ಬೆಂಗಳೂರಿಗಿದೆ ಬೇರೆಯದೇ ಬೈಲಾ!
Team Udayavani, Aug 1, 2017, 11:34 AM IST
ಬೆಂಗಳೂರು: ಸಾಮಾನ್ಯ ವಲಯ ನಿಯಂತ್ರಣ ಮತ್ತು ಕಟ್ಟಡ ಬೈಲಾ (ಕಾಮನ್ ಬಿಲ್ಡಿಂಗ್ ಬೈಲಾ)ಗಳಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಿದ ಅಧಿಸೂಚನೆ ಬೆಂಗಳೂರು ನಗರಕ್ಕೆ ಅನ್ವಯವಾಗುವುದಿಲ್ಲ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ವಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪೌರಾಡಳಿತ ಇಲಾಖೆಯಿಂದ ಇತ್ತೀಚೆಗೆ ನೂತನ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಅಧಿಸೂಚನೆಗಳು ಬೆಂಗಳೂರಿಗೆ ಅನ್ವಯವಾಗುವುದಿಲ್ಲ. ಬದಲಾಗಿ ಬೆಂಗಳೂರಿಗೆ ಪ್ರತ್ಯೇಕ ಬೈಲಾ ಮತ್ತು ನಿಯಮವಿದೆ ಎಂದು ಹೇಳಿದರು.
ಪರಿಷ್ಕೃತ ಮಹಾನಕ್ಷೆ (ಆರ್‌ಎಂಪಿ)-2015 ಹಾಗೂ ಪ್ರಸ್ತುತ ಬಿಡಿಎ ಸಿದ್ಧಪಡಿಸುತ್ತಿರುವ ಆರ್‌ಎಂಪಿ-2035, ಬಿಬಿಎಂಪಿಗೆ ಅನ್ವಯವಾಗುತ್ತದೆ. 2035 ಮಹಾನಕ್ಷೆ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲು ಕೌನ್ಸಿಲ್ ಸಭೆಯಲ್ಲಿ ಅನುಮೋದನೆ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.
ರಕ್ಷಣಾ ಅಧಿಕಾರಿಗಳೊಂದಿಗೆ ಸಭೆ
ಪಾಲಿಕೆ ಸದಸ್ಯ ಸಂಪತ್ ರಾಜ್ ಮಾತನಾಡಿ, 1.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದ ದೇವರ ಜೀವನಹಳ್ಳಿ ವಾರ್ಡ್‌ನ ಮೋದಿ ಗಾರ್ಡನ್ ರಸ್ತೆಯನ್ನು ರಕ್ಷಣಾ ಇಲಾಖೆ ಅಧಿಕಾರಿಗಳು ಹಾಳು ಮಾಡಿದ್ದು, ಅವರ ವಿರುದ್ಧ ದೂರು ದಾಖಲಿಸಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ಮೋದಿ ಗಾರ್ಡನ್ ರಸ್ತೆ ಸೇರಿ ನಗರದದ ವಿವಿಧ ಭಾಗಗಳಲ್ಲಿ ರಕ್ಷಣಾ ಇಲಾಖೆಯಿಂದ ಪಡೆಯಬೇಕಿರುವ ಜಾಗಗಳ ಹಸ್ತಾಂತರ ಕುರಿತಂತೆ ರಕ್ಷಣಾ ಇಲಾಖೆಯ ಅಧಿಕಾರಿಗಳೊಂದಿಗೆ ಮುಂದಿನ ವಾರ ಸಭೆ ನಡೆಸುವುದಾಗಿ ತಿಳಿಸಿದರು.
ಕಳಪೆ ಸಮವಸ್ತ್ರ ವಿತರಣೆ
ಪಾಲಿಕೆಯ ಶಾಲಾ ಮಕ್ಕಳಿಗೆ ವಿತರಿಸಿರುವ ಸಮವಸ್ತ್ರ ಹೆಚ್ಚು ಪಾರದರ್ಶಕವಾಗಿರುವುದರಿಂದ, ವಿದ್ಯಾರ್ಥಿಗಳು ಮುಜುಗರಕ್ಕೆ ಒಳಗಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಜೆಪಿ ಸದಸ್ಯ ರಮೇಶ್ ಆರೋಪಿಸಿದರು.
