ದೇಗುಲ ಬಳಿ ಶಬ್ದ ಮಾಲಿನ್ಯಕ್ಕೆ ವಾಹನಗಳೇ ಕಾರಣ!


Team Udayavani, Jun 17, 2021, 2:28 PM IST

bangalore news

ಬೆಂಗಳೂರು: ನಗರದ ಕೆಲವೊಂದು ಧಾರ್ಮಿಕ ಕೇಂದ್ರಗಳ ಬಳಿ ಶಬ್ದ ಮಾಲಿನ್ಯ ಹೆಚ್ಚಾಗಲು ವಾಹನಗಳ ಸಂಚಾರ ಕಾರಣ ಎಂಬ ಪೊಲೀಸರ ಹೇಳಿಕೆಗೆ ಹೈಕೋರ್ಟ್‌ ಅಚ್ಚರಿ ವ್ಯಕ್ತಪಡಿಸಿದೆ.

ಸುಪ್ರೀಂಕೋರ್ಟ್‌ ಮಾರ್ಗಸೂಚಿಗಳ ಅನ್ವಯ ರಾಜ್ಯದ ಧಾರ್ಮಿಕ ಕೇಂದ್ರಗಳಲ್ಲಿ ಅನಧಿಕೃತವಾಗಿ ಧ್ವನಿ ವರ್ಧಕ ಬಳಸಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಜರುಗಿಸಲು ಆದೇಶಿಸುವಂತೆ ಕೋರಿ ಗಿರೀಶ್‌ ಭಾರದ್ವಾಜ್‌ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ್‌ ಅವರನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ನಗರ ಪೊಲೀಸ್‌ ಆಯುಕ್ತರಕಚೇರಿಯ ಗುಪ್ತಚರ ವಿಭಾಗದ ಡಿಸಿಪಿ ಸಲ್ಲಿಸಿದಪ್ರಮಾಣ ಪತ್ರವನ್ನು ನ್ಯಾಯಪೀಠ ಪರಿಶೀಲಿಸಿತು.ದೂರುಗಳಲ್ಲಿ ಹೇಳಲಾದ ಧಾರ್ಮಿಕ ಕೇಂದ್ರಗಳಸ್ಥಳದಲ್ಲಿ ಶಬ್ದ ಮಾಲಿನ್ಯ ಪ್ರಮಾಣ ಹೆಚ್ಚಿರಲುವಾಹನಗಳ ಸಂಚಾರ ಕಾರಣ ಎಂಬುದಾಗಿಪ್ರಮಾಣಪತ್ರದಲ್ಲಿ ಹೇಳಿರುವುದು ಅಚ್ಚರಿ ತಂದಿದೆ.ವಾಹನ ಸಂಚಾರ ಹೆಚ್ಚಿರುವ ಸಮಯದಲ್ಲಿ ಪರೀಕ್ಷೆಮಾಡಲಾಗಿದೆ. ಅದರ ಬದಲು ವಾಹನ ಸಂಚಾರವಿರಳವಾಗಿರುವ ಬೆಳಗಿನ ಅವಧಿಯಲ್ಲಿಪರೀಕ್ಷಿಸಬಹುದಾಗಿತ್ತಲ್ಲವೇ? ಎಂದು ನ್ಯಾಯಪೀಠಪ್ರಶ್ನಿಸಿತು.

ಡಿಸಿಪಿಗೆ ತರಾಟೆ: ಶಬ್ದ ಮಾಲಿನ್ಯ ನಿಯಂತ್ರಣನಿಯಮಗಳನ್ನು ಉಲ್ಲಂ ಸುವವರ ವಿರುದ್ಧ ಕ್ರಮಜರುಗಿಸುವ ಬದಲು ಶಬ್ದ ಮಾಲಿನ್ಯ (ನಿಯಂತ್ರಣ)ಕಾಯ್ದೆ-2020ರ ನಿಯಮಗಳನ್ನೇ ಮರುಪರಿಶೀಲಿಸುವ ಅಗತ್ಯವಿದೆ ಎಂದು ಪ್ರಮಾಣಪತ್ರಸಲ್ಲಿಸಿದ ಡಿಸಿಪಿ ಅವರನ್ನು ಹೈಕೋರ್ಟ್‌ ತೀವ್ರತರಾಟೆಗೆ ತೆಗೆದುಕೊಂಡಿತು.ಶಬ್ದ ಮಾಲಿನ್ಯ ಕಾಯ್ದೆಯ ನಿಯಮಗಳನ್ನುಉಲ್ಲಂ ಸುವವರನ್ನು ಶಿಕ್ಷಿಸುವ ಬದಲು ಕಾನೂನುಪಾಲಿಸುವಂತೆ ಮನವಿ ಮಾಡುತ್ತಿದ್ದೀರಿ.ಅನಧಿಕೃತವಾಗಿ ಧ್ವನಿವರ್ಧಕಗಳ ಬಳಕೆ ಕುರಿತುದೂರು ಬಂದಾಗ, ಅವುಗಳನ್ನು ಬಳಸಲುಅನುಮತಿ ಪಡೆಯಲಾಗಿದೆಯೋ ಅಥವಾಇಲ್ಲವೋ ಎಂಬುದನ್ನು ಪರಿಶೀಲಿಸಿಲ್ಲ.

