ಹೂವುಕಟ್ಟಿ ಮಾರುವ ವಿದ್ಯಾರ್ಥಿನಿಗೆ ಬಿಬಿಎಂಪಿ ವತಿಯಿಂದ ಲ್ಯಾಪ್‌ಟಾಪ್
Team Udayavani, Jun 30, 2021, 6:41 PM IST
ಬೆಂಗಳೂರು: ನಗರದ ಬಿಬಿಎಂಪಿ ಕಚೇರಿ ಆವರಣದ ಬಳಿಯಿರುವ ಆದಿಶಕ್ತಿದೇವಾಲಯದ ಬಳಿ ತನ್ನ ಓದಿಗಾಗಿ ಹೂವು ಕಟ್ಟಿ ಮಾರಾಟ ಮಾಡುತ್ತಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ಬನಶಂಕರಿ ಇದೀಗ ಪಾಲಿಕೆ ಆಯುಕ್ತರಮೆಚ್ಚುಗೆಗೆ ಪಾತ್ರವಾಗಿದ್ದಾಳೆ.
ಹಾಗೆಯೇ ತನ್ನ ವಿದ್ಯಾಭ್ಯಾಸಕ್ಕೆಬೇಕಾಗುವ ಖರ್ಚು ವೆಚ್ಚಗಳಿಗೆ ತಾನೇಹೂವು ಕಟ್ಟಿ ಸಂಪಾದನೆ ಮಾಡುತ್ತಿದ್ದುಇತರೆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ಆಗಿದ್ದಾಳೆ.ವಿದ್ಯಾರ್ಥಿನಿ ಬನಶಂಕರಿಯ ತಂದೆಮಗ್ಗ ನೇಯುವಕೆಲಸ ಮಾಡುತ್ತಿದ್ದು ಆಕೆತಾಯಿಕೂಡಮಗಳಜತೆದೇವಸ್ಥಾನದಲ್ಲಿಕೆಲಸಕ್ಕೆ ಸಹಾಯ ಮಾಡುತ್ತಿದ್ದಾರೆ.ವಿದ್ಯಾರ್ಥಿನಿ ಬನಶಂಕರಿ, ನಗರದಮಿತ್ರಾಲಯ ಎಂಬ ಖಾಸಗಿ ಶಾಲೆಯಲ್ಲಿಎಸ್‌ಎಸ್‌ಎಲ್‌ಸಿ ಓದುತ್ತಿದ್ದಾಳೆ.
ಬೆಳಗ್ಗೆ 6 ರಿಂದ ಮಧ್ಯಾಹ್ನ 2ರವರೆಗೆಹಾಗೂ ಸಂಜೆ ಸಮಯದಲ್ಲಿ ಪಾಲಿಕೆಆವರಣದಲ್ಲಿರುವ ದೇವಸ್ಥಾನದಲ್ಲಿ ಕಳೆದಐದು ವರ್ಷಗಳಿಂದ ಹೂವು ಕಟ್ಟಿಮಾರಾಟ ಮಾಡುತ್ತಾ ತನ್ನ ಶಾಲಾಖರ್ಚುಗಳಿಗೆ ಬೇಕಾಗುವ ಹಣಸಂಪಾದಿಸುತ್ತಿದ್ದಾಳೆ.ಜು.16ರಿಂದ ಆರಂಭವಾಗುವಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಆನ್‌ಲೈನ್ ಪಾಠ ಕೇಳಿಸಿದ್ಧತೆ ಮಾಡಿ ಕೊಂಡಿದ್ದಾಳೆ.
ಮಂಗಳವಾರ ಪಾಲಿಕೆ ಆಯುಕ್ತ ಗೌರವ್‌ಗುಪ್ತ, ದೇವಸ್ಥಾನಕ್ಕೆ ಭೇಟಿ ನೀಡಿ ಬಾಲಕಿಜತೆ ಕೆಲವು ಹೊತ್ತು ಸಮಾಲೋಚನೆನಡೆಸಿದರು. ಬಾಲಕಿಯ ಹಠ ಹಾಗೂಸಾಧನೆ ಮೆಚ್ಚಿ ಆಕೆಯ ವಿದ್ಯಾಭ್ಯಾಸದಅನುಕೂಲಕ್ಕಾಗಿ ಲ್ಯಾಪ್‌ಟಾಪ್‌ಕೊಡುವುದಾಗಿ ಹೇಳಿದರು.ಆಯುಕ್ತರಿಗೆ ಕೃತಜ್ಞತೆ: ಈ ಸಂದರ್ಭದಲ್ಲಿವಿದ್ಯಾಭ್ಯಾಸದ ಅನುಕೂಲಕ್ಕಾಗಿ ಲ್ಯಾಪ್‌ಟಾಪ್ ಕೊಡುವುದಾಗಿ ಹೇಳಿರುವ ಪಾಲಿಕೆಮುಖ್ಯ ಆಯುಕ್ತರಿಗೆ ಶಿಕ್ಷಣ ಸಚಿವ ಎಸ್.ಸುರೇಶ್‌ಕುಮಾರ್ ಹಾಗೂ ವಿದ್ಯಾರ್ಥಿನಿಬನಶಂಕರಿ ಕೃತಜ್ಞತೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.