ಬೆಂಗಳೂರು ಪಂಚ ಪಾಲಿಕೆ


Team Udayavani, Jun 29, 2018, 11:38 AM IST

bangalore.jpg

ಬೆಂಗಳೂರು: ಬಿಬಿಎಂಪಿ ವಿಭಜನೆ ಕುರಿತು ರಾಜ್ಯ ಸರ್ಕಾರ ರಚಿಸಿದ್ದ ತಜ್ಞರ ಸಮಿತಿ ಅಂತಿಮ ವರದಿ ಸಲ್ಲಿಸಿದ್ದು, ಐದು ಪಾಲಿಕೆ ರಚನೆ, ಮೂರು ಹಂತದ ಆಡಳಿತ, ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ 400 ವಾರ್ಡ್‌ಗಳ ರಚನೆಗೆ ಶಿಫಾರಸು ಮಾಡಿದೆ.

ಆಡಳಿತವನ್ನು ವಾರ್ಡ್‌, ಪಾಲಿಕೆ ಹಾಗೂ ಗ್ರೇಟರ್‌ ಬೆಂಗಳೂರು ಎಂಬುದಾಗಿ ವಿಂಗಡಿಸಿ ಮೂರು ಹಂತದ ವಿಕೇಂದ್ರೀಕೃತ ಆಡಳಿತ ವ್ಯವಸ್ಥೆ ತರಬೇಕು. ನಾನಾ ಇಲಾಖೆಗಳು, ಏಜೆನ್ಸಿಗಳ ನಡುವೆ ಆರಂಭದಲ್ಲಿ ಸಮನ್ವಯಕ್ಕಾಗಿ ಐದು ವರ್ಷ ಮುಖ್ಯಮಂತ್ರಿಗಳೇ ಇದರ ನೇತೃತ್ವ ವಹಿಸಬೇಕು.

ಎಲ್ಲ ವ್ಯವಸ್ಥೆ ಸಜ್ಜುಗೊಂಡ ಬಳಿಕ ಜನರಿಂದಲೇ ನೇರವಾಗಿ ಮೇಯರ್‌ ಆಯ್ಕೆ ವ್ಯವಸ್ಥೆ ಜಾರಿಯಾಗಬೇಕು. ಮೇಯರ್‌ ಅಧಿಕಾರಾವಧಿ ಒಂದು ವರ್ಷಕ್ಕೆ ಸೀಮಿತವಾಗಿರದೆ ಐದು ವರ್ಷದ ಪೂರ್ಣಾವಧಿ ಅಧಿಕಾರವಿರಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ.

ವಾರ್ಡ್‌ ಮಟ್ಟದಲ್ಲಿ ಪಾಲಿಕೆ ಸದಸ್ಯರ ಅಧ್ಯಕ್ಷತೆಯಲ್ಲಿ 20 ಸದಸ್ಯರ ಸಮಿತಿ ರಚಿಸಬೇಕು. ಇದರಲ್ಲಿ ಏಳೆಂಟು ಅಧಿಕಾರಿಗಳು, ಸ್ಥಳೀಯರು, ತಜ್ಞರಿರಬೇಕು. ವಾರ್ಡ್‌ ವ್ಯಾಪ್ತಿಯ ಎಲ್ಲ ಸಮಸ್ಯೆಗಳ ನಿವಾರಣೆಗೆ ಸೂಕ್ತ ನಿರ್ಧಾರ ಕೈಗೊಳ್ಳುವ ಅಧಿಕಾರ ಸಮಿತಿಗಿರಬೇಕು.

ಎರಡನೇ ಹಂತದಲ್ಲಿ ಪಾಲಿಕೆ ಸದಸ್ಯರ ಒಂದು ಸಮೂಹ ಒಬ್ಬರ ಮೇಯರ್‌ರನ್ನು ಆಯ್ಕೆ ಮಾಡುತ್ತದೆ. ಒಟ್ಟು ಐದು ಪಾಲಿಕೆಗಳನ್ನು ರಚಿಸಬಹುದು. ಆಯಾ ಪ್ರದೇಶದ ಕುಂದುಕೊರತೆ ನಿವಾರಣೆ, ತೆರಿಗೆ ಸಂಗ್ರಹ, ಯೋಜನೆಗಳ ಅನುಷ್ಠಾನದ ಜವಾಬ್ದಾರಿ ಮೇಯರ್‌ ಅವರಿಗಿರಲಿದೆ. ಮೂರನೇ ಹಂತದಲ್ಲಿ ಜನರಿಂದ ಆಯ್ಕೆಯಾದ ಮೇಯರ್‌ ಇರಲಿದ್ದಾರೆ.