ಪರಿಸರಸಂರಕ್ಷಣಾ ಕಾಯ್ದೆ -1986ರ ಪ್ರಕಾರ ತಪ್ಪಿತಸ್ಥರನ್ನುಪ್ರಾಸಿಕ್ಯೂಷನ್‌ಗೆ ಒಳಪಡಿಸದೆ ಸುಮ್ಮನೆ ಬಿಟ್ಟಿದ್ದೀರಿ.ಪ್ರಮಾಣ ಪತ್ರವನ್ನು ನೋಡಿದರೆ ಅನಧಿಕೃತ ಧ್ವನಿವರ್ಧಕಗಳ ಬಳಕೆಯನ್ನು ಡಿಸಿಪಿ ಒಪ್ಪಿಕೊಂಡಿದ್ದಾರೆಎಂದರ್ಥ. ಇನ್ನೂ ಡಿಜಿ-ಐಜಿಪಿ ಸೂಚನೆ ಇದ್ದರೂನಿಯಮ ಉಲ್ಲಂಘನೆ ಮಾಡಿದವರ ವಿರುದ್ಧಕಾನೂನು ಕ್ರಮ ಜರುಗಿಸಿಲ್ಲ ಎಂದು ಕಿಡಿ ಕಾರಿತು.ತರಾಟೆಗೆ ತೆಗೆದುಕೊಂಡಿತು.ಆಗ ಸರ್ಕಾರಿ ವಕೀಲರು, ಪ್ರಮಾಣ ಪತ್ರವನ್ನುಹಿಂಪಡೆದು ಹೊಸದಾಗಿ ಸಲ್ಲಿಸಲಾಗುವುದುಎಂದು ತಿಳಿಸಿದರು.

ಅದನ್ನು ಒಪ್ಪದ ನ್ಯಾಯಪೀಠವುಅರ್ಜಿ ಹಾಗೂ ಅರ್ಜಿ ಕುರಿತ ನ್ಯಾಯಾಲಯದಆದೇಶಗಳು, ಡಿಸಿಪಿಯ ಪ್ರಮಾಣಪತ್ರವನ್ನು ನಗರಪೊಲೀಸ್‌ ಆಯುಕ್ತರಿಗೆ ಒದಗಿಸಬೇಕು. ಅದೆನ್ನೆಲ್ಲಾಪರಿಶೀಲಿಸಿ ಬಳಿಕ ಮತ್ತು ಪ್ರಕರಣದಲ್ಲಿ ಪೋಲಿಸರುಮತ್ತು ಡಿಸಿಪಿಯ ತೋರಿರುವ ನಡೆಗಳ ಬಗ್ಗೆವಿವರಣೆ ನೀಡಿ ಆಯುಕ್ತರು ವೈಯಕ್ತಿಕವಾಗಿಜು.1ರೊಳಗೆ ಖುದ್ದು ಪ್ರಮಾಣಪತ್ರ ಸಲ್ಲಿಸಬೇಕು.ಶಬ್ದ ಮಾಲಿನ್ಯ ಬಗ್ಗೆ ದೂರು ದಾಖಲಾದ ಪೊಲೀಸ್‌ಠಾಣೆಗಳಿಗೆ ಶಬ್ದ ಮಾಲಿನ್ಯ ಅಳೆಯುವ ಮಾಪಕಒದಗಿಸಲಾಗಿದೆ? ಅವುಗಳು ಕಾರ್ಯ ನಿರ್ವಹಣೆಸ್ಥಿತಿಯಲ್ಲಿವೆ? ಅವುಗಳನ್ನು ಬಳಸುವ ತರಬೇತಿಪೊಲೀಸರಿಗೆ ಕಲ್ಪಿಸಲಾಗಿದೆಯೇ? ಎಂಬ ಬಗ್ಗೆವಿವರಣೆ ನೀಡುವಂತೆ ಆಯುಕ್ತರಿಗೆ ಸೂಚಿಸಿವಿಚಾರಣೆಯನ್ನು ಜು.2ಕ್ಕೆ ಮುಂದೂಡಿತು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Power-Cable

Bantwala: ಬಿ.ಸಿ.ರೋಡಿನಲ್ಲಿ ರೈಲ್ವೇಯ ವಿದ್ಯುತ್‌ ಕೇಬಲ್‌ ಕಳವು

police

Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್‌ ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.