ಆಯುಕ್ತರು ಸ್ಪಷ್ಟನೆ ನೀಡಿ, 1ರಿಂದ 10ನೇ ತರಗತಿ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ ವಿತರಿಸಲಾಗುತ್ತದೆ. ನರ್ಸರಿ ಹಾಗೂ ಪದವಿ ಪೂರ್ವ ಮಕ್ಕಳಿಗೆ ಮಾತ್ರ ಪಾಲಿಕೆಯಿಂದ ವಿತರಿಸಲಾಗುತ್ತದೆ. ಮಕ್ಕಳಿಗೆ ವಿತರಿಸಿರುವ ಸಮವಸ್ತ್ರ ಪರಿಶೀಲಿಸಿ, ಅವು ಕಳಪೆಯಾಗಿದ್ದರೆ ವಾಪಸ್ ಕಳುಹಿಸಿ ಗುಣಮಟ್ಟದ ಸಮವಸ್ತ್ರವನ್ನು ತರಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಬಿಎಂಪಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕನಿಷ್ಠ ವೇತನಕ್ಕಿಂತ ಕಡಿಮೆ ವೇತನ ನೀಡಲಾಗುತ್ತಿದೆ. ಆ ವೇತನದಲ್ಲಿಯೂ ಗುತ್ತಿಗೆ ಸಂಸ್ಥೆಯವರು ಸೇವಾ ಶುಲ್ಕದ ಹೆಸರಿನಲ್ಲಿ 1,500ರಿಂದ 4,854 ರೂ.ವರೆಗೆ ಕಡಿತಗೊಳಿಸುತ್ತಿದರೆ, ಅವರು ಜೀವನ ನಡೆಸುವುದು ಹೇಗೆ? ಎಂದು ಮಾಜಿ ಮೇಯರ್ ಎನ್.ಶಾಂತಕುಮಾರಿ ಆಕ್ರೋಶ ವ್ಯಕ್ತಪಡಿಸಿದರು.
ಕರೆ ಸ್ವೀಕರಿಸೋದೇ ಇಲ್ಲ
ಆಯಾ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳ ಕುರಿತು ಮಾಹಿತಿ ನೀಡದ ಅಧಿಕಾರಿಗಳ ವಿರುದ್ಧ ಪಾಲಿಕೆಯ ಎಲ್ಲ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಪಾಲಿಕೆಯಲ್ಲಿ ಯಾವ ಕಾಮಗಾರಿ ಯಾವ ಮುಖ್ಯ ಎಂಜಿನಿಯರ್ ವ್ಯಾಪ್ತಿಗೆ ಬರುತ್ತದೆ ಎಂಬುದು ತಿಳಿಯುವುದಿಲ್ಲ. ಸಮಸ್ಯೆಗಳನ್ನು ಹೇಳಲು ಕರೆ ಮಾಡಿದರೆ ಅಧಿಕಾರಿಗಳು ಕರೆ ಸ್ವೀಕರಿಸುವುದಿಲ್ಲ ಎಂದು ದೂರಿದರು.
ಇದಕ್ಕೆ ದನಿಗೂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗುಣಶೇಖರ್, ಅಧಿಕಾರಿಗಳು ನೈಟ್ ಕ್ಲಬ್‌ಗಳ ಮಾದರಿಯಲ್ಲಿ ರಾತ್ರಿ 11 ಗಂಟೆಯವರೆಗೆ ಕೆಲಸ ಮಾಡುತ್ತಾರೆ. ಆದರೆ, ಅವರು ಕೆಲಸಗಳ ಬಗ್ಗೆ ಯಾರಿಗೂ ಮಾಹಿತಿ ನೀಡುವುದಿಲ್ಲ ಎಂಧು ದೂರಿದರು. ಇದೇ ವೇಳೆ ಮಳೆ ನೀರುಗಾಲುವೆ ಮುಖ್ಯ ಎಂಜಿನಿಯರ್ ಸಿದ್ದೇಗೌಡ ವಿರುದ್ಧ ಪಾಲಿಕೆಯ ಬಹುತೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮುಖ್ಯ ಎಂಜಿನಿಯರ್‌ಗಳನ್ನು ಸಭೆಗೆ ಕರೆಸಿ ಮೇಯರ್ ಪೀಠದ ಮುಂಭಾಗ ನಿಲ್ಲಿಸಿದರು. ಈ ಸಂದರ್ಭದಲ್ಲಿ ಎಂಜಿನಿಯರುಗಳ ಹೊಣೆಗಾರಿಕೆ ಏನು ಎಂಬ ಬಗ್ಗೆ ಮೇಯರ್ ಅವರು ಎಂಜಿನಿಯರ್‌ಗಳಿಂದಲೇ ಸಭೆಗೆ ಮಾಹಿತಿ ಕೊಡಿಸಿದರು.
