರ್ಥವಾಗಿದ್ದಾರೆಯೇ ಎನ್ನುವುದನ್ನು ಎಲ್ಲಿ ದೃಢಪಡಿಸಿಕೊಂಡಿರಿ?
ಎಂದು ನ್ಯಾಯಾಲಯ ಮತ್ತೂಮ್ಮೆ ಪ್ರಶ್ನಿಸಿತು. ಇದಕ್ಕೆ ಉತ್ತರಿಸಿದ ಅನುಚೇತ್ ಸಿಐಡಿ ಕಚೇರಿಯಲ್ಲೇ
ಪರೀಕ್ಷಿಸಲಾಗಿತ್ತು ಎಂದು ಉತ್ತರಿಸಿದರು. ಆ ವೇಳೆ ಅರ್ಜಿದಾರರ ಪರ ವಕೀಲರು ಹಾಜರಿದ್ದರೇ ಎಂಬ ಮರು ಪ್ರಶ್ನೆಗೆ ಇಲ್ಲ ಎಂದು ಅನುಚೇತ್ ಉತ್ತರಿಸಿದರು. ಹಾಗಾದರೆ ಅರ್ಜಿದಾರರ ಮೂಲಭೂತ ಹಕ್ಕನ್ನು ಕಸಿದುಕೊಂಡಂತೆ
ಆಗಲಿಲ್ಲವೇ ಎಂದು ಕೋರ್ಟ್ ಎಸ್‌ಐಟಿ ಕಾರ್ಯವೈಖರಿಗೆ ಬೇಸರ ವ್ಯಕ್ತಪಡಿಸಿತು.
ಇದಕ್ಕೆ ಆಕ್ಷೇಪಿಸಿ ಆರೋಪಿ ಪರ ವಕೀಲ ವೇದ ಮೂರ್ತಿ, ಮೂವರ ಹೇಳಿಕೆ ಆಧರಿಸಿ ನವೀನ್ ಕುಮಾರ್‌ನನ್ನು ಆರೋಪಿಯನ್ನಾಗಿಸಲಾಗಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕೆಂದು ಮನವಿ ಮಾಡಿದರು. ವಾದ-ಪ್ರತಿವಾದ ಆಲಿಸಿದ ಕೋರ್ಟ್ ಅಂತಿಮ ತೀರ್ಪನ್ನು ಜು.9 ಕ್ಕೆ ಕಾಯ್ದಿರಿಸಿ ಆದೇಶಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.