ಸಾಲು ಸಾಲು ಹಬ್ಬಗಳಿಂದಾಗಿ ಶತಕದ ಗಡಿ ದಾಟಿದ ಬಾಳೆಹಣ್ಣಿನ ಬೆಲೆ
Team Udayavani, Aug 14, 2017, 12:04 PM IST
ಬೆಂಗಳೂರು: ಶ್ರಾವಣ ಮಾಸ ಬಂತೆಂದರೆ ಹಣ್ಣುಗಳ ಬೆಲೆ ಏರುವುದು ಮಾಮೂಲಿ. ಅದರಲ್ಲೂ ಈ ಮಾಸದಲ್ಲಿ ನಡೆಯುವ ವ್ರತಾಚರಣೆ, ಪೂಜೆಗಳಿಗೆ ಅಗತ್ಯವಿರುವ ಬಾಳೆ ಹಣ್ಣಿನ ದರ ಗಗನಮುಖೀಯಾಗುತ್ತದೆ. ಆದರೆ ಈ ಬಾರಿ ಮಾರುಕಟ್ಟೆಗೆ ಏಲಕ್ಕಿ ಬಾಳೆ ಹಣ್ಣಿನ ಸರಬರಾಜು ಅಸಮರ್ಪಕವಾಗಿದೆ. ಇದರೊಂದಿಗೆ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ತಿ, ದಸರಾ ಸೇರಿ ವಿವಿಧ ಹಬ್ಬಗಳು ಸಾಲುಸಾಲಾಗಿ ಬಂದಿರುವ ಹಿನ್ನೆಲೆಯಲ್ಲಿ ಏಲಕ್ಕಿ ಬಾಳೆಹಣ್ಣಿನ ಬೆಲೆ ನೂರರ ಗಡಿ ದಾಟಿದೆ.
ಕಳೆದ ಎರಡು ವಾರಗಳ ಹಿಂದೆ ಕೆಜಿ ಬಾಳೆಹಣ್ಣಿಗೆ ಕೇವಲ 60ರಿಂದ 70 ರೂ.ಗಳವರೆಗೆ ಇದ್ದ ಏಲಕ್ಕಿ ಬಾಳೆ ದರ ಇದ್ದಕ್ಕಿದ್ದಂತೆ 115ಕ್ಕೆ ಏರಿದೆ. ಶ್ರಾವಣ ಆರಂಭಗೊಂಡು ವರಮಹಾಲಕ್ಷ್ಮೀ ಹಬ್ಬದಿಂದಲೇ ಬೆಲೆಯಲ್ಲಿ ಏರಿಕೆ ಕಂಡು ಬಂದಿತ್ತು. ಇದೀಗ ಇದು ನೂರರ ಗಡಿ ದಾಟಿದ್ದು, ಮುಂದಿನ ದಿನಗಳಲ್ಲಿ ಪೂರೈಕೆ ಕೊರತೆ ಕಂಡುಬಂದಲ್ಲಿ ಮತ್ತಷ್ಟು ಬೆಲೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬುದು ಬಾಳೆ ಮಂಡಿ ಮಾಲೀಕರ ಲೆಕ್ಕಾಚಾರ.
ಮಳೆ ಕೊರತೆ ಒಂದೆಡೆಯಾದರೆ, ಈ ಮಾಸದಲ್ಲಿ ಪೂಜೆಗೆ ಅಗತ್ಯ ಹಣ್ಣುಗಳ ಕೊರತೆ ಕಂಡು ಬರುತ್ತದೆ. ಇದು ಕೂಡ ವರ್ಷ ಪೂರ್ತಿ ಬೆಳೆಯಾಗಿರುವ ಬಾಳೆಗೆ ಬೇಡಿಕೆ ಬರಲು ಕಾರಣ. ಸೇಬು, ಮೂಸಂಬಿ ಸೇರಿದಂತೆ ವಿವಿಧ ಹಣ್ಣುಗಳ ಬೆಲೆಯಲ್ಲೂ ಏರಿಕೆಯಾಗಿದೆ.
ಸರಬರಾಜು ಕೊರತೆ
ಬೆಂಗಳೂರು ನಗರಕ್ಕೆ ಪ್ರತಿದಿನ ಸುಮಾರು 1500 ಟನ್ ಬಾಳೆಹಣ್ಣಿನ ಅವಶ್ಯಕತೆ ಇದೆ. ಆದರೆ, ಪ್ರಸ್ತುತ ಕೇವಲ 300ರಿಂದ 400 ಟನ್ ಮಾತ್ರ ಸರಬರಾಜಾಗುತ್ತಿದೆ. ಆಂಧ್ರಪ್ರದೇಶ, ಕರ್ನಾಟಕ, ಕೇರಳ ರಾಜ್ಯಗಳಿಗೆ ಹೆಚ್ಚಾಗಿ ಬಾಳೆ ಹಣ್ಣನ್ನು ರಫ್ತು ಮಾಡುವ ತಮಿಳುನಾಡಿನಲ್ಲಿ ಮಳೆ ಕೊರತೆಯಿಂದ ಬಾಳೆ ಬೆಳೆ ನೆಲಕ್ಕಚ್ಚಿದ್ದು, ಕೊರತೆಗೆ ಕಾರಣ. ರಾಜ್ಯದ ಶಿವಮೊಗ್ಗ, ಶಿಕಾರಿಪುರ, ಕೊಳ್ಳೇಗಾಲ, ಕನಕಪುರ, ಚಾಮರಾಜನಗರ, ಹೊಸಪೇಟೆ ಸೇರಿ ಹಲವೆಡೆಯಿಂದ ಬೆಂಗಳೂರು ಮಾರುಕಟ್ಟೆಗೆ ಬಾಳೆ ಸರಬರಾಜಾಗುತ್ತದೆ. ಇಲ್ಲಿಯೂ ಮಳೆ ಕೊರತೆ ಬಾಧಿಸಿದ್ದು, ಸಮರ್ಪಕವಾಗಿ ಬಾಳೆ ಬೆಳೆದಿಲ್ಲ ಎನ್ನುತ್ತಾರೆ ಶ್ರೀಸರಸ್ವತಿ ಬನಾನಾ ಮರ್ಜೆಂಟ್ ಮಾಲೀಕ ಎಸ್.ಚಕ್ರಪಾಣಿ.
ಪ್ರಸ್ತು ಮಾರುಕಟ್ಟೆಯಲ್ಲಿ ಬಾಳೆಹಣ್ಣಿನ ದರ
ಬಾಳೆ ತಳಿ ಹೋಲ್‌ಸೇಲ್ ರೀಟೆಲ್ ಹಾಪ್‌ಕಾಮ್ಸ್
ಏಲಕ್ಕಿ ಬೆಳೆ 90 120 105
ಚಂದ್ರಬಾಳೆ 60 80 78
ಪಚ್ಚಬಾಳೆ 25 37 33
ನೇಂದ್ರ ಬಾಳೆ 60 80 78
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.