ಅಕ್ರಮ ಸಂಬಂಧ, ಹಣಕಾಸು ವಿಚಾರವೇ ಕೊಲೆಗೆ ಕಾರಣ; ಸಾಲ ವಾಪಸ್‌ಗೆ ಸರೋಜಾಳನ್ನು ಪೀಡಿಸುತ್ತಿದ್ದ ಯುವಕ
ನೆಲಕ್ಕೆ ಕೆಡವಿ 20 ಬಾರಿ ಕಲ್ಲು ಎತ್ತಿ ಹಾಕಿ ಕೊಂದ ಪ್ರಕರಣ
Team Udayavani, Dec 8, 2022, 5:49 PM IST
ಬೆಂಗಳೂರು: ಇತ್ತೀಚೆಗೆ ಕೆ.ಪಿ.ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ನಡೆದ ಬಾದಾಮಿ ತಾಲೂಕಿನ ಮಂಜುನಾಥ್ ಬಾಳಪ್ಪ ಜಮಖಂಡಿ ಎಂಬಾತನ ಭೀಕರ ಹತ್ಯೆಗೆ ಅಕ್ರಮ ಸಂಬಂಧ ಮಾತ್ರವಲ್ಲ, ಹಳೇ ದ್ವೇಷ, ಜಮೀನು ಹಾಗೂ ಹಣಕಾಸಿನ ವಿಚಾರ ಕೂಡ ಕಾರಣ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ವಿಜಯಪುರ ಜಿಲ್ಲೆಯ ಪ್ರೇಮವ್ವ, ಆಕೆಯ ಅಕ್ಕ ಮಹಾದೇವಿ, ಈಕೆಯ ಪತಿ ಮಂಜುನಾಥ್, ಸಂಬಂಧಿ ಕಿರಣ್, ಕಾಶಿನಾಥ್, ಚಿನ್ನಪ್ಪ ಎಂಬುವರನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಸರೋಜಾ ಎಂಬಾಕೆಗಾಗಿ ಶೋಧ ನಡೆಸಲಾಗುತ್ತಿದೆ. ಡಿ.4ರಂದು ನಸುಕಿನ 1 ಗಂಟೆ ಸುಮಾರಿಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಮಂಜುನಾಥ್ ಬಾಳಪ್ಪ ಜಮಖಂಡಿ(22) ಎಂಬಾತನ ಮೇಲೆ ಕೊಲೆಗೈದು ಪರಾರಿಯಾಗಿದ್ದರು.
ಬಾಗಲಕೋಟೆಯಲ್ಲೇ ಪರಿಚಯ: ಬಾಗಲಕೋಟೆಯ ಬಾದಾಮಿ ತಾಲೂಕಿನಲ್ಲಿ ಮಂಜುನಾಥ್ ಬಾಳಪ್ಪ ಜಮಖಂಡಿ ಖಾನಾವಳಿ ನಡೆಸುತ್ತಿದ್ದು, ಸರೋಜಾ ಪತಿ ದುಬೈನಲ್ಲಿದ್ದರು. ಹೀಗಾಗಿ ಈಕೆ ಇಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದಳು. ಈ ವೇಳೆ ಇಬ್ಬರ ನಡುವೆ ಪರಿಚಯವಾಗಿದ್ದು, ಲಿವಿಂಗ್ ಟುಗೇದರ್‌ನಲ್ಲಿ ವಾಸವಾಗಿದ್ದರು. ಈ ವಿಚಾರ ಆಕೆಯ ತಾಯಿ ಪ್ರೇಮವ್ವ, ಸಹೋದರಿ ಅಕ್ಕಮಹಾದೇವಿ ಹಾಗೂ ಕುಟುಂಬಕ್ಕೂ ಗೊತ್ತಿತ್ತು. ಮತ್ತೂಂದೆಡೆ ದುಬೈನಲ್ಲಿರುವ ಪತಿಗೆ ಗೊತ್ತಾಗಿ, ಆತ ಪ್ರೇಮವ್ವ ಜತೆ ಫೋನ್‌ನಲ್ಲಿ ಜಗಳ ಮಾಡಿದ್ದ. ಹೀಗಾಗಿ ಇಡೀ ಕುಟುಂಬ ಆಕ್ರೋಶಗೊಂಡಿತ್ತು.
