ಪಾದಚಾರಿ ಮಾರ್ಗ ತೆರವಿಗೆ ಕ್ರಮ
Team Udayavani, Jul 11, 2021, 6:10 PM IST
ಬೆಂಗಳೂರು: ಪಾರ್ಕಿಂಗ್ ಸಮಸ್ಯೆದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜತೆಗೆಪಾದಚಾರಿ ಮಾರ್ಗ ತೆರವುಗೊಳಿಸಬೇಕು ಎಂದು ನೂರಾರು ಮಂದಿಸಾರ್ವಜನಿಕರು ನಗರ ಪೊಲೀಸ್‌ಆಯುಕ್ತ ಕಮಲ್ ಪಂತ್ ಅವರಿಗೆಮನವಿ ಮಾಡಿದರು.
ಸಂಚಾರ ಸಂಪರ್ಕ ದಿವಸ್ ಹಿನ್ನೆಲೆಯಲ್ಲಿ ಶನಿವಾರ ಬಸವನಗುಡಿ ಸಂಚಾರಠಾಣೆ ವ್ಯಾಪ್ತಿಯ ನ್ಯಾಷನಲ್ ಕಾಲೇಜುಮೈದಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರುತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.
ಪಾದಚಾರಿ ಮಾರ್ಗಗಳಲ್ಲಿ ತಳ್ಳುಗಾಡಿ ವ್ಯಾಪಾರಿಗಳು ಇರುತ್ತಾರೆ. ಅದರಿಂದ ಓಡಾಡಲು ಸಾಧ್ಯವಾಗುತ್ತಿಲ್ಲ.ಮನೆ, ಕಚೇರಿಗಳ ಮುಂದೆ ಅಪರಿಚಿತವ್ಯಕ್ತಿಗಳು ವಾಹನಗಳ ಪಾರ್ಕಿಂಗ್‌ಮಾಡುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ರಸ್ತೆನಿಮ್ಮದ ಎಂದೆಲ್ಲ ಪ್ರಶ್ನಿಸುತ್ತಾರೆ. ರಸ್ತೆಕಾಮಗಾರಿಗಳಿಂದ ಸಂಚಾರ ದಟ್ಟಣೆಅಧಿಕವಾಗಿದ್ದು, ಅದಕ್ಕೆ ಪರ್ಯಾಯಮಾರ್ಗ ಸೂಚಿಸಬೇಕು. ಹೀಗೆ ಹತ್ತಾರುಪ್ರಶ್ನೆಗಳನ್ನು ಆಯುಕ್ತರ ಮುಂದಿಟ್ಟರು.ಅದಕ್ಕೆ ಉತ್ತರಿಸಿದ ಪೊಲೀಸ್‌ಆಯುಕ್ತ ಕಮಲ್ ಪಂತ್, ಪಾದಚಾರಿಮಾರ್ಗ ತೆರವುಗೊಳಿಸುವ ಬಗ್ಗೆ ಈಗಾಗಲೇ ಬಿಬಿಎಂಪಿಗೆ ಪತ್ರ ಬರೆಯಲಾಗಿದೆ.
ಮುಂದಿನ ದಿನಗಳಲ್ಲಿ ಜಂಟಿಯಾಗಿ ತೆರವು ಕಾರ್ಯ ನಡೆಯಲಿದೆ.ನಗರದಲ್ಲಿ ಪಾರ್ಕಿಂಗ್ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಬಿಬಿಎಂಪಿ ಹಾಗೂಸಂಬಂಧಿಸಿದ ಇಲಾಖೆಗೆ ಜತೆ ಆಗಾಗ್ಗೆಚರ್ಚೆ ನಡೆಸಲಾಗುತ್ತಿದ್ದು, ಸದ್ಯದಲ್ಲೇಪರಿಹಾರಕಂಡುಕೊಳ್ಳಲಾಗುತ್ತದೆ. ಇನ್ನುನಗರದಲ್ಲಿ ರಸ್ತೆ ಹಾಗೂ ಇತರೆ ಕಾಮಗಾರಿಗಳು ನಡೆಯುತ್ತಿದ್ದರಿಂದ ಸಂಚಾರದಟ್ಟಣೆ ಹೆಚ್ಚಾಗಿರುವ ಬಗ್ಗೆ ದೂರುಗಳುಬಂದಿವೆ.
ಆದಷ್ಟು ಬೇಗನೆ ಕಾಮಗಾರಿಪೂರ್ಣಗೊಳಿಸುವಂತೆ ಸಂಬಂಧಿಸಿದಬಿಬಿಎಂಪಿ ಹಾಗೂ ಇತರೆ ಇಲಾಖೆಗೆಸೂಚಿಸಲಾಗಿದೆ ಎಂದು ಆಯುಕ್ತರುಉತ್ತರಿಸಿದರು.ಪಶ್ಚಿಮ ಸಂಚಾರ ವಿಭಾಗ ಡಿಸಿಪಿಕುಲದೀಪ್ ಕುಮಾರ್ ಜೈನ್, ದಕ್ಷಿಣವಿಭಾಗ ಡಿಸಿಪಿ ಹರೀಶ್ ಪಾಂಡೆ ಹಾಗೂಇತರೆ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.