ದೇವೇಗೌಡರ ಹೆಸರಿಡಿ
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಒಳವರ್ತುಲ ರಸ್ತೆ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಒಳವರ್ತುಲ ರಸ್ತೆಗೆ ಮಾಜಿ ಪ್ರಧಾನಿಯವರ ಹೆಸರನ್ನೇ ನಾಮಕರಣ ಮಾಡಬೇಕು ಎಂದು ದೊಮ್ಮಲೂರು ಪಾಲಿಕೆ ಸದಸ್ಯ ಲಕ್ಷ್ಮೀನಾರಾಯಣ ಅವರು ಮೇಯರ್ ಪದ್ಮಾವತಿ ಅವರಿಗೆ ಮನವಿ ಮಾಡಿದರು.
ಕಾಮಗಾರಿಗೆ ಜಿಎಸ್‌ಟಿ ಅಡ್ಡಿ!
ಜಿಎಸ್‌ಟಿ ವ್ಯವಸ್ಥೆ ಜಾರಿಯಾದಾಗಿನಿಂದ ನಗದಲ್ಲಿ ಹಲವಾರು ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಶಾಸಕ ಕೆ.ಗೋಪಾಲಯ್ಯ ಅಸಮಧಾನ ವ್ಯಕ್ತಪಡಿಸಿದರು.
ಜಿಎಸ್‌ಟಿ ಪ್ರಕಾರ ಶೇ.18ರಷ್ಟು ತೆರಿಗೆ ಪಾವತಿಸಬೇಕಿರುವುದರಿಂದ ಗುತ್ತಿಗೆದಾರರು ಕಾಮಗಾರಿ ನಡೆಸಲು ಮುಂದಾಗುತ್ತಿಲ್ಲ. ಇದರೊಂದಿಗೆ à ಗಾಗಲೇ ಚಾಲನೆಯಲ್ಲಿರುವ, ಆದರೆ ಪೂರ್ಣಗೊಳ್ಳದೇ ಇರುವ ಕಾಮಗಾರಿಗಳಿಗೂ ಜಿಎಸ್‌ಟಿ ಅನ್ವಯವಾಗುತ್ತದೆ ಎಂಬ ಗೊಂದಲವಿದ್ದು, ಈ ಕುರಿತು ಸೂಕ್ತ ಮಾಹಿತಿ ಒದಗಿಸಬೇಕು ಎಂದು ತಿಳಿಸಿದರು.
ಪಾಲಿಕೆ ಆವರಣದಲ್ಲೇ ಕಾಂಪೋಸ್ಟ್ ಮೇಳ
ಮನೆಯಲ್ಲಿ ಸೃಷ್ಟಿಯಾಗುವ ತ್ಯಾಜ್ಯವನ್ನು ಸುಲಭ ವಿಧಾನಗಳ ಮೂಲಕ ಗೊಬ್ಬರವಾಗಿ ಪರಿವರ್ತಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಪಾಲಿಕೆಯ ಕೆಂಪೇಗೌಡ ಪೌರಸಭಾಂಗಣದ ಆವರಣದಲ್ಲಿ ಸೋಮವಾರ ಕಾಂಪೋಸ್ಟ್ ಮೇಳ ನಡೆಯಿತು. ಮೇಳದಲ್ಲಿ ವಿವಿಧ ನಾಗರಿಕ ಸಂಘ, ಸಂಸ್ಥೆ ಸದಸ್ಯರು ಪಾಲ್ಗೊಂಡು, ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಸುಲಭ ವಿಧಾನಗಳ ಕುರಿತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಹಾಗೇ ಕಾಂಪೋಸ್ಟ್ ಗೊಬ್ಬರ ಬಳಸಿ ಮನೆಯಲ್ಲೇ ತರಕಾರಿ ಬೆಳೆಯುವ ಕುರಿತೂ ಮಾಹಿತಿ ನೀಡಲಾಯಿತು.
ಆಧ್ಯಾತ್ಮಿಕ ಪರಿಸರವಾದಿ ಸ್ಮಿತಾ ಕಾಮತ್ ಅವರು ಜೈವಿಕ ತಾಜ್ಯದಿಂದ ಗೃಹೋಪಯೋಗಿ ವಸ್ತು ತಯಾರಿಸುವ ವಿಧಾನ ತೋರಿಸಿಕೊಟ್ಟರು. ನಿಂಬೆ, ಮೊಸಂಬಿ ಹಾಗೂ ಕಿತ್ತಲೆ ಸಿಪ್ಪೆಯಿಂದ ಫಿನಾಯಿಲ್ ಹಾಗೂ ನೊರೆಯಿಲ್ಲದ ಪರಿಸರ ಸ್ನೇಹಿ ಶಾಂಪೋ ತಯಾರಿಕೆ ಮಾಡುವ ಕುರಿತೂ ಅವರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.