ಆದರೆ, ಮಂಜುನಾಥ್, ಖಾನಾವಳಿ ಮಾರಾಟ ಮಾಡಿ, ಬಂದ ಹಣದಲ್ಲಿ ಒಂದಿಷ್ಟನ್ನು ಪ್ರೇಯಸಿ ಸರೋಜಾಗೂ ಕೊಟ್ಟಿದ್ದ. ಒಂದೂವರೆ ವರ್ಷದ ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ ದೂರವಾಗಿದ್ದರು. ಆಗಿನಿಂದಲೂ ಮಂಜುನಾಥ್ ಬಾಳಪ್ಪ ಹಣ ವಾಪಸ್ ಕೊಡುವಂತೆ ಪೀಡಿಸುತ್ತಿದ್ದ. ಈ ಸಂಬಂಧ ಸರೋಜಾ ಮತ್ತು ಆಕೆಯ ಕುಟುಂಬ ಸದಸ್ಯರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ವಿರುದ್ಧ ದೂರು ನೀಡಿದ್ದರು. ಬಳಿಕ ಆಕೆ ದಾವಣಗೆರೆಗೆ ಸ್ಥಳಾಂತರಗೊಂಡು ಅಲ್ಲಿಯೂ ಬಟ್ಟೆ ವ್ಯಾಪಾರ ಮಾಡುವಾಗ ಅಲ್ಲಿಗೂ ಬಂದ ಮಂಜುನಾಥ್, ಹಣಕ್ಕಾಗಿ ಕಿರುಕುಳ ನೀಡಲು ಆರಂಭಿಸಿದ್ದ. ಅಲ್ಲಿನ ಸ್ಥಳೀಯ ಠಾಣೆಯಲ್ಲಿ ಮಂಜುನಾಥ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು.
ಒಂದು ವಾರದ ಹಿಂದೆ ಬಂದಿದ್ದ ಸರೋಜಾ: ಕೃತ್ಯಕ್ಕೂ ಒಂದು ವಾರದ ಹಿಂದಷ್ಟೇ ಸರೋಜಾ ಬೆಂಗಳೂರಿಗೆ ಬಂದಿದ್ದು, ಸಹೋದರಿ ಅಕ್ಕಮಹಾದೇವಿ ಮನೆಯಲ್ಲಿ ವಾಸವಾಗಿದ್ದಳು. ಒಂದೆರಡು ದಿನಗಳಲ್ಲಿ ಪ್ರತ್ಯೇಕ ಬಾಡಿಗೆ ಮನೆ ಮಾಡಿಕೊಂಡು, ಕೆಲಸ ಹುಡುಕುತ್ತಿದ್ದಳು.
