Crime News: ರೌಡಿಶೀಟರ್ ಹತ್ಯೆ; 8 ಮಂದಿ ಬಂಧನ
Team Udayavani, Nov 12, 2023, 9:32 AM IST
ಬೆಂಗಳೂರು: ಹಳೇ ದ್ವೇಷಕ್ಕೆ ರೌಡಿಶೀಟರ್ ಸಹ ದೇವನ ಹತ್ಯೆಗೈದಿದ್ದ ಎಂಟು ಮಂದಿ ಆರೋಪಿ ಗಳನ್ನು ಪುಟ್ಟೇನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪುಟ್ಟೇನಹಳ್ಳಿ ನಿವಾಸಿಗಳಾದ ವಿನಯ್ ಅಲಿ ಯಾಸ್ ಕರಿಯಾ(28), ಅಭಿಷೇಕ್ ಅಲಿಯಾಸ್ ಧರ್ಮ (27), ಅಕ್ಷಯ್ ಅಲಿಯಾಸ್ ನಾಗಿ(22), ಕಿಶೋರ್ ಅಲಿಯಾಸ್ ಕಚೌರಿ (26), ನಿಶಾಂತ್ (24), ಗಣೇಶ್ ಅಲಿಯಾಸ್ ಗಣಿ (30), ಸೊಹೇಬ್ (26) ಮತ್ತು ಕಿರಣ್ (30) ಬಂಧಿತರು.
ಆರೋಪಿಗಳು ನ.8ರಂದು ರಾತ್ರಿ 9.30ಕ್ಕೆ ಚುಂಚ ಘಟ್ಟ ಮುಖ್ಯರಸ್ತೆಯಲ್ಲಿ ಟೀ ಕುಡಿಯಲು ಬೇಕರಿ ಬಳಿಗೆ ಬಂದಿದ್ದ ಕೋಣನಕುಂಟೆ ಠಾಣೆ ರೌಡಿಶೀಟರ್ ಸಹದೇವನನ್ನು (32) ಮಾರಕಾಸ್ತ್ರಗಳಿಂದ ಕೊಲೆಗೈದು ಪರಾರಿಯಾಗಿದ್ದರು. ಈ ಹಿಂದೆ ಗಣೇಶ ವಿಸರ್ಜನೆ ವಿಚಾರವಾಗಿ ಆರೋಪಿ ವಿನಯ್ ಹಾಗೂ ರಾಬರಿ ನವೀನ್ ಎಂಬಾತನ ನಡುವೆ ಗಲಾಟೆಯಾಗಿತ್ತು. ಆ ಸಂದರ್ಭದಲ್ಲಿ ವಿನಯ್ ಮತ್ತು ಆತನ ಸಹೋದರನ ಮೇಲೆ ನವೀನ್ ಹಲ್ಲೆ ಮಾಡಿದ್ದ. ಗಲಾಟೆಯ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸೌಟಿನಿಂದ ಹಲ್ಲೆ: ನ.8ರಂದು ಚುಂಚಘಟ್ಟ ಮುಖ್ಯರಸ್ತೆಯ ಬೇಕರಿಯೊಂದರ ಬಳಿ ಸಹದೇವ ಟೀ ಕುಡಿಯಲು ಬಂದಿದ್ದ. ಈ ವೇಳೆ ಅಲ್ಲಿಯೇ ಇದ್ದ ವಿನಯ್ ಮತ್ತು ಗ್ಯಾಂಗ್ ನವೀನ್ ಬಗ್ಗೆ ವಿಚಾರಿಸುತ್ತಾ ಸಹದೇವನೊಂದಿಗೆ ಗಲಾಟೆ ಆರಂಭಿಸಿತ್ತು. ಈ ವೇಳೆ ಸಹದೇವ ಯಾಕೆ ನಮ್ಮ ಹುಡುಗನ ಬಗ್ಗೆ ವಿಚಾರಿಸುತ್ತಿದ್ದೀರಾ? ಅವತ್ತು ಕೊಟ್ಟಿದ್ದು ಸಾಕಾಗಿಲ್ವಾ? ಎಂದಿದ್ದಾನೆ. ಅದರಿಂದ ಆಕ್ರೋಶಗೊಂಡ ವಿನಯ್ ಹಾಗೂ ಧರ್ಮ, ಸ್ಥಳದಲ್ಲಿ ಬೋಂಡಾ ಅಂಗಡಿಯವನ ಕೈಯಲ್ಲಿದ್ದ ಸೌಟು ಕಿತ್ತುಕೊಂಡು ಸಹದೇವನ ಮೇಲೆ ಹಲ್ಲೆ ನಡೆಸಿದ್ದರು.
ಸ್ಥಳದಲ್ಲೇ ಸಾವು: ಗಾಯಗೊಂಡು ಕೆಳಗೆ ಬಿದ್ದಿದ್ದ ಸಹದೇವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿತ್ತು. ತೀವ್ರ ರಕ್ತಸ್ರಾವದಿಂದ ಸಹದೇವ ಸ್ಥಳದಲ್ಲೇ ಮೃತಪಟ್ಟಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಎಂಟು ಮಂದಿಯನ್ನು ಬಂಧಿಸಲಾಗಿದೆ. ಮತ್ತೂಂದೆಡೆ ಸಹದೇವ ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದಲ್ಲಿ 2ನೇ ಆರೋಪಿಯಾಗಿದ್ದು, ರೌಡಿಶೀಟರ್ ಆಗಿದ್ದಾನೆ. ಹೀಗಾಗಿ ಒಂದು ವೇಳೆ ಆತನನ್ನು ಸುಮ್ಮನೆ ಬಿಟ್ಟರೆ, ಮುಂದಿನ ದಿನಗಳಲ್ಲೇ ತಮ್ಮ ಮೇಲೆಯೆ ಹಲ್ಲೆ ನಡೆಸುತ್ತಾನೆ ಎಂದು ಹತ್ಯೆಗೈದಿದ್ದಾರೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ
Arrested: ನಕಲಿ ದಾಖಲೆ ನೀಡಿ ಟಿಡಿಎಸ್ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.