ಬಂಜೆತನ ಸಮಸ್ಯೆ ನಿವಾರಿಸಿದರೆ ಸಮತೋಲನ
Team Udayavani, May 8, 2019, 3:01 AM IST
ಬೆಂಗಳೂರು: ತಾಯ್ತತನದ ಕನಸು ಕಾಣುತ್ತಿರುವ ಸ್ತ್ರೀಯರಲ್ಲಿ ಬಂಜೆತನ ಎಂಬ ಸಮಸ್ಯೆ ಎದುರಾದರೆ ಮಾನಸಿಕ ಸಮತೋಲನ ಕಳೆದುಕೊಳ್ಳುವುದಲ್ಲದೆ, ಬದುಕಿನಲ್ಲಿ ನೆಮ್ಮದಿ ಕಳೆದುಕೊಳ್ಳುವ ಸಾಧ್ಯತೆಯೂ ಇದೆ ಎಂದು ಡಾ: ರಮಾಸ್ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್ ಸಂಸ್ಥಾಪಕಿ ಮತ್ತು ಐವಿಎಫ್ ತಜ್ಞೆ ಡಾ: ಪಿ. ರಮಾ ದೇವಿ ತಿಳಿಸಿದ್ದಾರೆ.
ಇಂದಿರಾನಗರದ ಶಾಖೆಯ 6ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, 27 ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಡಾ. ರಮಾಸ್ ಇನ್ಸ್‌ಟಿಟ್ಯೂಟ್ ಫಾರ್ ಫರ್ಟಿಲಿಟಿ ಸೆಂಟರ್ ಆರಂಭಿಸಿದ್ದೆವು. ಅದು ಇದೇ ದಿನವಾದ್ದರಿಂದ ರಮಾಸ್‌ನ 28ನೇ ವರ್ಷಾಚರಣೆಯೂ ಇಂದೇ ಆಗಿದೆ.
ಇಂದಿನ ನಾಗರಿಕರು ತಮ್ಮ ಜೀವನ ಶೈಲಿಯನ್ನು ಸ್ವತ್ಛ, ಸುಂದರ ಹಾಗೂ ಆರೋಗ್ಯವಾಗಿರಿಸಿಕೊಳ್ಳದೆ ಒತ್ತಡಗಳ ಕೂಟ ಮಾಡಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪರಿಣಾಮವಾಗಿ ಬಂಜೆತನ, ಗರ್ಭಕೋಶ ಹಾಗೂ ಇನ್ನಿತರ ಸಮಸ್ಯೆಗಳಿಗೆ ಒಳಗಾಗುತಿದ್ದಾರೆ.
ಹಾಗಂತ ಬಂಜೆತನ ಎಂಬುದು ದೊಡ್ಡ ಸಮಸ್ಯೆಯಲ್ಲ ಹಾಗೂ ಇದು ಕೇವಲ ಮಹಿಳೆಯರಲ್ಲಿ ಮಾತ್ರವಲ್ಲ. ಪುರುಷರಲ್ಲೂ ಉಂಟು. ಗರ್ಭಕೋಶದ ಸಮಸ್ಯೆಗಳಿಗೆ ಐವಿಎಫ್ ಚಿಕಿತ್ಸೆ ಮಾತ್ರವೇ ಪರಿಹಾರವಲ್ಲ. ಆಹಾರಶೈಲಿ, ಆರೋಗ್ಯಕರ ವಾತಾವರಣ, ಒತ್ತಡ ನಿಯಂತ್ರಣ, ಯೋಗ, ಧ್ಯಾನ, ವ್ಯಾಯಾಮದಿಂದಲೂ ಸರಿಪಡಿಸಬಹುದು ಎಂದರು.
