ಗುಜರಾತ್ ನೋಡಿ ರಾಜ್ಯ ಕಟ್ಟೋದು ಬೇಕಾಗಿಲ್ಲ
Team Udayavani, Jul 17, 2021, 3:26 PM IST
ಬೆಂಗಳೂರು: “ರಾಜ್ಯದ ತೆರಿಗೆ ಹಣವನ್ನ ಬೇರೆ ರಾಜ್ಯದಮಾಡೆಲ್ ನೋಡಲು ವ್ಯಯಿಸುವುದನ್ನು ಬಿಡಿ; ನಮ್ಮಜನರ ಬದುಕು ಹಸನುಗೊಳಿಸುವುದನ್ನು ನೋಡಿ’.ಗುಜರಾತ್ ಮಾದರಿ ಅಧ್ಯಯನಕ್ಕೆ ಹೊರಟ ಕೈಗಾರಿಕಾಸಚಿವ ಜಗದೀಶ್ ಶೆಟ್ಟರ್ ಪ್ರವಾಸಕ್ಕೆ ಮಾಜಿಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ತೀಕ್ಷ ¡ ಪ್ರತಿಕ್ರಿಯೆ ಇದು.
ನಗರದಲ್ಲಿ ಶುಕ್ರ ವಾರಸುದ್ದಿಗಾರರೊಂದಿಗೆ ಮಾತನಾಡಿದ ಅವರು,2008ರಲ್ಲಿ ಪ್ರಾರಂಭವಾದ ಗುಜರಾತಿನ ಧೋಲೇರಾ ಸಿಟಿ ಪ್ರಾಜೆಕr… 2021 ಆದರೂ ಮುಗಿದಿಲ್ಲ.ಅಂತಹ ಯೋಜನೆಯ ಅಧ್ಯಯನಕ್ಕೆ ಸಚಿವ ಜಗದೀಶ್ ಶೆಟ್ಟರ್ ಹೋಗಿದ್ದಾರೆ.ಈಧೋಲೇರಾ ಸಿಟಿ ಪ್ರಾಜೆಕ್ಟ್ ನೋಡಲು ಗುಜರಾತ್‌ಗೆ ಹೋಗುವುದು ಬೇಕಾಗಿಲ್ಲ.
ಯೂಟ್ಯೂಬ್‌ನಲ್ಲಿ ನೋಡಿದರೆ ಸಾಕು, ಯಾವ ಸ್ಥಿತಿಯಲ್ಲಿಪ್ರಾಜೆಕr…ಇದೆಅಂತ ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾದರಿ ಯಾದ ಉದಾಹರಣೆಗಳಿವೆ.ಹೀಗಿರುವಾಗ, ಧೋಲೇರಾಸಿಟಿ ನೋಡಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ ಎಂದು ಹೇಳಿದರು.ಧೋಲೇರಾ ಸಿಟಿ ಮುಕ್ತಾಯಕ್ಕೆ ಇನ್ನೂ ನೂರು ವರ್ಷಬೇಕು. ಹೀಗಾಗಿ, ಜಗದೀಶ್ ಶೆಟ್ಟರ್ ಗುಜರಾತ್ ಮಾದರಿಬಿಟ್ಟು ರಾಜ್ಯದಲ್ಲೇ ಉತ್ತಮ ಮಾದರಿ ನಿರ್ಮಿಸಲಿ ಎಂದ ಕುಮಾರಸ್ವಾಮಿ, ಧೋಲೇರಾ ಸಿಟಿ ಮಾಡಲ್ ನಮ್ಮರಾಜ್ಯಕ್ಕೆ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರೋದು ಜನರಬದುಕು ಬದಲು ಮಾಡಲು ಏನು ಮಾಡಬೇಕೋ ಅದನ್ನು ನೋಡಿ. ಶಿಕ್ಷಣ, ಆರೋಗ್ಯ,ಕೃಷಿ, ಉದ್ಯೋಗ ಸೃಷ್ಟಿಗೆ ಏನ್ ಮಾಡಬೇಕುಅಂತ ಇಲ್ಲಿಕುಳಿತು ಚರ್ಚೆ ಮಾಡಬೇಕು.
ಪ್ರಧಾನಿ ನರೇಂದ್ರ ಮೋದಿ ಘೋಷಿಸಿದಧೋಲೇರಾ ಸಿಟಿ ಪ್ರಾಜೆಕ್ಟ್ ಇನ್ನೂ ಮುಗಿದಿಲ್ಲ.ಆಗಲೇ ಅಯೋಧ್ಯೆಯಲ್ಲಿ 10 ಸಿಟಿ ಘೋಷಣೆಮಾಡಿ¨ªಾರೆ. ಉತ್ತರ ಪ್ರದೇಶ ಚುನಾವಣೆ ಇರುವುದರಿಂದಬಿಜೆಪಿಯು ಆ ರಾಜ್ಯದಲ್ಲಿ3ಡಿ ತೋರಿಸುತ್ತಿದೆ.3ಡಿ ಯಲ್ಲಿಏನು ಬೇಕಾದ್ರು ತೋರಿಸಿಕೊಳ್ಳಬಹುದು.ಯಾವುದೇರಾಜ್ಯದ ಮಾದರಿ ಅಂತ ಹೋಗಿ ನಮ್ಮ ರಾಜ್ಯದ ಗೌರವಹಾಳು ಮಾಡುವುದು ಬೇಡ. ನಮ್ಮ ರಾಜ್ಯದಲ್ಲೇ ಉತ್ತಮಕಾರ್ಯಕ್ರಮ ಕೊಡುವವರು ಬೇಕಾದಷ್ಟು ಜನ ಇದ್ದಾರೆ.ಅವರನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಲಿ ಎಂದೂಸಲಹೆ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.