5ರಿಂದ ಬೆಂಗಳೂರು-ಬೆಳಗಾವಿ ವಿಮಾನ ಸೇವೆ
Team Udayavani, Jan 27, 2019, 7:29 AM IST
ಹುಬ್ಬಳ್ಳಿ: ಸಂಜಯ ಘೋಡಾವತ್ ಗ್ರುಪ್ ಒಡೆತನದ ಸ್ಟಾರ್ ಏರ್ ಕಂಪೆನಿ ಪ್ರತಿದಿನ ಹುಬ್ಬಳ್ಳಿಯಿಂದ ತಿರುಪತಿ, ಬೆಂಗಳೂರಿಗೆ ತನ್ನ ವಿಮಾನಯಾನ ಸೇವೆಯನ್ನು ಜ. 25ರಿಂದ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ಫೆ. 5ರಿಂದ ಆರಂಭಿಸಲಿದ್ದು, ಈಗಾಗಲೇ ಬುಕ್ಕಿಂಗ್ ಕೂಡ ಶುರು ಮಾಡಿದೆ.
ಸ್ಟಾರ್ ಏರ್‌ಲೈನ್ಸ್ ಕಂಪನಿಯು ಉಡಾನ್ ಯೋಜನೆಯಡಿ ಪ್ರಾದೇಶಿಕ ಸಂಪರ್ಕ ಸೇವೆ (ಆರ್‌ಸಿಎಸ್) ಅನುಸಾರ ಹುಬ್ಬಳ್ಳಿಯಿಂದ ತಿರುಪತಿ, ಬೆಂಗಳೂರಿಗೆ ಹಾಗೂ ಬೆಂಗಳೂರಿನಿಂದ ಬೆಳಗಾವಿಗೆ ವಾರದ ಎಲ್ಲಾ ದಿನಗಳಲ್ಲೂ ವಿಮಾನಯಾನ ಸೇವೆ ಒದಗಿಸಲಿದೆ. ಕಂಪನಿಯು ಈಗಾಗಲೇ ಬೆಂಗಳೂರಿನಿಂದ ಹುಬ್ಬಳ್ಳಿ ಹಾಗೂ ಹುಬ್ಬಳ್ಳಿಯಿಂದ ತಿರುಪತಿಗೆ ಪ್ರಾಯೋಗಿಕ ಹಾರಾಟವನ್ನು ಎರಡು ಬಾರಿ ಮಾಡಿದೆ ಎಂದು ತಿಳಿದುಬಂದಿದೆ.
ಸ್ಟಾರ್ ಏರ್‌ನ ಇಎಂಬಿ-145 ಏರ್‌ಕ್ರಾಫ್ಟ್ ವಿಮಾನ ಜ. 25ರಿಂದ ಪ್ರತಿದಿನ ಮಂಗಳವಾರ ಹೊರತುಪಡಿಸಿ ಇನ್ನುಳಿದ ದಿನಗಳಂದು ಬೆಂಗಳೂರು-ಹುಬ್ಬಳ್ಳಿ (ಫ್ಲೆ ೖಟ್ ಸಂಖ್ಯೆ ಓಜಿ-101) ವಿಮಾನವು ಬೆಳಗ್ಗೆ 7:35 ಗಂಟೆಗೆ ಬೆಂಗಳೂರಿನಿಂದ ಹೊರಟು 8:35 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ತಿರುಪತಿ (ಓಜಿ-103) ವಿಮಾನ ಬೆಳಗ್ಗೆ 8:55 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 10 ಗಂಟೆಗೆ ತಿರುಪತಿ ತಲುಪಲಿದೆ. ತಿರುಪತಿ-ಹುಬ್ಬಳ್ಳಿ (ಓಜಿ-104) ವಿಮಾನ ಬೆಳಗ್ಗೆ 10:20 ಗಂಟೆಗೆ ತಿರುಪತಿಯಿಂದ ಹೊರಟು 11:25 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (ಓಜಿ-102) ವಿಮಾನವು ಬೆಳಗ್ಗೆ 11:45 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12:45 ಗಂಟೆಗೆ ಬೆಂಗಳೂರು ತಲುಪಲಿದೆ.