ಬೃಹತ್‌ ಯೋಜನೆಗಳನ್ನು ರೂಪಿಸುವುದು, ಅನುಷ್ಠಾನ, ಸಂಚಾರ ದಟ್ಟಣೆ ಸಮಸ್ಯೆ ಸೇರಿದಂತೆ ಇತರೆ ಪ್ರಮುಖ ಸಮಸ್ಯೆಗಳ ನಿವಾರಣೆಗೆ ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಸಾಧಿಸುವ ಜವಾಬ್ದಾರಿ ಈ ಮೇಯರ್‌ಗೆ ಇರಬೇಕು ಎಂಬುದನ್ನೂ ಶಿಫಾರಸಿನಲ್ಲಿ ಉಲ್ಲೇಖೀಸಲಾಗಿದೆ.

 ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ಅಧ್ಯಕ್ಷತೆಯಲ್ಲಿ ಸದಸ್ಯರಾದ ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ, ನಗರತಜ್ಞ ವಿ.ರವಿಚಂದರ್‌ ಅವರನ್ನು ಒಳಗೊಂಡ ಸಮಿತಿಯು ಗುರುವಾರ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಅಂತಿಮ ವರದಿ ಸಲ್ಲಿಸಿ ಮಾಹಿತಿ ನೀಡಿತು.

ನಂತರ ಮಾತನಾಡಿದ ಬಿ.ಎಸ್‌.ಪಾಟೀಲ್‌, ಬಿಬಿಎಂಪಿ ಪುನಾರಚನೆ ಸಮಿತಿಯು 2,500 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಒಂದು ಕೋಟಿಗಿಂತ ಹೆಚ್ಚು ಜನ ನೆಲೆಸಿರುವ ಬೆಂಗಳೂರನ್ನು ಸದ್ಯ ಜಾರಿಯಲ್ಲಿರುವ ವ್ಯವಸ್ಥೆಯಿಂದ ನಿರ್ವಹಿಸಲು ಸಾಧ್ಯವಿಲ್ಲ ಎಂಬುದು ಅಧ್ಯಯನದಿಂದ ಸ್ಪಷ್ಟವಾಗಿದೆ. ಹಾಗಾಗಿ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ಜಾರಿಗೊಳಿಸುವುದು ಸೂಕ್ತ ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು. 

ಸಮಿತಿ ಸದಸ್ಯ ವಿ.ರವಿಚಂದರ್‌, ಕೋಲ್ಕತ್ತಾದಲ್ಲಿ 32, ಮುಂಬೈನಲ್ಲಿ 8, ದೆಹಲಿಯಲ್ಲಿ 3 ಹಾಗೂ ಲಂಡನ್‌ನಲ್ಲಿ 32 ಪಾಲಿಕೆಗಳಿವೆ. ಬೆಂಗಳೂರಿನಷ್ಟು ವಿಸ್ತಾರ ಪ್ರದೇಶ, ದೊಡ್ಡ ಜನಸಮೂಹವಿರುವ ನಗರಕ್ಕೆ ಕೇವಲ ಒಂದು ಪಾಲಿಕೆ ಇರುವ ವ್ಯವಸ್ಥೆ ಜಗತ್ತಿನಲ್ಲಿ ಬೇರೆಲ್ಲೂ ಇಲ್ಲ.