ಆಕೆಯ ಬೆನ್ನತ್ತಿ ಬಂದಿದ್ದ ಮಂಜುನಾಥ್ ಆಕೆಗೆ ಕರೆ ಮಾಡಿ ಹಣ ಕೊಡುವಂತೆ ಪೀಡಿಸಿದ್ದ. ಅದರಿಂದ ಆಕ್ರೋಶಗೊಂಡಿದ್ದ ಇಡೀ ಕುಟುಂಬ ಕೊಲೆಗೆ ಸಂಚು ರೂಪಿಸಿತ್ತು. ನಂತರ ಆತನನ್ನು ಮಾತುಕತೆಗೆಂದು ಕರೆದು, ನಡು ರಸ್ತೆಯಲ್ಲಿ ವಾಗ್ವಾದ ನಡೆಸಿದ್ದರು. ಆದರೆ, ಇದ್ಯಾವುದಕ್ಕೂ ಒಪ್ಪದ ಮಂಜುನಾಥ್ ತನಗೆ ಹಣಬೇಕೆಂದು ಆಗ್ರಹಿಸಿದ್ದ. ಅದರಿಂದ ಆಕ್ರೋಶಗೊಂಡ ಆರೋಪಿಗಳು ನೆಲಕ್ಕೆ ಕೆಡವಿ ಹಲ್ಲೆ ನಡೆಸಿದ್ದಾರೆ. ಆಗ ಪ್ರೇಮವ್ವ ಈ ಹಿಂದಿನಿಂದಲೂ ತಮ್ಮ ಕುಟುಂಬಕ್ಕೆ ತೊಂದರೆ ಕೊಡುತ್ತಿದ್ದವನನ್ನು ಕೊಲೆಗೈಯಬೇಕೆಂದು ಕಲ್ಲು ಎತ್ತಿ ಹಾಕಿದ್ದಾಳೆ. ನಂತರ ಆಕೆಯ ಪುತ್ರಿ, ಅಕ್ಕಮಹಾದೇವಿ, ಸರೋಜಾ ಹಾಗೂ ಇತರೆ ಆರೋಪಿಗಳು 20 ಬಾರಿಕಲ್ಲು ಎತ್ತಿ ಹಾಕಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ಹೇಳಿದರು.
ತಾಯಿಗೆ ಮಾಹಿತಿ ನೀಡಿದ್ದ ಮಂಜುನಾಥ್
ತಾನೂ ಸರೋಜಾಳಿಂದ ಹಣ ಪಡೆಯಲು ಬೆಂಗಳೂರಿಗೆ ಹೋಗುತ್ತಿದ್ದಾಗಿ ತಾಯಿಗೆ ತಿಳಿಸಿದ್ದ. ಅಲ್ಲದೆ, ಬೆಂಗಳೂರಿಗೆ ಬಂದಾಗ ಕರೆ ಮಾಡಿ, ತನಗೆ ಏನಾದರೂ ತೊಂದರೆ ಉಂಟಾದರೆ, ಮಾಗಡಿ ರಸ್ತೆಯಲ್ಲಿರುವ ಸರೋಜಾಳ ವಿಳಾಸ ತಿಳಿಸಿದ್ದ. ಈತ ಮಂಜುನಾಥ್ ಬಾಳಪ್ಪನ ಗುರುತು ಪತ್ತೆ ಹಚ್ಚಿದ ಪೊಲೀಸರಿಗೆ ಆತ ತಾಯಿಗೆ ಕರೆ ಮಾಡಿರುವ ವಿಚಾರ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದರು.
ಇದೊಂದು ಪೂರ್ವನಿಯೋಜಿತ ಕೊಲೆ. ಪ್ರಾಥಮಿಕ ವಿಚಾರಣೆಯಲ್ಲಿ ಹಣಕಾಸು ಹಾಗೂ ಇತರೆ ವಿಚಾರಗಳಿಗೆ ಕೃತ್ಯ ನಡಿದಿದೆ ಎಂಬುದು ಗೊತ್ತಾಗಿದೆ. ಸರೋಜಾ ಬಂಧಿಸಿದ ಬಳಿಕ ಸಂಪೂರ್ಣ ಮಾಹಿತಿ ತಿಳಿಯಲಿದೆ. –ಲಕ್ಷ್ಮಣ್ ನಿಂಬರಗಿ, ಪಶ್ಚಿಮ ವಿಭಾಗ ಡಿಸಿಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
Bengaluru:ಬೈಕ್ ಶೋರೂಂನಲ್ಲಿ ಬೆಂಕಿ ಅವಘಡ; ಸುಟ್ಟು ಹೋದ 50ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳು
New Year: ಎಂ.ಜಿ.ರಸ್ತೆ ಸುತ್ತ 15 ಮೆ.ಟನ್ ಕಸ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Prajwal Devaraj; ಶಿವರಾತ್ರಿಗೆ ʼರಾಕ್ಷಸʼ ಅಬ್ಬರ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.