Actor Darshan: ನಟ ದರ್ಶನ್‌ಗೆ ಜಾಮೀನು; ಅಭಿಮಾನಿಗಳ ಸಂಭ್ರಮ
Team Udayavani, Dec 14, 2024, 10:59 AM IST
ಬೆಂಗಳೂರು: ನಟ ದರ್ಶನ್‌ಗೆ ಹೈಕೋರ್ಟ್‌ನಿಂದ ಜಾಮೀನು ಸಿಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿದೆ. ದರ್ಶನ್ ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಿಜಿಎಸ್ ಆಸ್ಪತ್ರೆ ಮುಂಭಾಗ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿ “ಡಿ’ ಬಾಸ್ ಘೋಷಣೆ ಕೂಗಿ ಹರ್ಷಗೊಂಡಿದ್ದಾರೆ. ಮತ್ತೂಂದೆಡೆ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ನಿವಾಸದ ಮುಂದೆ ಬಂದು ತೂಗುದೀಪ ನಿಲಯ ಎಂಬ ನಾಮಫಲಕಕ್ಕೆ ಹಾರ ಹಾಕಿ ಘೋಷಣೆ ಕೂಗಿ ಸಂಭ್ರಮಾಚರಣೆ ನಡೆಸಿದರು.
ನಟ ದರ್ಶನ್‌ಗೆ ಹೈಕೋರ್ಟ್‌ನಿಂಗ್ ಜಮೀನು ಸಿಗುತ್ತಿದ್ದಂತೆ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆ ಮುಂಭಾಗ ಸಹಸ್ರಾರು ಅಭಿಮಾನಿಗಳು ದೌಡಾಯಿಸಿ ಡಿ ಬಾಸ್‌ಗೆ ಜೈ ಎಂದು ಘೋಷಣೆ ಕೂಗಿದರು. ಆಸ್ಪತ್ರೆ ಕಾಂಪೌಂಡ್ ಬಳಿ ನಿಂತು ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರೆ, ಇನ್ನು ಕೆಲವರು ದರ್ಶನ್ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ ಹಾಲಿನ ಅಭಿಷೇಕ ಮಾಡಿದರು. ಫೋಟೊಗೆ ಕುಂಬಳಕಾಯಿ ಒಡೆದು ಮುಂದೆ ಒಳ್ಳೆಯ ದಾಗಲಿ ಎಂದು ಹಾರೈಸಿದರು. ಯಶವಂತಪುರದಲ್ಲಿ ದರ್ಶನ್ ಕಟೌಟ್ ಇರುವ ಚಿತ್ರವನ್ನು ಕೈಯಲ್ಲಿ ಹಿಡಿದು ಮಾರ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಲಾಠಿ ಬೀಸಿ ಅಭಿಮಾನಿಗಳ ನಿಯಂತ್ರಣ: ಅಭಿ ಮಾನಿಗಳು ಆಸ್ಪತ್ರೆಗೆ ಮುನ್ನುಗ್ಗಬಹುದು ಎಂಬ ಕಾರ ಣಕ್ಕೆ ಪೊಲೀಸರು ಬಿಜಿಎಸ್ ಆಸ್ಪತ್ರೆ ಬಳಿ ಬ್ಯಾರಿಕೇಡ್ ಅಳವಡಿಸಿ ಬಿಗಿ ಬಂದೋಬಸ್ತ್ ಕೈಗೊಂಡರು. ಮುನ್ನೆಚ್ಚ ರಿಕಾ ಕ್ರಮವಾಗಿ ಯಾವುದೇ ಅಹಿತಕರ ಘಟನೆ ನಡೆಯ ದಂತೆ ಪೊಲೀಸರು ಲಾಠಿ ಬೀಸಿ ಅಭಿಮಾನಿಗಳನ್ನು ಚದುರಿಸಿ ಆಸ್ಪತ್ರೆಯ ಆವರಣದಿಂದ ಕಳುಹಿಸಿದರು..
ಮನೆ ಮುಂದೆಯೂ ಸಂಭ್ರಮ: ರಾಜರಾಜೇಶ್ವರಿ ನಗರದಲ್ಲಿರುವ ತೂಗುದೀಪ ನಿವಾಸದಲ್ಲಿ ಸೇರಿದ್ದ ಹಲವು ಅಭಿಮಾನಿಗಳು ತೂಗುದೀಪ ಹೆಸರಿನ ನಾಮ ಫಲಕಕ್ಕೆ ಹಾರ ಹಾಕಿದರು. ಬಳಿಕ ಅದಕ್ಕೆ ನಮಿಸಿ ಜೈ ಡಿ ಬಾಸ್ ಎಂದು ಜೋರಾಗಿ ಘೋಷಣೆ ಕೂಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ranji Trophy: ಭಾರತ ಕ್ರಿಕೆಟ್ ಘಟಾನುಘಟಿಗಳೆಲ್ಲಾ ರಣಜಿ ಕಣಕ್ಕೆ?
Bigg Boss: ಟಾಸ್ಕ್ ಮೂಲಕ ನಡೆಯಿತು ಮಿಡ್ ವೀಕ್ ಎಲಿಮಿನೇಷನ್; ಮಹಿಳಾ ಸ್ಪರ್ಧಿ ಔಟ್
Gundlupete: ಮಾರಾಟದ ಉದ್ದೇಶದಿಂದ ಗಾಂಜಾ ಗಿಡ ಬೆಳೆದವನ ಬಂಧನ
Tulu Language: ತುಳು ಎರಡನೇ ಅಧಿಕೃತ ರಾಜ್ಯ ಭಾಷೆ ಗೌರವ ಸನ್ನಿಹಿತ
Sudip Pandey: ಸಿನಿಮಾ ಚಿತ್ರೀಕರಣದ ವೇಳೆ ಹೃದಯಾಘಾತ… ಖ್ಯಾತ ನಟ ಸುದೀಪ್ ಪಾಂಡೆ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.