ಈ ವೇಳೆ ಸೆಂಟರ್‌ನ ಸಿಇಒ ಡಾ. ರಾಖಿ ಮಿಶ್ರಾ ಮಾತನಾಡಿ, ದೈನಂದಿನ ಸಮಸ್ಯೆಗಳು, ಪತಿ, ಪತ್ನಿ ಹೊಂದಾಣಿಕೆಯಲ್ಲಿ ಕೊರತೆ, ಸಂಬಂಧಗಳ ಬಗ್ಗೆ ಅಸಡ್ಡೆ, ಪರಿಸರ ಮಾಲಿನ್ಯ ಮುಂತಾದ ಕಾರಣಗಳಿಂದಲೂ ಗರ್ಭಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಬರುವ ಸಾಧ್ಯತೆ ಉಂಟು.
ಅದಕ್ಕಾಗಿ ಚಿಂತಿಸಬೇಕಾದ ಅಗತ್ಯವೂ ಇಲ್ಲ. ತಜ್ಞ ವೈದ್ಯರ ಸಲಹೆ, ಸೂಕ್ತ ಚಿಕಿತ್ಸೆ ಹಾಗೂ ಆರೈಕೆಯಿಂದ ಸರಿಪಡಿಸಬಹುದಾಗಿದೆ. ನಮ್ಮಲ್ಲಿ ಚಿಕಿತ್ಸೆಯೊಂದಿಗೆ ಸಮರಸ ಜೀವನಕ್ಕೆ ಸಲಹೆ ನೀಡುವುದು. ಗರ್ಭಿಣಿ ಸ್ತ್ರೀಯ ಆರೋಗ್ಯ ಕಾಪಾಡುವುದು.
ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ರಕ್ಷಣೆ ಹಾಗೂ ಯೋಗಕ್ಷೇಮ ನೋಡಿಕೊಳ್ಳುವ ಎಲ್ಲ ಕ್ರಿಯೆಗಳು ತಜ್ಞರ ನೇತೃತ್ವದಲ್ಲಿ ನಡೆಯುತ್ತವೆ. ಎಲ್ಲವೂ ಪಾರದರ್ಶಕ ಹಾಗೂ ಮಾನವೀಯತೆ ದೃಷ್ಟಿಕೋನದಲ್ಲಿ ನಿರ್ವಹಿಸಲಾಗುತ್ತದೆ ಎಂದು ವಿವರಿಸಿದರು.
ಬೆಂಗಳೂರು ಸೇರಿದಂತೆ ನಮ್ಮ ಸಮೂಹದಲ್ಲಿ ಎಂಟು ಸೆಂಟರ್‌ಗಳಿದ್ದು, ಮುಂಬರುವ ದಿನಗಳಲ್ಲಿ ವೈಟ್‌ಫೀಲ್ಡ್, ಕೋರಮಂಗಲ ಹಾಗೂ ಎಲೆಕ್ಟ್ರಾನಿಕ್ಸ್ ಸಿಟಿಯಲ್ಲಿ ಸುಸಜ್ಜಿತ ಸೆಟಲೈಟ್ ಸೆಂಟರ್‌ಗಳನ್ನು ತೆರೆಯಲಿದ್ದೇವೆ.
-ಡಾ. ರಾಖಿ ಮಿಶ್ರಾ. ಸೆಂಟರ್‌ನ ಸಿಇಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
National Badminton: ರೋಣಕ್ ಚೌಹಾಣ್ ಸೆಮಿಗೆ
Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್ ಹಂತಕ್ಕೇರಿದರೆ?
H.D. Kumaraswamy: 15,000 ಕೋಟಿ ರೂ. ವೆಚ್ಚದಲ್ಲಿ ಭದ್ರಾವತಿ ಕಬ್ಬಿಣ ಕಾರ್ಖಾನೆಗೆ ಮರುಜೀವ
Mandya: ಮರ ಕತ್ತರಿಸುವ ಯಂತ್ರದಿಂದ ಮನೆ ಮಾಲಕನ ಕತ್ತರಿಸಿ ಕೊ*ಲೆ
Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್ ಆ್ಯಪ್: ಸದ್ಗುರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.