ಬ್ರ್ಯಾಂಡ್‌ ಬೆಂಗಳೂರಿಗೆ ಚ್ಯುತಿ ಉಂಟಾಗದಂತೆ ಬೆಂಗಳೂರು ಕೇಂದ್ರ, ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಪಾಲಿಕೆಗಳನ್ನು ರಚಿಸಬಹುದು ಎಂದು ಶಿಫಾರಸು ಮಾಡಲಾಗಿದೆ ಎಂದು ತಿಳಿಸಿದರು. ಸಮಿತಿ ಸದಸ್ಯ ಸಿದ್ದಯ್ಯ, ಹೊಸದಾಗಿ ವೃಂದ ಮತ್ತು ನೇಮಕಾತಿ ನಿಯಮ ರೂಪಿಸಬೇಕು. ಪೌರ ಕಾರ್ಮಿಕರನ್ನು ಹೊರತುಪಡಿಸಿ ಪಾಲಿಕೆಯ ಎಲ್ಲ ಹುದ್ದೆ ನೇಮಕಾತಿಗೆ ಲಿಖೀತ ಪರೀಕ್ಷೆ ಕಡ್ಡಾಯಗೊಳಿಸಿ, ಸಂದರ್ಶನ ವ್ಯವಸ್ಥೆ ರದ್ದುಪಡಿಸಬೇಕು.

ನೇಮಕಾತಿಗೆ ಲಿಖೀತ ಪರೀಕ್ಷೆ ನಡೆಸುವ ಕಾರ್ಯವನ್ನು ಭಾರತೀಯ ವಿಜ್ಞಾನ ಸಂಸ್ಥೆ, ಭಾರತೀಯ ವಾಣಿಜ್ಯಶಾಸ್ತ್ರ ಸಂಸ್ಥೆಗೆ (ಐಐಎಂಬಿ) ಹೊರಗುತ್ತಿಗೆ ನೀಡಬೇಕು. ಪ್ರತಿ ಹುದ್ದೆಗೆ ಆಯಾ ಕ್ಷೇತ್ರದಲ್ಲಿ ಪರಿಣತಿ, ವಿದ್ಯಾರ್ಹತೆಯನ್ನು ನಿಗದಿಪಡಿಸಲಾಗಿದೆ. ನೇಮಕದ ಬಳಿಕ ಆರು ತಿಂಗಳ ತರಬೇತಿ ಕಡ್ಡಾಯಗೊಳಿಸಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.

ಪ್ರತ್ಯೇಕ ಕಾಯ್ದೆ: ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು. ವಿಸ್ತಾರ ಪ್ರದೇಶ, ಅಗಾಧ ಜನಸಂಖ್ಯೆಯಿರುವ ನಗರದಲ್ಲಿ ಯಶಸ್ವಿಯಾಗಿ ಸೌಲಭ್ಯ ಕಲ್ಪಿಸಲು ಕಾಯ್ದೆ ಅಗತ್ಯ. ಈ ಕಾಯ್ದೆಯು ಪಾಲಿಕೆ ಆಡಳಿತಕ್ಕಷ್ಟೇ ಸೀಮಿತವಾಗಿರದೆ ಸಮಗ್ರ ಬೆಂಗಳೂರಿಗೆ ಅನ್ವಯವಾಗಲಿದೆ.

ಬೃಹತ್‌ ವರದಿ: ಬೆಂಗಳೂರಿಗೆ ಪ್ರತ್ಯೇಕ ಕಾಯ್ದೆ, ವೃಂದ ಮತ್ತು ನೇಮಕಾತಿ ನಿಯಮಾವಳಿ, ಯೋಜನೆ, ಭೂಸ್ವಾಧೀನ ಸೇರಿದಂತೆ ಇತರೆ ಅಂಶಗಳ ಕುರಿತಂತೆ ಒಟ್ಟು ಒಂಬತ್ತು ಬಿಡಿ ವರದಿಗಳನ್ನು ಒಳಗೊಂಡಂತೆ ಒಟ್ಟು 2,500 ಪುಟಗಳ ಬೃಹತ್‌ ವರದಿ ಸಲ್ಲಿಕೆಯಾಗಿದೆ.

ಬ್ರ್ಯಾಂಡ್‌ ಬೆಂಗಳೂರು ಖ್ಯಾತಿ ಹೆಚ್ಚಳ: ಸರ್ಕಾರದ ಅಗತ್ಯ, ಪರಿಸ್ಥಿತಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲು ಪ್ರತಿ ಹಂತದಲ್ಲೂ ಒಂದಕ್ಕಿಂತ ಹೆಚ್ಚು ಮಾದರಿಗಳನ್ನು ನೀಡಲಾಗಿದೆ. ಈ ಮಾದರಿಗಳ ಅಳವಡಿಕೆಯಿಂದ ಜನರ ಸಮಸ್ಯೆಗಳಿಗೂ ತಕ್ಷಣದ ಪರಿಹಾರ ಕಂಡುಕೊಳ್ಳಬಹುದು. ಜತೆಗೆ ಪಾಲಿಕೆಗೆ ಸಂಗ್ರಹವಾಗುವ ಆದಾಯವೂ ಹೆಚ್ಚಾಗಲಿದೆ. ಆ ಮೂಲಕ ಬ್ರ್ಯಾಂಡ್‌ ಬೆಂಗಳೂರಿನ ಖ್ಯಾತಿ ಇನ್ನಷ್ಟು ವೃದ್ಧಿಸಲಿದೆ.

