ಹೆರಿಗೆ ವೇಳೆ ಪತ್ನಿ ಜತೆಗಿರಲು ಜಾಮೀನು
Team Udayavani, Nov 23, 2018, 11:29 AM IST
ಬೆಂಗಳೂರು: ತನ್ನ ಪತ್ನಿಯ ಚೊಚ್ಚಲ ಹೆರಿಗೆ ವೇಳೆ ಆಕೆಯ ಜತೆಗಿದ್ದು, ಹುಟ್ಟುವ ಮಗುವನ್ನು ನೋಡಲು, ಪೋಕೊÕà ಕಾಯ್ದೆಯಡಿ ಶಿಕ್ಷೆಗೊಳಗಾಗಿ ಜೈಲು ಸೇರಿರುವ ವ್ಯಕ್ತಿಯೊಬ್ಬನಿಗೆ ನಾಲ್ಕು ವಾರಗಳ ಕಾಲ ವಿಶೇಷ ಜಾಮೀನು ನೀಡುವ ಮೂಲಕ ಗುರುವಾರ ಹೈಕೋರ್ಟ್ ಮಾನವೀಯತೆ ಮೆರೆದಿದೆ.
ಈ ಕುರಿತು ದೇವನಹಳ್ಳಿ ಹೂಡನವಾಡಿ ವಾಸಿ ಸುರೇಂದ್ರ ಎಂಬುವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ. ಎಚ್.ಬಿ. ಪ್ರಭಾಕರ್ ಶಾಸ್ತ್ರೀ ಅವರಿದ್ದ ಏಕಸದಸ್ಯ ನ್ಯಾಯಪೀಠ, ಇದೊಂದು ಅಪರೂಪದ ಪ್ರಕರಣವೆಂದು ಪರಿಗಣಿಸಿ ಹಾಗೂ ಈ ವಿಚಾರ ಬೇರೆ ಯಾವುದೇ ಪ್ರಕರಣಕ್ಕೂ “ಪೂರ್ವನಿದರ್ಶನ’ ಆಗುವಂತಿಲ್ಲ ಎಂದು ಅಭಿಪ್ರಾಯಪಟ್ಟು, ಮೇಲ್ಮನವಿದಾರನಿಗೆ ನಾಲ್ಕು ವಾರಗಳ ಸಿಮೀತ ಅವಧಿಯ ಕಠಿಣ ಶರತ್ತುಗಳ ಜಾಮೀನು ಅವಕಾಶ ನೀಡಲಾಗಿದೆ’ ಎಂದು ತೀರ್ಪು ನೀಡಿದೆ.
ತನ್ನ ಪತ್ನಿ ಚೊಚ್ಚಲ ಹೆರಿಗೆ ಕೆಲವೇ ದಿನಗಳಲ್ಲಿ ಇದೆ. ಈ ಸಂದರ್ಭದಲ್ಲಿ ಪತ್ನಿಯ ಜತೆಗಿರಲು ಸುರೇಂದ್ರ 8 ವಾರಗಳ ಜಾಮೀನು ನೀಡುವಂತೆ ಕೇಳಿದ್ದರು. ಈ ಹಿಂದೆ ಎರಡು ಬಾರಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು. ವಿಚಾರಣಾ ಅವಧಿಯಲ್ಲಿ ಜಾಮೀನು ಸಿಕ್ಕಾಗ ಆತ ಯಾವುದೇ ಶರತ್ತುಗಳನ್ನು ಉಲ್ಲಂ ಸಿರಲಿಲ್ಲ.
ಆತ ನ್ಯಾಯಾಲಯಕ್ಕೆ ಸಲ್ಲಿಸಿರುವ ಪತ್ನಿಯ ವೈದ್ಯಕೀಯ ತಪಾಸಣೆಯ ದಾಖಲೆಗಳ ಪ್ರಕಾರ ನ.25ಕ್ಕೆ ಹೆರಿಗೆ ದಿನಾಂಕ ನೀಡಲಾಗಿದೆ. ಹೆರಿಗೆ ಸಂದರ್ಭದಲ್ಲಿ ಆತ ಪತ್ನಿಯ ಜತೆಗಿರುವುದು ತುಂಬಾ ಅವಶ್ಯಕ ಎಂಬ ಅಂಶಗಳನ್ನು ಪರಿಗಣಿಸಿ ನ್ಯಾಯಪೀಠ ಆತನಿಗೆ 2018ರ ಡಿ.20ರವರೆಗೆ ಅವಕಾಶ ನೀಡಿ ಆದೇಶಿಸಿತು.
ಶರತ್ತುಗಳು
-50 ಸಾವಿರ ರೂ. ಮೊತ್ತದ ವ್ಯಕ್ತಿಗತ ಬಾಂಡ್, ಇಬ್ಬರು ಶ್ಯೂರಿಟಿ ಹಾಜರುಪಡಿಸಬೇಕು.
-ಜಾಮೀನು ಅವಧಿಯಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ.
-ಡಿ.21ರ ಬೆಳಿಗ್ಗೆ 11ಕ್ಕೆ ಅಧೀನ ನ್ಯಾಯಾಲಯಕ್ಕೆ ಶರಣಾಗಿ, ಶಿಕ್ಷೆಯ ಅವಧಿ ಪೂರ್ಣಗೊಳಿಸಬೇಕು.
-ನಾಲ್ಕು ವಾರಗಳ ಜಾಮೀನು, ಒಟ್ಟು ಶಿಕ್ಷೆಯ ಅವಧಿಗೆ ಅನ್ವಯವಾಗುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.