ಕಾರಿನ ಲೈಟ್ ಒಡೆದು ಹಾಕಿದ್ದಕ್ಕೆ ಆತ್ಮಹತ್ಯೆ
Team Udayavani, Jul 3, 2023, 12:11 PM IST
ಬೆಂಗಳೂರು: ಕಾರಿನ ಲೈಟ್ ಒಡೆದು ಹಾಕಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ತಾಯಿಯೊಬ್ಬರು ಪೊಲೀಸ್ ಠಾಣೆಗೆ ದೂರು ಕೊಟ್ಟಿರುವ ವಿಚಿತ್ರ ಪ್ರಕರಣ ಎಚ್ಎಸ್ಆರ್ ಲೇಔಟ್ನಲ್ಲಿ ನಡೆದಿದೆ.
ಎಚ್ಎಸ್ಆರ್ ಲೇಔಟ್ನ ನಿವಾಸಿ ಫಾಜಿಲಾ (60) ದೂರು ನೀಡಿದವರು.
ಫಾಜಿಲಾ ವಾಸವಿದ್ದ ಮನೆಯ ಸಮೀಪದ ರಸ್ತೆಯಲ್ಲಿರುವ ಪಾರ್ಕ್ ಒಳಗೆ ವರಸಿದ್ಧಿ ವಿನಾಯಕ ದೇವಾಲಯವಿದೆ. ಅಲ್ಲಿನ ಧ್ವನಿವರ್ಧಕ ಹಾಗೂ ದೇವಸ್ಥಾನದ ಸಮಿತಿಯ ಹುಡುಗರು ತಮ್ಮ ಮನೆಯ ಮುಂದೆ ಫುಟ್ಬಾಲ್ ಆಡುವುದರಿಂದ ತಮಗೆ ಸಮಸ್ಯೆಯಾಗುತ್ತಿದೆ ಎಂದು ಅವರ ಬಳಿ ಹೇಳಿಕೊಂಡಿದ್ದರು. ಈ ವೇಳೆ ಸಮಿತಿಯ ಹುಡುಗರು ಮತ್ತು ಫಜಿಲಾ ನಡುವೆ ಜಗಳವಾಗಿತ್ತು. ಆ ವೇಳೆ ಹುಡುಗರು ನನ್ನ ಕಾರಿನ ಲೈಟ್ ಒಡೆದಿದ್ದಾರೆ. ಇದರಿಂದ ಮನನೊಂದು ನನ್ನ 20 ವರ್ಷ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಫಾಜಿಲಾ ದೂರಿನಲ್ಲಿ ಆರೋಪಿಸಿದ್ದಾರೆ.
ಆದರೆ, ದೂರಿನಲ್ಲಿ ಸಾಕಷ್ಟು ಅನುಮಾನ ಕಂಡು ಬಂದಿದ್ದು, ಪೊಲೀಸರು ವಿಚಾರಣೆ ನಡೆಸಿ ತನಿಖೆ ನಡೆಸಿದಾಗ ಫಾಜಿಲಾ ಅವರ ಮಗಳು ಖಿನ್ನತೆಯಿಂದ ಬಳಲುತ್ತಿದ್ದು, ಅದೇ ಕಾರಣ ದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ಯಲ್ಲಿ ಎಫ್ಐಆರ್ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್… ರಮೇಶ್ ಜಾರಕಿಹೊಳಿ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.