ಫೆ. 5ರಿಂದ ಬೆಂಗಳೂರು-ಬೆಳಗಾವಿ (ಓಜಿ-105) ವಿಮಾನವು ಮಧ್ಯಾಹ್ನ 1:25 ಗಂಟೆಗೆ ಬೆಂಗಳೂರಿನಿಂದ ಹೊರಟು 2:30 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. 3 ಗಂಟೆಗೆ ಬೆಳಗಾವಿಯಿಂದ (ಓಜಿ-106) ಹೊರಟು ಸಂಜೆ 4:05 ಗಂಟೆಗೆ ಬೆಂಗಳೂರು ತಲುಪಲಿದೆ. ಪ್ರತಿ ಸೋಮವಾರ ಬೆಂಗಳೂರು-ಹುಬ್ಬಳ್ಳಿ (ಓಜಿ-101) ವಿಮಾನ ಬೆಳಗ್ಗೆ 9:40 ಗಂಟೆಗೆ ಬೆಂಗಳೂರಿನಿಂದ ಹೊರಟು 10:40 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ತಿರುಪತಿ (ಓಜಿ-103) ವಿಮಾನವು ಬೆಳಗ್ಗೆ 11:20 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು ಮಧ್ಯಾಹ್ನ 12:25 ಗಂಟೆಗೆ ತಿರುಪತಿ ತಲುಪಲಿದೆ. ತಿರುಪತಿ-ಹುಬ್ಬಳ್ಳಿ (ಓಜಿ-104) ವಿಮಾನ ಮಧ್ಯಾಹ್ನ 12:55 ಗಂಟೆಗೆ ತಿರುಪತಿಯಿಂದ ಹೊರಟು 2:05 ಗಂಟೆಗೆ ಹುಬ್ಬಳ್ಳಿಗೆ ಆಗಮಿಸಲಿದೆ. ಹುಬ್ಬಳ್ಳಿ-ಬೆಂಗಳೂರು (ಓಜಿ-102) ವಿಮಾನ ಮಧ್ಯಾಹ್ನ 2:55 ಗಂಟೆಗೆ ಹುಬ್ಬಳ್ಳಿಯಿಂದ ಹೊರಟು 3:50 ಗಂಟೆಗೆ ಬೆಂಗಳೂರು ತಲುಪಲಿದೆ.
ಫೆ. 5ರಿಂದ ಬೆಂಗಳೂರು-ಬೆಳಗಾವಿ (ಓಜಿ-105) ವಿಮಾನ ಸಂಜೆ 4:30 ಗಂಟೆಗೆ ಬೆಂಗಳೂರಿನಿಂದ ಹೊರಟು 5:35 ಗಂಟೆಗೆ ಬೆಳಗಾವಿಗೆ ಆಗಮಿಸಲಿದೆ. 6 ಗಂಟೆಗೆ ಬೆಳಗಾವಿಯಿಂದ (ಓಜಿ-106) ಹೊರಟು 7:05 ಗಂಟೆಗೆ ಬೆಂಗಳೂರು ತಲುಪಲಿದೆ. ವಿಮಾನಯಾನಿಗಳು ಕೆಲ ಷರತ್ತು, ನಿಯಮಗಳೊಂದಿಗೆ 1599 ರೂ. ಆರಂಭಿಕ ದರದೊಂದಿಗೆ ಬೆಂಗಳೂರು, ತಿರುಪತಿ, ಹುಬ್ಬಳ್ಳಿಗೆ ಪ್ರಯಾಣಿಸಬಹುದು.
ಚೆನ್ನೈ, ಬೆಂಗಳೂರು ಸ್ಪೆ ೖಸ್‌ಜೆಟ್ ಸೇವೆ ಸ್ಥಗಿತ
ಸ್ಪೆ ೖಸ್‌ಜೆಟ್ ಕಂಪನಿಯವರು ಉಡಾನ್ ಯೋಜನೆಯಡಿ ಹುಬ್ಬಳ್ಳಿ-ಚೆನ್ನೈ ಮತ್ತು ಚೆನ್ನೈ-ಹುಬ್ಬಳ್ಳಿ ಹಾಗೂ ಬೆಂಗಳೂರಿನಿಂದ ಹುಬ್ಬಳ್ಳಿಗೆ ಮತ್ತು ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒದಗಿಸುತ್ತಿದ್ದ ವಿಮಾನಯಾನ ಸೇವೆಯನ್ನು ಜ. 1ರಿಂದ ಕಾರ್ಯಾಚರಣೆಯ ಕಾರಣ ನೀಡಿ ಸ್ಥಗಿತಗೊಳಿಸಿದೆ. ಈ ಮೊದಲು ಕಂಪನಿಯು ಹುಬ್ಬಳ್ಳಿಯಿಂದ ಹೈದರಾಬಾದ್‌ಗೆ ಒದಗಿಸುತ್ತಿದ್ದ ಸೇವೆಯನ್ನು ನವೆಂಬರ್‌ದಲ್ಲಿಯೇ ಸ್ಥಗಿತಗೊಳಿಸಿತ್ತು. ಈಗ ಮತ್ತೆ ಎರಡು ಪ್ರಮುಖ ಪ್ರದೇಶಗಳಿಗೆ ಒದಗಿಸುತ್ತಿದ್ದ ಸೇವೆಯನ್ನು ನಿಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Arrested: ಮಾದಕವಸ್ತು ದಂಧೆ ಪ್ರಕರಣದಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
Bengaluru: ಸೆಂಟ್ರಿಂಗ್ ಮರ ಬಿದ್ದು ಬಾಲಕಿ ಸಾವು: ಎಂಜಿನಿಯರ್ ವಶಕ್ಕೆ
Actor Darshan: ಮೈಸೂರಿಗೆ ತೆರಳಲು ದರ್ಶನ್‌ಗೆ ನೀಡಿದ್ದ 2 ವಾರಗಳ ಗಡುವು ಅಂತ್ಯ
Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್, ಮತ್ತಿಬ್ಬರ ಮೇಲೆ ಕೇಸ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.