ತೆರಿಗೆ ಮೂರು ಪಟ್ಟು ಏರಿಕೆ: ಬೆಂಗಳೂರೂ ವ್ಯಾಪ್ತಿಯಲ್ಲಿ 22 ಲಕ್ಷ ಆಸ್ತಿಗಳಿದ್ದರೂ ಕೇವಲ 13- 14 ಲಕ್ಷ ಆಸ್ತಿದಾರರಷ್ಟೇ ತೆರಿಗೆ ಪಾವತಿಸುತ್ತಿದ್ದಾರೆ. ಒಂದೇ ಆಸ್ತಿಗೆ ಸಂಬಂಧಪಟ್ಟಂತೆ ಬಿಬಿಎಂಪಿ, ಬಿಡಿಎ ಹಾಗೂ ಸ್ಯಾಟಲೈಟ್‌ ಇಮೇಜಿಂಗ್‌ ವ್ಯವಸ್ಥೆಯಲ್ಲಿ ಭಿನ್ನ ಮಾಹಿತಿಗಳಿವೆ. ಕೆಲವೆಡೆ ಶೇ.100ರಿಂದ ಶೇ.300ರಷ್ಟು ವ್ಯತ್ಯಾಸವಿದೆ.

ಮೂರು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಪರಿಶೀಲನೆ ನಡೆಸಿ ಖುದ್ದಾಗಿ ಆಸ್ತಿಗಳ ತೆರಿಗೆ ಮೌಲ್ಯಮಾಪನ ಮಾಡಲಾಗಿದೆ. ಸಂಕೀರ್ಣ ವ್ಯವಸ್ಥೆಯನ್ನು ಬದಲಿಸಿ ಸರಳೀಕರಿಸಿದರೆ ಬೆಂಗಳೂರಿನಲ್ಲಿ ಸದ್ಯ ಸಂಗ್ರಹವಾಗುತ್ತಿರುವ ತೆರಿಗೆ ಪ್ರಮಾಣದ ಮೂರು ಪಟ್ಟು ಹೆಚ್ಚು ಅಂದರೆ 5,000 ಕೋಟಿ ರೂ.ವರೆಗೆ ತೆರಿಗೆ ಸಂಗ್ರಹಕ್ಕೆ ಅವಕಾಶವಿದೆ.

400 ವಾರ್ಡ್‌: ಸದ್ಯದ ಬಿಬಿಎಂಪಿ ವಾರ್ಡ್‌ಗಳ ಪುನರ್‌ವಿಂಗಡಣೆ ಅತ್ಯಂತ ಅವೈಜ್ಞಾನಿಕವಾಗಿದೆ. ಕೆಲ ವಾರ್ಡ್‌ಗಳಲ್ಲಿ 20 ಸಾವಿರ ಜನರಿದ್ದರೆ ಇನ್ನೂ ಕೆಲ ವಾರ್ಡ್‌ಗಳಲ್ಲಿ ಒಂದು ಲಕ್ಷ ಮಂದಿಯಿದ್ದಾರೆ. ಇದರಿಂದಾಗಿ ಎಲ್ಲ ವಾರ್ಡ್‌ಗಳಲ್ಲೂ ಸಮಾನ ಸೇವೆ ಸಿಗಲು ಸಾಧ್ಯವಾಗುವುದಿಲ್ಲ. ಜನಸಂಖ್ಯೆ ಬೆಳವಣಿಗೆ, ಜನಗಣತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬೆಂಗಳೂರು ವಾರ್ಡ್‌ಗಳಿಗೆ 30 ಸಾವಿರ ಜನಸಂಖ್ಯೆ, ಹೊರ ವಲಯದ ವಾರ್ಡ್‌ಗಳಿಗೆ 20 ಸಾವಿರ ಜನಸಂಖ್ಯೆಗೊಂದು ವಾರ್ಡ್‌ ರಚಿಸಬಹುದು. ಅದರಂತೆ ಒಟ್ಟು 400 ವಾರ್ಡ್‌ ರಚಿಸಬಹುದು.

ಸದ್ಯ ಕಾಯ್ದೆಯಲ್ಲಿ ಅಡೆತಡೆ: ಬೆಂಗಳೂರಿನ ಆಡಳಿತವನ್ನು ಮೂರು ವಿಭಾಗಗಳಾಗಿ ವಿಂಗಡಿಸಿ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ರಾಷ್ಟ್ರಪತಿ ಅಂಕಿತಕ್ಕೆ ಕಳಿಸಿರುವ ಕಾಯ್ದೆಯಲ್ಲಿ ಹಲವು ದೋಷಗಳಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಸಂವಿಧಾನದ 74ನೇ ತಿದ್ದುಪಡಿಗೆ ಪ್ರಸ್ತಾವ ವಿರುದ್ಧವಾಗಿದೆ ಎಂಬ ಆಕ್ಷೇಪ ಸೇರಿದಂತೆ ಅನೇಕ ಪ್ರಶ್ನೆಗಳನ್ನು ಎತ್ತಿದೆ. ಆ ಹಿನ್ನೆಲೆಯಲ್ಲಿ ಸಮಿತಿ ರೂಪಿಸಿರುವ ಕರಡು ಸಮಗ್ರವಾಗಿದೆ. ಆಡಳಿತ, ರಾಜಕೀಯ ವ್ಯವಸ್ಥೆಯನ್ನು ಸಂಪೂರ್ಣ ಪುನಾರಚಿಸುವ ನಿಟ್ಟಿನಲ್ಲಿ ಶಿಫಾರಸು ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಬಿ.ಎಸ್‌.ಪಾಟೀಲ್‌ ಹೇಳಿದರು.

ಎರಡನೇ ಹಂತದಲ್ಲಿ ಆಡಳಿತ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಮೂರು ಆಯ್ಕೆ ನೀಡಲಾಗಿದೆ. ಐದು ಪಾಲಿಕೆ ರಚಿಸುವುದು. ಮೂರು ಅಥವಾ ನಾಲ್ಕು ಪಾಲಿಕೆಯಾಗಿವೂ ವಿಂಗಡಿಸಬಹುದು. ಹೆಚ್ಚುವರಿ ವಾರ್ಡ್‌ಗಳ ರಚನೆ ಅಗತ್ಯವಿಲ್ಲ ಎನಿಸಿದರೆ ಈಗಿರುವ 198 ವಾರ್ಡ್‌ಗಳ ವಿನ್ಯಾಸವನ್ನೇ ಮಾರ್ಪಡಿಸುವ ಆಯ್ಕೆಯನ್ನೂ ನೀಡಲಾಗಿದೆ ಎಂದು ತಿಳಿಸಿದರು.

ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ನೇತೃತ್ವದ ಸಮಿತಿ ವರದಿ ನೀಡಿದ್ದು, ಈ ವರದಿಯನ್ನು ಪೂರ್ಣ ಪ್ರಮಾಣದಲ್ಲಿ ಅಧ್ಯಯನ ನಡೆಸಲಾಗುವುದು. ನಂತರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬ್ರ್ಯಾಂಡ್‌ ಬೆಂಗಳೂರಿನ ಹಿರಿಮೆಗೆ ಚ್ಯುತಿ ಬಾರದಂತೆ ಜನರಿಗೆ ಉತ್ತಮ ಸೇವೆ, ತೆರಿಗೆ ಸುಧಾರಣೆ ನಿಟ್ಟಿನಲ್ಲಿ ವರದಿ ನೀಡಲಾಗಿದೆ. ಸದ್ಯದ ವ್ಯವಸ್ಥೆಯಿಂದ ಬೆಂಗಳೂರಿನ ಹಿತ ಕಾಪಾಡಲು ಸಾಧ್ಯವಿಲ್ಲ. ಮೂರು ಹಂತದ ಆಡಳಿತ ವ್ಯವಸ್ಥೆಗೆ ಶಿಫಾರಸು ಮಾಡಲಾಗಿದೆ.
-ಬಿ.ಎಸ್‌.ಪಾಟೀಲ್‌, ತಜ್ಞರ ಸಮಿತಿ ಅಧ್ಯಕ್ಷ

2014ರಲ್ಲಿ ಪುನಾರಚನೆ ಸಮಿತಿ ರಚನೆ: ಬೆಂಗಳೂರಿನ ಬೆಳವಣಿಗೆಗೆ ಪೂರಕವಾಗಿ ಸೂಕ್ತ ಆಡಳಿತ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಹಿಂದಿನ ಕಾಂಗ್ರೆಸ್‌ ಸರ್ಕಾರ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌ ಅವರ ನೇತೃತ್ವದಲ್ಲಿ 2014ರ ಸೆಪ್ಟಂಬರ್‌ನಲ್ಲಿ ಬಿಬಿಎಂಪಿ ಪುನಾರಚನಾ ಸಮಿತಿ ರಚಿಸಿತ್ತು. ಬಿಬಿಎಂಪಿ ನಿವೃತ್ತ ಆಯುಕ್ತ ಸಿದ್ದಯ್ಯ, ನಗರ ತಜ್ಞ ವಿ.ರವಿಚಂದರ್‌ ಸದಸ್ಯರಾಗಿದ್ದರು.

ಬೆಂಗಳೂರು ಭವಿಷ್ಯದ ಅಭಿವೃದ್ಧಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ನಡೆಸಿದ ತಜ್ಞರ ಸಮಿತಿಯನ್ನು 2015ರ ಜುಲೈ 13 ರಂದು ಸರ್ಕಾರಕ್ಕೆ ತನ್ನ ವರದಿ ಸಲ್ಲಿಸಿತ್ತು. ಅದರಂತೆ ಬಿಬಿಎಂಪಿಯನ್ನು 5 ಪಾಲಿಕೆಗಳನ್ನಾಗಿ ಪುನಾರಚಿಸಿ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸೇರಿದಂತೆ ಮೂರು ಹಂತದ ಆಡಳಿತ ರಚಿಸುವ ಶಿಫಾರಸು ವರದಿಯಲ್ಲಿತ್ತು.

ಏರಿಕೆಯಾಗುತ್ತಿರುವ ಜನಸಂಖ್ಯೆ ಅಭಿವೃದ್ಧಿಯ ವೇಗ ಹಾಗೂ ಸಂಪನ್ಮೂಲ ಹೆಚ್ಚಳದ ಗತಿ ಆಧರಿಸಿ ಪುನಾರಚನೆ ಶಿಫಾರಸು ಮಾಡಿದ್ದ ಸಮಿತಿಯು, 2040ರ ವೇಳೆ ಬೆಂಗಳೂರಿನ ಜನಸಂಖ್ಯೆ 2 ಕೋಟಿಗೆ ಏರಿಯಾಗುವ ಸಾಧ್ಯತೆ ಗಮನದಲ್ಲಿಟ್ಟುಕೊಂಡು ಪಾಲಿಕೆಯನ್ನು ಐದು ಭಾಗಗಳಾಗಿ ವಿಂಗಡಿಸುವ ಶಿಫಾರಸು ಮಾಡಿತ್ತು. ನಂತರ ಸರ್ಕಾರ 2018ರ ಜೂನ್‌ 30ಕ್ಕೆ ಸಮಿತಿ ಅವಧಿಯನ್ನು ವಿಸ್ತರಿಸಿತ್ತು. ಅದರಂತೆ ಮಾಸಾಂತ್ಯಕ್ಕೆ ಸಮಿತಿ ಅವಧಿ ಪೂರ್ಣಗೊಳ್ಳಲಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ

3

Atul Subhash Case: ಮೊಮ್ಮಗನನ್ನು ಟೆಕಿ ಅತುಲ್‌ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ

BBMP-ED

illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್‌ ಕಚೇರಿ ಮೇಲೆ ಇ.ಡಿ. ದಾಳಿ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Ullala ಮಡ್ಯಾರು: ಕಾರ್ಮಿಕರಿಗೆ ಹಲ್ಲೆ; ಬಂಧನ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Gangolli: 6 ದಿನ ಕಳೆದರೂ ಕಡಲಿಗೆ ಬಿದ್ದ ಮೀನುಗಾರನ ಸುಳಿವು ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.